
ಹವಾಲಾ: ಮಂಜೇಶ್ವರದಲ್ಲಿ ಎನ್‌ಐಎ ತನಿಖೆ
Team Udayavani, Mar 7, 2023, 6:05 AM IST

ಮಂಜೇಶ್ವರ: ದಿಲ್ಲಿಯನ್ನು ಕೇಂದ್ರೀಕರಿಸಿ ನಡೆದ ಕೋಟ್ಯಾಂತರ ರೂ.ಗಳ ಹವಾವಾ ವ್ಯವಹಾರಗಳ ಕುರಿತಾದ ತನಿಖೆಯ ಅಂಗವಾಗಿ ಎನ್‌ಐಎ ತಂಡ ಮಂಜೇಶ್ವರಕ್ಕೆ ಆಗಮಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರಧಾನ ಆರೋಪಿಗಳಲ್ಲಿ ಒಬ್ಬನಾದ ಯುವಕನನ್ನು ಬಂಧಿಸಲಾಗಿತ್ತು. ಈತನಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ತನಿಖಾ ತಂಡ ಆಗಮಿಸಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ವ್ಯಕ್ತಿಯೊಬ್ಬನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ ಆತನ ಕುರಿತಾದ ಯಾವುದೇ ಮಾಹಿತಿಗಳನ್ನು ತನಿಖಾ ತಂಡ ಬಹಿರಂಗಪಡಿಸಿಲ್ಲ.
ಇದೇ ವೇಳೆ ಮತ್ತೂಂದು ತಂಡ ಮಾ. 5ರಂದು ಕೊಚ್ಚಿ ತಲುಪಿದ್ದು, ಎರಡು ಕಡೆಗಳಲ್ಲಿ ದಾಳಿ ನಡೆಸಿದೆ. ಪಿಎಫ್ಐಗೆ ಸಂಬಂಧಿಸಿ ಈ ದಾಳಿ ನಡೆದಿದೆ. ಎಡವನಕ್ಕಾಡ್, ಪಳಂಙಾಡ್ ನಿವಾಸಿ ಪೈಂಟಿಂಗ್ ಕಾರ್ಮಿಕ ಇಶಾìದ್‌ನನ್ನು ವಶಕ್ಕೆ ತೆಗೆದುಕೊಂಡಿದೆ. ಈ ಹಿಂದೆ ಬಂಧಿತನಾದ ಪಿಎಫ್ಐಯ ಆಯುಧ ತರಬೇತುದಾರ ಮುಹಮ್ಮದ್ ಮುಬಾರಕ್‌ನ ಎಡವನಕ್ಕಾಡ್‌ನಲ್ಲಿರುವ ಸಂಬಂಧಿಕನ ಮನೆಗೂ ತನಿಖಾ ತಂಡ ದಾಳಿ ನಡೆಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Protest: ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ

MP Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

Hosapete: ಬಸ್ ಪಲ್ಟಿ; 10ಕ್ಕೂ ಹೆಚ್ಚು ಜನರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