ಕೊಡ್ಮಾಣ್‌ : ರಸ್ತೆ ಸಮಸ್ಯೆಗಳೇ ಗ್ರಾಮದ ಸವಾಲು


Team Udayavani, Aug 6, 2021, 3:40 AM IST

ಕೊಡ್ಮಾಣ್‌ : ರಸ್ತೆ ಸಮಸ್ಯೆಗಳೇ ಗ್ರಾಮದ ಸವಾಲು

ಹಳ್ಳಿಗಳೇ ನಮ್ಮ ದೇಶದ ಜೀವಾಳ. ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ರಾಜ್ಯ, ದೇಶ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮಗಳ ಸಮಸ್ಯೆಗಳ ಬಗ್ಗೆ ಆಡಳಿತ ವರ್ಗ, ಜನ ಪ್ರತಿನಿಧಿಗಳ ಗಮನ ಸೆಳೆಯಲು “ಉದಯವಾಣಿ ಸುದಿನ’ವು “ಒಂದು ಊರು-ಹಲವು ದೂರು’ ಎಂಬ ಹೊಸ ಸರಣಿಯನ್ನು ಆರಂಭಿಸಿದೆ. ಕೊಡ್ಮಾಣ್‌ ಗ್ರಾಮವನ್ನು ಕಾಡುವ  ಪ್ರಮುಖ ಸಮಸ್ಯೆಗಳಲ್ಲಿ ರಸ್ತೆಯ ಸಮಸ್ಯೆಯೂ ಒಂದು. ಇದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಂದಿನ ಈ ಸರಣಿಯಲ್ಲಿದೆ.

ಬಂಟ್ವಾಳ: ರಸ್ತೆಯೇ ಈ ಗ್ರಾಮೀಣ ಭಾಗದ ಮೂಲ ಸಮಸ್ಯೆಯಾಗಿದ್ದು, ಹದಗೆಟ್ಟ ರಸ್ತೆಗಳಲ್ಲೇ ಸಂಚರಿಸಬೇಕಾದ ಸ್ಥಿತಿ ಇಲ್ಲಿನ ಜನರದ್ದಾಗಿದೆ. ಇದು ಮೇರಮಜಲು ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಕೊಡ್ಮಾಣ್‌ ಗ್ರಾಮದ ಪರಿಸ್ಥಿತಿಯಾಗಿದೆ. ಗ್ರಾಮದಲ್ಲಿ ಕೊಂಚ ಮಟ್ಟಿನ ನೀರಿನ ಸಮಸ್ಯೆ ಇದ್ದರೂ, ಅದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ರಸ್ತೆ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.

ಕೊಡ್ಮಾಣ್‌ಪ್ರದೇಶವು ತೀರಾ ಹಳ್ಳಿ ಪ್ರದೇಶವಾಗಿದ್ದು, ಕೃಷಿ ಈ ಭಾಗದ ಮಂದಿಯ ಪ್ರಮುಖ ಕಸುಬಾಗಿದೆ. ಉಳಿದಂತೆ ಹೇಳಿಕೊಳ್ಳುವ ವಾಣಿಜ್ಯ ಚಟುವಟಿಕೆಗಳು ಇಲ್ಲಿಲ್ಲ. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳೇ ಹೆಚ್ಚಿವೆ. ಹೆಚ್ಚಿನ ಆದಾಯಗಳು ಗ್ರಾಮಕ್ಕೆ ಇಲ್ಲದೇ ಇರುವುದರಿಂದ ಸರಕಾರಿ ಮಟ್ಟದಿಂದ ಅನು ದಾನ ಬಂದರಷ್ಟೇ ಅಭಿವೃದ್ಧಿ ಎನ್ನುವ ಸ್ಥಿತಿ.

ಕೊಡ್ಮಾಣ್‌ಗ್ರಾಮದ ಗ್ರಾ.ಪಂ.ವ್ಯಾಪ್ತಿಯು ಬಂಟ್ವಾಳ ತಾಲೂಕಿಗೆ ಸೇರಿದ್ದರೂ, ಈ ಪ್ರದೇಶವು ಮಂಗಳೂರು ವಿಧಾನಸಭೆ ಕ್ಷೇತ್ರಕ್ಕೆ ಸೇರುತ್ತದೆ. ಹಿಂದೆ ಇದು ವಿಟ್ಲ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಆ ಕ್ಷೇತ್ರ ವಿಲೀನಗೊಂಡ ಬಳಿಕ ಇಲ್ಲಿನ ಮೂರು ಗ್ರಾ.ಪಂ.ಗಳು ಮಂಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬಂದಿವೆ. ಸಾಮಾನ್ಯವಾಗಿ ಉದ್ದಿಮೆಗಳು, ವಾಣಿಜ್ಯ ಚಟುವಟಿಕೆಗಳು ಇದ್ದಾಗ ಅವುಗಳ ತೆರಿಗೆ, ಇತರ ನೆರವಿನಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತದೆ.

ಆದರೆ ಕೊಡ್ಮಾಣ್‌ಗ್ರಾಮದಲ್ಲಿ ಅಂತಹ ಉದ್ದಿಮೆಗಳು ಇಲ್ಲದೇ ಇರುವುದರಿಂದ ಎಲ್ಲ ಮೂಲ ಸೌಕರ್ಯಕ್ಕೂ ಸರಕಾರವನ್ನೇ ಕಾಯಬೇಕಾದ ಸ್ಥಿತಿ ಇದೆ. ಸರಕಾರಿ ವ್ಯವಸ್ಥೆಯ ಪ್ರಕಾರ ಪುದು ಪ್ರಾಥಮಿಕ ಆರೋಗ್ಯ ಕೇಂದ್ರವು ಈ ಗ್ರಾಮಕ್ಕೆ ಸಂಬಂಧಪಟ್ಟಿದೆ.ಆದರೆ ಗ್ರಾಮದ ಒಂದಷ್ಟು ಮಂದಿ ತಮ್ಮ ಆರೋಗ್ಯ ಸಂಬಂಧಿ ವಿಚಾರಗಳಿಗೆ ಬೆಂಜನಪದವು ಆರೋಗ್ಯ ಕೇಂದ್ರವನ್ನೂ ಆಶ್ರಯಿಸುತ್ತಾರೆ. ತಮ್ಮದೇ ಗ್ರಾ.ಪಂ. ಮೇರಮಜಲಿನಲ್ಲಿ ಆರೋಗ್ಯ ಕೇಂದ್ರಬೇಕು ಎಂಬ ಬೇಡಿಕೆಯೂ ಇದೆ.

 ರಸ್ತೆ ಅಭಿವೃದ್ಧಿಯ ಸವಾಲು:

ಗ್ರಾಮದ ಮೇರಮಜಲು ಕ್ರಾಸ್‌ ಕೊಡ್ಮಾಣ್‌ಮದಕ ರಸ್ತೆಯು ಸುಮಾರು 3 ಕಿ.ಮೀ. ಉದ್ದವಿದ್ದು, ಸಂಚಾರಕ್ಕೆ ತೀರಾ ದುಸ್ತರವಾಗಿದೆ. ಈ ರಸ್ತೆಯ ಕೊಂಚ ಭಾಗಕ್ಕೆ ಕಾಂಕ್ರೀಟ್‌ ಕಾಮಗಾರಿ ನಡೆದಿದ್ದರೂ, ಬಹುತೇಕ ಭಾಗ ಸಂಚಾರಿಸಲಾರದ ಪರಿಸ್ಥಿತಿಗೆ ತಲುಪಿದೆ. ಕೊಟ್ಟಿಂಜ-ಅಮ್ಮೆಮಾರ್‌ ರಸ್ತೆ, ಪೂಪಾಡಿಕಲ್ಲು-ಮೇರಮಜಲು ರಸ್ತೆಗಳು ಕೂಡ ಹದಗೆಟ್ಟಿವೆ.

ಜತೆಗೆ ಬಾರೆಕ್ಕಾಡು ರಸ್ತೆಯೂ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಅದರ ಅಭಿವೃದ್ಧಿಯ ಕೂಗು ಕೂಡ ಇದೆ. ಇದು ಗ್ರಾಮದ ಪ್ರಮುಖ ರಸ್ತೆಗಳ ಕಥೆಯಾದರೆ ಇನ್ನು ಹಲವು ರಸ್ತೆಗಳು ಇದೇ ರೀತಿ ಅಭಿವೃದ್ಧಿಗಾಗಿ ಕಾಯುತ್ತಿವೆ. ಒಂದಷ್ಟು ರಸ್ತೆಗಳು ಸಣ್ಣ ಅನುದಾನದ ಮೂಲಕ ಅಭಿವೃದ್ಧಿಗೊಂಡಿದ್ದರೂ, ಇನ್ನೂ ಸಾಕಷ್ಟು ಪ್ರದೇಶದ ರಸ್ತೆಗಳು ಅಭಿವೃದ್ಧಿಗೆ ಬಾಕಿ ಇವೆ.

ಕೊಡ್ಮಾಣ್‌ ಗ್ರಾಮದ ಮಧ್ಯೆ ರೈಲ್ವೇ ಟ್ರ್ಯಾಕ್‌ ಹಾದು ಹೋಗಿದ್ದು, ಅದು ಗ್ರಾಮವನ್ನು ಎರಡು ಪಾಲು ಮಾಡಿವೆ. ಒಂದು ಭಾಗದ ಮಂದಿ ಇನ್ನೊಂದು ಭಾಗಕ್ಕೆ ಸಂಚರಿಸ ಬೇಕಾದರೆ ಸುತ್ತು ಬಳಸಿ ಸಾಗಬೇಕಾದ ಸ್ಥಿತಿ ಇದೆ. ಶಾಲೆ, ಗ್ರಾ.ಪಂ. ಸೇರಿ ಇನ್ನಿತರ ಭಾಗಕ್ಕೆ ರೈಲ್ವೇ ಹಳಿ ದಾಟಿ ಬರಬೇಕಿದೆ.

ಶಾಲೆಗೆ ಬೇಕು ಕಟ್ಟಡ :

ಕೊಡ್ಮಾಣ್‌ ಪ್ರದೇಶದಲ್ಲಿ ಒಂದು ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಿದ್ದು, ಮುಖ್ಯವಾಗಿ ಇಲ್ಲಿನ ಪ್ರೌಢಶಾಲೆಯು ಸತತವಾಗಿ ಶೇ. 100 ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಯಲ್ಲಿಯೇ ಉತ್ತಮ ಹೆಸರು ಪಡೆದುಕೊಂಡಿದೆ. ಫಲಿತಾಂಶ ಉತ್ತಮವಾಗಿದ್ದರೂ, ಶಾಲೆಯ ಕಟ್ಟಡದ ಕೊರತೆ ಇನ್ನೂ ನೀಗಿಲ್ಲ. ಇರುವ ಕಟ್ಟಡಗಳು ಸುಸಜ್ಜಿತವಾಗಿದ್ದರೂ, ಶಾಲೆಯ ಕಚೇರಿ ಕೊಠಡಿಯ ಬೇಡಿಕೆ ಇನ್ನೂ ಹಾಗೇ ಉಳಿದುಕೊಂಡಿದೆ. ಜತೆಗೆ ಗುಣಮಟ್ಟದ ಸುಸಜ್ಜಿತ ಶೌಚಾಲಯ ನಿರ್ಮಾಣವಾಗಬೇಕು ಎಂಬ ಕೂಗು ಕೂಡ ಕೇಳಿ ಬರುತ್ತಿದೆ.

 

ಕಿರಣ್‌ ಸರಪಾಡಿ

 

ಟಾಪ್ ನ್ಯೂಸ್

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

web exxclusive diet exclusive

ಉಪವಾಸ ವ್ರತ ಆಚರಣೆ ಮಾಡುವುದರ ಮಹತ್ವ, ಪ್ರಯೋಜನಗಳು  

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ಮುರ್ಮು

ಐಐಐಟಿ ಧಾರವಾಡ ಘಟಕ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

1-asds-dsad

ವಕ್ಫ್ ಬೋರ್ಡ್ ಅಕ್ರಮ: ಎಎಪಿ ಶಾಸಕ ಅಮಾನತುಲ್ಲಾ ಗೆ 14 ದಿನಗಳ ನ್ಯಾಯಾಂಗ ಬಂಧನ

ನಾವು ಮೊದಲೇ ಡೀನ್ ಗೆ ಎಚ್ಚರಿಕೆ ನೀಡಿದ್ದೆವು: ರನೌಟ್ ಬಗ್ಗೆ ದೀಪ್ತಿ ಶರ್ಮಾ ಹೇಳಿಕೆ

ನಾವು ಮೊದಲೇ ಡೀನ್ ಗೆ ಎಚ್ಚರಿಕೆ ನೀಡಿದ್ದೆವು: ರನೌಟ್ ಬಗ್ಗೆ ದೀಪ್ತಿ ಶರ್ಮಾ ಹೇಳಿಕೆ

congress

‘ಕೈ’ ಬಿಕ್ಕಟ್ಟು: ಗೆಹ್ಲೋಟ್- ಪೈಲಟ್ ಬಣಗಳ ನಡುವೆ ಕಮಲ್ ನಾಥ್ ಮಧ್ಯಸ್ಥಿಕೆ

1-sad-adad

ರಷ್ಯಾದ ಶಾಲೆಯಲ್ಲಿ ಭೀಕರ ಗುಂಡಿನ ದಾಳಿ ; ಮಕ್ಕಳು ಸೇರಿ 13 ಬಲಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

ಮನೆಯ ಅಂಗಳವನ್ನೇ ಗದ್ದೆಯಾಗಿಸಿದ ರೈತ

tdy-4

ಅರಂತೋಡು: ಆಟೋರಿಕ್ಷಾ-ಬೈಕ್ ಮಧ್ಯೆ ಅಪಘಾತ ಐಟಿಐ ವಿದ್ಯಾರ್ಥಿ ಮೃತ್ಯು; ಇನ್ನೋರ್ವ ಗಂಭೀರ

ಎಸ್‌ಸಿ-ಎಸ್‌ಟಿಗಳ ಭೂಮಿಗಿಲ್ಲ ಕನ್ವರ್ಷನ್‌; ಮನೆ ಕಟ್ಟಲು ಬ್ಯಾಂಕ್‌ ಲೋನ್‌ಗೆ ಪರದಾಟ!

ಎಸ್‌ಸಿ-ಎಸ್‌ಟಿಗಳ ಭೂಮಿಗಿಲ್ಲ ಕನ್ವರ್ಷನ್‌; ಮನೆ ಕಟ್ಟಲು ಬ್ಯಾಂಕ್‌ ಲೋನ್‌ಗೆ ಪರದಾಟ!

ಫರಂಗಿಪೇಟೆ ಪರಿಸರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ ವದಂತಿ : ಗ್ರಾ.ಪಂ ತಂಡದಿಂದ ಪರಿಶೀಲನೆ

ಫರಂಗಿಪೇಟೆ ಪರಿಸರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ ವದಂತಿ : ಗ್ರಾ.ಪಂ ತಂಡದಿಂದ ಪರಿಶೀಲನೆ

ಇನ್ನೂ ಈಡೇರದ ಭರವಸೆ; ಕಟ್ಟಡ ಕಾಮಗಾರಿಗೆ ಸಿಗಲಿ ವೇಗ

ಇನ್ನೂ ಈಡೇರದ ಭರವಸೆ; ಕಟ್ಟಡ ಕಾಮಗಾರಿಗೆ ಸಿಗಲಿ ವೇಗ

MUST WATCH

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

udayavani youtube

ಸೆ. 26ರಿಂದ ಅ. 5 ವರೆಗೆ ವೈಭವದ ಉಚ್ಚಿಲ ದಸರಾ

ಹೊಸ ಸೇರ್ಪಡೆ

ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ

ವಿದೇಶಿ ಮಾರುಕಟ್ಟೆಗೆ ಕೊರಳ್ಳಿ ಬಾಳೆ; ಹಳದಿ ಕಲ್ಲಂಗಡಿ ಬೆಳೆದಿದ್ದ ರೈತನ ಸಾಧನೆ

Shindhe

ಹಲವಾರು ನಾಯಕರು ಸಂಪರ್ಕದಲ್ಲಿದ್ದಾರೆ : ಮಹಾರಾಷ್ಟ್ರ ಸಿಎಂ ಶಿಂಧೆ

ಭಾರೀ ಫೇಮಸ್ಸು ರಾವೂರ್‌ ಸೂಸಲಾ; 5ಗಂಟೆಯಲ್ಲಿ 20 ಚೀಲ ಸೂಸಲಾ ಮಾರಾಟ

ಭಾರೀ ಫೇಮಸ್ಸು ರಾವೂರ್‌ ಸೂಸಲಾ; 5ಗಂಟೆಯಲ್ಲಿ 20 ಚೀಲ ಸೂಸಲಾ ಮಾರಾಟ

4ನೇ ಟಿ20 ಪಂದ್ಯ; ಪಾಕಿಸ್ಥಾನಕ್ಕೆ 3 ರನ್‌ ರೋಚಕ ಜಯ; ಸರಣಿ ಸಮಬಲ

4ನೇ ಟಿ20 ಪಂದ್ಯ; ಪಾಕಿಸ್ಥಾನಕ್ಕೆ 3 ರನ್‌ ರೋಚಕ ಜಯ

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

ಬಿಜೆಪಿ ಭಂಡತನದಿಂದ ವಿತಂಡವಾದ ಮಾಡುತ್ತಿದೆ: ಎಚ್.ಡಿ.ಕುಮಾರಸ್ವಾಮಿ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.