
ಇಂದು ಷಷ್ಠಿ: ಕುಡುಪುವಿನಲ್ಲಿ ಬ್ರಹ್ಮರಥೋತ್ಸವ
Team Udayavani, Nov 29, 2022, 9:42 AM IST

ಮಹಾನಗರ: ಮಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದ ವಿವಿಧ ದೇವಾಲಯದಲ್ಲಿ ಪಂಚಮಿ ಉತ್ಸವ ಸೋಮವಾರ ನಡೆಯಿತು. ನ. 29ರಂದು ಷಷ್ಠಿ ಮಹೋತ್ಸವ, ರಥೋತ್ಸವ ನಡೆಯಲಿದೆ.
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ, ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಮಾಣೂರು ಶ್ರೀ ಅನಂತಪದ್ಮನಾಭ ದೇವಸ್ಥಾನ, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕಂಕನಾಡಿ ಬಜಾಲ್ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕಿಲ್ಪಾಡಿ ಕುಮಾರಮಂಗಿಲ ಶ್ರೀ ಸುಬ್ರಹ್ಮಣ್ಯ ದೇವಾಲಯ, ಮೂಡುಬಿದಿರೆ ಕಡಂದಲೆ ಶ್ರೀ ಸುಬ್ರಹಣ್ಯ ಸ್ವಾಮಿ ದೇಗುಲ, ಮುಂಡೋಳಿ ಶ್ರೀ ನಾಗಬ್ರಹ್ಮ ರಕ್ತೇಶ್ವರೀ ಕ್ಷೇತ್ರ ಸಹಿತ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಚಂಪಾಷಷ್ಠಿ ನಡೆಯಲಿದೆ.
ಕುಡುಪು: ಪಂಚಮಿ ಮಹೋತ್ಸವ
ಕುಡುಪು ಶ್ರೀ ಅನಂತಪದ್ಮನಾಭ ದೇಗುಲದಲ್ಲಿ ಸೋಮವಾರ ಪಂಚಮಿ ಅಂಗವಾಗಿ ಬೆಳಗ್ಗೆ ಅಂಗಪ್ರದಕ್ಷಿಣೆ, ಮಹಾಪೂಜೆ, ಅಶ್ವವಾಹನದೊಂದಿಗೆ ರಾತ್ರಿ ಕಟ್ಟೆಪೂಜೆಗಳು, ತೆಪ್ಪೋತ್ಸವ, ಎರಡನೇ ಬಲಿ, ಚಂದ್ರಮಂಡಲೋತ್ಸವ, ಪಾಲಕಿ ಉತ್ಸವ ನಡೆಯಿತು.
ಕ್ಷೇತ್ರದ ತಂತ್ರಿಗಳಾದ ನರಸಿಂಹ ತಂತ್ರಿ, ಕೃಷ್ಣರಾಜ ತಂತ್ರಿ, ಅರವಿಂದ್ ತಂತ್ರಿ, ಪವಿತ್ರಪಾಣಿ ಬಾಲಕೃಷ್ಣ ಭಟ್, ಮೊಕ್ತೇಸರರಾದ ಭಾಸ್ಕರ್ ಕೆ. ಮನೋಹರ್ ಭಟ್, ವಾಸುದೇವ ರಾವ್, ಉದಯ ಕುಮಾರ್ ಕುಡುಪು, ಸುಜನ್‌ದಾಸ್, ರಾಘವೇಂದ್ರ ಭಟ್, ಸೋಮಶೇಖರ ಭಟ್, ಉದಯ ಕುಮಾರ್ ಭಟ್, ಅಧಿಕಾರಿಗಳಾದ ಪ್ರವೀಣ್, ಅರವಿಂದ ಸುತ್ತುಗುಂಡಿ ಉಪಸ್ಥಿತರಿದ್ದರು.
ಇಂದು ಷಷ್ಠಿ ಉತ್ಸವ
ಕುಡುಪು ದೇವಸ್ಥಾನದಲ್ಲಿ ನ. 29ರಂದು ಪ್ರಾತಃಕಾಲ 4ರಿಂದ ರಥಕಲಶ, ಅಂಗಪ್ರದಕ್ಷಿಣೆ, ಬೆಳಗ್ಗೆ 8ರಿಂದ ಪಂಚಾಮೃತ ಅಭಿಷೇಕ, ನವ ಕಲಶಾಭಿಷೇಕ, ಕಲ್ಪೋಕ್ತ ಪೂಜೆ, ಸಹಸ್ರನಾಮಾರ್ಚನೆ, ವಿಶೇಷ ನೈವೇದ್ಯ ಸಮರ್ಪಣೆ, ಬೆಳಗ್ಗೆ 11ಕ್ಕೆ ಷಷ್ಠಿಯ ಮಹಾಪೂಜೆ, 11.30ರಿಂದ ಮಹಾ ಅನ್ನಸಂತರ್ಪಣೆ, ಮಧ್ಯಾಹ್ನ 12.30ಕ್ಕೆ ರಥಾರೋಹಣ, ಮಧ್ಯಾಹ್ನ 1ಕ್ಕೆ ವೈಭವದ ಷಷ್ಠಿಯ ಬ್ರಹ್ಮರಥೋತ್ಸವ ನೆರವೇರಲಿದೆ. ರಾತ್ರಿ 8.30ರಿಂದ ಮಹಾಪೂಜೆ ನಡೆಯಲಿದೆ.
ನ. 30ರಂದು ಬೆಳಗ್ಗೆ 7ಕ್ಕೆ ಅತೀ ವಿಶಿಷ್ಟವಾದ ಜೋಡು ದೇವರ ಬಲಿ ಉತ್ಸವ, ಚಂದ್ರ ಮಂಡಲ ಉತ್ಸವ, ಪಾಲಕಿ ಉತ್ಸವದೊಂದಿಗೆ ಪ್ರಸಾದ ವಿತರಣೆ ನಡೆಯಲಿದೆ.
ಕಾಸರಗೋಡಿನಲ್ಲಿ ಷಷ್ಠಿ ಸಂಭ್ರಮ
ಕಾಸರಗೋಡು: ಜಿಲ್ಲೆಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ನ. 29ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಷಷ್ಠಿ ಮಹೋತ್ಸವ ನಡೆ ಯಲಿ ದೆ. ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರೀ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ನೆಲ್ಲಿಕುಂಜೆಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಅಡ್ಕತ್ತಬೈಲ್ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬೇಳ ಕುಮಾರ ಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನ, ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ, ವರ್ಕಾಡಿ ಶ್ರೀ ಕಾವೀಃ ಸುಬ್ರಹ್ಮಣ್ಯ ದೇಗುಲ, ಕೂಡ್ಲು ಬಾದಾರದ ವೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಮೊದಲಾದೆಡೆಗಳಲ್ಲಿ ವಿವಿಧ ಅಭಿಷೇಕಗಳು, ಮಹಾಪೂಜೆ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ ಷಷ್ಠಿ ಮಹೋತ್ಸವ ಜರಗಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
