Udayavni Special

ನೆನೆಯುವ ಅನುದಿನ;ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ, ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ


Team Udayavani, Feb 21, 2020, 2:08 AM IST

chitra-47

ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ ಎನ್ನುತ್ತದೆ ಒಂದು ಹಾಡು. ಶಿವನನ್ನು ಭಜಿಸುವುದರ ಮಹತ್ವ ಇಂಥದ್ದು. ಅಂಥ ಮಹಾಶಿವನದಿನವಿದು, ಶಿವರಾತ್ರಿ. ಉಪವಾಸ, ಜಾಗರಣೆಗಳೊಂದಿಗೆ ಲಯಾಧಿಪತಿ ಸದಾಶಿವನ ಭಜನೆ ಈ ದಿನದ ವೈಶಿಷ್ಟé. ನಾಡಿನ ಎಲ್ಲ ಶಿವ ದೇಗುಲಗಳು ಶಿವರಾತ್ರಿ ಆಚರಣೆಗೆ ಸಿದ್ಧವಾಗಿವೆ. ಮನೆಗಳಲ್ಲೂ ಹರನಿಗೆ ವಿಶೇಷ ಅರ್ಚನೆ, ಅಭಿಷೇಕ ಇತ್ಯಾದಿ ನಡೆಯಲಿವೆ. ಈ ಹಿನ್ನೆಲೆಯಲ್ಲಿ ವಿವಿಧ ದೇವಾಲಯಗಳ ಶಿವರಾತ್ರಿ ಸಂಭ್ರಮದ ಇಣುಕುನೋಟ ಇಲ್ಲಿದೆ.

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇಗುಲ
ಬೆಳ್ತಂಗಡಿ: ಮಹಾಶಿವರಾತ್ರಿ ಪ್ರಯುಕ್ತ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆಗಳು ನೆರವೇರಲಿವೆ. ಲಕ್ಷೋಪಲಕ್ಷ ಭಕ್ತರಿಂದ ಶಿವಪಂಚಾಕ್ಷರಿ ಮಂತ್ರ ಪಠನೆ, ಭಜನೆ, ಪ್ರಾರ್ಥನೆ, ಧ್ಯಾನ ಮತ್ತು ದೇವರ ಸನ್ನಿಧಿಯನ್ನು ಪುಷ್ಪಾಲಂಕಾರ ಮಾಡಿ ಶಿವರಾತ್ರಿ ದಿನದ ರಾತ್ರಿ ದೇವರ ದರ್ಶನ, ಬೆಳ್ಳಿ ರಥೋತ್ಸವ, ಕಟ್ಟೆ ಪೂಜೆ, ದೇವರ ಬಲಿ, ಉತ್ಸವ ಇತ್ಯಾದಿ ನೆರವೇರಲಿವೆ. ಲಕ್ಷಕ್ಕೂ ಹೆಚ್ಚು ಮಂದಿ ಸೇರುವ ಶಿವರಾತ್ರಿ ಮಹೋತ್ಸವಕ್ಕೆ ರಾಜ್ಯಾದ್ಯಂತ ಪಾದಯಾತ್ರಿಗಳು ತಂಡೋಪತಂಡವಾಗಿ ಬಂದು ಸೇರುತ್ತಿದ್ದಾರೆ.

ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರ
ವಿಟ್ಲ:
ಶ್ರೀರಾಮಚಂದ್ರಾಪುರ ಮಠದ ಆಡಳಿತಕ್ಕೊಳಪಟ್ಟ, ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಗುರುಕಟ್ಟೆಯೆಂದೇ ಕರೆಯಲ್ಪಟ್ಟ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಫೆ. 21ರಂದು ಶಿವರಾತ್ರಿ ಸಂದರ್ಭ ಬೆಳಗ್ಗೆ 10ರಿಂದ 12ರ ವರೆಗೆ ಭಜನೆ, 12.30ಕ್ಕೆ ಮಹಾಪೂಜೆ, ಪ್ರಸಾದ ಭೋಜನ, ಸಂಜೆ 5.30ರಿಂದ ರುದ್ರ ಪಠನ, 7.30ಕ್ಕೆ ಮಹಾಪೂಜೆ, ಪ್ರಸಾದ ಭೋಜನ ನಡೆ ಯಲಿದೆ. ದೇಗುಲದ ಆರಾಧ್ಯ ದೇವರು ಶ್ರೀ ಉಮಾಶಿವ, ಮುಷ್ಟಿ ಗಾತ್ರದ ಲಿಂಗರೂಪಿ. ದಿ| ಮರಿ ಭಟ್ಟರು ಸುಮಾರು 104 ವರ್ಷಗಳ ಹಿಂದೆ ಕಾಶಿಯಿಂದ ಶ್ರೀ ಉಮಾ ಮಹೇಶ್ವರನ ಲಿಂಗವನ್ನು ತಂದು ಮೂರು ಗ್ರಾಮಗಳು ಕೂಡಿರುವ ಈ ಛತ್ರದಲ್ಲಿ ಪ್ರತಿಷ್ಠಾಪಿಸಿದ್ದರು.

