ಮುಡಾ ‘ಮಹಾ ಯೋಜನೆ’ ಕರಡು ಅಂತಿಮ: ಶೀಘ್ರ ಅನುಷ್ಠಾನದ ನಿರೀಕ್ಷೆ

ಮಂಗಳೂರು ನಗರ-ಗ್ರಾಮಾಂತರಕ್ಕೆ ಅನ್ವಯ: ಶೇ.80ರಷ್ಟು ನಕ್ಷೆ ಪೂರ್ಣ

Team Udayavani, Aug 23, 2022, 11:01 AM IST

3

ಉರ್ವಸ್ಟೋರ್‌: ಬೆಳೆಯು ತ್ತಿರುವ ಮಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಮುಂದಿನ 10 ವರ್ಷಗಳ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಚಾಲ್ತಿಯಲ್ಲಿರುವ ಮುಡಾ (ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ)ಮಹಾ ಯೋಜನೆ (ಮಾಸ್ಟರ್‌ ಪ್ಲ್ಯಾನ್‌) ಯನ್ನು ಪರಿಷ್ಕರಿಸಿ, ನೂತನ ಮಹಾಯೋಜ ನೆಯ ಕರಡು ರೂಪಿಸಲು ಕೊನೆಯ ಹಂತದ ಸಿದ್ಧತೆ ನಡೆಸಲಾಗುತ್ತಿದೆ.

ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಹಾಗೂ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಪರಿಧಿಯ ಮುಡಾ ವ್ಯಾಪ್ತಿಯಲ್ಲಿನ ಜಮೀನುಗಳ ಉಪಯೋಗವನ್ನು ನಿರ್ದಿಷ್ಟ ಪಡಿಸುವ ಮತ್ತು ಕಳೆದ 10 ವರ್ಷದ ಬೆಳವಣಿ ಗೆಗಳನ್ನು ಅಧಿಕೃತವಾಗಿ ದಾಖಲು ಮಾಡುವ ಮಹಾ ಯೋಜನೆ ಸಿದ್ಧಗೊಳ್ಳುತ್ತಿದೆ.

ಮಹಾಯೋಜನೆಗಾಗಿ “ಸ್ಟೆಮ್‌’ ಎಂಬ ಕನ್ಸಲ್ಟೆನ್ಸಿಗೆ ಮೂಲನಕ್ಷೆ ಸಿದ್ಧ ಪಡಿಸಲು ಮುಡಾ ಅನುಮತಿ ನೀಡಿತ್ತು. ಇದರಂತೆ ಶೇ.80ರಷ್ಟು ನಕ್ಷೆ ಪೂರ್ಣಗೊಳಿಸಲಾಗಿದೆ. ಮುಂದಿನ ಕೆಲವೇ ದಿನದಲ್ಲಿ ಕರಡು ಪ್ರತಿ ಯನ್ನು ಮುಡಾಕ್ಕೆ ನೀಡಲಿದ್ದಾರೆ. ಅದನ್ನು ಮುಡಾದಿಂದ ಸರಕಾರಕ್ಕೆ ಸಲ್ಲಿಸಲಾ ಗುತ್ತದೆ. ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಎಲ್ಲ ಆಸ್ತಿಗಳ ಸರ್ವೇ ಮಾಡಿ, ಹೊಸ ಬೆಳವಣಿಗೆಗಳನ್ನು ದಾಖಲು ಮಾಡಲಾಗುತ್ತಿದೆ. ರಸ್ತೆ, ಆಸ್ಪತ್ರೆ, ಶಾಲೆ ಮತ್ತಿತರ ಸಾರ್ವಜನಿಕ ಬಳಕೆಯ ಪ್ರದೇಶಗಳನ್ನೂ ಸರ್ವೇ ಮಾಡಿ ನಕ್ಷೆ ಯಲ್ಲಿ ಗುರುತಿಸಲಾಗುತ್ತಿದೆ. ಈ ಎಲ್ಲ ದಾಖಲೆಗಳನ್ನೂ ಡಿಜಿಟಲೀಕರಣ ಮಾಡಲಾಗುತ್ತಿದೆ. ಒಂದೆರಡು ತಿಂಗಳೊಳಗೆ ಇದು ಅಂತಿಮವಾಗುವ ನಿರೀಕ್ಷೆಯಿದೆ.

