Udayavni Special

ಕಡಬ ಸಮುದಾಯ ಆಸ್ಪತ್ರೆಗೆ ಬೇಕು ಡಯಾಲಿಸಿಸ್‌ ಕೇಂದ್ರ

ಪರಿಸರದ ನೂರಾರು ರೋಗಿಗಳ ನಿರೀಕ್ಷೆ

Team Udayavani, Oct 29, 2020, 4:55 AM IST

ಕಡಬ ಸಮುದಾಯ ಆಸ್ಪತ್ರೆಗೆ ಬೇಕು ಡಯಾಲಿಸಿಸ್‌ ಕೇಂದ್ರ

ಕಡಬ: ತಾಲೂಕು ಕೇಂದ್ರ ಕಡಬದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದರೂ ಸೂಕ್ತ ಸವಲತ್ತುಗಳು ಹಾಗೂ ತಜ್ಞ ವೈದ್ಯರು ಇಲ್ಲದೆ ಇರುವ ಕಾರಣದಿಂದಾಗಿ ಜನರು ಪರದಾಡು ವಂತಾಗಿದೆ. ಮುಖ್ಯವಾಗಿ ಕಿಡ್ನಿ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಕಡಬ ಪರಿಸರದ ರೋಗಿಗಳಿಗೆ ಅನುಕೂಲವಾಗುವಂತೆ ಕಡಬದಲ್ಲಿ ಡಯಾಲಿಸಿಸ್‌ ಕೇಂದ್ರ ತೆರೆಯುವುದು ಅತ್ಯಗತ್ಯವಾಗಿದೆ.

ಕಡಬದಲ್ಲಿ ಡಯಾಲಿಸಿಸ್‌ ಕೇಂದ್ರ ಇಲ್ಲದೆ ಇರುವುದರಿಂದಾಗಿ ಕಡಬ ಭಾಗದ ಜನ ದೂರದ ಪುತ್ತೂರು, ಬೆಳ್ತಂಗಡಿ, ಮಂಗಳೂರಿಗೆ ಡಯಾಲಿಸ್‌ಗಾಗಿ ತೆರಳಬೇಕಾದ ಅನಿವಾರ್ಯ ಇದೆ. ಮೊದಲೇ ಅನಾರೋಗ್ಯದಿಂದ ಕಂಗಾಲಾಗಿರುವ ಬಡ ರೋಗಿಗಳಿಗೆ ದೂರದ ಪ್ರಯಾಣ ಮತ್ತು ಆರ್ಥಿಕ ಹೊರೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರತಿ ರೋಗಿಯ ಡಯಾಲಿಸಿಸ್‌ಗೆ ಕನಿಷ್ಠ 4 ತಾಸು ಬೇಕಾಗಿದ್ದು, ಪುತ್ತೂರು, ಬೆಳ್ತಂಗಡಿ, ಮಂಗಳೂರಿನ ಆಸ್ಪತ್ರೆಗಳಿಗೆ ತೆರಳಿದರೂ ವಾರಕ್ಕೆ 2 ಅಥವಾ 3 ಬಾರಿ ಡಯಾಲಿಸಿಸ್‌ ಮಾಡಿಸಿಕೊಳ್ಳಬೇಕಾದ ರೋಗಿಗಳು ತಮ್ಮ ಸರದಿಗಾಗಿ ತಡರಾತ್ರಿಯವರೆಗೂ ಕಾಯಬೇಕಾದ ಪರಿಸ್ಥಿತಿ ಇದೆ.