ಚಾರ್ಮಾಡಿ ಮತ್ತೂರು ಪಂಚಲಿಂಗೇಶ್ವರ
ಮುಂಡಾಜೆ: ಚಾರ್ಮಾಡಿ ಗ್ರಾಮದಲ್ಲಿ ಸುಮಾರು 1200 ವರ್ಷಗಳಷ್ಟು ಪ್ರಾಚೀನ ದೇವಾಲಯವಾದ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವ ಸ್ಥಾನದಲ್ಲಿ ಶಿವರಾತ್ರಿಯ ವಿಶೇಷವಾಗಿ ವಿವಿಧ ಸೇವಾಕಾರ್ಯಗಳು ಜರಗಲಿವೆ. ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ ನೆರಿಯ ಮತ್ತು ಮುಂಡಾಜೆ ಗ್ರಾಮಗಳ ಸೀಮೆಗೊಳ ಪಟ್ಟಿದೆ. ಪಂಚಲಿಂಗೇಶ್ವರ ಅಭಿಷೇಕ ಪ್ರಿಯನಾದುದರಿಂದ ಕ್ಷೇತ್ರದಲ್ಲಿ ರುದ್ರಾಭಿಷೇಕ, ಏಕಾದಶ ರುದ್ರ ಪಾರಾಯಣ, ಶತರುದ್ರ ಪಾರಾಯಣ ಮುಂತಾದ ಸೇವೆಗಳು ಜರಗುತ್ತವೆ. ಇಲ್ಲಿ ಗಣಪತಿ, ದುರ್ಗೆಯ ವಿಶೇಷ ಗುಡಿಗಳಿವೆ. ಬೆಳಗ್ಗಿನಿಂದ ಮರುದಿನ ಬೆಳಗ್ಗೆವರೆಗೂ ಏಕಾಹ ಭಜನೆ, ವಿಶೇಷ ರಂಗಪೂಜೆ ಜರಗುತ್ತವೆ.

ಪಜಿರಡ್ಕ ಸದಾಶಿವೇಶ್ವರ ದೇವಸ್ಥಾನ
ಮುಂಡಾಜೆ: ಬೆಳ್ತಂಗಡಿ ತಾ|ನ ಕಲ್ಮಂಜ ಗ್ರಾಮದಲ್ಲಿರುವ ಶ್ರೀ ಸದಾಶಿವೇಶ್ವರ ದೇವಸ್ಥಾನ ಮೃತ್ಯುಂಜಯ ನದಿಯು ನೇತ್ರಾವತಿ ನದಿಯ ಜತೆ ಸಂಗಮಗೊಳ್ಳುವ ಸ್ಥಳ ವಾದುದರಿಂದ ಸಂಗಮ ಕ್ಷೇತ್ರ ಎಂದು ಹೆಸರು ಪಡೆದಿದೆ. ಶಿವರಾತ್ರಿ ದಿನ ಇಲ್ಲಿ ಶತರುದ್ರಾಭಿಷೇಕ, ಪಾರಾಯಣ, ವಿಶೇಷ ರಂಗಪೂಜೆ ಮೊದಲಾದ ವೈದಿಕ ಕಾರ್ಯಕ್ರಮಗಳು ಜರಗಲಿವೆ.
ಫೆ. 21ರಂದು ಏಕಾಹ ಭಜನೆಯನ್ನು ಸಮು ದಾಯ ಮತ್ತು ಅಭಿವೃದ್ಧಿ ವಿಭಾಗದ ಶ್ರೀಕ್ಷೇತ್ರ ಧ.ಗ್ರಾ.ಯೋಜನೆ ಧರ್ಮಸ್ಥಳ ಇದರ ಪ್ರಾದೇಶಿಕ ನಿರ್ದೇಶಕ ಎ. ಶ್ರೀಹರಿ ದೀಪ ಬೆಳಗಿಸಿ, ಉದ್ಯಮಿ ರಾಜೇಶ್‌ ಪೈ ಭಜನ ಪ್ರಥಮೋಚ್ಛಾರ ಮಾಡುವ ಮೂಲಕ ಉದ್ಘಾಟಿಸಲಿದ್ದಾರೆ.

ಸುರ್ಯ ಸದಾಶಿವರುದ್ರ ದೇವಸ್ಥಾನ
ಬೆಳ್ತಂಗಡಿ: ರಾಜ್ಯಾದ್ಯಂತ ಪ್ರಸಿದ್ಧಿ ಪಡೆದ ನಡ ಗ್ರಾಮದ ಸುರ್ಯ ಸದಾಶಿವರುದ್ರ ದೇವಸ್ಥಾನದಲ್ಲಿ ಭಕ್ತರು ಹರಕೆ ರೂಪದಲ್ಲಿ ಅರ್ಪಿಸಿರುವ‌ ಲಕ್ಷಾಂತರ ಮಣ್ಣಿನ ಮೂರ್ತಿಗಳೇ ಇಲ್ಲಿನ ವಿಶೇಷತೆ.
ಫೆ. 21ರ ಶಿವರಾತ್ರಿ ಯಂದು ಸಾವಿರಾರು ಭಕ್ತರು ಶ್ರೀಕ್ಷೇತ್ರದಲ್ಲಿ ಸೇರುವುದರಿಂದ ದೇವ ರಿಗೆ ವಿಶೇಷ ಪೂಜೆಗಳು ನೆರವೇರುತ್ತವೆ. ಬೆಳಗ್ಗೆ ಶ್ರೀ ಸುರ್ಯ ಸದಾಶಿವ ರುದ್ರ ದೇವರಿಗೆ ನಿತ್ಯ ಪೂಜೆ ನಡೆದು ಬಳಿಕ ಮಧ್ಯಾಹ್ನದ ಅಭಿಷೇಕ, ಪೂಜೆ, ಮಹಾಪೂಜೆ, ಜರಗಲಿದೆ. ರಾತ್ರಿ 7ರಿಂದ ರಾತ್ರಿ 12ರ ವರೆಗೆ ಏಕಾಭಿಷರುದ್ರಾಭಿಷೇಕ, ರಂಗಪೂಜೆ ಮೊದಲಾದ ವೈದಿಕ ಕಾರ್ಯಕ್ರಮಗಳು ಜರಗಲಿವೆ.

