ಮಂಗಳೂರಿನಲ್ಲಿ ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ; 1.5 ಕೋ.ರೂ. ಅನುದಾನ ಮಂಜೂರಾತಿ

 50 ಮಂದಿ ವಾಸ್ತವ್ಯಕ್ಕೆ ಅವಕಾಶ; ಕ್ರೀಡಾಳುಗಳಿಗೆ ಹೆಚ್ಚಿನ ತರಬೇತಿ; ಉತ್ತಮ ಸಾಧನೆಗೆ ಪೂರಕ

Team Udayavani, Aug 4, 2020, 12:30 PM IST

ಮಂಗಳೂರಿನಲ್ಲಿ ಬಾಲಕಿಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ; 1.5 ಕೋ.ರೂ. ಅನುದಾನ ಮಂಜೂರಾತಿ

ಸಾಂದರ್ಭಿಕ ಚಿತ್ರ ಬಳಸಲಾಗಿದೆ

ಮಹಾನಗರ: ಕ್ರೀಡಾ ಚಟುವಟಿಕೆಯಲ್ಲಿ ಆಸಕ್ತರಿರುವ ಪ್ರೌಢಶಾಲಾ ವಿದ್ಯಾರ್ಥಿನಿಯರಿಗಾಗಿ ಮಂಗಳೂರಿನಲ್ಲಿ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ನಗರದ ಮಂಗಳಾ ಸ್ಟೇಡಿಯಂ ಬಳಿಯಲ್ಲಿ ಸದ್ಯ ಕ್ರೀಡಾ ಹಾಸ್ಟೆಲ್‌ ಇದ್ದು, ಇದರಲ್ಲಿ ಪ್ರೌಢಶಾಲಾ ಬಾಲ ಕರು ಹಾಗೂ ಬಾಲಕಿಯರು ವಾಸ್ತವ್ಯ ದಲ್ಲಿರಲು ಅವಕಾಶವಿದೆ. ಆದರೆ ನಿಯಮದ ಪ್ರಕಾರ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ಇರಬೇಕು ಎಂಬ ಕಾರಣದಿಂದ ಈಗ ಇರುವ ಕ್ರೀಡಾ ಹಾಸ್ಟೆಲ್‌ ಸಮೀಪ ದಲ್ಲಿಯೇ ಬಾಲಕಿಯರಿಗೆ ಪ್ರತ್ಯೇಕ ಹಾಸ್ಟೆಲ್‌ ನಿರ್ಮಿಸಲು ಸರಕಾರ ನಿರ್ಧ ರಿಸಿದೆ. 1.5 ಕೋ.ರೂ. ವೆಚ್ಚದಲ್ಲಿ ನೂತನ ಹಾಸ್ಟೆಲ್‌ ನಿರ್ಮಾಣಕ್ಕೆ ಸರಕಾರ ಮಂಜೂ ರಾತಿ ನೀಡಿದೆ.

ಪ್ರಸ್ತುತ ಇರುವ ಕ್ರೀಡಾ ಹಾಸ್ಟೆಲ್‌ನಲ್ಲಿ ಬಾಲಕರು-ಬಾಲಕಿಯರು ಸೇರಿ ಒಟ್ಟು 50 ಮಂದಿ ವಾಸ್ತವ್ಯ ಇರಲು ಅವಕಾಶವಿದೆ. ಆದರೆ ಲಾಕ್‌ಡೌನ್‌ಗೂ ಮುನ್ನ ಇಲ್ಲಿ ಕೇವಲ 22 ಮಕ್ಕಳು ಮಾತ್ರ ಇದ್ದರು. ಪ್ರತ್ಯೇಕ ವಸತಿ ವ್ಯವಸ್ಥೆ, ಊಟೋಪಚಾರ ಹಾಗೂ ಆಗಮನ-ನಿರ್ಗಮನದ ವ್ಯವಸ್ಥೆ ಇದೆ. ಜನವರಿ, ಫೆಬ್ರವರಿಯಲ್ಲಿ ತಾಲೂಕು – ಜಿಲ್ಲಾಮಟ್ಟದ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಅತ್ಯುತ್ತಮ ಕ್ರೀಡಾ ಪ್ರದರ್ಶನ ನೀಡುವ ಬಾಲಕಿಯರಿಗೆ ಹೆಚ್ಚಿನ ತರಬೇತಿ ಹಾಗೂ ಸರಕಾರದ ಸ್ಪಂದನೆ ಹಿನ್ನೆಲೆಯಲ್ಲಿ ಹಾಸ್ಟೆಲ್‌ ವ್ಯವಸ್ಥೆ ಮಾಡಲಾಗುತ್ತದೆ. ದ.ಕ. ಜಿಲ್ಲೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಹೊರ ಜಿಲ್ಲೆಯ ವಿದ್ಯಾರ್ಥಿನಿಯರು ಈ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ವಿಶೇಷವಾಗಿ ಮಂಗಳೂರು ಹಾಸ್ಟೆಲ್‌ನಲ್ಲಿ ಆ್ಯತ್ಲೆಟಿಕ್‌, ವಾಲಿಬಾಲ್‌ನಲ್ಲಿ ಸಾಧನೆ ತೋರಿದ ಬಾಲಕಿಯರಿಗೆ ಅವಕಾಶವಿದೆ.

