
ವಿಟ್ಲ: ಬೈಕ್ ಢಿಕ್ಕಿಯಾಗಿ ಬಾಲಕಿ ಗಂಭೀರ
Team Udayavani, Jan 4, 2023, 11:26 AM IST

ವಿಟ್ಲ: ರಸ್ತೆ ಬದಿ ನಿಂತಿದ್ದ ಶಾಲಾ ಬಾಲಕಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡ ಘಟನೆ ವಿಟ್ಲದ ಒಕ್ಕೆತ್ತೂರು ಎಂಬಲ್ಲಿ ಸಂಭವಿಸಿದೆ.
ವಿಟ್ಲ ಒಕ್ಕೆತ್ತೂರು ನಿವಾಸಿ ಬಶೀರ್ ಅವರ ಪುತ್ರಿ ಫಾತಿಮತ್ ನಿದಾ ಗಾಯಗೊಂಡ ಬಾಲಕಿ.
ಫಾತಿಮತ್ ನಿದಾ ವಿಟ್ಲ ಸರಕಾರಿ ಮಾದರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶಾಲೆಗೆ ಹೋಗಲು ಒಕ್ಕೆತ್ತೂರಿನಲ್ಲಿ ಆಟೋ ರಿಕ್ಷಾಕ್ಕೆ ಕಾಯುತ್ತಿದ್ದಾಗ ವಿಟ್ಲ ಕಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದು ಬಾಲಕಿಯನ್ನು ಎಳೆದುಕೊಂಡು ಹೋಗಿದೆ.
ತತ್ ಕ್ಷಣ ಸ್ಥಳೀಯರು ಬಾಲಕಿಯನ್ನು ಪುತ್ತೂರು ಆಸ್ಪತ್ರೆಗೆ ಕೊಂಡೊಯ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ವಿಟ್ಲ-ಕಲ್ಲಡ್ಕ ರಸ್ತೆ ಅಗಲೀಕರಣಗೊಂಡು ಡಾಮರೀಕರಗೊಂಡಿದ್ದು, ವಾಹನಗಳು ಮಿತಿಮೀರಿದ ವೇಗದಲ್ಲಿ ಚಲಿಸುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ತವರಿನ ಲಾಭವಿಲ್ಲ, ಟಾಸ್ ಗೆದ್ದು ಫೀಲ್ಡಿಂಗ್ ಮಾಡಬೇಕಿಲ್ಲ…: ಇದು 2023ರ IPL ವಿಶೇಷತೆ

expose!;ಬಸ್ಸಿನಲ್ಲಿ ಮಹಿಳೆ ಎದುರು ಹಸ್ತಮೈಥುನ ಮಾಡಿದ ಕಾಮುಕನ ಬಂಧನ

Asia Cup ಶ್ರೀಲಂಕಾದಲ್ಲಿ ಆಡಿ, ಇಲ್ಲವಾದರೆ ಬಿಟ್ಟುಹೋಗಿ: ಪಾಕಿಸ್ಥಾನಕ್ಕೆ BCCI ಚಾಟಿಯೇಟು

ಪಣಜಿ: ಮುಂದಿನ ನಾಲ್ಕು ದಿನ ಗೋವಾದಲ್ಲಿ ಗುಡುಗು ಸಹಿತ ಮಳೆ… ಹವಾಮಾನ ಇಲಾಖೆ ಎಚ್ಚರಿಕೆ

ಪಡಿತರ ಧಾನ್ಯ ತರಲು ಹರಸಾಹಸ; ಉಪಕೇಂದ್ರ ಮಾಡಲು ಗ್ರಾಮಸ್ಥರ ಒತ್ತಾಯ