ರಾಷ್ಟ್ರೀಯ ದಾಖಲೆ ಬರೆದ ಸವಣೂರು ನಡುಬೈಲಿನ ಅಭಿಷೇಕ್‌ ಎನ್‌ ಶೆಟ್ಟಿಗೆ ಏಕಲವ್ಯ ಪ್ರಶಸ್ತಿ

Team Udayavani, Nov 2, 2020, 10:38 AM IST

ರಾಷ್ಟ್ರೀಯ ದಾಖಲೆ ಬರೆದ ಸವಣೂರು ನಡುಬೈಲಿನ ಅಭಿಷೇಕ್‌ ಎನ್‌ ಶೆಟ್ಟಿಗೆ ಏಕಲವ್ಯ ಪ್ರಶಸ್ತಿ

ಪುತ್ತೂರು: ಕಡಬ ತಾಲೂಕಿನ ಸವಣೂರು ನಡುಬೈಲು ನಿವಾಸಿ, ಮೂಡಬಿದಿರೆ ಆಳ್ವಾಸ್‌ ಕಾಲೇಜಿನ ಹಳೆ ವಿದ್ಯಾರ್ಥಿ, ರೈಲ್ವೇ ಇಲಾಖೆ ಉದ್ಯೋಗಿ ಅಭಿಷೇಕ್‌ ಎನ್‌ ಶೆಟ್ಟಿ ಕ್ರೀಡಾ ಕ್ಷೇತ್ರದ ಸಾಧನೆಗಾಗಿ 2019 ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಡುಬೈಲು ಜಗನ್ನಾಥ ಶೆಟ್ಟಿ ಮತ್ತು ತುಳಸಿನಿ ಶೆಟ್ಟಿ ಅವರ ಪುತ್ರ ಅಭಿಷೇಕ್‌, ಡೆಕತ್ಲಾನ್‌ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇವರು ನೆಲ್ಯಾಡಿ ಹಿ.ಪ್ರಾ.ಶಾಲೆ, ನೆಲ್ಯಾಡಿ ಸಂತ ಜಾರ್ಜ್‌ ಪ್ರೌಢಶಾಲೆ, ಮೂಡಬಿದಿರೆ ಆಳ್ವಾಸ್‌ ಪ.ಪೂ. ಹಾಗೂ ಪದವಿ ಕಾಲೇಜಿನ ಹಳೆ ವಿದ್ಯಾರ್ಥಿ.

2011 ರಲ್ಲಿ 16 ವರ್ಷದ ಹಳೆಯ ಕಿರಿಯರ ರಾಷ್ಟ್ರೀಯ ದಾಖಲೆ, 56 ನೇ ಓಪನ್‌ ನ್ಯಾಷನಲ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 25 ವರ್ಷದ ಹಳೆಯ ರಾಜ್ಯ ದಾಖಲೆ, 29 ವರ್ಷದ ಕರ್ನಾಟಕ ರಾಜ್ಯ ಹಿರಿಯ ದಾಖಲೆ, 18 ವರ್ಷದ ಹಳೆಯ ಭಾರತೀಯ ರೈಲ್ವೆ ದಾಖಲೆ ಮುರಿದು ನೂತನ ದಾಖಲೆ ಸ್ಥಾಪಿಸಿದ್ದಾರೆ.

 ಅಭಿಷೇಕ್‌ ಎನ್‌ ಶೆಟ್ಟಿ

ಇದನ್ನೂ ಓದಿ:ರಾಜ್ಯ ಕ್ರೀಡಾ ಪ್ರಶಸ್ತಿ ಪ್ರಕಟ: ರಾಹುಲ್, ಮಯಾಂಕ್, ವೇದಾ ಕೃಷ್ಣಮೂರ್ತಿಗೆ ಏಕಲವ್ಯ ಪ್ರಶಸ್ತಿ

2015 ರಲ್ಲಿ ಕೇರಳದಲ್ಲಿ ನಡೆದ ರಾಷ್ಟ್ರೀಯ ಕೂಟ, ಮಂಗಳೂರಿನಲ್ಲಿ ನಡೆದ ಫೆಡರೇಶನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌, 2017 ರಲ್ಲಿ ಚೆನ್ನೈ ನಲ್ಲಿ ನಡೆದ ಮುಕ್ತ ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌, ಪಟಿಯಾಲದಲ್ಲಿ ಹಿರಿಯ ಫೆಡರೇಶನ್‌ ಕಪ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