ಸವಲತ್ತುಗಳಿಲ್ಲದ ಸಮುದಾಯ ಆಸ್ಪತ್ರೆ
ಕಡಬದಲ್ಲಿ ಸುಮಾರು 5 ಕೋಟಿ ರೂ.ಗಳಿಗೂ ಮಿಕ್ಕಿ ಅನುದಾನ ವ್ಯಯಿಸಿ ಸಮುದಾಯ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ ಇಲ್ಲಿಗೆ ಅಗತ್ಯ ತಜ್ಞ ವೈದ್ಯರ ನೇಮಕವಾಗಿಲ್ಲ. ಸಿಬಂದಿ ಕೊರತೆ, ವೈದ್ಯಕೀಯ ಸಲಕರಣೆಗಳ ಕೊರತೆಯಿಂದ ಈ ಆಸ್ಪತ್ರೆ ಕೇವಲ ತಲೆನೋವು, ಜ್ವರ ಹಾಗೂ ಅಪಘಾತ ನಡೆದಾಗ ಪ್ರಥಮ ಚಿಕಿತ್ಸೆ ಮೊದಲಾದ ಸೀಮಿತ ಚಿಕಿತ್ಸೆಗಳಿಗೆ ಮೀಸಲಾಗಿದೆ. ಕಡಬ ಸಮುದಾಯ ಆಸ್ಪತ್ರೆಗೆ ತಜ್ಞ ವೈದ್ಯರು, ವೈದ್ಯಕೀಯ ಸಲಕರಣೆಗಳನ್ನು ನೀಡಿ ಸೌಲಭ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಸೂಕ್ತ ರೀತಿಯಲ್ಲಿ ಪ್ರಯತ್ನಿಸುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಹಲವು ಗ್ರಾಮಗಳ ವ್ಯಾಪ್ತಿ
ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಹೀಗೆ 8 ಗ್ರಾಮಗಳ ವ್ಯಾಪ್ತಿಯನ್ನು ಈ ಆಸ್ಪತ್ರೆ ಹೊಂದಿದೆ. ಆದರೆ ಹತ್ತಿರದ ಕುಂತೂರು, ಆಲಂಕಾರು, ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಕಾಣಿಯೂರು, ಚಾರ್ವಾಕ, ಸುಬ್ರಹ್ಮಣ್ಯ, ಪಂಜ, ಏನೆಕಲ್‌, ಬಳ್ಪ, ಕೇನ್ಯ, ಎಡಮಂಗಲ ಪ್ರದೇಶದ ಜನರು ಕೂಡ ಇದೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿರುವುದರಿಂದ ವ್ಯಾಪ್ತಿ ದೊಡ್ಡದಾಗಿ ವಿಸ್ತರಿಸಿದೆ. ಕಡಬ ಸುತ್ತಮುತ್ತಲಿನ ವ್ಯಾಪ್ತಿ ಯಲ್ಲಿ ವಾರಕ್ಕೆರಡು ಬಾರಿ ಡಯಾಲಿಸಿಸ್‌ ಅಗತ್ಯವಿರುವ ಅಂದಾಜು 30ರಿಂದ 40 ರೋಗಿಗಳಿದ್ದಾರೆ.

ಸಚಿವರ ಗಮನಕ್ಕೆ ತರಲಾಗಿದೆ
ಕಡಬ ಸಮುದಾಯ ಆಸ್ಪತ್ರೆ ಇನ್ನಷ್ಟೇ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇ ರಬೇಕಿದೆ. ಆದರೂ ವಿಶೇಷ ಪ್ರಕರಣ ವೆಂದು ಪರಿಗಣಿಸಿ ಡಯಾಲಿಸಿಸ್‌ ಕೇಂದ್ರ ತೆರೆಯಬೇಕೆನ್ನುವ ಬೇಡಿಕೆ ಸಚಿವರ ಮುಂದಿಡಲಾಗಿದೆ. ಯಂತ್ರಗಳ ಪೂರೈಕೆಗೆ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ಮಾತುಕತೆ ನಡೆಸಲಾಗಿದೆ.
-ಎಸ್‌.ಅಂಗಾರ, ಸುಳ್ಯ ಶಾಸಕರು.

ಕೋವಿಡ್‌ನಿಂದ ನನೆಗುದಿಗೆ
ಪ್ರಸ್ತುತ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರ ಗಳಿವೆ. ಸಮುದಾಯ ಆಸ್ಪತ್ರೆಗಳಲ್ಲೂ ಆರಂಭಿಸಬೇಕೆನ್ನುವ ಬೇಡಿಕೆ ಮುಂದಿಡ ಲಾಗಿತ್ತು. ರಾಜ್ಯದ 207 ಸಮುದಾಯ ಆರೋಗ್ಯ ಕೇಂದ್ರ ಗಳ ಪೈಕಿ ತೀರಾ ಅಗತ್ಯವಿರುವ ಕಡೆಗಳಲ್ಲಾದರೂ ಡಯಾ ಲಿಸಿಸ್‌ ಕೇಂದ್ರ ತೆರೆಯುವ ಪ್ರಸ್ತಾವವಿತ್ತು. ಆದರೆ ಕೋವಿಡ್‌ ಕಾರಣದಿಂದ ಅದು ಕೂಡ ನನೆಗುದಿಗೆ ಬಿದ್ದಿದೆ. -ಡಾ| ರಾಮಚಂದ್ರ ಬಾಯರಿ, ಡಿಎಚ್‌ಒ.