ಹಾಸ್ಟೆಲ್‌ಗೆ ವಿದ್ಯಾರ್ಥಿನಿಯರ ನಿರಾಸಕ್ತಿ!
“ಇತ್ತೀಚಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್‌ ಸೌಲಭ್ಯ ಪಡೆಯಲು ನಿರಾಸಕ್ತಿ ತೋರುತ್ತಿದ್ದಾರೆ. ಮನೆಯಿಂದಲೇ ಆಗಮಿಸಿ ತರಬೇತಿ ಪಡೆದು ಮತ್ತೆ ಮನೆಗೆ ವಾಪಸಾಗುವ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿದೆ. ಜತೆಗೆ, ದ.ಕ. ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಸ್ಟೆಲ್‌ ಸೌಲಭ್ಯಕ್ಕೆ ಹೆಚ್ಚು ಆಸಕ್ತಿ ತೋರುತ್ತಿಲ್ಲ. ಆದರೆ ಉಳಿದ ಜಿಲ್ಲೆಯ ವಿದ್ಯಾರ್ಥಿಗಳು ಹಾಸ್ಟೆಲ್‌ ಅವ ಕಾಶ ಬಳಕೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು.

1.5 ಕೋ.ರೂ. ವೆಚ್ಚದಲ್ಲಿ ಹಾಸ್ಟೆಲ್‌
ಮಂಗಳೂರು ಸಹಿತ ರಾಜ್ಯದ 10 ಕಡೆಗಳಲ್ಲಿ ತಲಾ 1.5 ಕೋ.ರೂ. ವೆಚ್ಚದಲ್ಲಿ ಬಾಲಕಿ ಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಸರಕಾರ ಮಂಜೂರಾತಿ ನೀಡಿದೆ. ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಈ ಕ್ರೀಡಾ ವಸತಿ ನಿರ್ಮಾಣ ವಾಗಲಿದೆ.
 - ಪ್ರದೀಪ್‌ ಡಿ’ಸೋಜಾ, ಉಪನಿರ್ದೇಶಕರು, ಕ್ರೀಡಾ ಇಲಾಖೆ-ದ.ಕ.

ಟಾಪ್ ನ್ಯೂಸ್

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 465 ಅಂಕ ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 465 ಅಂಕ ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಿಹಾರ ಸಿಎಂ ನಿತೀಶ್; ಆರ್ ಜೆಡಿ, ಜೆಡಿಯು ಸರ್ಕಾರ ರಚನೆ

ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಿಹಾರ ಸಿಎಂ ನಿತೀಶ್; ಆರ್ ಜೆಡಿ, ಜೆಡಿಯು ಸರ್ಕಾರ ರಚನೆ

ಚಾಮರಾಜನಗರ: ಜನ್ಮದಿನದಂದೇ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ಕಾಲೇಜು ಉಪನ್ಯಾಸಕಿ

ಚಾಮರಾಜನಗರ: ಜನ್ಮದಿನದಂದೇ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ಕಾಲೇಜು ಉಪನ್ಯಾಸಕಿ

india ajadi ka amruth singh

ಸ್ವಾತಂತ್ರ್ಯ ಸಮರ @75: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್

ಕನ್ನಡದ ʼಉಗ್ರಂʼ ಮರಾಠಿಗೆ ರಿಮೇಕ್: ನಾಯಕ – ನಾಯಕಿ ಯಾರು? ಇಲ್ಲಿದೆ ಮಾಹಿತಿ

ಕನ್ನಡದ ʼಉಗ್ರಂʼ ಮರಾಠಿಗೆ ರಿಮೇಕ್: ನಾಯಕ – ನಾಯಕಿ ಯಾರು?

