ಪರಿಸರ ಎಂಜಿನಿಯರ್‌ರನ್ನು ಮತ್ತೆ ಕರೆಸಲು ಸದಸ್ಯರ ಆಗ್ರಹ


Team Udayavani, Jan 13, 2021, 11:10 PM IST

ಪರಿಸರ ಎಂಜಿನಿಯರ್‌ರನ್ನು ಮತ್ತೆ ಕರೆಸಲು ಸದಸ್ಯರ ಆಗ್ರಹ

ಬಂಟ್ವಾಳ: ಬಂಟ್ವಾಳ ಪುರಸಭೆಯ ಆರೋಗ್ಯ ನಿರೀಕ್ಷಕರು ಡೆತ್‌ನೋಟ್‌ ಬರೆದಿಟ್ಟ ಪ್ರಕರಣಕ್ಕೆ ಸಂಬಂಧಿಸಿ ದಂತೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದು, ಡೆಪ್ಯುಟೇಶನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ನಿರೀಕ್ಷಕರನ್ನು ಬೇರೆಡೆಗೆ ಕಳುಹಿಸಿ, ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಪರಿಸರ ಎಂಜಿನಿಯರ್‌ ಅವರನ್ನು ಮತ್ತೆ ಬಂಟ್ವಾಳಕ್ಕೆ ಕರೆಸುವಂತೆ ಸದಸ್ಯರು ಆಗ್ರಹಿಸಿದರು.

ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯು ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಮಹಮ್ಮದ್‌ ಶರೀಫ್‌ ಅವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಎ.ಗೋವಿಂದ ಪ್ರಭು, ಆರೋಗ್ಯ ನಿರೀಕ್ಷಕರು ಬರೆದಿಟ್ಟ ಡೆತ್‌ ನೋಟ್‌ ಮಾಧ್ಯಮಕ್ಕೆ ಹೋಗಿ ಪುರ ಸಭೆಯ ಮರ್ಯಾದೆ ಹರಾಜು ಆಗಿದೆ. ಅದನ್ನು ಮಾಧ್ಯಮಕ್ಕೆ ನೀಡಿದವರು ಯಾರು? ಅದರ ತನಿಖೆ ಯಾವ ಹಂತಕ್ಕೆ ಬಂದಿದೆ ಎಂದು ಪ್ರಶ್ನಿಸಿದರು.

ಡೆತ್‌ನೋಟ್‌ ಬರೆದಿಟ್ಟು ಆರೋಗ್ಯ ನಿರೀಕ್ಷಕರ ಆತ್ಮಹತ್ಯೆ ಯತ್ನ ಪ್ರಕರಣವು ಈಗಾಗಲೇ ತನಿಖೆಯಾಗಿದ್ದು, ಅವರು ತಪ್ಪೊಪ್ಪಿಗೆಯನ್ನು ಕೇಳಿ ಆಗಿದೆ. ಜತೆಗೆ ಅವರನ್ನು ಬದಲಿಸುವ ಕುರಿತು ಈಗಾಗಲೇ ಯೋಜನಾ   ನಿರ್ದೇಶಕರಿಗೆ ಬರೆಯಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು. ಹಿಂದಿನ ಪರಿಸರ ಎಂಜಿನಿಯರ್‌ ಅವರನ್ನು ಮತ್ತೆ ಬಂಟ್ವಾಳಕ್ಕೆ  ಕಳುಹಿ ಸುವಂತೆ ಈಗಾಗಲೇ ಪತ್ರ ಬರೆಯ ಲಾಗಿದೆ ಎಂದು ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸಭೆ ತಿಳಿಸಿದರು.

ಪರಿಶಿಷ್ಟ ಜಾತಿ/ ಪಂಗಡದ ಮನೆ ದುರಸ್ತಿಗೆ ಸಂಬಂಧಿಸಿದಂತೆ 7 ಅರ್ಜಿ ಬಂದಿರುವ ಕುರಿತು ಸಭೆಗೆ ಮಾಹಿತಿ ನೀಡಿದಾಗ, ಎಲ್ಲ ಅರ್ಜಿಗಳಿಗೂ ಸಹಾಯ ಧನ ನೀಡುವಂತೆ ಸಭೆ ನಿರ್ಣಯಿಸಿತು. ಆದರೆ ಮನೆ ದುರಸ್ತಿಗೆ ಕೇವಲ 2.50 ಲಕ್ಷ ರೂ.ಮೀಸಲಿಟ್ಟಿರುವ ಕುರಿತು ಸದಸ್ಯ ಜನಾರ್ದನ ಚಂಡ್ತಿಮಾರ್‌ ಅವರ ಅಸಮಾಧಾನ ವ್ಯಕ್ತಪಡಿಸಿದರು. ಅವಾಜ್‌ ಯೋಜನೆ ಯಲ್ಲಿ ಜಾತಿ ಪ್ರಮಾಣ ಪತ್ರ ಕೇಳುವ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು.

