Udayavni Special

ರಸ್ತೆ ವಿಸ್ತರಣೆಗೊಂಡರೂ ಫುಟ್‌ಪಾತ್‌ ಮೇಲೆಯೇ ಪಾರ್ಕಿಂಗ್‌


Team Udayavani, Oct 15, 2020, 10:26 PM IST

ರಸ್ತೆ ವಿಸ್ತರಣೆಗೊಂಡರೂ ಫುಟ್‌ಪಾತ್‌ ಮೇಲೆಯೇ ಪಾರ್ಕಿಂಗ್‌

ಲಾಲ್‌ಬಾಗ್‌ನಲ್ಲಿ ಫ‌ುಟ್‌ಪಾತ್‌ ಅನ್ನು ಸಂಪೂರ್ಣವಾಗಿ ಅತಿಕ್ರಮಿಸಿ ಕೊಂಡಿರುವ ವಾಹನಗಳು.

ಮಹಾನಗರ: ನಗರದ ಹಲವೆಡೆ ಹೊಸದಾಗಿ ನಿರ್ಮಾಣಗೊಂಡಿರುವ ಫ‌ುಟ್‌ಪಾತ್‌ಗಳ ಪೈಕಿ ಬಹುತೇಕ ವಾಹನಗಳ ಪಾರ್ಕಿಂಗ್‌ಗೆ ಬಳಕೆಯಾಗುತ್ತಿವೆ!

ವಿಸ್ತರಿಸಲಾದ ರಸ್ತೆಗಳು ಈಗಾಗಲೇ ಅನಧಿಕೃತ ವಾಹನ ಪಾರ್ಕಿಂಗ್‌ ಸ್ಥಳವಾಗಿ ಮಾರ್ಪಟ್ಟಿವೆ. ಇದೀಗ ಹೊಸದಾಗಿ ನಿರ್ಮಾಣಗೊಂಡಿರುವ ಫುಟ್‌ಪಾತ್‌ಗಳು ಕೂಡ ವಾಹನಗಳ ನಿಲುಗಡೆ ತಾಣವಾಗುತ್ತಿವೆ. ಇದರಿಂದ ಪಾದಚಾರಿಗಳು ರಸ್ತೆಯಲ್ಲಿಯೇ ಅಪಾಯಕಾರಿಯಾಗಿ ನಡೆದಾಡುವ ಸ್ಥಿತಿ ಉಂಟಾಗಿದೆ.

ಫುಟ್‌ಪಾತ್‌ ನಿರ್ಮಿಸಿದ್ದು ಏತಕ್ಕಾಗಿ?
ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಕಡೆಯಿಂದ ಲಾÇಬಾಗ್‌ ಕಡೆಗೆ, ಅಲ್ಲಿಂದ ಮುಂದಕ್ಕೆ ಬಲ್ಲಾಳ್‌ಬಾಗ್‌ ಕಡೆಗೆ ಬರುವ ರಸ್ತೆ ಪಾದಚಾರಿಗಳಿಗೆ ಅತ್ಯಂತ ಅಪಾಯ ಕಾರಿಯಾಗಿ ಪರಿಣಮಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಹೊರಡುವ ಪಾದಚಾರಿಗಳು ಆರಂಭದಲ್ಲಿ ಫುಟ್‌ಪಾತ್‌ ಇಲ್ಲದೇ ತೊಂದರೆಗೆ ಸಿಲುಕುತ್ತಾರೆ. ಇಲ್ಲಿ ರಸ್ತೆ ವಿಸ್ತರಣೆಯಾದರೂ ಫುಟ್‌ಪಾತ್‌ ನಿರ್ಮಾಣವಾಗಿಲ್ಲ. ವಿಸ್ತರಣೆಗೊಂಡ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಯಾಗಿ ನಿಲ್ಲಿಸಲಾಗುತ್ತದೆ. ಪಾಲಿಕೆ ಕಚೇರಿ ಕಟ್ಟಡದ ಎದುರಿನ ಕಟ್ಟಡದ ಪಕ್ಕದಿಂದ ಮುಂದೆ ಸುವ್ಯವಸ್ಥಿತ ಫುಟ್‌ಪಾತ್‌ ನಿರ್ಮಿಸಲಾಗಿದೆ. ಆದರೆ ಫುಟ್‌ಪಾತ್‌ನ್ನು ಸಂಪೂರ್ಣವಾಗಿ ವಾಹನಗಳು ಆಕ್ರಮಿಸಿಕೊಂಡಿರುತ್ತವೆ.