independence 75 k

ಸ್ವಾತಂತ್ರ್ಯ ವೀರರು@75: ಸಮಾಜದ ಕಟ್ಟುಕಟ್ಟಳೆಗಳ ವಿರುದ್ಧ ಹೋರಾಡಿದ್ದ ಧೀರ ಅಮಚಡಿ ತೇವನ್

thumb 4 politics

ಬಿಹಾರದಲ್ಲಿ ಜೆಡಿಯು, ಬಿಜೆಪಿ ಮೈತ್ರಿ ಸರ್ಕಾರ ಪತನ; 4 ಗಂಟೆಗೆ ರಾಜ್ಯಪಾಲರ ಭೇಟಿ: ನಿತೀಶ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

ಮಂಗಳೂರು ಮೀನುಗಾರಿಕೆ ಬಂದರು; 3ನೇ ಹಂತದ ಜೆಟ್ಟಿಯ ಬಾಕಿ ಕಾಮಗಾರಿಗೆ ಗ್ರಹಣ!

13

ಹೆದ್ದಾರಿ ಬದಿ ಗುಡ್ಡ ತೆರವು; ಗೋರಿಗುಡ್ಡ ಸರ್ವಿಸ್‌ ರಸ್ತೆ ಸನ್ನಿಹಿತ

11

ಕಿಲೆಂಜೂರಿನ ಅಭಿವೃದ್ಧಿಗೆ ಸಿಗಬೇಕಿದೆ ವೇಗ

10

ಮೂಡುಬಿದಿರೆ: ಟ್ರಾಫಿಕ್‌ ಪೊಲೀಸ್‌ ಇಲ್ಲದೆ ಸಮಸ್ಯೆ

tdy-5

ಮಂಗಳೂರು: ವ್ಯಕ್ತಿಗೆ ಕರೆ ಮಾಡಿ ಜೀವ ಬೆದರಿಕೆ; ದೂರು ದಾಖಲು

MUST WATCH

udayavani youtube

ಬಿಹಾರದಲ್ಲಿ ಜೆಡಿಯು – ಬಿಜೆಪಿ ಮೈತ್ರಿ ಸರ್ಕಾರ ಪತನ

udayavani youtube

ಮರೆಯಾಗುತ್ತಿದೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹೆಜ್ಜೆ ಕುಣಿತ

udayavani youtube

ಪ್ರವಾಹದ ನೀರಿನಲ್ಲಿ ಕಾರು ಚಲಾಯಿಸಿ ಸಿಲುಕಿಕೊಂಡ ಯುವಕರು… ಕೊನೆಗೂ ಪಾರಾದರು

udayavani youtube

ಸೌಹಾರ್ದತೆಗೆ ಸಾಕ್ಷಿಯಾದ ನಾಲತವಾಡ : ಹಿಂದೂ ಮುಸ್ಲಿಂ ಸೇರಿ ಮೊಹರಂ ಆಚರಣೆ

udayavani youtube

ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?

ಹೊಸ ಸೇರ್ಪಡೆ

8nation

ಜಾತಿ ಸಂಘರ್ಷದಿಂದ ದೇಶ ಕಟ್ಟಲು ಅಸಾಧ್ಯ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 465 ಅಂಕ ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 465 ಅಂಕ ಜಿಗಿತ; 17,000 ಅಂಕಗಳ ಗಡಿ ದಾಟಿದ ನಿಫ್ಟಿ

7-PU

12ರಿಂದ ದ್ವೀತೀಯ ಪಿಯು ಪೂರಕ ಪರೀಕ್ಷೆ

ಅಯೋಧ್ಯೆಯಲ್ಲೂ ಕರ್ನಾಟಕ ಛತ್ರ ನಿರ್ಮಾಣ: ಸಚಿವೆ ಶಶಿಕಲಾ ಜೊಲ್ಲೆ

ಅಯೋಧ್ಯೆಯಲ್ಲೂ ಕರ್ನಾಟಕ ಛತ್ರ ನಿರ್ಮಾಣ: ಸಚಿವೆ ಶಶಿಕಲಾ ಜೊಲ್ಲೆ

18

ಕುರುಗೋಡು: ಕೇಂದ್ರ ಸರ್ಕಾರ ಮಂಡಿಸಲಿರುವ ವಿದ್ಯುತ್ ಕಾಯ್ದೆ ಪ್ರತಿಗಳು ಸುಟ್ಟು ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.