
ಕೆವೈಸಿ ಅಪ್ಡೇಟ್: 1.21 ಲಕ್ಷ ರೂ. ವಂಚನೆ
Team Udayavani, Jun 2, 2023, 6:32 AM IST

ಮಂಗಳೂರು: ಕೆವೈಸಿ ಅಪ್ಡೇಟ್ ಗೆ ಸಂಬಂಧಿಸಿದ ಲಿಂಕ್ ಎಸ್ಸೆಮ್ಮೆಸ್ ಕಳುಹಿಸಿ 1,21,400 ರೂ. ವಂಚಿಸಿರುವ ಕುರಿತಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ 2022ರ ಅ. 14ರಂದು ಅಪರಿಚಿತ ಸಂಖ್ಯೆಯಿಂದ ಎಸ್ಸೆಮ್ಮೆಸ್ ಬಂದಿದೆ. ಅದರಲ್ಲಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದು, ಅದನ್ನು ಸರಿಪಡಿಸಲು ಡೆಬಿಟ್ ಕಾರ್ಡ್ ಮತ್ತು ಅಕೌಂಟ್ ವಿವರಗಳನ್ನು ಅಪರಿಚಿತ ವ್ಯಕ್ತಿ ಕೇಳಿದ್ದಾನೆ. ಇದನ್ನು ನಿಜವೆಂದು ನಂಬಿ ಅವರು ತಮ್ಮ ಗಂಡನ ಬ್ಯಾಂಕ್ ಖಾತೆ ಮತ್ತು ಡೆಬಿಟ್ ಕಾರ್ಡ್ ವಿವರಗಳನ್ನು ತಿಳಿಸಿದ್ದಾರೆ.
ಜತೆಗೆ ಒಟಿಪಿಯನ್ನೂ ಹೇಳಿದ್ದಾರೆ. ದೂರುದಾರರ ಖಾತೆಯ ವಿವರ, ಒಟಿಪಿಯನ್ನೂ ಅಪರಿಚಿತ ವ್ಯಕ್ತಿ ಪಡೆದುಕೊಂಡಿದ್ದಾನೆ. ಇದಾದ ಸ್ವಲ್ಪ ಹೊತ್ತಿನಲ್ಲೇ ಗಂಡನ ಬ್ಯಾಂಕ್ ಖಾತೆಯಿಂದ 71,400 ರೂ. ಮತ್ತು ಅವರ ಖಾತೆಯಿಂದ 50 ಸಾವಿರ ರೂ. ವರ್ಗಾವಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

BYJU’s Lay Off: ಆತಂಕದಲ್ಲಿ ಬೈಜೂಸ್ ಉದ್ಯೋಗಿಗಳು…3,500 ನೌಕರರ ಕಡಿತಕ್ಕೆ ಸಿದ್ಧತೆ

India-Canada ಸಂಬಂಧ ಹದಗೆಡಿಸಲು ನಿಜ್ಜರ್ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