
ಮೂಲಸೌಕರ್ಯ ಅಭಿವೃದ್ಧಿಗಾಗಿ ಕಾಯುತ್ತಿದೆ ಕುಪ್ಪೆಪದವು ರಿಕ್ಷಾ ಪಾರ್ಕ್
Team Udayavani, Jul 5, 2022, 10:53 AM IST

ಕೈಕಂಬ: ಕುಪ್ಪೆಪದವು ಪೇಟೆ ಬ್ಯಾಂಕ್, ಹಲವಾರು ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿ ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಪೇಟೆಯ ಚಿತ್ರ ಣವನ್ನು ಬದಲಾಯಿಸಿದೆ. ಆದರೆ ಅಲ್ಲಿನ ರಿಕ್ಷಾ ಪಾರ್ಕ್ ಇದ್ದರೂ ಅದಕ್ಕೆ ಮೂಲ ಸೌಕರ್ಯವಿಲ್ಲದೇ ರಿಕ್ಷಾಚಾಲಕರು ಸಂಕಷ್ಟ ಪಡುತ್ತಿದ್ದಾರೆ. ಜನ ಸಂಕಷ್ಟಗಳಿಗೆ ಸ್ಪಂದಿಸಿ, ಸದಾ ಸಿದ್ಧರಾಗಿರುವ ಸೇವಕರಲ್ಲಿ ರಿಕ್ಷಾ ಚಾಲಕರ ಪಾತ್ರ ಹಿರಿದು.
ಕೆಲವೇ ಬಸ್‌ಗಳ ಓಡಾಟ
ಕುಪ್ಪೆಪದವಿನಲ್ಲಿ ದಿನನಿತ್ಯ ಓಡಾಟ ನಡೆಸುವ ಬಸ್‌ಗಳು ಕಡಿಮೆ. ಎರಡು ಗಂಟೆಗಳಿಗೆ ಒಂದು ಬಸ್‌ಗಳು ಓಡಾಟ ನಡೆಸುತ್ತಿವೆ. ಇದರಿಂದ ಇಲ್ಲಿ ಜನರು ರಿಕ್ಷಾಗಳನ್ನೇ ಹೆಚ್ಚು ಅವಲಂಬಿಸಿದ್ದಾರೆ. ಕೆಲವು ಪ್ರದೇಶಗಳಿಗೆ ಬಸ್‌ಗಳೇ ಇಲ್ಲ. ಗ್ರಾಮೀಣ ಪ್ರದೇಶವಾದ ಕಾರಣ ಕೃಷಿ ಆಧಾರಿತವಾಗಿರುವ ಪ್ರದೇಶಗಳಿಗೆ ಸಂಪರ್ಕವಾಗಿ ರಿಕ್ಷಾಗಳೇ ಓಡಾಟ ನಡೆ ಸುತ್ತದೆ. ಸುಮಾರು 50ರಿಂದ 60ರಿಕ್ಷಾ ಗಳು ದಿನನಿತ್ಯ ಓಡಾಟ ನಡೆಸುತ್ತಿದೆ. ರಿಕ್ಷಾ ಪಾರ್ಕ್ ಇದ್ದರೂ ಅದಕ್ಕೆ ಮೂಲಸೌಕರ್ಯ ಇಲ್ಲದೇ ಇರುವುದು ರಿಕ್ಷಾಚಾಲಕರಿಗೆ ಸಮಸ್ಯೆಯಾಗಿದೆ. ಮಳೆಗಾಲದಲ್ಲಿ ರಿಕ್ಷಾ ಚಾಲಕರು ಮಳೆಯಲ್ಲಿಯೇ ನಿಲ್ಲ ಬೇಕಾಗಿದೆ, ಬೇಸಿಗೆಯಲ್ಲಿ ಬಿಸಿಲಿಗೆ ನಿಲ್ಲಬೇಕಾಗಿದೆ.
ರಿಕ್ಷಾ ಪಾರ್ಕ್‌ಗೆ ಜಾಗವಿದೆ
ರಿಕ್ಷಾ ಪಾರ್ಕ್‌ಗೆ ಜಾಗವಿದ್ದರೂ ಇಲ್ಲಿಯವರೆಗೆ ಯಾವುದೇ ಮೂಲ ಸೌಕರ್ಯವನ್ನು ಹೊಂದಿಲ್ಲ. ಜನರ ಸಂಕ ಷ್ಟಕ್ಕೆ ಸ್ಪಂದಿಸುವ ರಿಕ್ಷಾಚಾಲಕರ ಸಂಕಷ್ಟಕ್ಕೆ ಸ್ಪಂದಿಸುವರಿಲ್ಲ.
