ಧರ್ಮಸ್ಥಳ ಠಾಣೆ ಮೇಲ್ದರ್ಜೆಗೇರಿಸಲು ಸಕಾಲ; ನೂತನ ಠಾಣೆ ಕಾಮಗಾರಿ ಪೂರ್ಣ

ಪುಂಜಾಲಕಟ್ಟೆ, ಬೆಳ್ತಂಗಡಿ, ಸಂಚಾರ ಠಾಣೆ ಸೇರಿ 5 ಠಾಣೆಗಳು ಕಾರ್ಯನಿರ್ವಹಿಸುತ್ತಿವೆ.

Team Udayavani, Jan 26, 2023, 11:00 AM IST

ಧರ್ಮಸ್ಥಳ ಠಾಣೆ ಮೇಲ್ದರ್ಜೆಗೇರಿಸಲು ಸಕಾಲ; ನೂತನ ಠಾಣೆ ಕಾಮಗಾರಿ ಪೂರ್ಣ

ಬೆಳ್ತಂಗಡಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗಾಗಿ ಹಗಲು ರಾತ್ರಿಯೆನ್ನದೆ ಶ್ರಮಿಸುತ್ತಿರುವ ಪೊಲೀಸ್‌ ಇಲಾಖೆಗೆ ರಾಜ್ಯ ಸರಕಾರವು ಕಳೆದ ಸಾಲಿನಲ್ಲಿ 200 ಕೋ.ರೂ. ಅನುದಾನದಡಿ ರಾಜ್ಯದಲ್ಲಿ 100 ಠಾಣೆಗಳಿಗೆ ನೂತನ ಕಟ್ಟಡದ ಕಾಯಕಲ್ಪ ನೀಡಿತ್ತು. ವರ್ಷಂಪ್ರತಿ ಲಕ್ಷೋಪಲಕ್ಷ ಭಕ್ತರು ಸಂದರ್ಶಿಸುವ ಧರ್ಮಸ್ಥಳ ಸಹಿತ ಉಭಯ ಜಿಲ್ಲೆಯ 7 ಠಾಣೆಗಳ ನೂತನ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ದ.ಕ. ಜಿಲ್ಲೆಯ ಧರ್ಮಸ್ಥಳ, ಸುಬ್ರಹ್ಮಣ್ಯ, ಬೆಳ್ಳಾರೆ, ಮಂಗಳೂರು, ಬಜಪೆ, ಗ್ರಾಮಾಂತರ ಠಾಣೆ ವಾಮಂಜೂರು, ಪಣಂಬೂರು ಸಂಚಾರ ಠಾಣೆ ಸೇರಿದಂತೆ ಉಡುಪಿ ಜಿಲ್ಲೆಯ ಹೆಬ್ರಿಗೆ ನೂತನ ಠಾಣೆ ಭಾಗ್ಯ ದೊರೆತಿತ್ತು. ಮಂಗಳೂರು ಗ್ರಾಮಾಂತರ ವಾಮಂಜೂರು ಠಾಣೆಗೆ ಮಾರ್ಚ್‌ ಒಳಗಾಗಿ ಗುದ್ದಲಿ ಪೂಜೆ ನೆರವೇರುವ ಸಾಧ್ಯತೆಯಿದೆ.

ಧರ್ಮಸ್ಥಳ ಪಿಐ ಠಾಣೆಯಾಗಿಸಲು ಸಕಾಲ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತೀದಿನ ಕನಿಷ್ಠ 25ರಿಂದ ಗರಿಷ್ಠ 50 ಸಾವಿರ ಮಂದಿ ಯಾತ್ರಾರ್ಥಿಗಳು ಸೇರುತ್ತಾರೆ. ಜಾತ್ರೆ, ಲಕ್ಷದೀಪೋತ್ಸವ ಅವಧಿಯಲ್ಲಿ ಲಕ್ಷೋಪಲಕ್ಷ ಭಕ್ತರು ಸೇರುತ್ತಿದ್ದಾರೆ. ಇತರ ದಿನಗಳಲ್ಲಿ ದೇಶ, ವಿದೇಶದ ಗಣ್ಯರು ರಾಜ್ಯ, ಕೇಂದ್ರ ಮಂತ್ರಿಗಳು, ನಾಡಿನ ಪ್ರಮುಖ ಗಣ್ಯರು ಭೇಟಿ ನೀಡುವ ವೇಳೆ ದೇಗುಲ ಸಹಿತ ಸಾರ್ವಜನಿಕರ ಭದ್ರತೆ ಮಹತ್ತರ ಜವಾಬ್ದಾರಿ ಪೊಲೀಸ್‌ ಇಲಾಖೆಗಿದೆ. ಭವಿಷ್ಯದಲ್ಲಿ ಧರ್ಮಸ್ಥಳ ಕ್ಷೇತ್ರದ ಭಕ್ತರ ಸಂಖ್ಯೆಗೆ ಅನುಗುಣವಾಗಿ, ಮತ್ತೂಂದೆಡೆ ಅಪರಾಧ ಪ್ರಮಾಣ ನಿಯಂತ್ರಿಸಲು ಪೊಲೀಸ್‌ ನಿರೀಕ್ಷಕರನ್ನೊಳಗೊಂಡ ಪ್ರತ್ಯೇಕ ಪಿಐ ಠಾಣೆ ತೆರೆಯಲು ಸಕಾಲವಾಗಿದೆ.

