Udayavni Special

ಕಡಬ: ಆರಂಭವಾಗಬೇಕಿದೆ ಸ.ಪ. ಕಾಲೇಜು

ಇನ್ನೂ ಕೈಗೂಡಿಲ್ಲ ಮುಖ್ಯಮಂತ್ರಿಯ 4 ವರ್ಷಗಳ ಹಿಂದಿನ ಭರವಸೆ

Team Udayavani, Jan 19, 2021, 4:00 AM IST

ಕಡಬ: ಆರಂಭವಾಗಬೇಕಿದೆ ಸ.ಪ. ಕಾಲೇಜು

ಕಡಬ: ಪ್ರಸ್ತುತ ಕಡಬವು ತಾಲೂಕು ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇಲ್ಲಿ ಶೈಕ್ಷಣಿಕವಾಗಿ ಯಾವುದೇ ಗಮನಾರ್ಹ ಬೆಳವಣಿಗೆಯಾಗಿಲ್ಲ ಎನ್ನುವುದು ಮಾತ್ರ ವಿಷಾದದ ಸಂಗತಿ.

ಇಲ್ಲಿನ ಸರಕಾರಿ ಶೈಕ್ಷಣಿಕ ವ್ಯವಸ್ಥೆ ಪ.ಪೂ.ಕಾಲೇಜು ಮಟ್ಟದಿಂದ ಮೇಲೇರಿಲ್ಲ. ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಹಾಗೂ ವೃತ್ತಿಪರ ತರಬೇತಿ ಕೋರ್ಸ್‌ಗಳ ಕಾಲೇಜು ಆರಂಭವಾಗಬೇಕು ಎನ್ನುವ ಜನರ ಹಲವು ವರ್ಷಗಳ ಬೇಡಿಕೆ ಇನ್ನೂ ಕೈಗೂಡಿಲ್ಲ.

ಸಿಎಂ ಭರವಸೆಯೂ ಈಡೇರಿಲ್ಲ :

ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಆರಂಭಿಸಬೇಕೆನ್ನುವ ಬೇಡಿಕೆಯನ್ನು 4 ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರ ಮುಂದೆಯೂ ಇರಿಸಲಾಗಿತ್ತು. ಅಂದು ಪಶು ವೈದ್ಯಕೀಯ ಕಾಲೇಜು ಕಟ್ಟಡದ ಶಂಕುಸ್ಥಾಪನೆಗಾಗಿ ಕೊçಲಕ್ಕೆ ಆಗಮಿಸಿದ್ದ ಅವರು ಮುಂದಿನ ಶೈಕ್ಷಣಿಕ ವರ್ಷದಿಂದ ಕಡಬದಲ್ಲಿ ಸರಕಾರಿ ಪದವಿ ಕಾಲೇಜು ಆರಂಭಿಸಲಾಗುವುದು ಎಂದು ಪ್ರಕಟಿಸಿದ್ದರು. ಆದರೆ ಆ ಭರವಸೆ ನೀಡಿ ವರ್ಷಗಳು ಹಲವು ಕಳೆದರೂ ಭರವಸೆ ಈಡೇರಿಲ್ಲ. ಬಳಿಕ ಹೊಸ ಸರಕಾರ ಅಸ್ತಿತ್ವಕ್ಕೆ ಬಂದರೂ ಕಡಬಕ್ಕೆ ಸರಕಾರಿ ಪದವಿ ಕಾಲೇಜು ಮಂಜೂರುಗೊಳ್ಳುವ ವಿಚಾರದಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ.

ಪರಿಸರದ ವಿವಿಧ ಪ.ಪೂ.ಕಾಲೇಜುಗಳಿಂದ ವರ್ಷಂಪ್ರತಿ ವ್ಯಾಸಂಗ ಮುಗಿಸಿ ಹೊರಬರುವ ಸುಮಾರು ವಿದ್ಯಾ ರ್ಥಿಗಳಿಗೆ ಪದವಿ ಶಿಕ್ಷಣಕ್ಕಾಗಿ ಸರಕಾರಿ ಪದವಿ ಕಾಲೇಜು ಇರುವುದು ದೂರದ ಸುಬ್ರಹ್ಮಣ್ಯ ಅಥವಾ ಉಪ್ಪಿನಂಗಡಿಯಲ್ಲಿ.

