ಬಜ್ಪೆ: ಪತಿಯಿಂದ ಪತ್ನಿಯ ಕೊಲೆ; ಪತಿ ಬಂಧನ
Team Udayavani, Nov 28, 2022, 12:19 PM IST
ಬಜ್ಪೆ: ಮಹಿಳೆಯೊಬ್ಬಳನ್ನು ಆಕೆಯ ಗಂಡ ಕೊಲೆ ಮಾಡಿದ ಘಟನೆ ಬಜ್ಪೆ ಪೋಲಿಸ್ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ ರವಿವಾರ (ನ.27 ರಂದು) ರಾತ್ರಿ ನಡೆದಿದೆ.
ಸರಿತಾ (35) ಕೊಲೆಯಾದ ಮಹಿಳೆ. ಆಕೆಯ ಗಂಡ ದುರ್ಗೇಶ ಕೊಲೆ ಮಾಡಿದಾತ. ಈತನನ್ನು ಬಜ್ಪೆ ಪೋಲಿಸರು ಬಂಧಿಸಿದ್ದಾರೆ.
ನ. 27 ರಂದು ರಾತ್ರಿ ಗಂಡ-ಹೆಂಡತಿ ಮಧ್ಯೆ ಜಗಳವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ದುರ್ಗೇಶ ಪತ್ನಿ ಸರಿತಾಳ ಮೇಲೆ ರೀಪಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಯ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸರಿತಾ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಕೃತ್ಯ ನಡೆದ ಸಂದರ್ಭ ದಂಪತಿಯ ಹನ್ನೊಂದು ವರ್ಷದ ಮಗ ಹೆದರಿ ಓಡಿ ಹೋಗಿದ್ದಾನೆ ಎನ್ನಲಾಗಿದೆ.
ದಂಪತಿಯ ನಡುವೆ ಯಾವ ಕಾರಣಕ್ಕೆ ಜಗಳವಾಗಿದೆ ಎನ್ನುವುದು ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.
ಬಜ್ಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, ಎ.ಸಿ.ಪಿ. ಎನ್.ಮಹೇಶ್ ಕುಮಾರ್, ಬಜ್ಪೆ ಇನ್ಸ್‌ಪೆಕ್ಟರ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ದೈವನರ್ತಕ’ರ ಮಾಸಾಶನ ಘೋಷಣೆಯಲ್ಲೇ ಬಾಕಿ? ಪ್ರತ್ಯೇಕ ಮಾರ್ಗಸೂಚಿ ಇಲ್ಲದೆ ಎದುರಾದ ತೊಡಕು
ಹಗಲು ವಿಮಾನವಿಲ್ಲದೆ ಅನಿವಾರ್ಯ ತೊಂದರೆ! ನಾಲ್ಕು ತಿಂಗಳು ರನ್ವೇ ಕಾಮಗಾರಿ
ಉಳ್ಳಾಲ: ಆರೋಗ್ಯ ಕೇಂದ್ರ ಹರೇಕಳ ಗ್ರಾ. ಪಂ.ಗೆ ಹಸ್ತಾಂತರ
ಜೋಕಟ್ಟೆ, ಪಡೀಲ್ ಕಾಮಗಾರಿ : ಹಲವು ರೈಲು ಸೇವೆ ತಾತ್ಕಾಲಿಕ ರದ್ದು
“ಸಾಮಾಜಿಕ ಜಾಲತಾಣ ನಿಗಾ ಘಟಕ’ ಬಲವರ್ಧನೆ : ಎಸ್ಪಿ ಡಾ| ವಿಕ್ರಂ ಅಮಟೆ