ಕುತ್ಯಾರು ಶ್ರೀ ಸೋಮನಾಥೇಶ್ವರ ದೇಗುಲ
ಬೆಳ್ತಂಗಡಿ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನವು 900 ವರ್ಷ ಇತಿಹಾಸ ಹೊಂದಿದ್ದು, ಉದ್ಭವಲಿಂಗದಿಂದ ಪ್ರಸಿದ್ಧಿ ಪಡೆದಿದೆ. ವರ್ಷಾವಧಿ ಜಾತ್ರೆ ಫೆ. 13ರಂದು ಆರಂಭಗೊಂಡಿದ್ದು, 24ರ ವರೆಗೆ ಜರಗಲಿದೆ. ಫೆ. 21ರ ಮಹಾಶಿವರಾತ್ರಿಯಂದು ಮಧ್ಯಾಹ್ನ ಏಕಾದಶ ರುದ್ರಾಭಿಷೇಕ, ಪ್ರಸನ್ನ ಪೂಜೆ ಮಧ್ಯಾಹ್ನ ಅನ್ನ ಸಂತರ್ಪಣೆ ನೆರವೇರ ಲಿದೆ. ರಾತ್ರಿ ದೇವರ ಉತ್ಸವ, ಪಲ್ಲಕಿ ಉತ್ಸವ, ಚಂದ್ರಮಂಡಲೋತ್ಸವ, ಅಶ್ವತ್ಥಕಟ್ಟೆ ಪೂಜೆ, ಮಹಾರಂಗಪೂಜೆ, ಪ್ರಸನ್ನ ಪೂಜೆ, ಆಹೋರಾತ್ರಿ ಭಜನೆ ನಡೆಯಲಿದೆ. ದೇವಸ್ಥಾನ ಗರ್ಭಗುಡಿಯಿಂದ ಧ್ವಜ ಸ್ತಂಭವರೆಗೆ ದೀಪ ಬೆಳಗಿ ಮಹಾರಂಗಪೂಜೆ ನಡೆಯುತ್ತದೆ.

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನ
ಪುಂಜಾಲಕಟ್ಟೆ: ಜೀವನದಿ ನೇತ್ರಾವತಿಯ ತಟದಲ್ಲಿರುವ ಬಂಟ್ವಾಳ ತಾ| ಸರಪಾಡಿ ಅಗ್ರಹಾರ ಬೀದಿ ಶ್ರೀ ಶರಭೇಶ್ವರ ದೇವಸ್ಥಾನಕ್ಕೆ 1,200 ವರ್ಷಗಳ ಇತಿಹಾಸವಿದೆ. ಸರ್ಪದ ಹಾಡಿಯಿಂದ ಮತ್ತು ಶ್ರೀ ಶರಭೇಶ್ವರ ದೇವರು ಗ್ರಾಮ ದೇವ ರಾದ ಕಾರಣ ಊರಿಗೆ ಶರಪಾಡಿ ಎಂದು ಹೆಸರಾ ಗಿದೆ ಎಂಬ ಅಭಿಪ್ರಾಯ ಇದೆ. ಕಾಡಿನ ಮಧ್ಯದಲ್ಲಿ ಲಿಂಗೋಧºವಗೊಂಡು ಇಕ್ಕೇರಿ ಮನೆತನದವ ರಿಂದ ಈ ಕ್ಷೇತ್ರ ನಿರ್ಮಿತವಾಗಿದೆ ಎಂಬ ಮಾತಿದೆ. ಪ್ರಸ್ತುತ ಜೀರ್ಣೋದ್ಧಾರ ನಡೆಯುತ್ತಿದ್ದು, ಶಿವರಾತ್ರಿ ಪ್ರಯುಕ್ತ ಫೆ. 21ರಂದು ನಗರ ಭಜನೆ, ಭಜನ ಮಂಗಲೋತ್ಸವ ಹಮ್ಮಿಕೊಳ್ಳಲಾಗಿದೆ.