ಕಡಬ ಸರಕಾರಿ ಪದವಿ ಕಾಲೇಜು ಹೋರಾಟ ಸಮಿತಿ ಎನ್ನುವ ಸಂಘಟನೆಯ ಮೂಲಕ ವಿಜಯಕುಮಾರ್‌ ರೈ ಕರ್ಮಾಯಿ  ಮುಂದಾಳುತ್ವದಲ್ಲಿ ಊರ ಪ್ರಮುಖರು ಕಾಲೇಜು ಮಂಜೂ ರಾತಿಗಾಗಿ ಸರಕಾರದ ಮಟ್ಟದಲ್ಲಿ ನಡೆಸು ತ್ತಿರುವ ಹೋರಾಟಕ್ಕೆ ಫಲ ದೊರೆತಿಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಲವು ಬಾರಿ ಸ್ಥಳಕ್ಕೆ ಭೇಟಿ ನೀಡಿ ಕಡಬದಲ್ಲಿ ಸರಕಾರಿ ಪದವಿ ಕಾಲೇಜಿನ ಅಗತ್ಯದ ಕುರಿತು ಸರಕಾರಕ್ಕೆ ವರದಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಸುಳ್ಯ ಶಾಸಕ ಎಸ್‌. ಅಂಗಾರ ನೇತೃತ್ವದಲ್ಲಿ ಕಡಬಕ್ಕೆ ಸರಕಾರಿ ಪದವಿ ಕಾಲೇಜು ಮಂಜೂರು ಗೊಳಿಸುವ ನಿಟ್ಟಿನಲ್ಲಿ ಕಡಬ ದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಅಧಿ ಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆ ಯಲ್ಲಿ ಅವರು ಕಡಬಕ್ಕೆ ಸರಕಾರಿ ಪದವಿ ಕಾಲೇಜು ಮಂಜೂರುಗೊಳಿಸಲು ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದರು. ಇದೀಗ ಶಾಸಕರು ಸಚಿವರಾಗಿರುವುದು ಸ್ಥಳೀಯರಲ್ಲಿ ಭರವಸೆ ಮೂಡಿದೆ.

ಜಮೀನು ಕಾದಿರಿಸಲಾಗಿದೆ :

ಕಡಬ ಸರಕಾರಿ ಪ್ರೌಢಶಾಲೆಯ 14.5 ಎಕ್ರೆ ಜಾಗದಲ್ಲಿ 5 ಎಕ್ರೆ ಜಾಗವನ್ನು ಕಡಬ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಜಿಲ್ಲಾಧಿಕಾರಿಯವರು ಕಾದಿರಿಸಿ, ಈ ಬಗ್ಗೆ ಸಹಾಯಕ ಕಮೀಷನರ್‌ಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ 5 ಎಕರೆ ಜಮೀನನ್ನು ಗಡಿ ಗುರುತು ಮಾಡಲಾಗಿದೆ. ಪದವಿ ಕಾಲೇಜಿನೊಂದಿಗೆ ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಕೂಡ ಆರಂಭಿಸಿದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅದಕ್ಕಾಗಿ ವೃತ್ತಿಪರ ಶಿಕ್ಷಣ ಕೋರ್ಸುಗಳನ್ನು ಆರಂಭಿಸುವ ನಿಟ್ಟಿನಲ್ಲಿಯೂ ಜನಪ್ರತಿನಿಧಿಗಳು ಪ್ರಯತ್ನಿಸುವ ಅಗತ್ಯವಿದೆ.

ಕಡಬದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆಗತ್ಯವಿದೆ ಎನ್ನುವ ನಿಟ್ಟಿನಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ಪೂರಕ ವರದಿ ಸಲ್ಲಿಸಲಾಗಿದೆ. ಪರಿಸರದ ವಿವಿಧ ಪ.ಪೂ.ಕಾಲೇಜು ಗಳಿಂದ ಪ್ರತಿ ವರ್ಷ ವ್ಯಾಸಂಗ ಮುಗಿಸಿ ಹೊರಬರುವ ವಿದ್ಯಾರ್ಥಿಗಳ ಸಂಖ್ಯೆ ಇತ್ಯಾದಿ ವಿವರಗಳನ್ನು ಉಲ್ಲೇಖೀ ಸಲಾಗಿದೆ. ಕ್ಷೇತ್ರದ ಶಾಸಕರು ಸಚಿವರಾಗಿರುವುದರಿಂದ ಕಡಬಕ್ಕೆ ಸ. ಪದವಿ ಕಾಲೇಜು ಮಂಜೂರು ಗೊಳಿಸಲಿದ್ದಾರೆ ಎನ್ನುವ ಭರವಸೆ ಇದೆ. ಪ್ರೊ| ಜಯಕರ ಭಂಡಾರಿ, ಕಾ.ಶಿಕ್ಷಣ ಇಲಾಖೆ ವಿಶೇಷ ಅಧಿಕಾರಿ.

ಟಾಪ್ ನ್ಯೂಸ್

ಬಾಕ್ಸಮ್‌ ಬಾಕ್ಸಿಂಗ್‌ ‌: ಮೇರಿ ಕೋಮ್‌ಗೆ ಕಂಚು

ಬಾಕ್ಸಮ್‌ ಬಾಕ್ಸಿಂಗ್‌ ‌: ಮೇರಿ ಕೋಮ್‌ಗೆ ಕಂಚು

India-England test in Ahmedabad

ಪರದಾಡುತ್ತಿದ್ದ ಭಾರತಕ್ಕೆ ಪಂತ್‌ ಶತಕದಾಸರೆ : ಇಂಗ್ಲೆಂಡ್‌ ಲೆಕ್ಕಾಚಾರ ಬುಡಮೇಲು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ : ಇಲಾಖೆ ಆದೇಶ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 9 ಮಂದಿ ಸದಸ್ಯರ ವ್ಯವಸ್ಥಾಪನ ಸಮಿತಿ ರಚನೆ

ನಟ ದ್ವಾರಕೀಶ್‌ ಮನೆ ಖರೀದಿಸಿದ ರಿಷಬ್‌ ಶೆಟ್ಟಿ

ನಟ ದ್ವಾರಕೀಶ್‌ ಮನೆ ಖರೀದಿಸಿದ ರಿಷಬ್‌ ಶೆಟ್ಟಿ

ಚೀನಾ ರಕ್ಷಣಾ ಬಜೆಟ್‌ 15.27 ಲಕ್ಷ ಕೋಟಿ ರೂ.ಗೇರಿಕೆ

ಚೀನಾ ರಕ್ಷಣಾ ಬಜೆಟ್‌ 15.27 ಲಕ್ಷ ಕೋಟಿ ರೂ.ಗೇರಿಕೆ

ಪ. ಬಂಗಾಳ ಚುನಾವಣಾ ಕದನ: ಹೈಕಮಾಂಡ್ ತುರ್ತು ಕರೆ, ದೆಹಲಿಗೆ ಅರವಿಂದ ಲಿಂಬಾವಳಿ

ಪ. ಬಂಗಾಳ ಚುನಾವಣಾ ಕದನ: ಹೈಕಮಾಂಡ್ ತುರ್ತು ಕರೆ, ದೆಹಲಿಗೆ ಅರವಿಂದ ಲಿಂಬಾವಳಿ

ಆರ್ಥಿಕ ಕುಸಿತದ ನಡುವೆಯೂ ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ :ಸಿಎಂ

ಆರ್ಥಿಕ ಸ್ಥಿತಿ‌ ಸುಧಾರಣೆ : ಬಜೆಟ್ ಗಾತ್ರ ಕಳೆದ ಬಾರಿಗಿಂತ ಹೆಚ್ಚಿರಲಿದೆ ; ಸಿಎಂ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Books fair

