
ಪೊಲೀಸ್ ಜೀಪು- ಬೈಕ್ ನಡುವೆ ಅಪಘಾತ: ಪಾಣಾಜೆ ಸಿಎ ಬ್ಯಾಂಕ್ ಸಿಇಒ ಸಾವು
Team Udayavani, Mar 5, 2023, 10:30 PM IST

ಪುತ್ತೂರು : ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪ್ಯ ಬಳಿ ಪೊಲೀಸ್ ಜೀಪಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾ.5 ರಂದು ರಾತ್ರಿ ಸಂಭವಿಸಿದೆ.
ಪಾಣಾಜೆ ಗ್ರಾಮದ ಕೋಟೆ ನಿವಾಸಿ, ಆರ್ಲಪದವಿನಲ್ಲಿರುವ ಪಾಣಾಜೆ ಸಿ.ಎ. ಬ್ಯಾಂಕ್ ಮ್ಯಾನೇಜರ್ ಲಕ್ಷ್ಮಣ ನಾಯ್ಕ್ (51) ಮೃತರು.
ಪುತ್ತೂರು ಕಡೆಗೆ ಬರುತ್ತಿದ್ದ ಪೊಲೀಸ್ ಜೀಪು ಹಾಗೂ ಆರ್ಲಪದವು ಕಡೆಗೆ ಸಂಚರಿಸುತಿದ್ದ ಬೈಕ್ ನಡುವೆ ಈ ಘಟನೆ ಸಂಭವಿಸಿದೆ.
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇದನ್ನೂ ಓದಿ: ತನಿಖೆ ನೆಪದಲ್ಲಿ ಸಿಬಿಐ ಅಧಿಕಾರಿಗಳಿಂದ ಮನೀಶ್ ಸಿಸೋಡಿಯಾ ಗೆ ಮಾನಸಿಕ ಹಿಂಸೆ: ಆಪ್ ಆರೋಪ
ಟಾಪ್ ನ್ಯೂಸ್
