ಬೃಹತ್ ಹೊಂಡದಲ್ಲಿ ಮಲಿನ ನೀರು ಸಂಗ್ರಹ: ಪರಿಸರದಲ್ಲಿ ದುರ್ವಾಸನೆ
Team Udayavani, Dec 9, 2022, 12:11 PM IST
ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವಂತೆ ಉಪ್ಪಳದಲ್ಲಿ ಕಿರು ಸೇತುವೆ ನಿರ್ಮಿಸಲು ತೋಡಿದ ಬೃಹತ್ ಹೊಂಡದಲ್ಲಿ ಪರಿಸರದಿಂದ ಮಲಿನ ನೀರು ಸಂಗ್ರಹಗೊಂಡು ದುರ್ವಾಸನೆ ಬೀರುತ್ತಿದೆ.
ಮಂಗಲ್ಪಾಡಿ ಗ್ರಾ.ಪಂ.ವ್ಯಾಪ್ತಿಯ ಉಪ್ಪಳ ಬಸ್ ನಿಲ್ದಾಣ ಸಮೀಪದ ಮೀನು ಮಾರುಕಟ್ಟೆಗೆ ತೆರಳುವ ರಸ್ತೆಯ ಹೆದ್ದಾರಿ ಬದಿಯಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ತೋಡಿದ ಹೊಂಡದಲ್ಲಿ ಮಲಿನ ನೀರು ತುಂಬಿಕೊಂಡಿದೆ. ಹೆದ್ದಾರಿಯ ಇಕ್ಕೆಡೆಯಲ್ಲಿರುವ ಫ್ಲಾಟ್ ಹಾಗೂ ವ್ಯಾಪಾರ ಸಂಸ್ಥೆ ಹೊಂದಿರುವ ಕಟ್ಟಡಗಳಿಂದ ಮಲಿನ ನೀರು ಹರಿದು ತುಂಬಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಹೀಗೆ ತುಂಬಿಕೊಂಡ ಮಲಿನ ನೀರು ದುರ್ವಾಸನೆಯಿಂದ ಕೂಡಿದ್ದು, ಹೆದ್ದಾರಿಯಲ್ಲಿ ಹಾಗೂ ಮೀನು ಮಾರುಕಟ್ಟೆಗೆ ತೆರಳುವವರು ಮೂಗು ಮುಚ್ಚಿಕೊಂಡೇ ತೆರಳಬೇಕಾದ ಸ್ಥಿತಿ ಎದುರಾಗಿದೆ.
ಹಲವು ವರ್ಷಗಳಿಂದ ಈ ಮಲಿನ ನೀರು ಮೀನು ಮಾರುಕಟ್ಟೆ ರಸ್ತೆಯ ಚರಂಡಿಯಿಂದ ಹರಿದು ಹೋಗುತ್ತಿತ್ತು. ಆದರೆ ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ಕಿರು ಸೇತುವೆ ನಿರ್ಮಿಸಲು ಹೊಂಡವನ್ನು ತೋಡಲಾಗಿದೆ. ಅದರಲ್ಲಿ ಹರಿದು ಬಂದ ಮಲಿನ ನೀರು ಸಂಗ್ರಹಗೊಂಡಿದೆ. ಹೀಗೆ ಮಲಿನ ನೀರು ಹರಿದು ಬರುತ್ತಿರುವುದರಿಂದ ಕಿರು ಸೇತುವೆ ನಿರ್ಮಾಣದ ಕಾಮಗಾರಿ ಆರಂಭಿಸಲು ಕೂಡ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.
ಶಾಶ್ವತ ಪರಿಹಾರಕ್ಕೆ ಒತ್ತಾಯ
ಉಪ್ಪಳ ಪರಿಸರದಲ್ಲಿ ಹಲವಾರು ಕಟ್ಟಡ ಹಾಗೂ ಪ್ಲಾಟ್‌ಗಳಿಂದ ರಾಜಾರೋಷವಾಗಿ ಮಲಿನ ನೀರು ಸಾರ್ವಜನಿಕ ಸ್ಥಳಕ್ಕೆ ಹರಿಯ ಬಿಡುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಆರೋಗ್ಯ ಇಲಾಖೆ ಹಾಗೂ ಪಂಚಾಯತ್ ಅಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ: ಪೊಲೀಸ್ ಬಿಗಿ ಬಂದೋಬಸ್ತ್
ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರಕಾರ: ಗೋವಾ ಸಿಎಂ
ಮಂಗಳೂರು : ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ
ಜುವೆಲರಿ ಅಂಗಡಿಯಲ್ಲಿ ಕೊಲೆ ಪ್ರಕರಣ 7 ತಂಡಗಳಿಂದ ಆರೋಪಿಗಾಗಿ ಶೋಧ
ಐಸಿಸ್ ಸಂಪರ್ಕ: ಮೂವರ ಬಂಧನ ಪ್ರಕರಣ… ಕಾರು, ಹೊಟೇಲ್ ಮೇಲೂ ಬಾಂಬ್ ಎಸೆದಿದ್ದರು!
MUST WATCH
ಹೊಸ ಸೇರ್ಪಡೆ
ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ: ಪೊಲೀಸ್ ಬಿಗಿ ಬಂದೋಬಸ್ತ್
ಸಂಸತ್ನಲ್ಲಿ ಅದಾನಿ ವಿಚಾರ ಸದ್ದು, ಮೋದಿ ವಿರುದ್ಧ ಖರ್ಗೆ ಗುಡುಗು
ಭಗವಂತನಿಗಿಂತ ಮೊದಲೇ ಕುಮಾರಸ್ವಾಮಿಗೆ ತಿಳಿಯುತ್ತದೆ: ಸಿ.ಸಿ.ಪಾಟೀಲ್
ನನ್ನ ಕ್ಷೇತ್ರದ ಮೇಲೇಕೆ ಕಣ್ಣು: ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ
ಗಂಗಾವತಿ: ಪೊಲೀಸರ ಮಿಂಚಿನ ಕಾರ್ಯಾಚರಣೆ; ಗಾಂಜಾ ಮಾರಾಟ ಮಾಡುತ್ತಿದ್ದ 6 ಯುವಕರ ಬಂಧನ