ಪುರಸಭೆಯ ಕಂದಾಯ ಶಾಖೆಗೆ ಪೀಠೊಪಕರಣ ಒದಗಿಸುವ ಕುರಿತು ಕಳೆದ ಸಭೆಯಲ್ಲಿ ಪ್ರಸ್ತಾಪವನ್ನೂ ಮಾಡದೆ ಅನುಮೋದನೆ ನೀಡಿರುವುದಕ್ಕೆ ಸದಸ್ಯ ಹರಿಪ್ರಸಾದ್‌ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಅವಾಸ್‌ ಯೋಜನೆ ಯಲ್ಲಿ ಮನೆ ಅಂತಿಮ ಹಂತಕ್ಕೆ ಬಂದಿದ್ದರೂ, ಹಣ ಬಿಡುಗಡೆಯಾಗಿಲ್ಲ ಎಂದು ಸದಸ್ಯ ಗಂಗಾಧರ ಪೂಜಾರಿ ತಿಳಿಸಿದರು. ಈ ಕುರಿತು ಶಾಸಕರು, ಜಿಲ್ಲಾಧಿಕಾರಿಗಳು, ರಾಜೀವ ಗಾಂಧಿ ವಸತಿ ನಿಗಮಕ್ಕೂ ತಿಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.

ರಿಜೆಕ್ಟ್ ಮಾಡಲು ಸಾಧ್ಯವಿಲ್ಲ :

ಹಿಂದೊಮ್ಮೆ ಅರ್ಧದಲ್ಲಿ ಕಾಮಗಾರಿ ನಿಲ್ಲಿಸಿ ತೆರಳಿರುವ ಗುತ್ತಿಗೆದಾರರೊಬ್ಬರು ಈಗ ಮತ್ತೆ ಮತ್ತೂಂದು ಕಾಮಗಾರಿಗೆ ಕಡಿಮೆ ಮೊತ್ತಕ್ಕೆ ಟೆಂಡರ್‌ ಹಾಕಿದ್ದಾರೆ ಎಂದು ಎಂಜಿನಿಯರ್‌ ಸಭೆಗೆ ತಿಳಿಸಿದಾಗ, ಅವರನ್ನು ಬ್ಲಾÂಕ್‌ ಲಿಸ್ಟ್‌ಗೆ ಹಾಕದೆ ಅವರ ಟೆಂಡರ್‌ ರಿಜೆಕ್ಟ್ ಮಾಡಲು ಸಾಧ್ಯವಿಲ್ಲ ಎಂದು ಸದಸ್ಯ ಲುಕಾ¾ನ್‌ ಆಗ್ರಹಿಸಿದರು. ಅವರ ಬಳಿ ಹಿಂದಿನ ಕಾಮಗಾರಿಯನ್ನೂ ಮಾಡಿಸಿ ಎಂದು ಸದಸ್ಯ ವಾಸು ಪೂಜಾರಿ ಆಗ್ರಹಿಸಿದರು.

ಪುರಸಭೆಯಲ್ಲಿ ಪ್ರಸ್ತುತ ಎಷ್ಟು ಮಂದಿ ಪೌರ ಕಾರ್ಮಿಕರಿದ್ದಾರೆ, ಅವರು ಸಮರ್ಪಕವಾಗಿ ಕೆಲಸಕ್ಕೆಬರುತ್ತಿದ್ದಾರೆಯೇ, ನಾವು ಅವರ ಬಳಿ ಕೆಲಸ ಹೇಳಿದರೆ ಬೇರೆ ಬೇರೆ ಕಾರಣ ಕೊಟ್ಟು ತಪ್ಪಿಸುತ್ತಿದ್ದಾರೆ ಎಂದು ಸದಸ್ಯ ಮೊಹಮ್ಮದ್‌ ನಂದ‌ರಬೆಟ್ಟು ತಿಳಿಸಿದರು. ಪುರಸಭಾ ವ್ಯಾಪ್ತಿಯಲ್ಲಿ ಸಮರ್ಪಕ ಕಸ ವಿಲೇವಾರಿಯಾಗದೆ ಅಲ್ಲಲ್ಲಿ ಕಸದ ರಾಶಿಗಳು ಕಂಡುಬರುತ್ತಿದೆ ಎಂದು ಸದಸ್ಯರಾದ ರಾಮಕೃಷ್ಣ ಆಳ್ವ, ಮುನೀಶ್‌ ಆಲಿ, ವಾಸು ಪೂಜಾರಿ  ತಿಳಿಸಿದರು. ಜತೆಗೆ ಕಸ ವಿಲೇವಾರಿ ವಾಹನ ಬರುವ ವಿಚಾರ ಏನಾಯಿತು ಎಂದು ಸದಸ್ಯರು ಪ್ರಶ್ನಿಸಿದಾಗ, ಅದಕ್ಕೆ ತಾಂತ್ರಿಕ ಮಂಜೂರಾತಿ ಸಿಕ್ಕಿಲ್ಲ ಎಂದು ಎಂಜಿನಿಯರ್‌ ತಿಳಿಸಿದಾಗ ಮುಖ್ಯಾಧಿಕಾರಿಗಳು ಈ ಕುರಿತು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಮನೆ ಮನೆ ಕಸ ಸಂಗ್ರಹಿಸುವವರೆಗೆ ತೆರಿಗೆ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಸದಸ್ಯರು ಆಗ್ರಹಿಸಿದಾಗ, ಅದನ್ನು ಮುಂದಿನ ಸಭೆಯಲ್ಲಿ ಚರ್ಚಿಸೋಣ ಎಂದು ಅಧ್ಯಕ್ಷರು ತಿಳಿಸಿದರು.