ಬೆಳ್ತಂಗಡಿಗೆ ಪ್ರತ್ಯೇಕ ಉಪವಿಭಾಗ
ಜಿಲ್ಲೆಯಲ್ಲೇ ಅತೀ ದೊಡ್ಡ ವಿಧಾನಸಭಾ ಕ್ಷೇತ್ರ ವಾಗಿರುವ ಬೆಳ್ತಂಗಡಿ ತಾಲೂಕಿನಲ್ಲಿ 81 ಗ್ರಾಮಗಳಿವೆ. ಸದ್ಯ ಬೆಳ್ತಂಗಡಿ ವೃತ್ತನಿರೀಕ್ಷಕರ ವ್ಯಾಪ್ತಿಗೆ ಒಳಪಟ್ಟಂತೆ ವೇಣೂರು, ಧರ್ಮಸ್ಥಳ, ಪುಂಜಾಲಕಟ್ಟೆ, ಬೆಳ್ತಂಗಡಿ, ಸಂಚಾರ ಠಾಣೆ ಸೇರಿ 5 ಠಾಣೆಗಳು ಕಾರ್ಯನಿರ್ವಹಿಸುತ್ತಿವೆ.

ಪ್ರತೀ ಠಾಣೆಗೆ ಗ್ರೇಡ್‌ 1 ಮತ್ತು ಗ್ರೇಡ್‌ 2ನಂತೆ ಅಪರಾಧ ಹಾಗೂ ಕಾನೂನು ಸುವ್ಯವಸ್ಥೆಗೆ ಇಬ್ಬರು ಪೊಲೀಸ್‌ ಉಪನಿರೀಕ್ಷಕರನ್ನು ನೇಮಿಸಲಾಗಿದೆ. ಬಂಟ್ವಾಳ, ವಿಟ್ಲ ಸೇರಿ 4 ಠಾಣೆ, ಬೆಳ್ತಂಗಡಿ 5 ಠಾಣೆಗಳು ಸದ್ಯ ಬಂಟ್ವಾಳ ಡಿವೈಎಸ್‌ಪಿ (ಪೊಲೀಸ್‌ ಉಪ ವಿಭಾಗ) ವ್ಯಾಪ್ತಿಗೆ ಒಳಪಟ್ಟಿದೆ. ಇನ್ನು ಮುಂದೆ ಬೆಳ್ತಂಗಡಿ ತಾಲೂಕಿಗೆ ಮಾತ್ರ ಅನ್ವಯಿಸುವಂತೆ ಪ್ರತ್ಯೇಕ ಡಿವೈಎಸ್‌ಪಿ ಠಾಣೆಯನ್ನಾಗಿಸಿ ಸರಕಾರ ಈಗಾಗಲೆ ಆದೇಶಿಸಿದೆ.

ಬೆಳ್ತಂಗಡಿ ಉಪವಿಭಾಗವಾದರೆ ಬೆಳ್ತಂಗಡಿ ಠಾಣೆಗೆ ಪ್ರತ್ಯೇಕ ಪಿಐ ನೇಮಕಗೊಂಡು ಸಂಚಾರ ಠಾಣೆ ಮತ್ತು ಬೆಳ್ತಂಗಡಿ ಠಾಣೆ ಪಿಐ ವ್ಯಾಪ್ತಿಗೆ ಬರಲಿದೆ. ಉಳಿದ ಮೂರು ಠಾಣೆಗೆ ಓರ್ವ ವೃತ್ತನಿರೀಕ್ಷಕರನ್ನು ನಿಯೋಜಿಸಲಾಗುತ್ತದೆ. ಈಗಿನ 81 ಗ್ರಾಮಗಳ ಸ್ಥಿತಿ ಗಮನಿಸಿದಾಗ ಧರ್ಮಸ್ಥಳ ಕ್ಷೇತ್ರವೊಂದಕ್ಕೆ ಪ್ರತ್ಯೇಕ ಪಿಐ ನೇಮಕ ಅನಿವಾರ್ಯವಾಗಿದೆ.

2021ರಲ್ಲಿ ಶಿಲಾನ್ಯಾಸ
ಬಹುವರ್ಷದ ಬೇಡಿಕೆಯ ಫಲವಾಗಿ ಧರ್ಮಸ್ಥಳ ಠಾಣೆಗೆ ಪ್ರತ್ಯೇಕ ಸ್ವಂತ ಕಟ್ಟಡ ರಚನೆಯಾಗಿದೆ. 3.2 ಕೋ.ರೂ. ವೆಚ್ಚದಲ್ಲಿ ಕಳೆದ 2021 ನವೆಂಬರ್‌ನಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ಶಿಲಾನ್ಯಾಸ ನೆರವೇರಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು ಒಟ್ಟು 5,724.32 ಚದರ ಅಡಿಯಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಾಣವಾಗಿದೆ. ಪಿಐ ಠಾಣೆಗೆ ಬೇಕಾದ ಎಲ್ಲ ವ್ಯವಸ್ಥೆಗಳು ಕಟ್ಟಡದಲ್ಲಿ
ಒದಗಿಸಲಾಗಿದೆ.

