ಕಡಬ ತಾಲೂಕಿನ ರೆಂಜಿಲಾಡಿ: ತೋಟದಲ್ಲಿ ಚಿರತೆ ದಾಳಿ, ಇಬ್ಬರು ಆಸ್ಪತ್ರೆಗೆ ದಾಖಲು
Team Udayavani, Feb 12, 2021, 8:59 AM IST
Representative image used
ಕಲ್ಲುಗುಡ್ಡೆ(ಕಡಬ): ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಫೆ.12ರಂದು ನಸುಕಿನ ವೇಳೆ ಸಂಭವಿಸಿದೆ.
ಹೇರ ನಿವಾಸಿಗಳಾದ ಚಂದ್ರಶೇಖರ ಹಾಗೂ ಸೌಮ್ಯ ಕಾಮತ್ ಅವರು ರಾತ್ರಿ ತೋಟದ ಸ್ಪಿಂಕ್ಲೇರ್ ಬದಲಾಯಿಸುವಲ್ಲಿ ನಿರತರಾಗಿರುವ ವೇಳೆ ಚಿರತೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಭವಿಷ್ಯದಲ್ಲಿ ಬಹುದೊಡ್ಡ “ಪ್ಲಾಸ್ಟಿಕ್ ಹಬ್’ ಆಗಲಿರುವ ಕರಾವಳಿ
ಗಾಯಗೊಂಡಿರುವ ಚಂದ್ರಶೇಖರ ಹಾಗೂ ಸೌಮ್ಯ ಕಾಮತ್ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರತೆ ಸದ್ಯ ತೋಟದೊಳಗೆ ಅವಿತಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಅರಣ್ಯಾ ಇಲಾಖೆಯವರು ಭೇಟಿ ನೀಡಿದ್ದು, ಚಿರತೆ ಸೆರೆ ಹಿಡಿಯುವ ಸಿದ್ಧತೆ ನಡೆಸಲು ಕ್ರಮ ಕೈಗೊಂಡಿದ್ದಾರೆಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಉದಯವಾಣಿಯಲ್ಲಿ ಕಿಚ್ಚನ ಬೆಳ್ಳಿ ಹಬ್ಬದ ಸಂಭ್ರಮ: 25 ವರ್ಷದ ಸಿನಿಪಯಣಕ್ಕೆ ಆತ್ಮೀಯ ಅಭಿನಂದನೆ