ಮುಂದೇನು?

ಮುಡಾ ಸಲ್ಲಿಸಿದ ಮಹಾಯೋಜ ನೆಯ ಕರಡು ಪ್ರತಿಗೆ ಸರಕಾರ ಅನುಮೋದನೆ ನೀಡಿದ ಅನಂತರ ಸಾರ್ವಜನಿಕರ ಸಲಹೆ-ಆಕ್ಷೇಪ ಕ್ಕಾಗಿ 60 ದಿನ ಅವಕಾಶ ನೀಡಲಾಗುತ್ತದೆ.

ಅದರಂತೆ ಆಕ್ಷೇಪ-ಸಲಹೆಗಳ ಪರಿಶೀಲನೆ ನಡೆಯಲಿದೆ. ಅದಾದ ಬಳಿಕ ಅಂತಿಮ ಒಪ್ಪಿಗೆಗಾಗಿ ಸರಕಾರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅಂತಿಮ ವಾದ ಅನಂತರ ಹೊಸ ಮಹಾಯೋಜನೆ ಅನುಷ್ಠಾನಕ್ಕೆ ಬರಲಿದೆ.

ಮಂಗಳೂರು ನಗರ ಹಾಗೂ ಗ್ರಾಮಾಂತರ ಈಗ ಇರುವ ಮಹಾ ಯೋಜನೆಗಳಲ್ಲಿ ಕೆಲವು ಸ್ಥಳಗಳ ರಸ್ತೆಗಳನ್ನು ತಪ್ಪಾಗಿ ನಮೂದಿಸಲಾಗಿತ್ತು. ಇದನ್ನು ಹೊಸ ಮಹಾಯೋಜನೆಯಲ್ಲಿ ಸರಿಪಡಿಸುವ ಕಾರ್ಯ ನಡೆಸಲಾ ಗುತ್ತಿದೆ. ಮುಡಾ ವ್ಯಾಪ್ತಿಯಲ್ಲಿ ಕಳೆದ 10 ವರ್ಷದಲ್ಲಿ ಆಗಿರುವ ಅಭಿವೃದ್ಧಿ ಚಟುವಟಿಕೆ ಹಾಗೂ ಅದರ ಪರಿಣಾಮ ಮತ್ತು ರಸ್ತೆ ಸಹಿತ ಅಲ್ಲಿ ಆಗಬೇಕಾದ ಕಾರ್ಯಯೋಜನೆ ಬಗ್ಗೆ ಇದರಲ್ಲಿ ಬೊಟ್ಟು ಮಾಡಲಾಗುತ್ತದೆ.

ಮುಡಾ ನಿಕಟಪೂರ್ವ ಅಧ್ಯಕ್ಷ ರವಿಶಂಕರ ಮಿಜಾರ್‌ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಮಹಾ ಯೋಜನೆ 2021ರಲ್ಲಿಯೇ ಆಗ ಬೇಕಿತ್ತು. ಆದರೆ ಕೊರೊನಾ ಕಾರಣ ದಿಂದ ಸಾಧ್ಯವಾಗಿರಲಿಲ್ಲ. ಇದೀಗ ಕೊನೆಯ ಹಂತದಲ್ಲಿದೆ. ಕೃಷಿ, ಬಯಲು, ಹಸುರು ವಲಯ ಸೇರಿದಂತೆ ವಿವಿಧ ಪ್ರಕಾರಗಳನ್ನು ಇದರಲ್ಲಿ ಗೊತ್ತುಪಡಿಸಲಾಗುತ್ತದೆ. ಅಭಿವೃದ್ಧಿ ಕಾರ್ಯ ನಡೆಸುವಾಗ ಪರಿಸರಕ್ಕೆ ಹಾನಿ ಆಗದಂತೆ ಅದರ ಗುರುತು ಮಾಡುವ ಕಾರ್ಯ ಮಹಾಯೋಜನೆಯಿಂದ ಸಾಧ್ಯವಾಗಲಿದೆ ಎಂದರು.

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.