ಮೂರು ನೋಟಿಸ್‌ ಬಳಿಕ ಕ್ರಮ :

ಪುರಸಭಾ ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯಗಳ ಸೀವೇಜ್‌ ಟ್ರೀಟ್‌ಮೆಂಟ್‌ ಪ್ಲಾಂಟ್‌(ಎಸ್‌ಟಿಪಿ)ಗಳ ಕುರಿತು ಸದಸ್ಯ ಲುಕಾ¾ನ್‌ ಸಭೆಯ ಗಮನ ಸೆಳೆದಿದ್ದು, ಎಸ್‌ಟಿಪಿಗಳಿಲ್ಲದೆ ಸಮುಚ್ಚಯಗಳಿಗೆ ಪುರಸಭೆಯಿಂದ ಮೂರು ನೋಟಿಸ್‌ ಕೊಡುತ್ತೇವೆ. ಅದಕ್ಕೆ ಅವರು ಉತ್ತರಿ ಸದೇ ಇದ್ದಲ್ಲಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿ ಕ್ರಮಕೈಗೆದುಕೊಳ್ಳಲಾಗುತ್ತದೆ ಎಂದರು.

ಎಲ್ಲರೂ ಕೂಡ ತಮ್ಮ ಕೊಳಚೆಯನ್ನು ನೇರವಾಗಿ ತೋಡಿಗೆ ಬಿಡುತ್ತಿದ್ದಾರೆ ಎಂದು ಸದಸ್ಯರು ಸಭೆ ತಿಳಿಸಿದರು. ಪುರಸಭಾ ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜಾ

 

ಜ. 16ಕ್ಕೆ ಯೋಜನ ನಿರ್ದೇಶಕರ ಭೇಟಿ :

ಪುರಸಭೆಯ ನೀರಿನ ಯೋಜನೆಯ ಅವ್ಯವಸ್ಥೆಯ ಕುರಿತು ಸದಸ್ಯ ಗೋವಿಂದ ಪ್ರಭು ಪ್ರಶ್ನಿಸಿದ್ದು, ಲೀಕೇಜ್‌, ಗೇಟ್‌ವಾಲ್‌ ದುರಸ್ತಿ ಮಾಡಿದ್ದಾರೆ ಎಂದು ಎಂಜಿನಿಯರ್‌ ಡೊಮಿನಿಕ್‌ ಡೆಮೆಲ್ಲೊ ಸಭೆಗೆ ತಿಳಿಸಿದರು. ಅದರ ವರದಿ ನೀಡುವಂತೆ ಗೋವಿಂದ ಪ್ರಭು ಆಗ್ರಹಿಸಿದರು. ಜಿಲ್ಲಾಧಿಕಾರಿಗಳು ಬಂದು ಹೋದ ಬಳಿಕವೂ ಯಾವುದೇ ಪ್ರಗತಿ ಕಂಡಿಲ್ಲ ಎಂದು ಸದಸ್ಯ ಗಂಗಾಧರ ಪೂಜಾರಿ ಹೇಳಿದರು. ಈ ಎಲ್ಲ ವಿಚಾರಗಳನ್ನು ಜಿಲ್ಲಾ ಯೋಜನ ನಿರ್ದೇಶಕರಿಗೆ ತಿಳಿಸಲಾಗಿದ್ದು, ಅವರು ಜ. 16ರಂದು ಭೇಟಿ ನೀಡಿ ಸಭೆ ನಡೆಸುವ ಕುರಿತು ತಿಳಿಸಿದ್ದಾರೆ ಎಂದು ಅಧ್ಯಕ್ಷರು ವಿವರಿಸಿದರು. ಪೈಪ್‌ ದುರಸ್ತಿಯ ಕುರಿತು 26 ಸಾವಿರ ರೂ. ಬಿಲ್‌ ಆಗಿರುವುದಕ್ಕೆ ಸದಸ್ಯ ಮುನೀಶ್‌ ಆಲಿ ಅಸಮಾಧಾನ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

1-sadasd

BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

vijayen

Cauvery ವಿಚಾರದಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿರದಿರುವುದು ಅಕ್ಷಮ್ಯ:ವಿಜಯೇಂದ್ರ

11-chikkamagaluru

Chikkamagaluru: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಮೂವರು ಪಾರು !

