ಎಂಆರ್‌ಪಿಎಲ್ ಪರಿಸರದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ
Team Udayavani, May 5, 2020, 5:55 PM IST
ಮಂಗಳೂರು: ಇಲ್ಲಿನ ಎಂಆರ್ ಪಿಎಲ್ ಪರಿಸರದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.
ಮೇ 1ರ ರಾತ್ರಿ ಎಂಆರ್‌ಪಿಎಲ್ ಪರಿಸರದಲ್ಲಿ ಚಿರತೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಮರುದಿನ ಬೆಳಗ್ಗೆ ಸಿಸಿ ಟಿವಿಯಲ್ಲಿ ಪರಿಶೀಲಿಸಿದಾಗ ಅರಿವಿಗೆ ಬಂದಿದೆ. ತತ್‌ಕ್ಷಣವೇ ಎಂಆರ್‌ಪಿಎಲ್ ಅಧಿಕಾರಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಮಂಗಳೂರಿನ ಅರಣ್ಯ ಇಲಾಖೆ ಸಿಬಂದಿ ಚಿರತೆ ಕಂಡುಬಂದ ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಚಲನವಲನಗಳ ಕುರುಹನ್ನು ಪರಿಶೀಲಿಸಿದ್ದರು. ಜೊತೆಗೆ ಚಿರತೆ ಹೋಗಿರಬಹುದಾದ ಸ್ಥಳಗಳಿಗೂ ಅರಣ್ಯ ಇಲಾಖೆ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಇಂದು ಈ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ ಅರಣ್ಯ ಇಲಾಖೆ ಹಾಗೂ ಪಿಲಿಕುಳ ವನ್ಯಜೀವಿ ಕೇಂದ್ರದ ಸಿಬ್ಬಂದಿಗಳ ಕಾರ್ಯಾಚರಣೆಯಲ್ಲಿ ಸೆರೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ
ಉಳ್ಳಾಲದಿಂದ ಅಪಹರಿಸಿ ಚಾರ್ಮಾಡಿಯಲ್ಲಿ ಯುವಕನ ಕೊಲೆಗೆ ಯತ್ನ: ಅದೃಷ್ಟ ಚೆನ್ನಾಗಿತ್ತು ನೋಡಿ..
ಮಂಗಳೂರು : ಚೆಕ್ ಬೌನ್ಸ್ ಪ್ರಕರಣ ; 88 ಲ.ರೂ. ಪಾವತಿಸಲು ಆದೇಶ, ತಪ್ಪಿದರೆ 6 ತಿಂಗಳ ಸಜೆ
ಪಣಂಬೂರು ಬೀಚ್ ಸ್ವಚ್ಛತೆಗೆ ಪಾಲಿಕೆ ಕ್ರಮ
ಮಂಗಳೂರು ವಿವಿಯಲ್ಲಿ ಮತ್ತೆ ಹಿಜಾಬ್ ವಿವಾದ: ವಿದ್ಯಾರ್ಥಿಗಳಿಂದ ಪ್ರತಿಭಟನೆ