ವಿಧಾನ ಪರಿಷತ್ತಿಗೆ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ಚುನಾವಣೆ: ನಾಳೆ ಮತದಾನ


Team Udayavani, Dec 9, 2021, 5:30 AM IST

ವಿಧಾನ ಪರಿಷತ್ತಿಗೆ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ಚುನಾವಣೆ: ನಾಳೆ ಮತದಾನ

ಮಂಗಳೂರು: ರಾಜ್ಯ ವಿಧಾನ ಪರಿಷತ್ತಿಗೆ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ದ್ವಿಸದಸ್ಯ ಸ್ಥಾನಕ್ಕೆ ಚುನಾವಣೆ ಡಿ. 10ರಂದು ನಡೆಯಲಿದೆ.

ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 389 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಕರ್ತವ್ಯಕ್ಕೆ ಅಧಿಕಾರಿ, ಸಿಬಂದಿ ಹಾಗೂ ಪೊಲೀಸ್‌ ಸಿಬಂದಿ ಸೇರಿ ಒಟ್ಟು 2,101 ಮಂದಿಯನ್ನು ಉಭಯ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.
ದ.ಕ.ದಲ್ಲಿ 231 ಮತಗಟ್ಟೆಗಳಿದ್ದು 254 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 254 ಮತಗಟ್ಟೆ ಅಧಿಕಾರಿಗಳು, 254 ಮೈಕ್ರೊ ಅಬ್ಸರ್ವರ್‌, 254 ಗ್ರೂಪ್‌ ಡಿ ನೌಕರರನ್ನು ನಿಯೋಜಿಸಲಾಗುತ್ತಿದೆ. ಪ್ರತೀ ವಿಭಾಗದಲ್ಲಿ ಶೇ. 10 ಮಂದಿ ಯನ್ನು ಮೀಸಲು ಸಿಬಂದಿಯಾಗಿ ಕಾದಿರಿಸಲಾಗಿದೆ. 231 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ 158 ಮತಗಟ್ಟೆಗಳಿದ್ದು, 174 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು 174 ಮತಗಟ್ಟೆ ಅಧಿಕಾರಿಗಳು, 174 ಮೈಕ್ರೊ ಅಬ್ಸರ್ವರ್‌, 174 ಗ್ರೂಪ್‌ ಡಿ ನೌಕರರನ್ನು ನಿಯೋಜಿಸಲಾಗುತ್ತಿದೆ. ಪ್ರತೀ ವಿಭಾಗದಲ್ಲಿ ಶೇ. 10 ಮಂದಿಯನ್ನು ಮೀಸಲು ಸಿಬಂದಿಯಾಗಿ ಕಾದಿರಿಸಲಾಗಿದೆ. 158 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಮಸ್ಟರಿಂಗ್‌, ಡಿ ಮಸ್ಟರಿಂಗ್‌ ಕೇಂದ್ರಗಳು
ದ.ಕ.ದಲ್ಲಿ ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯಗಳಲ್ಲಿ ತಾಲೂಕು ಕಚೇರಿಗಳು, ಮಂಗಳೂರಿನಲ್ಲಿ ತಾಲೂಕು ಪಂಚಾಯತ್‌, ಬಂಟ್ವಾಳದಲ್ಲಿ ಇನ್‌ಫೆಂಟ್‌ ಜೀಸಸ್‌ ಹಿ.ಪ್ರಾ. ಕನ್ನಡ ಮಾಧ್ಯಮ ಶಾಲೆ ಮೊಡಂಕಾಪು, ಕಡಬದಲ್ಲಿ ಪಟ್ಟಣ ಪಂಚಾಯತ್‌ ಕಚೇರಿ ಮಸ್ಟರಿಂಗ್‌, ಡಿ ಮಸ್ಟರಿಂಗ್‌ ಕೇಂದ್ರಗಳಾಗಿರುತ್ತವೆ. ಉಡುಪಿಯಲ್ಲಿ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಹೆಬ್ರಿ ಹಾಗೂ ಕಾರ್ಕಳದಲ್ಲಿ ತಾಲೂಕು ಕಚೇರಿಗಳು ಮಸ್ಟರಿಂಗ್‌, ಡಿ ಮಸ್ಟರಿಂಗ್‌ ಕೇಂದ್ರಗಳಾಗಿವೆ.

