
ಮಂಗಳೂರು ವಿಮಾನ ನಿಲ್ದಾಣ: 4 ಕೋಟಿ ರೂ. ಮೌಲ್ಯದ ಚಿನ್ನ ವಶ
ಒಳ ಉಡುಪು ಮತ್ತು ಗುದನಾಳದ ಒಳಗೆ ಅಕ್ರಮ ಸಾಗಾಟ
Team Udayavani, Dec 2, 2022, 6:40 PM IST

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನವೆಂಬರ್ 01 ರಿಂದ 30 ರ ನಡುವೆ 10 ಮಂದಿ ಪ್ರಯಾಣಿಕರಿಂದ 4 ಕೋಟಿ 1 ಲಕ್ಷದ 18 ಸಾವಿರದ 280 ರೂಪಾಯಿ ಮೌಲ್ಯದ 7 ಕೆಜಿ 692 ಗ್ರಾಂ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಎಲ್ಲಾ ಚಿನ್ನವನ್ನು ದುಬೈನಿಂದ ಬಂದಿದ್ದ ಹತ್ತು ಮಂದಿ ಪುರುಷ ಪ್ರಯಾಣಿಕರಿಂದ ವಶ ಪಡಿಸಿಕೊಳ್ಳಲಾಗಿದೆ. ಎಲ್ ಇಡಿ ಬಲ್ಬ್, ರಿಸ್ಟ್ ವಾಚ್, ಮೊಬೈಲ್ ಫೋನ್ ಗಳ ಕೀಪ್ಯಾಡ್, ಟ್ರಾಲಿ ಬ್ಯಾಗ್ ಗಳ ಬೀಡಿಂಗ್, ಕಾರ್ಟನ್ ಬಾಕ್ಸ್ ಗಳಲ್ಲಿ ಪೇಸ್ಟ್ ಮತ್ತು ಪೌಡರ್ ರೂಪದಲ್ಲಿ, ಬೆಳ್ಳಿಯ ಕೋಟಿಂಗ್ ಮಾಡಿ ಮರೆಮಾಚಿ ವಿವಿಧ ವಿಧಾನಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು.
ಒಳ ಉಡುಪು ಮತ್ತು ಗುದನಾಳದ ಒಳಗೆ ಘನ ಗಮ್‌ನೊಂದಿಗೆ ಪೇಸ್ಟ್ ಅಥವಾ ಪುಡಿ ರೂಪದಲ್ಲಿ ಮರೆಮಾಚಿರುವುದು ಸೇರಿ ವಿವಿಧ ವಿಧಾನಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು. ಅಧಿಕಾರಿಗಳು ಚಿನ್ನದ ಮೂಲದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