 ಅಭಿಷೇಕ್‌ ಎನ್‌ ಶೆಟ್ಟಿ

2014 ರಿಂದ 2019 ತನಕದ ಆರು ಮುಕ್ತ ರಾಷ್ಟ್ರೀಯ ಚಾಂಪಿಯನ್‌ನಲ್ಲಿ ಪ್ರಥಮ ಸ್ಥಾನ, 2015 ರಲ್ಲಿ ಮಾರಿಷಸ್‌ನಲ್ಲಿ 6 ನೇ ಸ್ಥಾನ, 2017 ರಲ್ಲಿ ಭುವನೇಶ್ವರದಲ್ಲಿ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 5 ನೇ ಸ್ಥಾನ, 2017 ರಲ್ಲಿ ತುರ್ಕಿಮಿನಿಸ್ಟಾನ್‌ನಲ್ಲಿ ಏಷ್ಯಾದ ಒಳಾಂಗಣ ಆಟಗಳಲ್ಲಿ 4 ನೇ ಸ್ಥಾನ ಪಡೆದಿದ್ದಾರೆ.

 ಅಭಿಷೇಕ್‌ ಎನ್‌ ಶೆಟ್ಟಿ

ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದ ಸಂದರ್ಭ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ.ಸಿ ಅವರು ನನ್ನನ್ನು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಿದ್ದರು. ಆಳ್ವಾಸ್‌ನಲ್ಲಿ ತರಬೇತುದಾರ ವಸಂತ ಜೋಗಿ ಅವರ ಸಲಹೆಯಂತೆ ಪದವಿಯ ಕೊನೆಯ ವರ್ಷದಲ್ಲಿ ಡೆಕತ್ಲಾನ್‌ (10 ಈವೆಂಟ್‌) ಅಭ್ಯಾಸ ಆರಂಭಿಸಿದೆ. ಅದರಲ್ಲಿ ಯಶಸ್ಸು ಸಿಕ್ಕಿತ್ತು. ತರಬೇತುದಾರರು ಹಾಗೂ ಆಳ್ವಾಸ್‌ನ ಮೋಹನ್‌ ಆಳ್ವ ಅವರ ಪ್ರೋತ್ಸಾಹ ನನ್ನ ಸಾಧನೆಗೆ ಕಾರಣ ಎಂದು ಅಭಿಷೇಕ್‌ ಎನ್‌ ಶೆಟ್ಟಿ ‘ಉದಯವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಟಾಪ್ ನ್ಯೂಸ್

Belthangady: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

Belthangady: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

Road mishap: ಕಾರು – ಟ್ರ್ಯಾಕ್ಟರ್ ಟ್ರಾಲಿ ಅಪಘಾತ; ಸಚಿವರ ತಲೆಗೆ ತೀವ್ರಗಾಯ

Road mishap: ಕಾರು – ಟ್ರ್ಯಾಕ್ಟರ್ ಟ್ರಾಲಿ ಅಪಘಾತ; ಸಚಿವರ ತಲೆಗೆ ತೀವ್ರಗಾಯ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮೂರೂವರೆ ಗಂಟೆ ತಡ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮೂರೂವರೆ ಗಂಟೆ ತಡ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ

ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ

ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ

manish sisodia

ಸಿಸೋಡಿಯಾಗಿಲ್ಲ ಜಾಮೀನು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

Belthangady: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

ನಿವೃತ್ತ ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್ ಸುರ್ಯ ಗುತ್ತು ಸುಭಾಶ್ಚಂದ್ರ ವಿಧಿವಶ

ನಿವೃತ್ತ ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್ ಸುರ್ಯ ಗುತ್ತು ಸುಭಾಶ್ಚಂದ್ರ ವಿಧಿವಶ

ಸುಳ್ಯ: ಮನೆಗೆ ಕರೆದು ಹಲ್ಲೆ; ಜೀವ ಬೆದರಿಕೆ

ಸುಳ್ಯ: ಮನೆಗೆ ಕರೆದು ಹಲ್ಲೆ; ಜೀವ ಬೆದರಿಕೆ

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

asಅರಂಬೂರು: ಲಾರಿಯಲ್ಲಿ ಬೆಂಕಿ ಅವಘಡ

ಅರಂಬೂರು: ಗುಜರಿ ತುಂಬಿದ್ದ ಲಾರಿಯಲ್ಲಿ ಬೆಂಕಿ ಅವಘಡ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