ಉಪ್ಪಿನಂಗಡಿ :ಲಾಡ್ಜ್ ಗೆ ಕರೆದೊಯ್ದು ಬಾಲಕಿಯ ಅತ್ಯಾಚಾರ : ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Team Udayavani, Jun 27, 2022, 12:05 AM IST
ಉಪ್ಪಿನಂಗಡಿ : ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಕಾರಿನಲ್ಲಿ ಶಾಲೆಗೆ ಬಿಡುವ ಆಸೆ ತೋರಿಸಿ, ಲಾಡ್ಜ್ ಗೆ ಕರೆದೊಯ್ದು ಅತ್ಯಾಚಾರಗೈದ ಕೃತ್ಯಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ಮುನಾಸೀರ್ (21) ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾ| ಕರಾಯ ಗ್ರಾಮದ ನಿವಾಸಿ 13 ವರ್ಷದ ಬಾಲಕಿಯನ್ನು ಕಲ್ಲೇರಿ ಜನತಾ ಕಾಲನಿ ನಿವಾಸಿ ಮುನಾಸೀರ್ ಶಾಲೆಗೆ ಕರೆದೊಯ್ಯುವೆನೆಂದು ತಿಳಿಸಿ ಮೇ 30ರಂದು ಹಾಗೂ ಜೂ. 7ರಂದು ಜೂ. 7ರಂದು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಉಪ್ಪಿನಂಗಡಿಯ ಲಾಡ್ಜ್ಗೆ ಕರೆದೊಯ್ದು ದೈಹಿಕ ಸಂಪರ್ಕ ನಡೆಸಿದ್ದ. ಬಳಿಕ ಬೆದರಿಕೆಯೊಡ್ಡಿ ಬಾಲಕಿಯನ್ನು ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ನ್ಯಾಯಾಂಗ ಬಂಧನ
ಪೋಕೊÕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು ಮೈಸೂರಿಗೆ ಪಲಾಯನಗೈದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.