ಸುಳ್ಯ: ಹೆದ್ದಾರಿ ಬಳಿ ಬೃಹತ್ ಕಾಡುಕೋಣ ಪತ್ತೆ
Team Udayavani, Oct 9, 2022, 7:50 PM IST
ಸುಳ್ಯ: ಸುಳ್ಯ ಪರಿಸರದಲ್ಲಿ ಕೆಲ ದಿನಗಳಿಂದ ಕಾಡುಕೋಣ ಓಡಾಟ ನಡೆಸುತ್ತಿರುವ ಬಗ್ಗೆ ವರದಿಯಾಗಿದ್ದು, ಶನಿವಾರ ಬೃಹತ್ ಕಾಡುಕೋಣವೊಂದು ಹೆದ್ದಾರಿ ಬಳಿ ರಸ್ತೆ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ.
ಬೆಳ್ಳಾರೆ-ಸುಳ್ಯ ಹೆದ್ದಾರಿಯ ಬೇಂಗಮಲೆ ಬಳಿ ಕಾಡು ಪ್ರದೇಶದಿಂದ ಬೃಹತ್ ಕಾಡುಕೋಣ ರಸ್ತೆ ದಾಟಿ ಮತ್ತೊಂದು ಭಾಗದತ್ತ ತೆರಳಿದೆ. ಇದನ್ನು ವಾಹನ ಸವಾರರು ವಿಡಿಯೋ ಚಿತ್ರೀಕರಿಸಿದ್ದು, ಇದೀವ ವೈರಲ್ ಆಗಿದೆ. ಶನಿವಾರ ಸಂಜೆ ಕಾಡುಕೋಣ ತೆರಳಿರುವುದು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಕಾಡುಕೋಣ ಜಾಲ್ಸೂರು ಪ್ರದೇಶದಲ್ಲೂ ತೋಟ, ಮನೆ ಬಳಿ ಕಂಡುಬಂದ ಬಗ್ಗೆ ಜನರು ತಿಳಿಸಿದ್ದರು. ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