ನಾಗರಾಜ್‌ ಎನ್‌.ಕೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡದಂತೆ ಗೆಳೆಯರು ಒತ್ತಡ ಹಾಕದ್ದಾರೆ: ರಮೇಶ್ ಜಾರಕಿಹೊಳಿ

ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡದಂತೆ ಗೆಳೆಯರು ಒತ್ತಡ ಹಾಕದ್ದಾರೆ: ರಮೇಶ್ ಜಾರಕಿಹೊಳಿ

G pay

Google Pay ಪಿ-ಟು-ಪಿ ಸೇವೆಗೆ ಶುಲ್ಕ! ಗೂಗಲ್‌ ಪೇ ಹೇಳಿದ್ದೇನು? ಯಾರಿಗೆ ಶುಲ್ಕ ಅನ್ವಯ?

ಸೋನಿಯಾ ಗಾಂಧಿ ಬಿಜೆಪಿಗೆ ಬರಬಹುದು ಆದ್ರೆ ಪ್ರಕಾಶ್ ಹುಕ್ಕೇರಿ ಬರುವುದಿಲ್ಲ: ಪ್ರಭಾಕರ್ ಕೋರೆ

ಸೋನಿಯಾ ಗಾಂಧಿ ಬಿಜೆಪಿಗೆ ಬರಬಹುದು ಆದ್ರೆ ಪ್ರಕಾಶ್ ಹುಕ್ಕೇರಿ ಬರುವುದಿಲ್ಲ: ಪ್ರಭಾಕರ್ ಕೋರೆ

ಮಳೆ ಹಾನಿ ಪ್ರದೇಶಕ್ಕೆ ಕೇಂದ್ರದಿಂದ ಅಧ್ಯಯನ ತಂಡ ಬಂದಿಲ್ಲ: ಅಜಿತ್‌ ಪವಾರ್‌

ಮಳೆ ಹಾನಿ ಪ್ರದೇಶಕ್ಕೆ ಕೇಂದ್ರದಿಂದ ಅಧ್ಯಯನ ತಂಡ ಬಂದಿಲ್ಲ: ಅಜಿತ್‌ ಪವಾರ್‌

ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ: ಶ್ರೀಲಂಕಾಕ್ಕೆ ಸೇರಿದ ದೋಣಿಯಲ್ಲಿತ್ತು 100ಕೆಜಿ ಹೆರಾಯ್ನ್

ಕರಾವಳಿ ರಕ್ಷಣಾ ಪಡೆ ಕಾರ್ಯಾಚರಣೆ: ಶ್ರೀಲಂಕಾಕ್ಕೆ ಸೇರಿದ ದೋಣಿಯಲ್ಲಿತ್ತು 100ಕೆಜಿ ಹೆರಾಯ್ನ್

ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಇನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ್‌ ಹೆಸರು

ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಇನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮ್‌ ಹೆಸರು

ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಸಂಸ್ಕೃತದಲ್ಲಿ ಪ್ರಮಾಣ ಸ್ವೀಕರಿಸಿದ ಗೌರವ್‌ ಶರ್ಮಾ

ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಗೌರವ್‌ ಶರ್ಮಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಾತ್ಸಲ್ಯ ಸಹಾಯಹಸ್ತ ಕಾರ್ಯಕ್ರಮಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ

ವಾತ್ಸಲ್ಯ ಸಹಾಯಹಸ್ತ ವಿತರಣಾ ಕಾರ್ಯಕ್ರಮಕ್ಕೆ ಡಾ.ಡಿ.ವೀರೇಂದ್ರ ಹೆಗ್ಗಡೆ ಚಾಲನೆ

ಕೃಷಿ, ಅಂತರ್ಜಲ ವೃದ್ಧಿಗೆ ಜಲಕ್ರಾಂತಿ

ಕೃಷಿ, ಅಂತರ್ಜಲ ವೃದ್ಧಿಗೆ ಜಲಕ್ರಾಂತಿ

ಬೆಳ್ತಂಗಡಿ : 2 ತಲೆ, 7 ಕಾಲು ಹೊಂದಿದ ವಿಸ್ಮಯಕಾರಿ ಕರುವಿನ ಜನನ !