ಇದನ್ನೂ ಓದಿ:ಒಂದೇ ದಿನದಲ್ಲಿ ಭೂ ಪರಿವರ್ತನೆ ವ್ಯವಸ್ಥೆ ಜಾರಿ: ಆರ್‌.ಅಶೋಕ್

ಡಿ. 14ರಂದು ಮಂಗಳೂರಿನಲ್ಲಿ ಮತ ಎಣಿಕೆ
ಪಾಂಡೇಶ್ವರದ ರೊಸಾರಿಯೋ ಪದವಿ ಪೂರ್ವ ಕಾಲೇಜಿ ನಲ್ಲಿ ಡಿ. 14ರಂದು ಮತ ಎಣಿಕೆಯ ನಡೆಯಲಿದೆ.

ಕಣದಲ್ಲಿ ಮೂವರು ಸ್ಪರ್ಧಿಗಳು
ದ್ವಿಸದಸ್ಯ ಸ್ಥಾನಕ್ಕಾಗಿನ ಚುನಾವಣೆಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಮತ್ತು ಎಸ್‌ಡಿಪಿಐಯ ಶಾಫಿ ಬೆಳ್ಳಾರೆ ಕಣದಲ್ಲಿದ್ದಾರೆ. ಇಬ್ಬರು ಮಾತ್ರ ಇರುತ್ತಿದ್ದರೆ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ರಾಜಕೀಯ ಪಕ್ಷಗಳ ಬಲಾಬಲವನ್ನು ನಿಖರವಾಗಿ ಲೆಕ್ಕಹಾಕುವುದು ಕಷ್ಟಸಾಧ್ಯ. ಮೂಲಗಳ ಪ್ರಕಾರ ಬಿಜೆಪಿ -3,592, ಕಾಂಗ್ರೆಸ್‌- 1,900, ಎಸ್‌ಡಿಪಿಐ 220 ಹಾಗೂ ಜೆಡಿಎಸ್‌, ಪಕ್ಷೇತರರು ಸೇರಿ ಉಳಿದಂತೆ 328 ಮತದಾರರಿದ್ದಾರೆ. ಈ ಲೆಕ್ಕಾಚಾರದಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ಜಯ ಸಾಧಿಸುವುದು ಸುಲಭವಾಗಲಿದೆ. ಇನ್ನು ಎಲ್ಲ ಪಕ್ಷಗಳ ಒಂದಷ್ಟು ಅಸಮಾಧಾನಿತರು ತಮಗೆ ಮತ ನೀಡುತ್ತಾರೆ ಎಂಬ ನಿರೀಕ್ಷೆಯನ್ನು ಎಸ್‌ಡಿಪಿಐ ಹೊಂದಿದೆ.

ಟಾಪ್ ನ್ಯೂಸ್

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು: ಪ್ರಧಾನಿ ಮೋದಿ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಇರಾಕ್‌: 11 ಯೋಧರನ್ನು ಕೊಂದ ಐಎಸ್‌ ನ ಉಗ್ರರು