ಪಂಚಾಯತ್ ನಿಂದ ಎನ್‌ಒಸಿ
ಈಗಾಗಲೇ ಕುಪ್ಪೆಪದವು ಗ್ರಾಮ ಪಂಚಾ ಯತ್ ರಿಕ್ಷಾ ಪಾರ್ಕ್ ಅಭಿವೃದ್ಧಿಗೆ ತನ್ನ ಯಾವುದೇ ಅಡ್ಡಿ ಇಲ್ಲಯೆಂದು ಎನ್‌ಒಸಿ ನೀಡಿದೆ. ಅದರೆ ಯಾವುದೇ ಅನುದಾನ ನೀಡಲು ಸಾಧ್ಯವಿಲ್ಲವೆಂದು ಅವರು ತಿಳಿಸಿದ್ದಾರೆ ಎಂದು ರಿಕ್ಷಾ ಚಾಲಕರು ತಿಳಿಸಿದ್ದಾರೆ. ರಿಕ್ಷಾ ಪಾರ್ಕ್‌ನಲ್ಲಿ ಕೇವಲ ನಾಲ್ಕು ಕಂಬಗಳು ಮಾತ್ರ ಕಾಣಿಸುತ್ತಿದೆ. ರಿಕ್ಷಾ ಚಾಲಕರು ಕುಳಿತು ಕೊಳ್ಳಲು ಕಂಬಗಳನ್ನು ಅಡ್ಡಕ್ಕೆ ಇಟ್ಟು ಅಸನ, ಮಳೆಗೆ ನೆನೆದೇ ನಿಲ್ಲಬೇಕಾದ ಪರಿಸ್ಥಿತಿಯಿದೆ.
ಶಾಸಕರಿಗೆ ಮನವಿ
ರಿಕ್ಷಾ ಚಾಲಕ, ಮಾಲಕ ಸಂಘ ಈಗಾಗಲೇ ಶಾಸಕರಿಗೆ ಮನವಿ ಸಲ್ಲಿಸಿದೆ. ಈ ಬಗ್ಗೆ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಳೆಗಾಲದಲ್ಲಿ ರಿಕ್ಷಾ ಪಾರ್ಕ್‌ಗೆ ಛಾವಣಿ ಇಲ್ಲದೇ ಚಾಲಕರಿಗೆ ತೊಂದರೆ ಹಾಗೂ ರಿಕ್ಷಾ ದಲ್ಲಿ ಹೋಗುವ ಜನರಿಗೂ ತೊಂದರೆಯನ್ನು ಗಮನಿಸಿ, ಶಾಸಕರು ಸ್ಪಂದಿಸಬೇಕು. ಕುಪ್ಪೆಪದವು ಪೇಟೆ ಅಭಿವೃದ್ಧಿಗೆ ಸಹಕರಿಸಬೇಕು.ಇದರಿಂದ ಸುಂದರ ಕುಪ್ಪೆಪದವು ಪೇಟೆಯೂ ಸಾಧ್ಯವಾಗಲಿದೆ ಎಂಬುದು ರಿಕ್ಷಾಚಾಲಕರ ಅಭಿಪ್ರಾಯ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

TMC ಮಹುವಾ ಮೊಯಿತ್ರಾಗೆ ಬೆಂಬಲ: ಬಿಎಸ್ ಪಿಯಿಂದ ಡ್ಯಾನಿಷ್ ಅಲಿ ಅಮಾನತು

2025ರ ಅಂತ್ಯದ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್: ಅಮಿತ್ ಶಾ

Rabkavi Banhatti 25 ಕೆಜಿ ಬೆಳ್ಳಿ ಅಂಬಾರಿ ಗೌರಿಮನಿ ಕುಟುಂಬದ ಕಲೆಗೆ ಸಾಕ್ಷಿ

Kargil ಯೋಜನೆಯನ್ನು ವಿರೋಧಿಸಿದ್ದಕ್ಕಾಗಿ ನನ್ನ ಪದಚ್ಯುತಿಯಾಯಿತು: ನವಾಜ್ ಷರೀಫ್

Mangaluru; ಸೋಮೇಶ್ವರ ಕಡಲತೀರದಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು