ಚರಂಡಿ, ಕಾಲುವೆ ಇನ್ನೂ ಸಿದ್ಧಗೊಂಡಿಲ್ಲ: ಮುಂಗಾರು ಮಳೆ ಕಾಲಿಡಲು ಕ್ಷಣಗಣನೆ ಆರಂಭ

Team Udayavani, May 27, 2023, 3:44 PM IST

ಚರಂಡಿ, ಕಾಲುವೆ ಇನ್ನೂ ಸಿದ್ಧಗೊಂಡಿಲ್ಲ: ಮುಂಗಾರು ಮಳೆ ಕಾಲಿಡಲು ಕ್ಷಣಗಣನೆ ಆರಂಭ

ಪುತ್ತೂರು: ಮುಂಗಾರು ಮಳೆ ಕಾಲಿಡಲು ಕ್ಷಣಗಣನೆ ಆರಂಭ ಗೊಂಡಿದೆ. ವಾರದಿಂದೀಚೆಗೆ ಅಲ್ಲಲ್ಲಿ ಮಳೆಯಾಗುತ್ತಿದೆ. ಆದರೆ ನಗರ ಮತ್ತು ಗ್ರಾಮಾಡಳಿತಗಳು ಮಳೆಗಾಲಕ್ಕೆ ಗಂಭೀರ ರೀತಿಯಲ್ಲಿ ಸಜ್ಜಾದಂತೆ ಕಾಣುತ್ತಿಲ್ಲ. ಮೊದಲ ಮಳೆಗೇ ಚರಂಡಿಯಲ್ಲಿ ಹರಿಯ ಬೇಕಾದ ನೀರು ರಸ್ತೆಗಳಲ್ಲಿ ಹರಿಯುತ್ತಿದ್ದು ಹೀಗಾಗಿ ಸಂಚಾರಕ್ಕೆ ತೊಡಕಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

ನಗರಸಭೆ ವ್ಯಾಪ್ತಿಯಲ್ಲಿನ ಚರಂಡಿ ಮತ್ತು ಒಳಚರಂಡಿಗಳಲ್ಲಿ ಅಲ್ಲಲ್ಲಿ ಹೂಳು, ತ್ಯಾಜ್ಯ ತುಂಬಿದೆ. ಕಾಲುವೆಗಳು ತ್ಯಾಜ್ಯ ಸಂಗ್ರ ಹದ ಹೊಂಡಗಳಾಗಿ ಮಾರ್ಪ ಟ್ಟಿವೆ. ರಸ್ತೆ ಬದಿಯಲ್ಲಿನ ತ್ಯಾಜ್ಯದ ರಾಶಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ರಸ್ತೆ ಬದಿಯ ಚರಂಡಿಗೂ ವ್ಯಾಪಿಸಿ ಚರಂಡಿಗಳು ಮುಚ್ಚಿ ಹೋಗಿದೆ. ಕೆಲವೊಂದು ಕಡೆ ಒಳಚರಂಡಿ ಮತ್ತು ಚರಂಡಿಗಳ ಹೂಳೆತ್ತುವ ಕೆಲಸ ಇನ್ನೂ ಅಪೂರ್ಣ ಸ್ಥಿತಿಯಲ್ಲಿದ್ದು ಹೀಗಾಗಿ ಪ್ರತೀ ಮಳೆಗಾಲದಂತೆ ಈ ಬಾರಿಯು ಕೃತಕ ನೆರೆಯ ಭೀತಿ ಇದ್ದೆ ಇದೆ.

ರಾಜ್ಯ-ರಾಷ್ಟ್ರೀಯ ಹೆದ್ದಾರಿ
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ, ಕಾಣಿಯೂರು-ಮಂಜೇಶ್ವರ ಅಂತಾರಾಜ್ಯ ರಸ್ತೆ, ಉಪ್ಪಿನಂಗಡಿ ರಾಜ್ಯ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕ ವಾಗಿಲ್ಲ. ಮಾಣಿ-ಮೈಸೂರು ರಸ್ತೆಯ ವಿವಿಧೆಡೆ ಕಿರು ಸೇತುವೆ ಅಗಲ ಗೊಳಿಸುವ ಕಾಮಗಾರಿ ನಡೆಯುತ್ತಿದ್ದು ಹೀಗಾಗಿ ಮಳೆ ನೀರು ಹರಿಯಲು ಒಂದಷ್ಟು ತೊಡಕು ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಸಂಪ್ಯದ ಕಮ್ಮಾಡಿ ಮೈದಾನದ ಬಳಿಯಲ್ಲಿನ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಕಿರು ಸೇತುವೆ ವಿಸ್ತರಣೆ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ತೊಡಕಾದ ಘಟನೆ ನಡೆದಿದೆ.

ಉಪ್ಪಿನಂಗಡಿ-ಪುತ್ತೂರು ನಡು ವಿನ ರಾಜ್ಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ಅವಧಿ ಪೂರ್ಣಗೊಂಡರೂ ಕೆಲಸ ಮುಗಿದಿಲ್ಲ. ಇಲ್ಲಿ ರಸ್ತೆಯ ಇಕ್ಕೆಡೆಗಳಲ್ಲಿ ಚರಂಡಿ ಸಮಸ್ಯೆ ಸಾಕಷ್ಟಿದ್ದು ಹೀಗಾಗಿ ಈ ಬಾರಿ ಕೃತಕ ನೆರೆ ಉಂಟಾಗುವ ಸಾಧ್ಯತೆಗಳಿವೆ. ಶಾಸಕರು ಪರಿಶೀಲನೆ ನಡೆಸಿ ತತ್‌ಕ್ಷಣ ಚರಂಡಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಎಚ್ಚೆತ್ತುಕೊಳ್ಳದ ಆಡಳಿತ
ವಿಧಾನಸಭಾ ಚುನಾವಣೆಯ ಹಿನ್ನೆ ಲೆಯಲ್ಲಿ ಮೇ 13ರ ತನಕ ಅಧಿಕಾರಿಗಳ ಹಿಡಿತದಲ್ಲಿದ್ದ ಗ್ರಾ.ಪಂ., ನಗರಸಭೆ ಆಡಳಿತ ಗಳು ಇನ್ನೂ ಪೂರ್ಣಪ್ರಮಾಣದಲ್ಲಿ ಎಚ್ಚೆತ್ತು ಕೊಂಡಿಲ್ಲ. ತಾ.ಪಂ., ಜಿ.ಪಂ.ಆಡಳಿತ ಅವಧಿ ಮುಕ್ತಾಯಗೊಂಡು ವರ್ಷಗಳೆ ಕಳೆ ದಿದ್ದು ಅದಕ್ಕೆ ಚುನಾವಣೆ ಆಗದ ಕಾರಣ ಈ ವ್ಯಾಪ್ತಿಯ ಎಲ್ಲ ಕೆಲಸ ಕಾರ್ಯಗಳು ಸ್ತಬ್ಧವಾ ಗಿವೆ. ಗ್ರಾಮಾಡಳಿತ ವ್ಯಾಪ್ತಿಯ ರಸ್ತೆಗಳಲ್ಲಿ ಚರಂಡಿಗಳೇ ಅಪರೂಪವಾಗಿದ್ದು ಅಲ್ಲಿ ಪ್ರತೀ ವರ್ಷ ದಂತೆ ಈ ಬಾರಿಯು ಮಳೆಗಾಲದ ಗೋಳು ಸಂಚಾರ ನಿರತರಿಗೆ ಕಟ್ಟಿಟ್ಟ ಬುತ್ತಿಯಾಗಲಿದ್ದು ತಾ| ಆಡಳಿತ ಆಯಾ ಗ್ರಾ.ಪಂ.ಗಳಿಗೆ ಮಳೆಗಾಲದ ಸಿದ್ಧತೆ ಕೈಗೊಳ್ಳಲು ಖಡಕ್‌ ಸೂಚನೆ ನೀಡುವ ಅಗತ್ಯ ಇದೆ.

ಪೂರ್ವ ಸಿದ್ಧತೆಗೆ ಅನುದಾನ
ಮಳೆಗಾಲದ ಪೂರ್ವ ಸಿದ್ಧತೆ ಕೆಲಸ ಗಳಿಗಾಗಿ ಪ್ರತೀ ವರ್ಷ ಯೋಜನೆ ಸಿದ್ಧಪಡಿಸಿ ಅನುದಾನ ಇರಿಸಲಾಗುತ್ತಿದೆ. ಇದರಲ್ಲಿ ಪೊದೆ ಸವರುವ, ಚರಂಡಿಗಳ ದುರಸ್ತಿ ಕಾಮಗಾರಿಗೆ ಪ್ರತೀ ವಾರ್ಡ್‌ಗೆ ಸರಾಸರಿ ಅನುದಾನ ಮೀಸಲಿ
ಡಲಾಗುತ್ತದೆ. ಈ ಬಾರಿಯು ನಗರಸಭೆ, ತಾ| ಆಡಳಿತ ಅನುದಾನ ಮೀಸಲಿಟ್ಟಿದೆ.

ದುರಸ್ತಿ ಆರಂಭ
ನಗರದದೊಡ್ಡ ಕಾಲುವೆಗಳಲ್ಲಿ ಹೂಳೆತ್ತುವ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಾಕೃತಿಕ ವಿಕೋಪ ಎದುರಿಸಲು ಸನ್ನದ್ಧರಾಗಲು ನಗರಸಭೆಯಲ್ಲಿ ಅಧಿಕಾರಿ, ಸಿಬಂದಿ ಎರಡು ತಂಡ ರಚಿಸಲಾಗಿದೆ. ಆಯಾ ವಾರ್ಡ್‌ಗಳಲ್ಲಿ ಮಳೆ ನೀರು ಹರಿಯಲು ಪೂರಕವಾಗಿ ಚರಂಡಿ ದುರಸ್ತಿ ಕಾರ್ಯ ನಡೆಯುತ್ತಿದೆ.
-ಮಧು ಎಸ್‌. ಮನೋಹರ್‌, ಪೌರಾಯುಕ್ತ, ನಗರಸಭೆ ಪುತ್ತೂರು

ಅನಾಹುತಕ್ಕೆ ಮುನ್ನ ಎಚ್ಚರ ವಹಿಸಿ
ಪುತ್ತೂರು ನಗರ ಸೇರಿದಂತೆ ತಾಲೂಕಿನ ಜನಸಂದಣಿ ಇರುವ ರಸ್ತೆ ಬದಿಯಲ್ಲಿ, ರಸ್ತೆ ಇಕ್ಕೆಡೆಗಳ ಚರಂಡಿಗಳಲ್ಲಿ ತ್ಯಾಜ್ಯಗಳು ಕೊಳೆಯುತ್ತಿದ್ದು, ಮಳೆ ನಿರಂತರವಾಗಿ ಸುರಿಯಲಾರಂಭಿಸಿದರೆ ಅವು ಸೊಳ್ಳೆ ಉತ್ಪತ್ತಿ ಕೇಂದ್ರಗಳಾಗಿ ಸಾಂಕ್ರಾಮಿಕ ರೋಗ ಹರಡುವ ಸಂಭವವಿದೆ. ಸಾಂಕ್ರಾಮಿಕ ರೋಗ ಹರಡಿ ಜನತೆಯನ್ನು ಬಾಧಿಸುವ ಮುನ್ನವೇ ನಗರಸಭೆ, ಗಾ.ಪಂ. ಸ್ಥಳೀಯಾಡಳಿತ ವ್ಯವಸ್ಥೆಗಳು ಎಚ್ಚೆತ್ತುಕೊಂಡು ಕಾಳಜಿ ವಹಿಸ ಬೇಕಾದ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.