ಕಜೆಕಾರು ಮಹಾದೇವ ದೇವೇಶ್ವರ ಕ್ಷೇತ್ರ
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾ.ಪಂ. ವ್ಯಾಪ್ತಿಯ ತೆಂಕಕಜೆಕಾರು ಗ್ರಾಮದ ಕಜೆಕಾರು ವಿನಲ್ಲಿ ಶ್ರೀ ಮಹಾ ದೇವ ದೇವೇಶ್ವರ ದೇವಸ್ಥಾನ ವಿದೆ. ಸುಮಾರು 700 ವರ್ಷಗಳ ಹಿಂದೆ ಉಡುಪಿ ಅಷ್ಟ ಮಠಗಳಲ್ಲೊಂದರ ಯತಿಗಳು ಶ್ರೀ ಮಹಾ ದೇವನ ಲಿಂಗ ಸ್ಥಾಪಿಸಿದ್ದ ರೆಂದು ಐತಿಹ್ಯವಿದೆ. ಇಲ್ಲಿ ಹರಕೆ ಹೊತ್ತರೆ ಗೋ ಸಂತಾನ ವೃದ್ಧಿ ಯಾಗುತ್ತದೆ ಎಂಬ ನಂಬಿಕೆ ಇದೆ. ಶಿವರಾತ್ರಿ ಪ್ರಯುಕ್ತ ದೇಗುಲದಲ್ಲಿ ವಾರ್ಷಿಕ ಜಾತ್ರೆ ಫೆ.19ರಿಂದ ಫೆ.21ರ ವರೆಗೆ ವಾರ್ಷಿಕ ಜಾತ್ರೆಯು ನಡೆಯಲಿದ್ದು,
ಅಹೋರಾತ್ರಿ ಭಜನೆ, ದೈವಗಳಿಗೆ ನೇಮವೂ ನಡೆಯುತ್ತದೆ.

ಕೇಪು ಖಂಡಿಗ ಕೈಲಾಸೇಶ್ವರ ದೇವಸ್ಥಾನ
ವಿಟ್ಲ: ಕೇಪು ಗ್ರಾಮದ ಖಂಡಿಗ ಕೈಲಾಸೇಶ್ವರ ಕ್ಷೇತ್ರದಲ್ಲಿ ಶಿವದೇವರು ವಿಗ್ರಹ ರೂಪದಲ್ಲಿ ಪ್ರತಿಷ್ಠಾಪಿಸಲ್ಪಟ್ಟರೆ ಗಣಪತಿ, ಸುಬ್ರಹ್ಮಣ್ಯ ದೇವರು ಪರಿವಾರ ಶಕ್ತಿಗಳಾಗಿ ನೆಲೆಯಾಗಿದ್ದಾರೆ. ಇಲ್ಲಿ ವರ್ಷದ ಒಂದು ದಿನ ಶಿವ ದೇವರ ಬಿಂಬದ ಮೇಲೆ ಸೂರ್ಯರಶ್ಮಿ ಬೀಳುವ ದೃಶ್ಯ ಕಂಡುಬರುತ್ತದೆ. ಶಿವನ ಬಿಂಬರೂಪ ಪ್ರತಿ ಷ್ಠೆಯ ಸಂಕಲ್ಪದಿಂದ 12 ವರ್ಷಗಳ ನಿರಂತರ ಸಾಧನೆ ಯಿಂದ ಈ ದೇಗುಲ ನಿರ್ಮಿಸಲಾಗಿದೆ. ಶಿವ ರಾತ್ರಿಯಂದು ಕೋಟಿ ಪಂಚಾಕ್ಷರಿ ನಾಮ ಸ್ಮರಣೆ, 1008 ಶತ ರುದ್ರಾಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯ ಲಿದೆ. ಇದೇ ಆವರಣದಲ್ಲಿ ಅಯ್ಯಪ್ಪಸ್ವಾಮಿ ದೇಗುಲವೂ ಇದೆ.

ಬಂಟ್ವಾಳ ನರಹರಿ ಪರ್ವತ ಕ್ಷೇತ್ರ
ಬಂಟ್ವಾಳ: ಸಮುದ್ರ ಮಟ್ಟದಿಂದ ಸುಮಾರು ಸಾವಿರ ಅಡಿ ಎತ್ತರವಿರುವ ‌ ಶ್ರೀಕ್ಷೇತ್ರ ನರಹರಿ ಪರ್ವತ ದಲ್ಲಿ ಶ್ರೀ ಸದಾಶಿವ ದೇವರು ನೆಲೆಯಾಗಿದ್ದು, ಪ್ರತಿವರ್ಷ ಶಿವರಾತ್ರಿ ಉತ್ಸವವು ವಿಶಿಷ್ಟ ರೀತಿ ಯಲ್ಲಿ ಆಚರಿಸಲ್ಪಡುತ್ತದೆ. ಕ್ಷೇತ್ರದಲ್ಲಿ ಶಿವರಾತ್ರಿ ಜಾಗರಣೆ ಪ್ರಯುಕ್ತ ಫೆ. 21ರಂದು ರಾತ್ರಿ 7ರಿಂದ 9ರ ತನಕ ವಿಶ್ವಕರ್ಮ ಭಜನ ಮಂಡಳಿ ಹಳೆಯಂಗಡಿ ಇವರಿಂದ ಭಜನಾ ಸಂಧ್ಯಾ, ಸದಾಶಿವ ದೇವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಜರಗಲಿದೆ. ಹಿಂದೆ ಕ್ಷೇತ್ರದಲ್ಲಿ ರಾತ್ರಿಯ ಧಾರ್ಮಿಕ ಕಾರ್ಯಗಳು ಪೂರ್ಣಗೊಂಡ ಬಳಿಕ ಭಕ್ತರು ಶಿವರಾತ್ರಿ ದಿನ ಬೆಳಗ್ಗಿನ ವರೆಗೆ ಜಾಗರಣೆ ಕುಳಿತುಕೊಳ್ಳುತಿವ ಸಂಪ್ರದಾಯವಿತ್ತು.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ
ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವ ಸ್ಥಾನದಲ್ಲಿ ನೆಲೆನಿಂತ ಶ್ರೀ ಪಂಚಲಿಂಗೇಶ್ವರ ದೇವರು ವಿಟ್ಲ ಸೀಮೆಯ ಆರಾಧ್ಯ ಮೂರ್ತಿ. ಇಲ್ಲಿ ಫೆ. 21ರಂದು ಮಹಾಶಿವ ರಾತ್ರಿ ಉತ್ಸ ವದ ಅಂಗವಾಗಿ ಲಕ್ಷ ಬಿಲ್ವಾರ್ಚನೆ, ಏಕಾದಶ ರುದ್ರಾಭಿಷೇಕ, ದೇವರ ಬಲಿ ಉತ್ಸವ ನೆರವೇರು ತ್ತದೆ. ವಿಟ್ಲ ಸೀಮೆಯ ದೇಗುಲಗಳಲ್ಲೆಲ್ಲ ಇದು ಪ್ರಮುಖ ಮತ್ತು ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ ದೇಗುಲಗಳಿಲ್ಲ. ಸಾವಿರ ವರ್ಷಗಳ ಇತಿಹಾಸ ವಿರುವ ಈ ದೇಗುಲದಲ್ಲಿ ಪಂಚಭೂತಗಳಲ್ಲಿ ಪರಮೇಶ್ವರನನ್ನು ಪ್ರಮಾಣೀಕರಿಸಿ ಶಿರಬಾಗಿ ಉಪಾಸನೆ ಸಲ್ಲಿಸುವ ಪದ್ಧತಿ ಇದೆ.

ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನ
ಬಂಟ್ವಾಳ: ಸಜೀಪಮೂಡ ಗ್ರಾಮದ ಈಶ್ವರಮಂಗಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪೂಜೆಯ ಅಂಗವಾಗಿ ಫೆ. 21ರಂದು ಬೆಳಗ್ಗೆ ಶ್ರೀ ದೇವರಿಗೆ ಫಲ ಪಂಚಾಮೃತ ಅಭಿಷೇಕ, ಕಲೊ³àಕ್ತ ಪೂಜೆ, ಪ್ರಸನ್ನ ಪೂಜೆ, ಮಹಾಮಂಗಳಾರತಿ, ರುದ್ರಾಭಿಷೇಕದೊಂದಿಗೆ ವಿಶೇಷ ಪೂಜೆಗಳು ಜರಗಲಿದೆ. ಬೆಳಗ್ಗೆ ನಾಮ ಸಂಕೀ ರ್ತನ ಕಾರ್ಯ ಕ್ರಮ, ಅಪರಾಹ್ನ 2.30 ರಿಂದ ಮುಡಿಪು ದûಾಧ್ವರ ವಿಶ್ವಭಾರತಿ ಯಕ್ಷ ಸಂಜೀವಿನಿಯವರಿಂದ ತಾಳಮದ್ದಳೆ, ಸಂಜೆ ಭಜನ ಕಾರ್ಯಕ್ರಮ, ರಾತ್ರಿ ರಂಗಪೂಜೆ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ.

ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಬಂಟ್ವಾಳ: ಬಂಟ್ವಾಳ ಪೇಟೆಯ ಹೃದಯ ಭಾಗದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಅತ್ಯಂತ ಪ್ರಾಚೀನ ವಾದುದು. ಈ ಕ್ಷೇತ್ರ ದಲ್ಲಿ ವಿಶೇಷ ರೀತಿಯಲ್ಲಿ ಶಿವರಾತ್ರಿ ಉತ್ಸವ ನಡೆ ಯುತ್ತಿದ್ದು, ಶಿವ ರಾತ್ರಿಯ ದಿನದಂದು ಶ್ರೀ ದೇವರಿಗೆ ಶುದ್ಧ ಜಲವನ್ನು ಬ್ರಾಹ್ಮಣ ಭಕ್ತ ಸಮೂಹವು ಭಕ್ತಿ ಶ್ರದ್ಧೆ ಯಿಂದ ತಂದು ಶ್ರೀ ದೇವರಿಗೆ ನೀರಾಭಿಷೇಕ ಮಾಡುವುದು ವಿಶೇಷ ವಾಗಿದೆ. ಹಿಂದೆ ನೇರ ವಾಗಿ ನೇತ್ರಾವತಿ ನದಿ ನೀರನ್ನೇ ದೇವರಿಗೆ ಅಭಿಷೇಕ ಮಾಡುವ ಸಂಪ್ರದಾಯವಿತ್ತು. ಪ್ರಸ್ತುತ ಬಾವಿಯಿಂದ ಅಭಿಷೇಕ ಮಾಡಲಾಗುತ್ತಿದೆ. ಫೆ. 21ರಂದು ಭಜನ ಸೇವೆ ನಡೆಯುತ್ತದೆ.

