ಸುತ್ತಿಗೆಯಿಂದ ಹೊಡೆದು ಫೋಟೋಗ್ರಾಫರ್‌ ಹತ್ಯೆ

ಜಾಗದ‌ ತಕರಾರು ಕೊಲೆಗೆ ಹೇತು ಕಾಡಿನಲ್ಲಿ ಶವ ಹೂತಿಟ್ಟಿರು

Team Udayavani, Nov 25, 2021, 5:30 AM IST

ಸುತ್ತಿಗೆಯಿಂದ ಹೊಡೆದು ಫೋಟೋಗ್ರಾಫರ್‌ ಹತ್ಯೆ

ಪುತ್ತೂರು: ಆರು ದಿನಗಳ ಹಿಂದೆ ತನ್ನ ಜಮೀನು ನೋಡಲೆಂದು ಬಂದಿದ್ದ ಫೋಟೋಗ್ರಾಫರ್‌ ನಾಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಜಾಗದ ವಿಚಾರಕ್ಕೆ ಸಂಬಂಧಿಸಿ ಸಂಬಂಧಿಕರೇ ಸುತ್ತಿಗೆಯಲ್ಲಿ ತಲೆಗೆ ಒಡೆದು ಕೊಲೆ ನಡೆಸಿ ಕಾಡಿನೊಳಗೆ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ.

ಮೂಲತಃ ಮಂಗಳೂರಿನ‌, ಪ್ರಸ್ತುತ ಮೈಸೂರು ಸುಬ್ರಹ್ಮಣ್ಯ ನಗರದ ನಿವಾಸಿ ಫೋಟೋಗ್ರಾಫರ್‌ ಜಗದೀಶ್‌ (58) ಕೊಲೆಯಾದವರು. ಪಡವನ್ನೂರು ಪಟ್ಲಡ್ಕದ ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ, ಪತ್ನಿ ಜಯಲಕ್ಷ್ಮೀ, ಪುತ್ರ ಪ್ರಶಾಂತ್‌ ಹಾಗೂ ನೆರೆಮನೆಯ ನಿವಾಸಿ ಜೀವನ್‌ ಪ್ರಸಾದ್‌ನನ್ನು ಕೊಲೆ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ
ಮೈಸೂರು ಜಿಲ್ಲೆಯ ಸುಬ್ರಹ್ಮಣ್ಯ ನಗರದಲ್ಲಿ ಫೋಟೋಗ್ರಾಫರ್‌ ಆಗಿದ್ದ ಮಂಗಳೂರು ಮೂಲದ ಜಗದೀಶ್‌ ತನ್ನ ಪತ್ನಿ, ಮಗನೊಂದಿಗೆ ಮೈಸೂರಿನಲ್ಲಿ ವಾಸ್ತವ್ಯ ಹೊಂದಿದ್ದರು. ತಿಂಗಳಿಗೊಮ್ಮೆ ಪುತ್ತೂರು ಆರ್ಯಾಪು ಗ್ರಾಮದ ಕುಂಜೂರುಪಂಜದಲ್ಲಿರುವ ಕೃಷಿ ಜಮೀನನ್ನು ನೋಡಲು ಬರುತ್ತಿದ್ದು, ನ. 18ರಂದು ಮೈಸೂರಿನಿಂದ ಬೆಳಗ್ಗೆ ಪುತೂರು ಕುಂಜೂರು ಪಂಜದ ಕೃಷಿ ಜಮೀನಿಗೆ ಬಂದಿದ್ದರು. ಬಳಿಕ ಮೈಸೂರಿಗೆ ತಲುಪದೆ ನಾಪತ್ತೆ ಯಾಗಿರುವ ಬಗ್ಗೆ ಅವರ ಸಹೋದರ ಶಶಿಧರ ಸಂಪ್ಯ ಠಾಣೆಯಲ್ಲಿ ದೂರು ನೀಡಿದ್ದು ಅದರಂತೆ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಜಾಗದ ವ್ಯವಹಾರ: ಕೊಲೆ?
ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ ಅವರ ಸಂಬಂಧಿಕರಾಗಿದ್ದ ಜಗದೀಶ್‌ ಅವರೊಂದಿಗಿನ ಜಾಗದ ವ್ಯವಹಾರವೇ ಕೊಲೆಗೆ ಹೇತು ಎನ್ನುವುದು ಮೇಲ್ನೊಟಕ್ಕೆ ಕಂಡು ಬಂದಿದೆ. ಜಗದೀಶ್‌ ಅವರಿಗೆ ಸಂಬಂಧದ ನೆಲೆಯಲ್ಲಿ ಮಾವನಾಗಿದ್ದ ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ ಅವರ ಮೂಲಕ ಜಾಗ ಖರೀದಿಸಲೆಂದು 65 ಲಕ್ಷ ರೂ. ನೀಡಿದ್ದು ಪುತ್ತೂರಿನ ಕುಂಜೂರುಪಂಜದಲ್ಲಿ, ಪುಳಿತ್ತಡಿಯಲ್ಲಿ ಜಾಗ ಖರೀದಿಸಲಾಗಿತ್ತು. ಈ ಜಾಗವನ್ನು ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ ಅವರು ನೋಡಿಕೊಳ್ಳುತ್ತಿದ್ದರು. ಆದರೆ ಜಾಗದ ದಾಖಲೆಗಳೆಲ್ಲವೂ ಬಾಲಕೃಷ್ಣ ಯಾನೆ ಸುಬ್ಬಯ್ಯ ರೈ ಅವರ ಹೆಸರಿನಲ್ಲಿ ಮಾಡಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಇಬ್ಬರ ನಡುವೆ ಅಸಮಧಾನ ಮೂಡಿತ್ತು. ಕೆಲ ಸಮಯಗಳ ಹಿಂದೆ ಪುಳಿತ್ತಡಿಯ ಜಾಗವನ್ನು ಜಗದೀಶ್‌ ಅವರ ಗಮನಕ್ಕೆ ತಾರದೆ ಮಾರಾಟ ಮಾಡಿದ್ದು, ಸಂಘರ್ಷ ತಾರಕಕ್ಕೆ ಏರಲು ಕಾರಣ ಎನ್ನಲಾಗಿದೆ. ಈ ಬಗ್ಗೆ ನ. 18ರಂದು ಮಾವ ಬಾಲಕೃಷ್ಣ ರೈ ಅವರೊಂದಿಗೆ ಕುಂಜೂರುಪಂಜದಲ್ಲಿನ ಜಾಗ ವೀಕ್ಷಿಸಿ ಆಮ್ನಿಯಲ್ಲಿ ಪಟ್ಲಡ್ಕಕ್ಕೆ ಬಂದಿದ್ದ ವೇಳೆ ಇಬ್ಬರೊಳಗೆ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯವಾಗಿದೆ. ಪ್ರತೀ ಬಾರಿ ಜಾಗ ನೋಡಲು ಬರುವಾಗ ಪತ್ನಿಯನ್ನು ಕರೆದುಕೊಂಡು ಬರುತ್ತಿದ್ದರು. ಈ ಬಾರಿ ಪತ್ನಿ ಬಂದಿರಲಿಲ್ಲ.

