
ಬಹುತೇಕ ವಾಹನಗಳಿಗೆ ಅನುಮತಿ ಇಲ್ಲ
ಬೋರ್‌ವೆಲ್ ಕೊರೆಯುವ ಯಂತ್ರಕ್ಕೆ 7ಎ ಫಾರಂನಲ್ಲಿ ಒಪ್ಪಿಗೆ ಕಡ್ಡಾಯ
Team Udayavani, Jan 22, 2022, 5:27 PM IST

ಪುತ್ತೂರು: ಕೊಳವೆಬಾವಿ ಕೊರೆಯುವ ಯಂತ್ರಗಳಿಗೆ ರಾಜ್ಯ ಭೂವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗದ 7ಎ ಫಾರಂ ಅನುಮತಿ ಕಡ್ಡಾಯಗೊಳಿಸಿದ್ದರೂ ಬೋರ್‌ವೆಲ್ ಸಂಸ್ಥೆಗಳು ಒಂದು ಲೈಸೆನ್ಸ್‌ನಲ್ಲಿ ಹಲವು ಯಂತ್ರಗಳನ್ನು ಬಳಸಿ ಕಾರ್ಯಾಚರಣೆ ನಡೆಸುತ್ತಿದೆ.
ರಾಜ್ಯದ ಯಾವುದೇ ಭಾಗದಲ್ಲಿ ಬೋರ್‌ವೆಲ್ ಕೊರೆಯಲು ರಾಜ್ಯ ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗದಿಂದ 7ಎ ಫಾರಂ ಅನುಮತಿ ಪಡೆಯಬೇಕು.
ಲಭ್ಯ ಮಾಹಿತಿ 2021-22ರ ಪ್ರಕಾರ ದ.ಕ. ಹಾಗೂ ಉಡುಪಿ ಜಿಲ್ಲೆಯ ಒಟ್ಟು 12 ಬೋರ್‌ವೆಲ್ ವಾಹನಗಳಿಗೆ ಮಾತ್ರ ಅಂತರ್ಜಲ ವಿಭಾಗದಿಂದ 7ಎ ಫಾರಂ ಅನುಮತಿ ಲಭಿಸಿದೆ.
ಇದರಲ್ಲಿ 5 ಹೊರ ರಾಜ್ಯದ ಬೋರ್‌ವೆಲ್ ವಾಹನ, 7 ಬೋರ್‌ವೆಲ್ ವಾಹನ ಕರ್ನಾಟಕ ಸಾರಿಗೆ ಇಲಾಖೆಯ ನೋಂದಣಿ ಸಂಖ್ಯೆ ಹೊಂದಿದೆ. ಆದರೆ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ 60ಕ್ಕೂ ಅಧಿಕ ಬೋರ್‌ವೆಲ್ ವಾಹನಗಳು ತಿರುಗಾಡುತ್ತಿವೆ.
ಒಂದೇ ಲೈಸೆನ್ಸ್
ಬೋರ್‌ವೆಲ್ ಸಂಸ್ಥೆಗಳು ಒಂದು ಬೋರ್‌ವೆಲ್ ವಾಹನಕ್ಕೆ ಮಾತ್ರ ರಾಜ್ಯ ಭೂ ವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗದ 7ಎ ಫಾರಂ ಅನುಮತಿ ಪಡೆದು ಹತ್ತಾರು ಕಾರ್ಯಾಚರಣೆ ನಡೆಸುತ್ತವೆ. ಕೃಷಿ ಹಾಗೂ ಇನ್ನಿತರ ಬಳಕೆಗೆ ಬೋರ್‌ವೆಲ್ ಕೊರೆಯಲು ಗ್ರಾ.ಪಂ. ಅನುಮತಿ ಅಗತ್ಯ. ಆದರೆ ಗ್ರಾ.ಪಂ. ಅಧಿಕಾರಿಗಳಿಗೆ ಮಾಹಿತಿ ಕೊರತೆಯಿಂದ ದಾಖಲೆ ಪರಿಶೀಲಿಸದೆ ಬೇಕಾಬಿಟ್ಟಿ ಬೋರ್‌ವೆಲ್ ಕೊರೆಯಲು ಅನುಮತಿ ನೀಡಲಾಗುತ್ತಿದೆ. ದ.ಕ. ಹಾಗೂ ಉಡುಪಿಯಲ್ಲಿ ಒಂದೇ ಲೈಸೆನ್ಸ್ ಮೂಲಕ ಹಲವಾರು ಬೋರ್‌ವೆಲ್ ತಿರುಗಾಡುತ್ತಿವೆ.
7ಎ ಫಾರಂ ಅಗತ್ಯವೇ?