ಕಾವಳಮೂಡೂರು ಶ್ರೀ ಕಾರಿಂಜೇಶ್ವರ ದೇವಸ್ಥಾನ
ಪುಂಜಾಲಕಟ್ಟೆ: ಭೂ ಕೈಲಾಸ ಪ್ರತೀತಿಯ ಕಾವಳಮೂಡೂರು ಗ್ರಾಮದ ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ ರಾಜ್ಯದ ಅತ್ಯಂತ ಪ್ರಾಚೀನ ಶಿವಾಲ ಯವಾಗಿದೆ. ಶ್ರೀ ಕ್ಷೇತ್ರದ ಪ್ರಧಾನ ದೇವರು ಶ್ರೀ ಪಾರ್ವತಿ, ಪರ ಮೇಶ್ವರ, ಶ್ರೀ ಮಹಾ ಗಣಪತಿ. ರಾಜನ್‌ದೈವ ಕೊಡ ಮಣಿತ್ತಾಯ ಮತ್ತು ಪಿಲಿ ಚಾಮುಂಡಿ, ಉಳ್ಳಾಲ್ತಿ ಅಮ್ಮನವರ ಸಾನ್ನಿಧ್ಯ ಕೂಡ ಇಲ್ಲಿದೆ. ಫೆ. 19ರಂದು ಪೂಜೆಗಳು ಆರಂಭ ಗೊಂಡಿದ್ದು, 25ರ ವರೆಗೆ ಜರಗಲಿದೆ. ತುಲಾಭಾರ, ರಂಗಪೂಜೆ, ಶತರುದ್ರಾಭಿಷೇಕ, ಶ್ರೀ ಪಾರ್ವತಿ-ಪರಮೇಶ್ವರ ದೇವರ ಭೇಟಿ, ಶಯನೋತ್ಸವ, ಮಹಾರಥೋತ್ಸವ ನಡೆಯಲಿದೆ.

ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಪುಂಜಾಲಕಟ್ಟೆ: ಬಂಟ್ವಾಳ ತಾ| ರಾಯಿ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ. 21ರಂದು ಅಹೋರಾತ್ರಿ ಭಜನ ಮಂಗಲೋತ್ಸವ, ಏಕದಶ ರುದ್ರಾಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಈ ಕ್ಷೇತ್ರ ಖರಾಸುರ ಪ್ರತಿಷ್ಠೆಯ 5 ಕ್ಷೇತ್ರಗಳಲ್ಲಿ ಒಂದು ಎಂಬ ಐತಿಹ್ಯವಿದೆ. ಮುಡ್ರಾಯಿಗುತ್ತು ಬಂಟ ಮನೆತನ ಮತ್ತು ಪಡ್ರಾಯಿಗುತ್ತು ಜೈನ ಮನೆತನದವರಿಂದ ಪೋಷಿಸಲ್ಪಟ್ಟು ಪ್ರಸ್ತುತ ಧಾರ್ಮಿಕ ದತ್ತಿ ಅಧೀನದಲ್ಲಿದೆ. ಶ್ರೀ ಉಮಾ ಮಹೇಶ್ವರರ ಸನ್ನಿಧಿ ಜತೆಗೆ ಶ್ರೀ ಮಹಾಗಣಪತಿ, ಸುಬ್ರ ಹ್ಮಣ್ಯ ಸ್ವಾಮಿ, ಪಂಚದೈವಗಳು, ನಾಗಾಲಯ ಸಾನ್ನಿಧ್ಯವಿದೆ.

ಬಂಟ್ವಾಳ ನಂದಾವರ ಕ್ಷೇತ್ರ
ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂìಬಾ ಕ್ಷೇತ್ರದಲ್ಲಿ ಬಲ ಬದಿಗೆ ಸೊಂಡಿಲು ಚಾಚಿ ರುವ ಬಲಮುರಿ ಗಣಪತಿ ವಿನಾಯಕ ಸ್ವರೂಪನಾ ಗಿದ್ದು, ಏಕಲಿಂಗ ಶಿವ, ವಿಷ್ಣು, ದುರ್ಗಾಂಬಿಕೆ ದೇವ, ದೇವಿ ಸ್ವರೂಪ ಗಳಾಗಿ ಅಭಯ ಹಸ್ತರಾ ಗಿದ್ದಾರೆ. ಇಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಫೆ. 21ರ ಸೂರ್ಯೋ ದಯದಿಂದ 22ರ ಸೂರ್ಯೋದಯದ ವರೆಗೆ ಏಕಾಹ ಭಜನೆ ನಡೆಯಲಿದೆ. ಕ್ಷೇತ್ರ ವಿವಿಧ ಭಜನ ಮಂಡಳಿಗಳನ್ನು ನಿರ್ವಹಣೆ ಮಾಡಿ ಬರೋಬ್ಬರಿ 24 ಗಂಟೆಗಳ ಪರ್ಯಂತ ನಡೆಯುವ ಸುದೀರ್ಘ‌ ಭಜನ ಕಾರ್ಯವನ್ನು ಯಶಸ್ವಿಗೊಳಿಸಲಿದೆ.

ನೀಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನ
ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಚೆನ್ನೈತ್ತೋಡಿ ಗ್ರಾ.ಪಂ.ನ ಅಜ್ಜಿಬೆಟ್ಟು ಗ್ರಾಮದ ವಾಮದಪದವು ಸಮೀಪದ ನೀಲಿ ಶ್ರೀ ನೀಲಕಂಠೇಶ್ವರ‌ ದೇವಸ್ಥಾನ ಸುಮಾರು ನಾಲ್ಕು ಶತಮಾನಗಳ ಇತಿಹಾಸವಿದೆ. ಮೂಲತಃ ವೀರಶೈವರಿಂದ ಪ್ರತಿಷ್ಠಾ ಪನೆಗೊಂಡಿತ್ತು. ಮೂರು ತಲೆಮಾರುಗಳ ಹಿಂದೆ ಸಂಪೂರ್ಣ ನೆಲಸಮ ವಾಗಿದ್ದು, 2012ರಲ್ಲಿ ಪುನಃ ನಿರ್ಮಾಣ ಗೊಂಡಿದೆ. ಪ್ರತೀ ಅಮಾವಾಸ್ಯೆ ಯಂದು ತೀರ್ಥ ಸ್ನಾನ ನಡೆಸಲಾಗುತ್ತಿದೆ. ಇತ್ತೀಚೆಗೆ ವಾರ್ಷಿಕ ಜಾತ್ರೆ ನಡೆದಿದ್ದು, ಶಿವರಾತ್ರಿ ಪ್ರಯುಕ್ತ ಶಿವರಾತ್ರಿ ಪ್ರಯುಕ್ತ ಫೆ. 21ರಂದು ಅಹರ್ನಿಶಿ ಭಜನೆ, ರಂಗಪೂಜೆ ಹಮ್ಮಿಕೊಳ್ಳಲಾಗಿದೆ.

ಕಲ್ಲಡ್ಕ ಶ್ರೀಕ್ಷೇತ್ರ ನಿಟಿಲಾಪುರ
ಕಲ್ಲಡ್ಕ: ಗೋಳ್ತಮಜಲು ಗ್ರಾಮದ ನಿಟಿಲಾಪುರ ಶ್ರೀ ಸದಾಶಿವ ದೇವರು ಮೊಗರನಾಡು ಸಾವಿರ ಸೀಮೆಯ ಒಡೆಯ. ಶತ ಶತಮಾನ ಪೂರ್ವದಲ್ಲಿ ಕೇದಗೆ ಪೊದೆ ನಡುವೆ ಸ್ತ್ರೀ ಯೊಬ್ಬರು ಉದ್ಭವ ಲಿಂಗ ವನ್ನು ಕಂಡು ಭಕ್ತರಿಗೆ ತಿಳಿ ಸಿದ್ದು, ಕಾಲಾಂತರದಲ್ಲಿ ದೇವಸ್ಥಾನ ನಿರ್ಮಾಣ ಆಗಿತ್ತು. ಫೆ. 21ರಂದು ಏಕಾದಶ ರುದ್ರಾಭಿಷೇಕ, ಮಹಾಪೂಜೆ, ರಾತ್ರಿ ರಂಗ ಪೂಜೆ, ಭಜನೆ ಜರಗಲಿದೆ. ಮಾ. 6ರಂದು ಗೊನೆ ಮುುಹೂರ್ತ, 14ರಂದು ಧ್ವಜಾರೋಹಣ ನಡೆದು 5 ದಿನಗಳ ಕಾಲ ಜಾತ್ರೆ, ನಾಲ್ಕನೇ ದಿನ ಪಾಣೆಮಂಗಳೂರು ಶ್ರೀ ಭಯಂ ಕೇಶ್ವರ ದೇವಸ್ಥಾನದ ಎದುರು ನೇತ್ರಾವತಿ ನದಿಯಲ್ಲಿ ದೇವರ ಅವಭೃಥ ಸ್ನಾನ ಜರಗಲಿದೆ.

ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ
ಬೆಳ್ತಂಗಡಿ: ಧರ್ಮಸ್ಥಳದ ಹೆಬ್ಟಾಗಿಲೆಂದೇ ಪ್ರಸಿದ್ಧ ವಾಗಿರುವ, ಉಜಿರೆಯ ಪೇಟೆಯಲ್ಲಿರುವ ಜನಾರ್ದನ ಸ್ವಾಮಿ ದೇವಸ್ಥಾನವು ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿದೆ. ಮಹಾ ಶಿವರಾತ್ರಿ ಪ್ರಯುಕ್ತ ಫೆ. 21ರಂದು ಶ್ರೀ ದೇವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ಅಭಿಷೇಕ, ಪೂಜೆ ನೆರ ವೇರಲಿದೆ.
ಸಂಜೆ 6ರಿಂದ ಉಜಿರೆ, ಮಾಚಾರು, ಬೆಳ್ತಂಗ ಡಿಯ 9 ಭಜನ ತಂಡಗಳಿಂದ ರಾತ್ರಿಯಿಂದ ಮುಂಜಾನೆ ವರೆಗೆ ನಿರಂ ತರ ಭಜನ ಕಾರ್ಯಕ್ರಮ ಜರಗಲಿದೆ. ದೇಗುಲ ಕಾರಣಿಕ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ.

