ನೆರಿಯಾ ಗಂಡಿಬಾಗಿಲು: ಕುಡಿದ ಮತ್ತಿನಲ್ಲಿ ಪತಿಯಿಂದ ಪತ್ನಿಯ ಕೊಲೆ
Team Udayavani, Jan 8, 2021, 7:45 AM IST
ಬೆಳ್ತಂಗಡಿ: ತಾಲೂಕಿನ ನೆರಿಯಾ ಗಂಡಿಬಾಗಿಲು ಸಮೀಪ ಕುಡಿದ ಮತ್ತಿನಲ್ಲಿ ಪತಿಯಿಂದ ಪತ್ನಿಯ ಹೊಡೆದು ಕೊಲೆಗೈದ ಘಟನೆ ಗುರುವರ ರಾತ್ರಿ ನಡೆದಿದೆ.
ನೆರಿಯಾ ಗ್ರಾಮದ ಗಂಡಿಬಾಗಿಲು ನಿವಾಸಿ ಸೌಮ್ಯ ಫ್ರಾನ್ಸಿಸ್ (40) ಕೊಲೆಯಾಗಿದ್ದು, ಈಕೆಯ ಪತಿ ಜಾನ್ ಸನ್ (47) ಕೊಲೆಗೈದ ಆರೋಪಿ.
ಮೂಲತಃ ಕೇರಳದ ಇರುಟ್ಟಿ ನಿವಾಸಿಗಳಾಗಿದ್ದು ಗಂಡಿಬಾಗಿಲು ಸಮೀಪ ಜಮೀನು ಹೊಂದಿದ್ದರು. ಇಬ್ಬರು ರಬ್ಬರ್ ಟ್ಯಾಪಿಂಗ್ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿ ನಿತ್ಯ ಪತಿ -ಪತ್ನಿ ಮಧ್ಯೆ ಗಲಾಟೆ ಸಂಭವಿಸುತ್ತಿದ್ದು, ಗುರುವಾರ ವಿಕೋಪಕ್ಕೆ ತೆರಳಿ ಪತಿ ಜಾನ್ ಸನ್ ಕಟ್ಟಿಗೆಯ ತುಂಡಿನಲ್ಲಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ರಾತ್ರಿ 11 ಗಂಟೆಗೆ ಘಟನೆ ಸಂಭವಿಸಿದ್ದು, ಕುಸಿದು ಬಿದ್ದ ಸೌಮ್ಯ ಅವರನ್ನು ತಕ್ಷಣ ಜಾನ್ ಸನ್ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ತೆರಳಬೇಕಾದರೆ ಸೌಮ್ಯ ಮೃತಪಟ್ಟಿದ್ದಾರೆ. ಇವರಿಗೆ 10 ವರ್ಷದ ಹೆಣ್ಣು ಮಗುವೊಂದಿದೆ.
ಘಟನೆ ಕುರಿತು ಸೌಮ್ಯ ಅವರ ಸಹೋದರ ಸನೋಜ್ ಫ್ರಾನ್ಸಿಸ್ ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಂತೆ ಪತಿ ಜಾನ್ ಸನ್ ನನ್ನು ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಮಾರ್ಗದರ್ಶನದಲ್ಲಿ ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಪವನ್ ಕುಮಾರ್ ಭೇಟಿ ನೀಡಿ ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