
ಹಿಜಾಬ್ ಧಾರಿಣಿಯರು ಡ್ರೆಸ್ಸಿಂಗ್ ರೂಂನಲ್ಲೇ ಠಿಕಾಣಿ
Team Udayavani, Jun 5, 2022, 6:05 AM IST

ಉಪ್ಪಿನಂಗಡಿ: ಕಾಲೇಜು ಅಭಿವೃದ್ಧಿ ಸಮಿತಿಯು ಕೈಗೊಂಡ ವಸ್ತ್ರ ಸಂಹಿತೆಯ ನಿಯಮಾವಳಿಗಳನ್ನು ಪಾಲಿಸುವುದಿಲ್ಲ ಎಂದು ಉಪ್ಪಿನಂಗಡಿ ಸ.ಪ.ಪೂ.ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಶನಿವಾರ ಪಟ್ಟು ಹಿಡಿದಿದ್ದಾರೆ.
ಹಿಜಾಬ್ ಸಹಿತ ತರಗತಿಗೆ ಪ್ರವೇಶಾವಕಾಶ ದೊರಕದ ಕಾರಣ ಡ್ರೆಸ್ಸಿಂಗ್ ರೂಂನಲ್ಲೇ ಕುಳಿತರು. ಅವರನ್ನು ಬೆಂಬಲಿಸಿದ ಒಂದಷ್ಟು ವಿದ್ಯಾರ್ಥಿಗಳು ಕೂಡ ತರಗತಿ ಬಹಿಷ್ಕರಿಸಿ ಡ್ರೆಸ್ಸಿಂಗ್ ರೂಂ ಬಳಿಯೇ ಠಿಕಾಣಿ ಹೂಡಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಸಮವಸ್ತ್ರ ನಿಯಮ ಪಾಲನೆ ಮಾಡದ 7 ವಿದ್ಯಾರ್ಥಿನಿಯ ರನ್ನು ಕಾಲೇಜಿನಿಂದ ಅಮಾನತು ಗೊಳಿಸಿದ್ದರೂ ಮತ್ತೆ ಕೆಲವರು ನಿಯಮ ಉಲ್ಲಂಘಿಸುತ್ತಿರುವ ಹಿನ್ನೆಲೆಯಲ್ಲಿ ಇತರ ವಿದ್ಯಾರ್ಥಿ ಗಳಿಂದ ಪ್ರತಿಭಟನೆ ವ್ಯಕ್ತವಾದ್ದರಿಂದ ಶುಕ್ರವಾರ ಕಾಲೇಜು ಅಭಿವೃದ್ದಿ ಸಮಿತಿ ಸಭೆ ನಡೆದಿತ್ತು. ಕಾಲೇಜು ಕ್ಯಾಂಪಸ್‌ನ ಯಾವುದೇ ಭಾಗದಲ್ಲಿ ಸಮವಸ್ತ್ರ ಹೊರತು ಪಡಿಸಿ ಬೇರಾವ ವಸ್ತ್ರವನ್ನೂ ಧರಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ನಿರ್ಣಯ ಕೈಗೊಳ್ಳಲಾಗಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್