ಮಣ್ಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ
ಪುಂಜಾಲಕಟ್ಟೆ: ಬಂಟ್ವಾಳ ಇರ್ವತ್ತೂರು ಗ್ರಾಮದ ನೇರಳಕಟ್ಟೆ ಬಳಿ ಇರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುಮಾರು 800 ವರ್ಷಗಳ ಐತಿಹ್ಯ ಹೊಂದಿದೆ.
ಶಿವರಾತ್ರಿ ಪ್ರಯುಕ್ತ ವಿಶೇಷತೆಯಾಗಿ ದೇಗು ಲದಲ್ಲಿ ಏಕಾದಶ ರುದ್ರಾಭಿ ಷೇಕ, ಭಜನೆ, ರಂಗ ಪೂಜೆ,ಶಿವ ಅಷ್ಟೋತ್ತರ ಬಿಲ್ವ ಪತ್ರಾರ್ಚನೆ ಕಳೆದ 22 ವರ್ಷಗಳಿಂದ ನಡೆ ಸಿಕೊಂಡು ಬರಲಾ ಗುತ್ತಿದ್ದು, ಫೆ.21ರಂದು ನಡೆಯಲಿದೆ. ಫೆ. 25 ರಂದು ಪ್ರತಿಷ್ಠಾ ವರ್ಧಂತಿ ಮತ್ತು ಶತರುದ್ರಾಭಿಷೇಕ ಕಾರ್ಯಕ್ರಮಗಳು ನಡೆಯಲಿವೆ. ನೀರಿನ ಒರತೆಗೆ ಇಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ ಜಿಗಿತ: 24 ಗಂಟೆಯಲ್ಲಿ 773 ಸೋಂಕಿತರು

ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ ಜಿಗಿತ: 24 ಗಂಟೆಯಲ್ಲಿ 773 ಸೋಂಕಿತರು

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಆನ್‌ಲೈನ್‌ ತರಗತಿಗೂ ಎದುರಾಗುತ್ತಿದೆ ತಾಂತ್ರಿಕ ಸಮಸ್ಯೆ

ಆನ್‌ಲೈನ್‌ ತರಗತಿಗೂ ಎದುರಾಗುತ್ತಿದೆ ತಾಂತ್ರಿಕ ಸಮಸ್ಯೆ

ಕೋವಿಡ್ ಸೋಂಕು ವಿಚಾರದಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಕಳಂಕ ಬೇಡ: ಕೇಂದ್ರದ ಮನವಿ

ಕೋವಿಡ್ ಸೋಂಕು ವಿಚಾರದಲ್ಲಿ ನಿರ್ದಿಷ್ಟ ಸಮುದಾಯಕ್ಕೆ ಕಳಂಕ ಬೇಡ: ಕೇಂದ್ರದ ಮನವಿ

ಬೆನ್‌ ಸ್ಟೋಕ್ಸ್‌ ವಿಸ್ಡನ್‌ ವರ್ಷದ ಶ್ರೇಷ್ಠ ಕ್ರಿಕೆಟಿಗ

ಬೆನ್‌ ಸ್ಟೋಕ್ಸ್‌ ವಿಸ್ಡನ್‌ ವರ್ಷದ ಶ್ರೇಷ್ಠ ಕ್ರಿಕೆಟಿಗ

ಅಪಾಯ ಕೇಂದ್ರಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ

ಅಪಾಯ ಕೇಂದ್ರಗಳಲ್ಲಿ ಲಾಕ್‌ಡೌನ್‌ ವಿಸ್ತರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಚ್ಲಂಪಾಡಿ; ಒಕ್ಕಲಿಗ ಗೌಡ ಗ್ರಾಮ ಸಮಿತಿಯಿಂದ 125 ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

ಇಚ್ಲಂಪಾಡಿ; ಒಕ್ಕಲಿಗ ಗೌಡ ಗ್ರಾಮ ಸಮಿತಿಯಿಂದ 125 ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣೆ

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಓಟಾಟ

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಓಟಾಟ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ; 71,000 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು

71,000 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು

ಬ್ಯಾಂಕ್ ದಾಖಲೆ ಕೇಳಿ ಹಣ ಗುಳುಂ ಮಾಡುವ ದಂಧೆ…ಎಚ್ಚರ.!

ಬ್ಯಾಂಕ್ ದಾಖಲೆ ಕೇಳಿ ಹಣ ಗುಳುಂ ಮಾಡುವ ದಂಧೆ…ಎಚ್ಚರ.!

ಬಾಗಿಲು ತೆಗೆದ ಕೃಷಿ ಉಪಕರಣಗಳ ಅಂಗಡಿ

ಬಾಗಿಲು ತೆಗೆದ ಕೃಷಿ ಉಪಕರಣಗಳ ಅಂಗಡಿ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ ಜಿಗಿತ: 24 ಗಂಟೆಯಲ್ಲಿ 773 ಸೋಂಕಿತರು

ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ ಜಿಗಿತ: 24 ಗಂಟೆಯಲ್ಲಿ 773 ಸೋಂಕಿತರು

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

ನನಗೆ ಗೌರವ ಬೇಡ, ಬದಲಿಗೆ ಒಂದು ಬಡ ಕುಟುಂಬದ ಜವಾಬ್ದಾರಿ ವಹಿಸಿಕೊಳ್ಳಿ: ಮೋದಿ ಕರೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಇಂದು ಸಚಿವ ಸಂಪುಟ ಸಭೆ

ಇಂದು ಸಚಿವ ಸಂಪುಟ ಸಭೆ

ಲಾಕ್ ಡೌನ್ ಸ್ವಲ್ಪ ಸಡಿಲಿಸಿ ಇಬ್ಬರು ಹೆಂಡ್ತೀರ ಮನೆಗೆ ಹೋಗ್ಬೇಕು ನಂಗೆ!

ಲಾಕ್ ಡೌನ್ ಸ್ವಲ್ಪ ಸಡಿಲಿಸಿ ಇಬ್ಬರು ಹೆಂಡ್ತೀರ ಮನೆಗೆ ಹೋಗ್ಬೇಕು ನಂಗೆ!