ಇರಾಕ್‌: 11 ಯೋಧರನ್ನು ಕೊಂದ ಐಎಸ್‌ ನ ಉಗ್ರರು

ದ್ವಿತೀಯ ಪಿಯು ಪರೀಕ್ಷೆ ನೋಂದಣಿಗೆ 31 ಕೊನೇ ದಿನ

ದ್ವಿತೀಯ ಪಿಯು ಪರೀಕ್ಷೆ ನೋಂದಣಿಗೆ 31 ಕೊನೇ ದಿನ

ಮತ್ತೆ ಯಥಾಸ್ಥಿತಿಗೆ “ನಮ್ಮ ಮೆಟ್ರೋ’-ಬಸ್‌ ಸೇವೆ

ವಾರಾಂತ್ಯದ ಕರ್ಫ್ಯೂ ತೆರವು ಹಿನ್ನೆಲೆ: ಮತ್ತೆ ಯಥಾಸ್ಥಿತಿಗೆ “ನಮ್ಮ ಮೆಟ್ರೋ’- ಬಸ್‌ ಸೇವೆ

ಬಿಜೆಪಿ-ಜೆಡಿಎಸ್‌ಗೆ ಸಿದ್ಧಾಂತವಿಲ್ಲ; ಸಿದ್ದರಾಮಯ್ಯ ಆಕ್ರೋಶ

ಬಿಜೆಪಿ-ಜೆಡಿಎಸ್‌ಗೆ ಸಿದ್ಧಾಂತವಿಲ್ಲ; ಸಿದ್ದರಾಮಯ್ಯ ಆಕ್ರೋಶ

1ra

ಗೋವಾದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಬ್ಬರದ ಪ್ರಚಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

ಮಂಗಳೂರು: ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ; ಇಬ್ಬರ ಬಂಧನ

1-fwrrre

ಮಂಗಳೂರು: ಹಣಕ್ಕಾಗಿ ಜ್ಯೋತಿಷಿಯೊಬ್ಬರ ಹನಿ ಟ್ರ್ಯಾಪ್ ಮಾಡಿದ್ದ ದಂಪತಿಗಳ ಬಂಧನ 

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ  2 ವರ್ಷ:ಆರೋಪಿಯ ವಿಚಾರಣೆ ಬಹುತೇಕ ಪೂರ್ಣ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ 2 ವರ್ಷ !

Untitled-1

ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಎದ್ದು ಕುಳಿತ ವ್ಯಕ್ತಿ! 

Untitled-1

ಕೋವಿಡ್ ಪ್ರಕರಣ ಏರಿಕೆ: ದ.ಕ. ಜಿಲ್ಲೆಯ 5 ಶಾಲೆಗಳಿಗೆ ರಜೆ

MUST WATCH

udayavani youtube

‘ಯೂಸ್ ಅಂಡ್ ಥ್ರೋ’ ಕೇಜ್ರಿವಾಲ್‍ಗಿಂತ ಚೆನ್ನಾಗಿ ಯಾರೂ ಮಾಡಲಾರರು

udayavani youtube

ತ್ಯಾಜ್ಯದಿಂದ ಗೊಬ್ಬರ ಹಲವು ಲಾಭ

udayavani youtube

ವಿದ್ಯುತ್ ದರ ಏರಿಕೆ ಅನಿವಾರ್ಯ: ಇಂಧನ ಸಚಿವ ಸುನಿಲ್ ಕುಮಾರ್

udayavani youtube

ಸಿಮೆಂಟ್ ರಿಂಗ್ ಬಳಸಿ ಯಶಸ್ವಿ ದಾಳಿಂಬೆ ಕೃಷಿ

udayavani youtube

‘ಅಮರ್ ಜವಾನ್ ಜ್ಯೋತಿ’ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ವಾಲೆಯೊಂದಿಗೆ ವಿಲೀನಗೊಳ್ಳಲಿದೆ|

ಹೊಸ ಸೇರ್ಪಡೆ

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು

ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು: ಪ್ರಧಾನಿ ಮೋದಿ

ಸ್ಗಹಜಕುಜಯಹಗ

ಮಂಜುಳಾ ಚಳ್ಳಕೆರೆ ನಗರಸಭೆ ಉಪಾಧ್ಯಕ್ಷೆ

ದ್ದಡಗ್ಹರಜಹಗ್ದಸ

ನಿಸ್ವಾರ್ಥ ಸೇವೆಯಿಂದ ಸಂಘಟನೆ ವೃದಿ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಕೋವಿಡ್ ಅಂಕಿ-ಅಂಶ ಬೋಗಸ್‌: ಡಿ.ಕೆ. ಶಿವಕುಮಾರ್‌ ಆಕ್ರೋಶ

ಸೆತರಿಯಕಜಹಗ್ದಸಅ

ಭದ್ರಾವತಿಯಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.