ಇದನ್ನೂ ಓದಿ:ಟ್ವಿಟರ್‌, ಫೇಸ್‌ಬುಕ್‌ಗೆ ಪ್ರಕಾಶನ ಸಂಸ್ಥೆ ಸ್ಥಾನಮಾನ

ಕಾಡಿನಲ್ಲಿ ಹೂತಿಟ್ಟರು
ಸುತ್ತಿಗೆಯಲ್ಲಿ ಜಗದೀಶ್‌ ಅವರ ತಲೆಗೆ ಬಡಿದ ವೇಳೆ ಸ್ಥಳದಲ್ಲೇ ಮೃತಪಟ್ಟಿದ್ದು ಬಳಿಕ ಮೂವರು ಆರೋಪಿಗಳು ಸೇರಿ ಮೃತದೇಹವನ್ನು ಸಮೀಪದ ಮಗುಳಿ ರಕ್ಷಿತಾರಣ್ಯದಲ್ಲಿ ಹೂತಿಟ್ಟಿದ್ದರು. ಹೂತಿಟ್ಟ ಕಾಡು ಅವರ ಮನೆಯಿಂದ ಕೇವಲ 300 ಮೀ. ದೂರವಿತ್ತು. ಪೊಲೀಸರು ನಾಪತ್ತೆ ಪ್ರಕರಣ ಬೆನ್ನಟ್ಟಿದ್ದ ಸಂದರ್ಭ ಈ ಅಂಶ ಬೆಳಕಿಗೆ ಬಂದಿದ್ದು ನ. 24 ರಂದು ಹೂತಿಟ್ಟ ಸ್ಥಳದಿಂದ ಮೃತದೇಹ ಹೊರ ತೆಗೆದು ಹೆಚ್ಚಿನ ಪರೀಕ್ಷೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.