1-wqewqwqe

Raichur: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣು

iPhone 15ಗಾಗಿ ಮೊಬೈಲ್‌ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

iPhone 15ಗಾಗಿ ಮೊಬೈಲ್‌ ಅಂಗಡಿ ಸಿಬ್ಬಂದಿಯನ್ನೇ ಹಿಗ್ಗಾಮುಗ್ಗಾವಾಗಿ ಥಳಿಸಿದ ಗ್ರಾಹಕರು.!

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತ ಮೇಲಿನ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್

Nijjar: ಕೆನಡಾದಲ್ಲಿ ಇದ್ದುಕೊಂಡೇ ಭಾರತದಲ್ಲಿ ದಾಳಿಗೆ ಧನಸಹಾಯ ಮಾಡುತ್ತಿದ್ದ ನಿಜ್ಜರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-bantwala

Batwala: ಕಾರು ಢಿಕ್ಕಿಯಾಗಿ ಅಟೋ ಚಾಲಕ ಮೃತ್ಯು

Impassable Road; ಸ್ಟ್ರೆಚರ್‌ನಲ್ಲಿ ರೋಗಿಯ ಹೊತ್ತು ಸಾಗಿದ ಆ್ಯಂಬುಲೆನ್ಸ್‌ ಸಿಬಂದಿ

Impassable Road; ಸ್ಟ್ರೆಚರ್‌ನಲ್ಲಿ ರೋಗಿಯ ಹೊತ್ತು ಸಾಗಿದ ಆ್ಯಂಬುಲೆನ್ಸ್‌ ಸಿಬಂದಿ

25 ಕೋಟಿ ರೂ. ಗೆದ್ದರೆಂದು ಸುಳ್ಳು ಪ್ರಚಾರ; ದೂರು ದಾಖಲು

Sullia 25 ಕೋಟಿ ರೂ. ಗೆದ್ದರೆಂದು ಸುಳ್ಳು ಪ್ರಚಾರ; ದೂರು ದಾಖಲು

Sullia ಆಟೋ ರಿಕ್ಷಾದಲ್ಲಿ ವ್ಯಕ್ತಿ ಸಾವು

Sullia ಆಟೋ ರಿಕ್ಷಾದಲ್ಲಿ ವ್ಯಕ್ತಿ ಸಾವು

Belthangady ಕನ್ಯಾಡಿ ನೀರಚಿಲುಮೆ ಬಳಿ ಚರಂಡಿಗೆ ಉರುಳಿದ ಕಾರು

Belthangady ಕನ್ಯಾಡಿ ನೀರಚಿಲುಮೆ ಬಳಿ ಚರಂಡಿಗೆ ಉರುಳಿದ ಕಾರು

MUST WATCH

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

udayavani youtube

69 ಕೆಜಿ ಚಿನ್ನ 336 ಕೆಜಿ ಬೆಳ್ಳಿ ಇದು ಮುಂಬೈನ ಶ್ರೀಮಂತ ಗಣಪತಿ|

udayavani youtube

ಕಾರಂತರ ಹೋಟೆಲ್ ಊಟ ಬೇಕಾದ್ರೆ ಫೋನ್ ಮಾಡಿ ಹೇಳಬೇಕು!

ಹೊಸ ಸೇರ್ಪಡೆ

1-sadasd

BJP-JDS ಮೈತ್ರಿ ಯಾರ “ಸಂತೋಷ”ಕ್ಕೆ?: ವಾಗ್ದಾಳಿ ವಿಡಿಯೋ ಹಂಚಿ ಕಾಂಗ್ರೆಸ್ ಟಾಂಗ್

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

BJP-JDS ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದೇನು?

vijayen

Cauvery ವಿಚಾರದಲ್ಲಿ ರಾಜ್ಯ ಸರಕಾರ ತಲೆ ಕೆಡಿಸಿಕೊಂಡಿರದಿರುವುದು ಅಕ್ಷಮ್ಯ:ವಿಜಯೇಂದ್ರ

11-chikkamagaluru

Chikkamagaluru: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ: ಮೂವರು ಪಾರು !

Bahrain: ನೂತನ ನಿಯೋಜಿತ ರಾಯಭಾರಿ ಭೇಟಿ

Bahrain: ನೂತನ ನಿಯೋಜಿತ ರಾಯಭಾರಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.