
ಬಜಪೆ ಪಟ್ಟಣ ಪಂಚಾಯತ್‌ನಿಂದ ಚರಂಡಿ ದುರಸ್ತಿ
Team Udayavani, Nov 10, 2022, 3:10 PM IST

ಬಜಪೆ: ಬಜಪೆ ಪೇಟೆಯ ರಾಜ್ಯ ಹೆದ್ದಾರಿ 67ರ ಬಜಪೆ ಚರ್ಚ್ ಕಟ್ಟಡದ ಎದುರಲ್ಲಿ ಚರಂಡಿ ಹೂಳಿನಿಂದ ತುಂಬಿ ಬ್ಲಾಕ್ ಆಗಿದ್ದು ಇದರಿಂದ ರಸ್ತೆಯ ಬದಿಯಲ್ಲಿ ಚರಂಡಿಯ ನೀರು ನಿಂತು ಪಾದಚಾರಿ ಹಾಗೂ ಶಾಲಾ ಮಕ್ಕಳಿಗೆ ತೊಂದರೆಯಾಗುವ ಬಗ್ಗೆ ಉದಯವಾಣಿ ಸುದಿನ ಜು.17ರಂದು ವರದಿಯನ್ನು ಪ್ರಕಟಿಸಿತ್ತು.
ಇದಕ್ಕೆ ಈಗ ಬಜಪೆ ಪ. ಪಂ.ನಿಂದ ಸ್ಪಂದನೆ ದೊರಕಿದ್ದು, ಚರಂಡಿಯ ಹೂಳು ತೆಗೆಯುವ, ಅದನ್ನು ಸರಿಪಡಿಸುವ ಕಾರ್ಯ ಎರಡು ದಿನಗಳಿಂದ ನಡೆಯುತ್ತಿದೆ. ಮಳೆಯ ನೀರು ಸರಾಗವಾಗಿ ಚರಂಡಿಯಲ್ಲಿ ಹರಿಯುವಂತೆ ಯಾವುದೇ ತಡೆಗಳು ಉಂಟಾಗದಂತೆ ನೋಡಿಕೊಳ್ಳಲಾಗುತ್ತದೆ.
ಹೂಳು ತುಂಬಿ ಬ್ಲಾಕ್
ಕಟೀಲು-ಬಜಪೆ ರಾಜ್ಯ ಹೆದ್ದಾರಿಯ ಹಾಗೂ ಬಜಪೆ -ಕೈಕಂಬ ರಾಜ್ಯ ಹೆದ್ದಾರಿ ಚರ್ಚ್ ಎದುರು ಸರ್ಕಲ್‌ನಲ್ಲಿ ಸಂಪರ್ಕಿಸುತ್ತದೆ. ಬಜಪೆ ಪೇಟೆಯಲ್ಲಿ ಚರಂಡಿಯಲ್ಲಿ ಮಳೆಯ ನೀರು ಜತೆ ಹೊಟೇಲ್ ಹಾಗೂ ಇತರ ಅಂಗಡಿಗಳ ನೀರು ಆ ಚರಂಡಿಯಲ್ಲಿ ಹರಿಯುತ್ತಿದ್ದು ಚರಂಡಿಯಲ್ಲಿ ಹೂಳು ತುಂಬಿದ ಕಾರಣ ನೀರು ಹರಿಯಲು ಜಾಗವಿಲ್ಲದೇ ಚರಂಡಿಯ ಮೇಲಿನಿಂದಲೇ ತ್ಯಾಜ್ಯ ನೀರು ಹರಿದಾಡುತ್ತಿದ್ದು. ಇದರ ಕೆಟ್ಟ ವಾಸನೆ ನಡೆದುಕೊಂಡು ಹೋಗುವ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿತ್ತು.
ಚರಂಡಿಯ ಹೂಳನ್ನು ಜೆಸಿಬಿಯ ಮೂಲಕ ತೆಗೆಯಲಾರಂಭಿಸಿದೆ ಹಾಗೂ ಸ್ಲ್ಯಾಬ್‌ನ್ನು ಹಾಕಲಾಗಿದೆ. ಈಗಾಗಲೇ ಮೂರು ಟಿಪ್ಪರ್‌ನಷ್ಟು ಹೂಳನ್ನು ತೆಗೆಯಲಾಗಿದೆ. ಚರಂಡಿಯಲ್ಲಿ ಇನ್ನೂ ಐದಾರು ಟಿಪ್ಪರ್‌ನಷ್ಟು ಹೂಳು ತುಂಬಿರುವ ಸಾಧ್ಯತೆಗಳು ಇವೆ.
ಪೈಪ್ ಮೂಲಕ ಅನಧಿಕೃತವಾಗಿ ತ್ಯಾಜ್ಯ ನೀರು
ಕೆಲವು ಅಂಗಡಿಗಳಿಂದ ಅನಧಿಕೃತ ತ್ಯಾಜ್ಯ ನೀರನ್ನು ಮಳೆ ನೀರು ಹರಿಯುವ ಚರಂಡಿಗೆ ಪೈಪ್ ಮೂಲಕ ಬೀಡಲಾಗುತ್ತಿತ್ತು ಕಂಡು ಬಂದಿದ್ದು ಪೈಪ್‌ಗೆ ಮುಚ್ಚಳ ಹಾಕಿ ಬಂದ್ ಮಾಡಲಾಗಿದೆ. ಬಜಪೆ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಪೂರ್ಣಕಲಾ ವೈ. ಕೆ.ಸ್ಥಳಕ್ಕೆ ಭೇಟಿ ನೀಡಿದ್ದು, ತ್ಯಾಜ್ಯ ನೀರನ್ನು ಪೈಪ್‌ಗ್ಳ ಮೂಲಕ ಅನಧಿಕೃತವಾಗಿ ಚರಂಡಿಗೆ ಬೀಡುತ್ತಿದ್ದ ಪೈಪ್‌ಗ್ಳನ್ನು ಮುಚ್ಚಲು ಹಾಗೂ ಚರಂಡಿಯಲ್ಲಿ ಮಳೆಯ ನೀರು ಸರಾಗವಾಗಿ ಹರಿಯವಂತೆ ಮಾಡಲು ಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