ಸುಳ್ಯದ ಮೂವರ ವಶ
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಸುಳ್ಯದ ಹಳೆಗೇಟಿನ ಸಮೀಪದ ಮೂವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ನಾಪತ್ತೆ ಎಂದು ಕಥೆ ಕಟ್ಟಿದ್ದರು
ನ. 18ರಂದು ಕುಂಜೂರುಪಂಜದಲ್ಲಿ ಜಾಗ ನೋಡಿದ ಜಗದೀಶ್‌ ಬಳಿಕ ಮಧ್ಯಾಹ್ನ ಪುತ್ತೂರಿಗೆ ಬಂದು, ಸಂಜೆ ಪುಳಿತ್ತಡಿಗೆ ತೆರಳಿ ಅಲ್ಲಿಂದ ಮೈಸೂರಿಗೆ ಹೋಗಲೆಂದು ಆಮ್ನಿ ಕಾರಿನಲ್ಲಿ ಸುಳ್ಯ ತನಕ ತೆರಳಿದ್ದರು. ಅಲ್ಲಿಂದ ಬಸ್‌ನಲ್ಲಿ ಮೈಸೂರಿಗೆ ಹೋಗುವುದಾಗಿ ಹೇಳಿದ್ದರು ಎನ್ನುವ ಕಥೆ ಕಟ್ಟಲಾಗಿತ್ತು. ಆದರೆ ವಾಸ್ತವವಾಗಿ ಜಗದೀಶ್‌ ಪಟ್ಲಡ್ಕಕ್ಕೆ ಹೋದವರು ಅಲ್ಲೇ ಕೊಲೆಯಾಗಿದ್ದರು. ಅವರ ಪತ್ನಿ ಶರ್ಮಿಳಾ ನ. 19ರ ನಸುಕಿನ ಜಾವ ಜಗದೀಶ್‌ ಅವರಿಗೆ ಕರೆ ಮಾಡಿದಾಗ ಪೋನ್‌ ಸ್ವಿಚ್‌ ಆಫ್‌ ಆಗಿತ್ತು. ಈ ನಿಟ್ಟಿನಲ್ಲಿ ಅವರು ಮನೆ ಮಂದಿಗೆ ಗಂಡ ನಾಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದರು.

ಟಾಪ್ ನ್ಯೂಸ್

BCCI will call applications for head coach role

Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…

Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Praveen Nettar Case; Arrest of main accused Mustafa Paychar of Sulya

Praveen Nettar Case; ಪ್ರಮುಖ ಆರೋಪಿ ಸುಳ್ಯದ ಮುಸ್ತಫಾ ಪೈಚಾರ್ ಬಂಧನ

2-aranthodu

Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ

Sampaje: ತಂದೆ ಮಗಳ ಮೇಲೆ ಪ್ರಕರಣ ದಾಖಲು

Sampaje: ತಂದೆ ಮಗಳ ಮೇಲೆ ಪ್ರಕರಣ ದಾಖಲು

4

ಬೆಳ್ತಂಗಡಿಯಲ್ಲಿ ಬಸ್‌-ಟ್ಯಾಂಕರ್‌ ಅಪಘಾತ: ತಪ್ಪಿದ ಭಾರೀ ಅನಾಹುತ, 20 ಮಂದಿಗೆ ಗಾಯ

6-sslc-result

SSLC Result: ಬೆಳ್ತಂಗಡಿಯ ಚಿನ್ಮಯ್ ಜಿ.ಕೆ. (624) ರಾಜ್ಯಕ್ಕೆ ದ್ವಿತೀಯ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

BCCI will call applications for head coach role

Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Udupi ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

Udupi ಶ್ರೀ ಭಗವಾನ್ ನಿತ್ಯಾನಂದ ಮಂದಿರ ಮಠ: ಬಾಲಭೋಜನಾಲಯ, ಧ್ಯಾನ ಮಂದಿರ ಲೋಕಾರ್ಪಣೆ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.