
ಗಾಳಿ-ಮಳೆ: ಕುಂಬ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ
Team Udayavani, Jun 1, 2023, 7:32 AM IST

ಪುತ್ತೂರು: ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಶೇಖಮಲೆಯಲ್ಲಿ ಬುಧವಾರ ಸಂಜೆ ಭಾರೀ ಗಾಳಿ ಮಳೆಯಾಗಿದ್ದು, ಬೃಹತ್ ಮರ ರಸ್ತೆ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿತು.
ಕೆಲವು ವಿದ್ಯುತ್ ಕಂಬಗಳು ಕೂಡ ಬಿದ್ದು ಹೆದ್ದಾರಿ ಸಂಚಾರ ಅಸ್ತವ್ಯಸ್ತ ಗೊಂಡಿತು. ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮೆಸ್ಕಾಂ ಸಿಬಂದಿ ಆಗಮಿಸಿ ವಿದ್ಯುತ್ ತಂತಿ, ಕಂಬಗಳನ್ನು ತೆರವು ಮಾಡಿದರು. ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಮರಗಳನ್ನು ತೆರವು ಮಾಡಿದರು.
ಮರ ಬಿದ್ದು ಹಾನಿ
ಬಡಗನ್ನೂರು: ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಮೀನಾವು ಇಬ್ರಾಹಿಂ ಅವರ ದನದ ಹಟ್ಟಿಗೆ ಮೇಲೆ ಬುಧವಾರ ಸಂಜೆ ಮಳೆಯ ಸಂದರ್ಭ ಬೃಹತ್ ಗಾತ್ರದ ಮರ ಬಿದ್ದು ಹಾನಿ ಸಂಭವಿಸಿದೆ.
ವಿವಿಧೆಡೆ ಉತ್ತಮ ಮಳೆ
ಮಂಗಳೂರು/ ಉಡುಪಿ: ದ.ಕ., ಉಡುಪಿ, ಜಿಲ್ಲೆಯ ವಿವಿಧೆಡೆ ಬುಧ ವಾರ ರಾತ್ರಿ ಮಳೆಯಾಗಿದೆ. ಉಜಿರೆ, ಮುಂಡಾಜೆ, ಸುಬ್ರಹ್ಮಣ್ಯ, ಕಡಬ, ಮಣಿಪಾಲ, ಇಂದ್ರಾಳಿ, ಕುಂದಾಪುರದ ಬೆಳ್ವೆ, ಸಿದ್ದಾಪುರ ಮೊದಲಾದ ಭಾಗದಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ.
ಎಲ್ಲೋ ಅಲರ್ಟ್
ಕರಾವಳಿ ಭಾಗದಲ್ಲಿ ಜೂನ್ 1 ಮತ್ತು 4ರಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬುಧವಾರ ಬಿಸಿಲು ಮತ್ತು ಉರಿಸೆಕೆಯಿಂದ ಕೂಡಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Bandh; ಕಾವೇರಿಗಾಗಿ ಬೆಂಗಳೂರು ಬಂದ್; ಹಲವೆಡೆ ಪ್ರತಿಭಟನೆ, ರೈತ ಮುಖಂಡರು ಪೊಲೀಸ್ ವಶಕ್ಕೆ

Mumbai Police: 26/11ರ ಮುಂಬೈ ದಾಳಿ… ತಹವ್ವುರ್ ರಾಣಾ ವಿರುದ್ಧ 400 ಪುಟಗಳ ಚಾರ್ಜ್ ಶೀಟ್

Buzz: ಒಂದೇ ದಿನ ʼಸಲಾರ್-ಡಂಕಿʼ ರಿಲೀಸ್: ವರ್ಷಾಂತ್ಯಕ್ಕೆ ದೊಡ್ಡ ಬಾಕ್ಸ್ ಆಫೀಸ್ ದಂಗಲ್?

Road mishap: ಕಾರಿಗೆ ಬೈಕ್ ಡಿಕ್ಕಿ: ಹೆಲ್ಮೆಟ್ ಧರಿಸದ ಯುವಕ ಸಾವು

UV Fusion: ಸ್ವಾರಸ್ಯಗಳ ತಾಣ ಕಾಲೇಜು ಕ್ಯಾಂಪಸ್