ಗ್ರಂಥಾಲಯಗಳಿಂದ ವಿದ್ವಾಂಸರ ಸೃಷ್ಟಿ: ಸುರೇಂದ್ರ ಅಡಿಗ

Untitled-1

ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾನಿಲಯ ಘಟನೆ ಮಣಿಪಾಲದ ರಶ್ಮಿ ಪರ ಶೋಭಾ ಟ್ವೀಟ್‌

ಬಜೆಟ್‌ ಘೋಷಣೆಗಷ್ಟೇ ಸೀಮಿತ ಹಂಗಾರಕಟ್ಟೆ ಬಂದರು ಅಭಿವೃದ್ಧಿ

ಬಜೆಟ್‌ ಘೋಷಣೆಗಷ್ಟೇ ಸೀಮಿತ ಹಂಗಾರಕಟ್ಟೆ ಬಂದರು ಅಭಿವೃದ್ಧಿ

ನಳ್ಳಿ  ತಿರುಗಿಸಿದರೆ ಬರೋದು ಬರಿ ಗಾಳಿ!

ನಳ್ಳಿ ತಿರುಗಿಸಿದರೆ ಬರೋದು ಬರಿ ಗಾಳಿ!

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

ಲಸಿಕೆ  ಸ್ವೀಕರಿಸಲು ಸರ್ವರ್‌ ಅಡ್ಡಿ!

MUST WATCH

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

udayavani youtube

ಜೂನಿಯರ್ ಮೇಲೆ ರ‍್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು

udayavani youtube

ಕಾರುಗಳ ಢಿಕ್ಕಿ : ಗುದ್ದಿದ ರಭಸಕ್ಕೆ ಕಳಚಿಹೋದ ಚಕ್ರ

udayavani youtube

ಮಂಗಳೂರು : ಗಡ್ಡ, ಮೀಸೆ ಬೋಳಿಸುವಂತೆ ರ್ಯಾಗಿಂಗ್ : ಆರೋಪಿಗಳ ಬಂಧನ

udayavani youtube

ಅಮೆರಿಕಾದ ಮೇಲೆ ಭಾರತೀಯ ಅಮೆರಿಕನ್ನರು ಹಿಡಿತ ಸಾಧಿಸುತ್ತಿದ್ದಾರೆ : ಬೈಡನ್ | Udayavani

ಹೊಸ ಸೇರ್ಪಡೆ

ಬಾಕ್ಸಮ್‌ ಬಾಕ್ಸಿಂಗ್‌ ‌: ಮೇರಿ ಕೋಮ್‌ಗೆ ಕಂಚು

ಬಾಕ್ಸಮ್‌ ಬಾಕ್ಸಿಂಗ್‌ ‌: ಮೇರಿ ಕೋಮ್‌ಗೆ ಕಂಚು

India-England test in Ahmedabad

ಪರದಾಡುತ್ತಿದ್ದ ಭಾರತಕ್ಕೆ ಪಂತ್‌ ಶತಕದಾಸರೆ : ಇಂಗ್ಲೆಂಡ್‌ ಲೆಕ್ಕಾಚಾರ ಬುಡಮೇಲು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ : ಇಲಾಖೆ ಆದೇಶ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 9 ಮಂದಿ ಸದಸ್ಯರ ವ್ಯವಸ್ಥಾಪನ ಸಮಿತಿ ರಚನೆ

ನಟ ದ್ವಾರಕೀಶ್‌ ಮನೆ ಖರೀದಿಸಿದ ರಿಷಬ್‌ ಶೆಟ್ಟಿ

ನಟ ದ್ವಾರಕೀಶ್‌ ಮನೆ ಖರೀದಿಸಿದ ರಿಷಬ್‌ ಶೆಟ್ಟಿ

ಚೀನಾ ರಕ್ಷಣಾ ಬಜೆಟ್‌ 15.27 ಲಕ್ಷ ಕೋಟಿ ರೂ.ಗೇರಿಕೆ

ಚೀನಾ ರಕ್ಷಣಾ ಬಜೆಟ್‌ 15.27 ಲಕ್ಷ ಕೋಟಿ ರೂ.ಗೇರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.