ಪ್ರಕೃತಿ ವಿಸ್ಮಯ: ಬೆಳ್ತಂಗಡಿಯಲ್ಲಿ 2 ತಲೆ, 7 ಕಾಲು ಹೊಂದಿದ ಕರುವಿನ ಜನನ !

ಕಲ್ಲಡ್ಕ: ಆಮ್ನಿ- ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಮೃತ್ಯು

ಕಲ್ಲಡ್ಕ: ಆಮ್ನಿ- ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಮೃತ್ಯು

ವಿಜಯನಗರ ನೂತನ ಜಿಲ್ಲೆ: ಪುತ್ತೂರಿಗೆ ಹೊಸ ನಿರೀಕ್ಷೆ

ವಿಜಯನಗರ ನೂತನ ಜಿಲ್ಲೆ: ಪುತ್ತೂರಿಗೆ ಹೊಸ ನಿರೀಕ್ಷೆ

MUST WATCH

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

udayavani youtube

ಕೊರೊನಾ ಪರಿಣಾಮ ಅಧ್ಯಯನಕ್ಕಾಗಿ ರೋಡ್ ಆಶ್ರಮ್ ಅಭಿಯಾನ

udayavani youtube

Auto Rickshaw driver feeds stray dogs in Surathkal | Umesh Devadiga | Udayavani

udayavani youtube

ಸುರತ್ಕಲ್ ನ ಪ್ರಥಮ ರಿಕ್ಷಾ ಚಾಲಕಿ

ಹೊಸ ಸೇರ್ಪಡೆ

ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡದಂತೆ ಗೆಳೆಯರು ಒತ್ತಡ ಹಾಕದ್ದಾರೆ: ರಮೇಶ್ ಜಾರಕಿಹೊಳಿ

ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡದಂತೆ ಗೆಳೆಯರು ಒತ್ತಡ ಹಾಕದ್ದಾರೆ: ರಮೇಶ್ ಜಾರಕಿಹೊಳಿ

G pay

Google Pay ಪಿ-ಟು-ಪಿ ಸೇವೆಗೆ ಶುಲ್ಕ! ಗೂಗಲ್‌ ಪೇ ಹೇಳಿದ್ದೇನು? ಯಾರಿಗೆ ಶುಲ್ಕ ಅನ್ವಯ?

ಕೂರ್ಗ್‌ ಬೆಡಗಿ ರಶ್ಮಿಕಾ ಅಡುಗೆ ವಿಡಿಯೋ ವೈರಲ್‌

ಕೂರ್ಗ್‌ ಬೆಡಗಿ ರಶ್ಮಿಕಾ ಅಡುಗೆ ವಿಡಿಯೋ ವೈರಲ್‌

Add-in-Veerashaiva-Lingayata-OBC

ವೀರಶೈವ-ಲಿಂಗಾಯತ ಒಬಿಸಿಯಲ್ಲಿ ಸೇರಿಸಿ

ಸೋನಿಯಾ ಗಾಂಧಿ ಬಿಜೆಪಿಗೆ ಬರಬಹುದು ಆದ್ರೆ ಪ್ರಕಾಶ್ ಹುಕ್ಕೇರಿ ಬರುವುದಿಲ್ಲ: ಪ್ರಭಾಕರ್ ಕೋರೆ

ಸೋನಿಯಾ ಗಾಂಧಿ ಬಿಜೆಪಿಗೆ ಬರಬಹುದು ಆದ್ರೆ ಪ್ರಕಾಶ್ ಹುಕ್ಕೇರಿ ಬರುವುದಿಲ್ಲ: ಪ್ರಭಾಕರ್ ಕೋರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.