Vitla: ಜೀವನ ಕಲೆಯಾಗಬೇಕು, ಬಲೆ ಆಗಬಾರದು: ಒಡಿಯೂರು ಶ್ರೀ

ಸನಾತನ ಧರ್ಮದ ಅನುಷ್ಠಾನದ ಮೂಲಕ ಧರ್ಮದ ಉಳಿವು ಸಾಧ್ಯ

Team Udayavani, Oct 20, 2023, 3:08 PM IST

Vitla: ಜೀವನ ಕಲೆಯಾಗಬೇಕು, ಬಲೆಆಗಬಾರದು: ಒಡಿಯೂರು ಶ್ರೀ

ವಿಟ್ಲ: ಭಾರತಕ್ಕೆ ಆಧ್ಯಾತ್ಮದ ಬೆಳಕಿದ್ದು, ಭಾರತೀಯತೆಗೆ ನಾಶ ಎಂಬುದಿಲ್ಲ. ಅಂತರಂಗದಲ್ಲಿ ನಿಜ ವಾದ ಸುಖವಿದೆ. ಅದನ್ನು ಎಲ್ಲೆಡೆ ಹುಡುಕುವು ದರಿಂದ ಜೀವನ ವ್ಯರ್ಥವಾಗುತ್ತದೆ.

ಜೀವನ ಒಂದು ನಾಟಕವಾಗಿದ್ದು, ಸೂತ್ರ ಧಾರನನ್ನು ಮರೆತಾಗ ಸೋಲು ಬರುತ್ತದೆ. ಜೀವನ ಕಲೆಯಾಗಬೇಕು,
ಬಲೆಯಾಗಬಾರದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಶ್ರೀ ಲಲಿತಾ ಪಂಚಮಿ ಮಹೋತ್ಸವ ಕಾರ್ಯಕ್ರಮದಲ್ಲಿ ಐವರು
ಕಲಾವಿದರಿಗೆ ಶ್ರೀ ಒಡಿಯೂರು ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.

ದೈವತ್ವ ತುಂಬಬೇಕು. ರಾಕ್ಷಸೀ ಪ್ರವೃತ್ತಿಯನ್ನು ದೂರ ಮಾಡಬೇಕು. ಮಾನವೀಯ ಮೌಲ್ಯ ಬೆಳೆದು ಬರಬೇಕು. ಮಾತು ಮತ್ತು ನಡೆ ಒಂದೇ ಆಗಿದ್ದರೆ ಬದುಕು ಸಂದರವಾಗುತ್ತದೆ. ತಾಯಿ ಮೊದಲ ಗುರುವಾಗಿ, ಮನೆ ಮೊದಲ ಪಾಠ ಶಾಲೆಯಾಗಬೇಕು.
ಅದು ಸಮಾಜದ ಬದಲಾವಣೆಗೆ ಕಾರಣವಾಗುತ್ತದೆ. ಸನಾತನ ಧರ್ಮದ ಅನುಷ್ಠಾನದ ಮೂಲಕ ಧರ್ಮದ ಉಳಿವು ಸಾಧ್ಯ ಎಂದು ತಿಳಿಸಿದರು.

ಸಾಧ್ವಿಶ್ರೀ ಮಾತಾನಂದಮಯೀ ಆಶೀರ್ವಚನ ನೀಡಿ, ಭಕ್ತಿಯನ್ನು ಬಡಿದೆಬ್ಬಿಸುವ ಪರ್ವಕಾಲದಲ್ಲಿ ಶಕ್ತಿಯ ಉಪಾಸನೆ ಮಾಡಬೇಕು. ಅಧರ್ಮ ಅಂತ್ಯವಾಗಬೇಕು ಎಂದರು.

ಯಕ್ಷಗುರು ಸಬ್ಬಣಕೋಡಿ ರಾಮ ಭಟ್‌, ತುಳು ರಂಗಭೂಮಿ ಕಲಾವಿದ ರಮೇಶ್‌ ಮಾಸ್ತರ್‌ ಬಿ.ಸಿ.ರೋಡ್‌, ತಬಲಾ ವಾದಕಿ ಅನಿತಾ ಪ್ರಭು, ಅಣ್ಣದೈವ ಪಾತ್ರಿ ರಾಜ ಬೆಳ್ಚಪ್ಪಾಡ, ಬಂಟ್ವಾಳ ಛಾಯಾಚಿತ್ರಗ್ರಾಹಕ ಹರೀಶ್‌ ರಾವ್‌ ಅವರಿಗೆ ಕಲಾಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದತ್ತ ಪ್ರಕಾಶ ಆಧ್ಯಾತ್ಮಿಕ ದ್ವೈಮಾಸಿಕ ಪತ್ರಿಕೆಯ 24ನೇ ಸಂಪುಟದ 4ನೇ ಸಂಚಿಕೆಯನ್ನು ಸ್ವಾಮೀಜಿ ಬಿಡುಗಡೆ ಗೊಳಿಸಿದರು. ಉದ್ಯಮಿ ವಾಮಯ್ಯ ಶೆಟ್ಟಿ ಮುಂಬಯಿ, ಮುಖ್ಯ ಶಿಕ್ಷಕಿ ರೇಣುಕಾ ಎಸ್‌. ರೈ ಉಪಸ್ಥಿತರಿದ್ದರು.

ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್‌ ಸೇರಾಜೆ ಸ್ವಾಗತಿಸಿದರು. ಯಶೋಧರ ಸಾಲ್ಯಾನ್‌, ಜಯಂತ ಆಜೇರು, ಅನಿತಾ, ಸುಬ್ರಹ್ಮಣ್ಯ ಟಿ., ಲೀಲಾ ಪಾದೆಕಲ್ಲು ಸಮ್ಮಾನಿತರನ್ನು  ಪರಿಚಯಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.  ಒಡಿಯೂರು ಶ್ರೀ ಕ್ಷೇತ್ರದಲ್ಲಿ ಲಲಿತಾ ಪಂಚಮಿ ಮಹೋತ್ಸವದ ಸಂದರ್ಭ ಗಣಪತಿ ಹವನ, ನಾಗತಂಬಿಲ,
ಶ್ರೀ ಚಂಡಿಕಾ ಯಾಗ, ಯಾಗದ ಪೂರ್ಣಾಹುತಿ, ಶ್ರೀಮಾತೇ ಭದ್ರಕಾಳಿ ಯಕ್ಷಗಾನ ಬಯಲಾಟ ನಡೆಯಿತು.

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.