ಹಿಜಾಬ್ ವಿವಾದ: ವರ್ಗಾವಣೆ ಪ್ರಮಾಣಪತ್ರ ಪಡೆದ ವಿದ್ಯಾರ್ಥಿನಿ
Team Udayavani, Jun 23, 2022, 6:40 AM IST
ಮಂಗಳೂರು: ಹಿಜಾಬ್ ವಿವಾದ ಉಂಟಾಗಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಓರ್ವಳು ವಿದ್ಯಾರ್ಥಿನಿ ವರ್ಗಾವಣೆ ಪ್ರಮಾಣಪತ್ರ (ಟಿಸಿ) ಪಡೆದುಕೊಂಡಿದ್ದು ಇಬ್ಬರು ವಿದ್ಯಾರ್ಥಿನಿಯರು ಬೇರೆ ಕಾಲೇಜಿಗೆ ಸೇರುವುದಕ್ಕಾಗಿ ಎನ್‌ಒಸಿ ಪಡೆದುಕೊಂಡಿದ್ದಾರೆ.
ಈ ಮೂವರು ವಿದ್ಯಾರ್ಥಿಗಳ ಪೈಕಿ ಇಬ್ಬರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಹಿಜಾಬ್ ಕುರಿತಾದ ವಿ.ವಿ.ಯ ನಿರ್ಧಾರವನ್ನು ಪ್ರಶ್ನಿಸಿದ್ದರು.
ಪತ್ರಿಕಾಗೋಷ್ಠಿ ನಡೆಸಿದ್ದ ಇನ್ನೋರ್ವಳು ವಿದ್ಯಾರ್ಥಿನಿ ಪ್ರಾಂಶುಪಾಲರಲ್ಲಿ ಕ್ಷಮೆ ಕೋರಿ ಕಾಲೇಜಿನ ನಿಯಮದ ಪ್ರಕಾರ ತರಗತಿಗೆ ಹಾಜರಾಗಲು ಒಪ್ಪಿಕೊಂಡಿದ್ದಾರೆ.
ಮತ್ತೋರ್ವಳು ವಿದ್ಯಾರ್ಥಿನಿ ಆರೋಗ್ಯ ಸಮಸ್ಯೆ ಕಾರಣದಿಂದ ಇತ್ತೀಚೆಗೆ ಟಿಸಿ ಪಡೆದುಕೊಂಡಿದ್ದಾರೆ.
ಹಿಜಾಬ್ ಧರಿಸಿ ತರಗತಿಗೆ ಬರಲು ಅವಕಾಶ ನೀಡದ ಹಿನ್ನೆಲೆಯಲ್ಲಿ 15 ಮಂದಿ ತರಗತಿಗೆ ಗೈರು ಹಾಜರಾಗುತ್ತಿದ್ದರು.