
ಕಣಜದ ಹುಳುಗಳು ದಾಳಿ: 10 ಮಂದಿ ಶಾಲಾ ವಿದ್ಯಾರ್ಥಿಗಳು, ಇಬ್ಬರು ಆಟೋ ಚಾಲಕರಿಗೆ ಗಾಯ
Team Udayavani, Jan 10, 2023, 12:26 AM IST

ಕಾಸರಗೋಡು: ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳಿಗೆ ಕಣಜದ ಹುಳುಗಳು ದಾಳಿ ನಡೆಸಿದ್ದು, ಹತ್ತು ಮಂದಿ ವಿದ್ಯಾರ್ಥಿಗಳು ಹಾಗು ಇಬ್ಬರು ಆಟೋ ಚಾಲಕರು ಗಾಯಗೊಂಡಿದ್ದಾರೆ.
ಚೆಮ್ನಾಡ್ ವೆಸ್ಟ್ ಜಿಎಲ್‌ಪಿ ಶಾಲೆಯ ಹತ್ತು ಮಂದಿ ವಿದ್ಯಾರ್ಥಿಗಳು ಎರಡು ಆಟೋ ರಿಕ್ಷಾಗಳಲ್ಲಿ ಪ್ರಯಾಣಿಸುತ್ತಿದ್ದಾಗ ದಾಳಿ ನಡೆದಿದೆ. ವಿದ್ಯಾರ್ಥಿಗಳಾದ ಅದಾನ್ ಅಬು (6), ಜೈನಬ (7), ಫಾತಿಮತ್ ಸುಹರಾ (6), ಅಹಮ್ಮದ್ ಜುಬೀರ್ (7), ಮೊಹಮ್ಮದ್ ರಿನಾದ್ (7), ಆಯಿಶ ನವೀರ (6), ಫಾತಿಮತ್ (7), ಆಯಿಷಾ (11), ಅಫ್ರಾನ್ ಅಹಮ್ಮದ್ (9), ಮೊಹಮ್ಮದ್ ರಾಹಿಲ್ (8), ಆಟೋ ರಿಕ್ಷಾ ಚಾಲಕರಾದ ಹಾರಿಸ್ (37) ಮತ್ತು ಹಕೀಂ(30) ಗಾಯಗೊಂಡಿದ್ದಾರೆ. ಅವರಿಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ರೈಲು ಢಿಕ್ಕಿ: ಕರಾವಳಿ ಠಾಣೆ ಸ್ರಾಂಕ್ ಸಾವು
ಉಪ್ಪಳ: ರೈಲು ಢಿಕ್ಕಿ ಹೊಡೆದು ಕುಂಬಳೆ ಕರಾವಳಿ ಠಾಣೆಯ ಸ್ರಾಂಕ್ ಸಾವಿಗೀಡಾಗಿದ್ದಾರೆ. ಆಲಪ್ಪುಳ ಚುಗಂ ಕುಪ್ಪಪುರಂ ಕೈನಕಾರಿ ಪಳ್ಳಿ ತುರುತ್ತಿ ಮುಲ್ಲಯಕ್ಕಲ್ ಆಲ ಪರಂಬಿಲ್ ಆನಂದ ಕೃಷ್ಣನ್ ಅವರ ಪುತ್ರ ಉಣ್ಣಿಕೃಷ್ಣನ್ (28) ಸಾವಿಗೀಡಾದವರು.
ಉಪ್ಪಳ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿದು ಮುಸೋಡಿಯಲ್ಲಿರುವ ಕರಾವಳಿ ಪೊಲೀಸ್ ಠಾಣೆಗೆ ರೈಲು ಹಳಿ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಮಂಗಳೂರು ಭಾಗದಿಂದ ಬರುತ್ತಿದ್ದ ರೈಲು ಢಿಕ್ಕಿ ಹೊಡೆದು ಸಾವು ಸಂಭವಿಸಿತು. ಅವರು ಕುಂಬಳೆ ಕರಾವಳಿ ಪೊಲೀಸ್ ಠಾಣೆಯ ಇಂಟರ್‌ಸೆಪ್ಟರ್ ಬೋಟ್‌ನ ಸ್ರಾಂಕ್ ಆಗಿದ್ದರು.
ರೈಲು ಢಿಕ್ಕಿ: ಅಪರಿಚಿತ ವ್ಯಕ್ತಿ ಸಾವು
ಕಾಸರಗೋಡು: ನಗರದ ಅಡ್ಕತ್ತಬೈಲ್ ಸಮೀಪದ ಚೀರುಂಬ ಕುದ್ರುನಲ್ಲಿ ರೈಲು ಢಿಕ್ಕಿ ಹೊಡೆದು ಸುಮಾರು 50 ವರ್ಷ ಪ್ರಾಯದ ವ್ಯಕ್ತಿಯೋರ್ವರು ಸಾವಿಗೀಡಾಗಿದ್ದಾರೆ. ನೇತ್ರಾವತಿ ಎಕ್ಸ್‌ಪ್ರೆಸ್ ರೈಲು ಢಿಕ್ಕಿ ಹೊಡೆದು ಸಾವು ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಪ್ಪಳ: ನಿದ್ದೆಯಲ್ಲೇ ಮಹಿಳೆ ಸಾವು
ಉಪ್ಪಳ: ನಿದ್ದೆಯಲ್ಲೇ ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ಅಯೂಬ್ ಅವರ ಪತ್ನಿ ಸಬನಾ ಅಜ್ಮಿàನ್ (44) ಸಾವಿಗೀಡಾಗಿದ್ದಾರೆ. ಅವರು ಶನಿವಾರ ರಾತ್ರಿ ಊಟ ಮಾಡಿ ನಿದ್ದೆ ಮಾಡಿದ್ದರು. ಬೆಳಗ್ಗೆ ಹೊತ್ತು ಕಳೆದರೂ ಎದ್ದೇಳಲಿಲ್ಲ. ಮನೆಯವರು ಎಬ್ಬಿಸುವ ವೇಳೆ ಎಚ್ಚರಗೊಳ್ಳದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅದಾಗಲೇ ಅವರ ಸಾವು ಸಂಭವಿಸಿತ್ತು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ
ಹೊಸ ಸೇರ್ಪಡೆ

odisha ರೈಲು ಅಪಘಾತ; ಕಳಸದಿಂದ ತೆರಳಿದ್ದ 110 ಮಂದಿ ಸುರಕ್ಷಿತ

Odisha ಭೀಕರ ರೈಲು ಅವಘಡ; ಸಾವಿನ ಸಂಖ್ಯೆ 233ಕ್ಕೆ ಏರಿಕೆ; 900ಕ್ಕೂ ಹೆಚ್ಚು ಮಂದಿಗೆ ಗಾಯ

Milk : 8 ತಿಂಗಳಿಂದ ಸಿಗದ ಹಾಲಿನ ಪ್ರೋತ್ಸಾಹ ಧನ

Mangalore ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಆದಿತ್ಯ ವಿರುದ್ಧ ಮತ್ತೂಂದು ದೂರು

World Bicycle Day- ಸುಸ್ಥಿರ ಭವಿಷ್ಯಕ್ಕಾಗಿ ಸೈಕಲ್ ತುಳಿಯೋಣ