ಪಿಐ ನೇಮಕದ ಪ್ರಸ್ತಾವ ಇಲ್ಲ
ಅಪರಾಧ ಪ್ರಕರಣಗಳನ್ನು ಆಧರಿಸಿ ಬೆಳ್ತಂಗಡಿ ವ್ಯಾಪ್ತಿಗೆ ಪ್ರತ್ಯೇಕ ಪೊಲೀಸ್‌ ಉಪವಿಭಾಗ ತೆರೆಯಲು ಆದೇಶಿಸಲಾಗಿದೆ. ಧರ್ಮಸ್ಥಳಕ್ಕೆ ಪ್ರತ್ಯೇಕ ಪಿಐ ನೇಮಕದ ಪ್ರಸ್ತಾವ ಸದ್ಯಕ್ಕಿಲ್ಲ.
 -ಹೃಷಿಕೇಶ್‌ ಸೋನಾವಣೆ, ಎಸ್‌.ಪಿ., ದ.ಕ

ಉದ್ಘಾಟನೆಗೆ ಸಿದ್ಧ
ಉಭಯ ಜಿಲ್ಲೆಯ ನೂತನ 7 ಠಾಣೆಗಳ ಪೈಕಿ ಸುಬ್ರಹ್ಮಣ್ಯ ಠಾಣೆಗೆ ಶಿಲಾನ್ಯಾಸವಾಗಿದೆ. ಉಳಿದಂತೆ ವಾಮಂಜೂರು ಹೊರತುಪಡಿಸಿ ಬಹುತೇಕ ಉದ್ಘಾಟನೆಗೆ ಸಿದ್ಧಗೊಂಡಿದೆ.
-ಸನ್ಮೇ ಗೌಡ, ಕಾರ್ಯಪಾಲಕ ಎಂಜಿನಿಯರ್‌, ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ

*ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

HDK

50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ

14-wwqwe

ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ

1-ww-ewewe

ಮೋದಿ ಸರಕಾರ 9 ವರ್ಷಗಳಲ್ಲಿ ಏನು ಕಡಿದು ಗುಡ್ಡೆ ಹಾಕಿದೆ: ನಲಪಾಡ್ ಪ್ರಶ್ನೆ

1-scadsadsad

ಅಂದು ಮೋದಿ ಉಪನಾಮ ಟೀಕೆ…; ಇಂದು ಖುಷ್ಬು ಟ್ವೀಟ್ ವೈರಲ್

ಸಲ್ಮಾನ್ ಖಾನ್ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ

ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ

Forest Department Case Against UP Man Who Rescued, Cared For Sarus Crane

ಕೊಕ್ಕರೆಯನ್ನು ರಕ್ಷಿಸಿ ಸಾಕಿದ್ದ ಆರಿಫ್ ಖಾನ್ ಗೆ ಅರಣ್ಯ ಇಲಾಖೆ ನೋಟಿಸ್

ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ

ರಾಹುಲ್ ವಿಚಾರದಲ್ಲಿ ಕಾಂಗ್ರೆಸ್ ಸತ್ಯಾಗ್ರಹ ನಡೆಸುವುದು ವಿಪರ್ಯಾಸವೇ ಸರಿ: ಯುಪಿ ಸಿಎಂ ಯೋಗಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕ ಆತ್ಮಹತ್ಯೆ

ಸಂಪಾಜೆ; ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಸಂಪಾಜೆ; ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

puttur

ಮದಡ್ಕ ತೋಟಗಾರಿಕಾ ಕ್ಷೇತ್ರದಲ್ಲಿ ವಿನೂತನ ಪ್ರಯತ್ನ : ಉತ್ಪನ್ನ ಮಾರಾಟಕ್ಕೆ ಮಳಿಗೆ ಪ್ರಯೋಗ

ಸುಳ್ಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟಿಸ್‌

ಸುಳ್ಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟಿಸ್‌

belthangadi

ಬೆಳ್ತಂಗಡಿ: ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಸಿದ್ಧ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

HDK

50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ

14-wwqwe

ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ

1-ww-ewewe

ಮೋದಿ ಸರಕಾರ 9 ವರ್ಷಗಳಲ್ಲಿ ಏನು ಕಡಿದು ಗುಡ್ಡೆ ಹಾಕಿದೆ: ನಲಪಾಡ್ ಪ್ರಶ್ನೆ

1-scadsadsad

ಅಂದು ಮೋದಿ ಉಪನಾಮ ಟೀಕೆ…; ಇಂದು ಖುಷ್ಬು ಟ್ವೀಟ್ ವೈರಲ್

ಸಲ್ಮಾನ್ ಖಾನ್ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ

ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.