
ಬೆಳುವಾಯಿ: ಹೆದ್ದಾರಿ ಕಾಮಗಾರಿ ವೇಳೆ ಅವಘಡ: ಕಾರ್ಮಿಕ ದುರ್ಮರಣ
Team Udayavani, Mar 28, 2023, 6:00 AM IST

ಮೂಡುಬಿದಿರೆ: ಬೆಳುವಾಯಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದಾಗ ರಸ್ತೆ ಸಮತಟ್ಟುಗೊಳಿಸುವ ಯಂತ್ರ ಹಿಮ್ಮುಖವಾಗಿ ಚಲಿಸಿ ಕೂಲಿ ಕಾರ್ಮಿಕರೊಬ್ಬರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.
ಮಧ್ಯಪ್ರದೇಶದ ವಿವೇಕ್ (35) ಮೃತಪಟ್ಟವರು. ಮೂಡುಬಿದಿರೆ-ಕಾರ್ಕಳ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸುವ ಕಾಮಗಾರಿ ನಡೆಯುತ್ತಿದ್ದಾಗ ರಸ್ತೆ ಸಮತಟ್ಟುಗೊಳಿಸುವ ಯಂತ್ರವನ್ನು ಚಾಲಕ ಹಿಮ್ಮುಖವಾಗಿ ಚಲಾಯಿಸಿದ್ದ.
ಹಿಂಬದಿಯಲ್ಲಿದ್ದ ಕಾರ್ಮಿಕನಿಗೆ ಯಂತ್ರ ಢಿಕ್ಕಿಯಾಗಿತ್ತು. ಯಂತ್ರದ ಚಾಲಕ ಮಧ್ಯ ಪ್ರದೇಶದ ರಾಹುಲ್ ವಿರುದ್ಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