ಫ‌ುಟ್‌ಪಾತ್‌ಗೆ ತಡೆ
ಕೆಲವು ಕಟ್ಟಡಗಳು/ವಾಣಿಜ್ಯ ಮಳಿಗೆಗಳ ಎದುರು ಸಾಮಗ್ರಿಗಳನ್ನು ಫ‌ುಟ್‌ಪಾತ್‌ನಲ್ಲಿಯೇ ಇಟ್ಟು ಪಾದಚಾರಿಗಳು ಫ‌ುಟ್‌ಪಾತ್‌ ಬಳಸದಂತೆ ಮಾಡಲಾಗಿದೆ. ತಿಂಗಳ ಹಿಂದೆಯಷ್ಟೇ ನಿರ್ಮಾಣಗೊಂಡ ಫ‌ುಟ್‌ಪಾತ್‌ ಕೂಡ ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಇನ್ನು ಕೆಲವೆಡೆ ಫ‌ುಟ್‌ಪಾತ್‌ಗಳ ಮಧ್ಯೆ ರಸ್ತೆಗಾಗಿ ಸ್ಥಳಾವಕಾಶ ಬಿಟ್ಟು ಸಂಪರ್ಕವೇ ಇಲ್ಲದಿರುವುದರಿಂದ ಅಂತಹ ಸ್ಥಳಗಳಲ್ಲಿಯೂ ನಡೆದಾಡುವುದು ಅಸಾಧ್ಯ.

ಎತ್ತರವಿಲ್ಲದ ಫ‌ುಟ್‌ಪಾತ್‌
ಹಲವೆಡೆ ಫ‌ುಟ್‌ಪಾತ್‌ಗಳನ್ನು ರಸ್ತೆಗೆ ಸಮತಟ್ಟಾಗಿ ನಿರ್ಮಿಸಲಾಗಿದೆ. ಹಾಗಾಗಿ ವಾಹನಗಳನ್ನು ಸುಲಭವಾಗಿ ಫ‌ುಟ್‌ಪಾತ್‌ಗಳಲ್ಲಿ ನಿಲ್ಲಿಸಲಾಗುತ್ತಿದೆ. ಇನ್ನು ಕೆಲವೆಡೆ ತುಸು ಎತ್ತರದಲ್ಲಿದ್ದರೂ ಅದು ವಾಹನಗಳು ಏರುವಷ್ಟೇ ಎತ್ತರವಿದೆ. ಫ‌ುಟ್‌ಪಾತ್‌ಗಳನ್ನು ನಿರ್ಮಿಸುವಾಗಲೇ ವಾಹನಗಳ ನಿಲುಗಡೆಗೆ ಸೂಕ್ತವಾಗಿರುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ ಎಂದು ಅನೇಕ ಮಂದಿ ಪಾದಚಾರಿಗಳು ದೂರಿದ್ದಾರೆ.

ಸಂಚಾರಕ್ಕೆ ತೊಡಕು
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಫ‌ುಟ್‌ಪಾತ್‌ಗಳು ವಾಹನಗಳ ಪಾರ್ಕಿಂಗ್‌ಗೆ ಬಳಕೆಯಾಗುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲಿ ಜೀವಭಯದಲ್ಲೇ ನಡೆದಾಡುವುದು ಅನಿವಾರ್ಯವಾಗಿದೆ. ಅಲ್ಲದೆ ವಾಹನಗಳ ಸುಗಮ ಸಂಚಾರಕ್ಕೂ ತೊಡಕಾಗುತ್ತಿದೆ. ವಿಸ್ತರಣೆಗೊಂಡ ರಸ್ತೆಯ ಅಂಚಿನಲ್ಲಿ ವಾಹನಗಳ ಪಾರ್ಕಿಂಗ್‌ ಅವಕಾಶ ನೀಡಿದರೂ ಫ‌ುಟ್‌ಪಾತ್‌ಗಳನ್ನು ಮಾತ್ರ ಜನರ ಓಡಾಟಕ್ಕೆ ಮುಕ್ತವಾಗಿರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಅನಧಿಕೃತ ಪಾರ್ಕಿಂಗ್‌ ತೆರವು
ರಸ್ತೆ ಮಾತ್ರವಲ್ಲದೆ ಫ‌ುಟ್‌ಪಾತ್‌ಗಳನ್ನು ಆಕ್ರಮಿಸಿ ಪಾರ್ಕಿಂಗ್‌ ಮಾಡುವ ವಾಹನ ಸವಾರರು/ ಚಾಲಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ. ಜನರ ಓಡಾಟಕ್ಕೆ ತೊಂದರೆಯಾಗುವಂತೆ ವಾಣಿಜ್ಯ ಮಳಿಗೆಗಳು ಸಾಮಗ್ರಿಗಳನ್ನು ಇಟ್ಟರೆ ಅಂತವರ ವಿರುದ್ಧ ಪಾಲಿಕೆ ಹಾಗೂ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.
-ನಟರಾಜ್‌, ಎಸಿಪಿ ಸಂಚಾರಿ ಪೊಲೀಸ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಧೋನಿ ಹೇಳಿಕೆಗೆ ವ್ಯಾಪಕ ಟೀಕೆ

ಧೋನಿ ಹೇಳಿಕೆಗೆ ವ್ಯಾಪಕ ಟೀಕೆ

ಪಡೆದದ್ದು 10.7 ಕೋಟಿ ರೂ., ಗಳಿಸಿದ್ದು 58 ರನ್‌!