ಹಿಂದಿನ ನಿಯಮದ ಪ್ರಕಾರ ಬೋರ್ ವೆಲ್‌ಗೆ ವಿದ್ಯುತ್ ಸಂಪರ್ಕ ಪಡೆಯಲು ಗ್ರಾ.ಪಂ.ನಿಂದ ಬೋರ್‌ವೆಲ್ ಕೊರೆಯಲು ನಿರಾಕ್ಷೇಪಣಾ ಪತ್ರ ಮಾತ್ರ ಮಾನದಂಡವಾಗಿತ್ತು. ಹೊಸ ನಿಯಮದ ಪ್ರಕಾರ ಬೋರ್ ವೆಲ್‌ಗೆ ವಿದ್ಯುತ್ ಸಂಪರ್ಕ ಪಡೆ ಯಲು ಕೊಳವೆ ಬಾವಿ ಕೊರೆದ ಸ್ಥಳದ 500 ಮೀ. ವ್ಯಾಪ್ತಿಯಲ್ಲಿ ಸರಕಾರಿ ಬೋರ್‌ವೆಲ್, ನೀರಿನ ಮೂಲ ಇಲ್ಲ ಎಂಬ ಗ್ರಾ.ಪಂ.ನ ನಿರಾಕ್ಷೇ ಪಣಾ ಪತ್ರ, ಕೊಳವೆಬಾವಿ ಕೊರೆದ ವಾಹನದ 7ಎ ಫಾರಂ ದಾಖಲೆ, ಕೊಳವೆಬಾವಿ ಕೊರೆಯಲು ಅಂತ ರ್ಜಲ ನಿರ್ದೇಶನಾಲಯದ ಪರ ವಾಗಿ ಅಂತ ರ್ಜಲ ಕಚೇರಿಯ ಭೂ ವಿಜ್ಞಾನಿ ನೀಡಿದ ಅನುಮತಿ ಪತ್ರ ಮೆಸ್ಕಾಂಗೆ ಸಲ್ಲಿಸ ಬೇಕು. ಯಾವ ಬೋರ್‌ವೆಲ್ ವಾಹನದಿಂದ ಕೊರೆಯ ಲಾಗುತ್ತದೆಯೋ ಅದರ 7ಎ ಫಾರಂ ಅನುಮತಿ ಪತ್ರದ ಪ್ರತಿಯೂ ಕೆಲಸದ ಸಂದರ್ಭ ಇರಬೇಕು. ಪ್ರತೀ ಗ್ರಾ.ಪಂ.ನಲ್ಲೂ 7ಎ ಫಾರಂ ಅನುಮತಿ ಪತ್ರ ಇಲ್ಲದೆಯೂ ಬೋರ್‌ವೆಲ್ ಕೊರೆಯಲು ಎನ್‌ಒಸಿ ಲಭ್ಯವಾಗುತ್ತಿದೆ.
ತಾಂತ್ರಿಕ ಸಮಿತಿ ಪರಿಶೀಲನೆ
ಬೋರ್‌ವೆಲ್ ವಾಹನ ಕಾರ್ಯಾಚರಣೆಗೆ 7ಎ ಫಾರಂ ಅಗತ್ಯವೆ ಎಂಬ ಪ್ರಶ್ನೆ ಮೂಡುವುದು ಸಹಜ. ಇದು ಬೋರ್‌ವೆಲ್ ವಾಹನದ ಫಿಟ್‌ನೆಸ್ ನಿರೂಪಿಸುವ ದಾಖಲೆ. ಬೋರ್‌ವೆಲ್ ಕಾರ್ಯಾಚರಣೆಗೆ ವಾಹನ ಸಮರ್ಥವೆ ಎಂಬುದನ್ನು ಪರಿಶೀಲಿಸಿ ರಾಜ್ಯ ಭೂವಿಜ್ಞಾನ ಇಲಾಖೆಯ ತಾಂತ್ರಿಕ ಸಮಿತಿ ಅಗೀಕರಿಸಿದ ಅನಂತರ 7ಎ ಫಾರಂ ನೀಡಲಾಗುತ್ತದೆ. ಕಾರ್ಮಿಕರ ಸಂಖ್ಯೆ, ವಾಹನದ ಗಾತ್ರ, ತೂಕ, ಬೋರ್‌ವೆಲ್ ಕೊರೆಯುವ ಸಂದರ್ಭ ಪಾಲಿಸುವ ನಿಯಮಗಳ ಬಗ್ಗೆ 7ಎ ಫಾರಂನಲ್ಲಿ ನಿರೂಪಿಸಲಾಗಿದೆ.
ಕ್ರಮ ಕೈಗೊಳ್ಳಲು ಅವಕಾಶ
7ಎ ಫಾರಂ ರಹಿತ ವಾಹನಗಳಿಂದ ಬೋರ್‌ವೆಲ್ ಕೊರೆದರೆ ಅಂತಹ ವಾಹನವನ್ನು ಮುಟ್ಟುಗೋಲು ಹಾಕಿ, ಮಾಲಕರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇದೆ.
-ಜಾನಕಿ, ಭೂ ವಿಜ್ಞಾನಿ, ಅಂತರ್ಜಲ ವಿಭಾಗ, ಭೂವಿಜ್ಞಾನ ಇಲಾಖೆ ಮಂಗಳೂರು
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Khalistani ಉಗ್ರರ ವರ್ತನೆಗೆ ಸ್ಕಾಟ್‌ಲ್ಯಾಂಡ್ ಗುರುದ್ವಾರ ತೀವ್ರ ಖಂಡನೆ;ಪೊಲೀಸ್ ತನಿಖೆ

Sagara ಒಂದು ಹೆಬ್ಬಾವಿನ ಕಥೆ; ಬಾಯಿಗೆ ಸಿಕ್ಕಿದ್ದು ಹೊಟ್ಟೆಗಿಲ್ಲ!

Panaji ಮತ್ತೆ ಗೋವಾದಲ್ಲಿ ಮಳೆಯ ಆರ್ಭಟ; ಹಲವೆಡೆ ರಸ್ತೆಗಳು ಜಲಾವೃತ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