ಪಡೆದದ್ದು 10.7 ಕೋಟಿ ರೂ., ಗಳಿಸಿದ್ದು 58 ರನ್‌!

ಐಪಿಎಲ್ ನಲ್ಲಿ 5000 ರನ್ ಗಳ ಶಿಖರವೇರಿದ ಧವನ್

ಐಪಿಎಲ್ ನಲ್ಲಿ 5000 ರನ್ ಗಳ ಶಿಖರವೇರಿದ ಧವನ್ ..!

true-caller

ಕೋವಿಡ್ ಕಾಲದಲ್ಲಿ True caller ಬಳಕೆದಾರರ ಸಂಖ್ಯೆ ದ್ವಿಗುಣ: ಕಾರಣವೇನು ?

siddaramiha

ಪ್ರಧಾನಿ ಮೋದಿಯವರು ತಮ್ಮ ಕರ್ತವ್ಯಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ: ಸಿದ್ದರಾಮಯ್ಯ

mandya

ಅಂತರ್ಜಾತಿ ಮದುವೆಯಾದ ಯುವತಿ ನಿಗೂಢ ನಾಪತ್ತೆ: 5 ವರ್ಷದ ಬಳಿಕ ಪೋಷಕರಿಂದ ದೂರು ದಾಖಲು

vijayapura-agriculture

ವಿಜಯಪುರ: ರೈತರ ಸಾವು ಪ್ರಕರಣ: 34 ಕುಟುಂಬಗಳಿಗೆ 1.27 ಕೋಟಿ ರೂ. ಪರಿಹಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

12 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಸೈಕಲ್‌ ಪಥ !

12 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿದೆ ಸೈಕಲ್‌ ಪಥ !

ದ.ಕ.: ಅಂತರ್‌ ಜಾತಿ ವಿವಾಹಕ್ಕೆ 1.48 ಕೋ.ರೂ. ಪ್ರೋತ್ಸಾಹಧನ

ದ.ಕ.: ಅಂತರ್‌ ಜಾತಿ ವಿವಾಹಕ್ಕೆ 1.48 ಕೋ.ರೂ. ಪ್ರೋತ್ಸಾಹಧನ

ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಭೇಟಿ ನೀಡಿ ಕಾಳಿ ಚರಣ್‌ ಮಹಾರಾಜ್

ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಭೇಟಿ ನೀಡಿ ಕಾಳಿ ಚರಣ್‌ ಮಹಾರಾಜ್

ನವರಾತ್ರಿ ಸಂಭ್ರಮ : ಕರಾವಳಿಯ ದೇವಾಲಯಗಳಲ್ಲಿ ಭಕ್ತ ಸಮೂಹ

ನವರಾತ್ರಿ ಸಂಭ್ರಮ : ಕರಾವಳಿಯ ದೇವಾಲಯಗಳಲ್ಲಿ ಭಕ್ತ ಸಮೂಹ

MUST WATCH

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

udayavani youtube

ನವರಾತ್ರಿ – Navratri ಹಬ್ಬದ ವೈಶಿಷ್ಟ್ಯವೇನು? | Udayavani

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavaniಹೊಸ ಸೇರ್ಪಡೆ

ಧೋನಿ ಹೇಳಿಕೆಗೆ ವ್ಯಾಪಕ ಟೀಕೆ

ಧೋನಿ ಹೇಳಿಕೆಗೆ ವ್ಯಾಪಕ ಟೀಕೆ

ಪಡೆದದ್ದು 10.7 ಕೋಟಿ ರೂ., ಗಳಿಸಿದ್ದು 58 ರನ್‌!

ಪಡೆದದ್ದು 10.7 ಕೋಟಿ ರೂ., ಗಳಿಸಿದ್ದು 58 ರನ್‌!

ಐಪಿಎಲ್ ನಲ್ಲಿ 5000 ರನ್ ಗಳ ಶಿಖರವೇರಿದ ಧವನ್

ಐಪಿಎಲ್ ನಲ್ಲಿ 5000 ರನ್ ಗಳ ಶಿಖರವೇರಿದ ಧವನ್ ..!

true-caller

ಕೋವಿಡ್ ಕಾಲದಲ್ಲಿ True caller ಬಳಕೆದಾರರ ಸಂಖ್ಯೆ ದ್ವಿಗುಣ: ಕಾರಣವೇನು ?

siddaramiha

ಪ್ರಧಾನಿ ಮೋದಿಯವರು ತಮ್ಮ ಕರ್ತವ್ಯಪಾಲನೆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.