ಮಳೆಗಾಲಕ್ಕೂ ಮುನ್ನ ಸಕಲ ಸಿದ್ಧತೆ: ರೋಗ ರುಜಿನ ತಡೆಗೆ ಆರೋಗ್ಯ ಇಲಾಖೆ ಒತ್ತು

Team Udayavani, May 31, 2023, 3:47 PM IST

ಮಳೆಗಾಲಕ್ಕೂ ಮುನ್ನ ಸಕಲ ಸಿದ್ಧತೆ: ರೋಗ ರುಜಿನ ತಡೆಗೆ ಆರೋಗ್ಯ ಇಲಾಖೆ ಒತ್ತು

ಉಡುಪಿ: ಮಳೆಗಾಲ ಆರಂಭಕ್ಕೆ ದಿನಗಣನೆ ಆರಂಭಗೊಳ್ಳುತ್ತಿರುವ ನಡುವೆಯೇ ರೋಗ ಭೀತಿ ತಡೆಯಲು ಆರೋಗ್ಯ ಇಲಾಖೆ ಸನ್ನದ್ಧಗೊಂಡಿದೆ. ಮೊದಲ ಮಳೆಗೆ ರೋಗ ರುಜಿನಗಳು ಹರಡದಿದ್ದರೂ ಧಾರಾಕಾರ ಮಳೆ ಸುರಿದು ವಾರಗಟ್ಟಲೆ ನೀರು ನಿಲ್ಲುವ ಸಂದರ್ಭ ರೋಗ ಹರಡುವ ಭೀತಿ ಅಧಿಕವಿರುತ್ತದೆ. ಇಂತಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಸೂಕ್ತ ಪರಿಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ತಗ್ಗು ಪ್ರದೇಶಗಳಲ್ಲಿ ಮಳೆನೀರು ನಿಲ್ಲುವುದು, ನೀರಿನ ಟ್ಯಾಂಕ್‌, ಎಳನೀರು, ಪ್ಲಾಸ್ಟಿಕ್‌ ಗ್ಲಾಸ್‌, ಟೈರ್‌ ಹಾಗೂ ಮರದ ಪೊಟರೆಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ನಗರ ಭಾಗಗಳಲ್ಲಿಯೂ ಟ್ಯಾಂಕ್‌, ಗುಂಡಿ ಇರುವ ಭಾಗಗಳು, ರಸ್ತೆಯ ಅಂಚುಗಳು ಸಹಿತ ಕೆಲವೊಂದು ಅಂಗಡಿ-ಮುಂಗಟ್ಟುಗಳ ಎದುರು ಭಾಗದಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಪರಿಣಮಿಸಿ ರೋಗಗಳು ಹರಡುವ ಸಾಧ್ಯತೆಗಳಿರುತ್ತವೆ.

ವಿವಿಧೆಡೆ ಸರ್ವೇ ಕಾರ್ಯ
ಈ ಹಿಂದಿನ ಮಳೆಗಾಲದಲ್ಲಿ ನೀರು ನಿಂತು ರೋಗರುಜಿನ ಹರಡಿದ ಭಾಗಗಳಲ್ಲಿ ಆರೋಗ್ಯ ಇಲಾಖೆ ವಿಶೇಷ ಗಮನಹರಿಸಿ ಸರ್ವೇ ಕಾರ್ಯ ನಡೆಸುತ್ತಿದೆ. ರಬ್ಬರ್‌ ತೋಟ, ಅನನಾಸು ಗಿಡಗಳು ಸಹಿತ ಕಾಡಿನ ನಡುವೆ ಇರುವ ಜನವಸತಿ ಪ್ರದೇಶಗಳತ್ತಲೂ ವಿಶೇಷ ಗಮನಹರಿಸಲಾಗಿದೆ. ಮಳೆನೀರು ನಿಲ್ಲದಂತೆ ಬೇಕಿರುವ ಮುಂಜಾಗ್ರತೆ ಗಳನ್ನು ತೆಗೆದುಕೊಳ್ಳುವಂತೆ ಸಿಬಂದಿ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ.

ಪರೀಕ್ಷೆ ಕಾರ್ಯ ಚುರುಕು
ಜಿಲ್ಲೆಯಲ್ಲಿ ಈ ವರ್ಷ ಮಲೇರಿಯಾದ 75134 ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಅದರಲ್ಲಿ ಇಬ್ಬರಿಗಷ್ಟೇ ಪಾಸಿಟಿವ್‌ ಕಂಡುಬಂದಿದೆ. 635 ಮಂದಿಯನ್ನು ಡೆಂಗ್ಯೂ ತಪಾಸಣೆಗೆ ಒಳಪಡಿಸಲಾಗಿದ್ದು, 29 ಮಂದಿಗೆ ಪಾಸಿಟಿವ್‌ ಕಂಡುಬಂದಿದೆ. 411 ಮಂದಿಯನ್ನು ಚಿಕುನ್‌ ಗುನ್ಯ ತಪಾಸಣೆಗೆ ಒಳಪಡಿಸಲಾಗಿದ್ದು, ಇಬ್ಬರಿಗೆ ಪಾಸಿಟಿವ್‌ ದೃಢಪಟ್ಟಿದೆ. 25 ಮಂದಿಯನ್ನು ಮಿದುಳು ಜ್ವರ ತಪಾಸಣೆಗೆ ಒಳಪಡಿಸಲಾಗಿದ್ದು, ಒಬ್ಬರಿಗಷ್ಟೇ ಪಾಸಿಟಿವ್‌ ದೃಢಪಟ್ಟಿದೆ.

ಸೂಕ್ತ ಮುನ್ನೆಚ್ಚರಿಕೆ
ಮಳೆಗಾಲದ ಸಂದರ್ಭದಲ್ಲಿ ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯ ಹಾಗೂ ಮಿದುಳು ಜ್ವರಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ. ಮುಖ್ಯವಾಗಿ ನಮ್ಮ ಸುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳದಿರುವುದು ಹಾಗೂ ನೀರು ನಿಲ್ಲುವ ಕಾರಣ ಇದು ಸಂಭವಿಸುತ್ತದೆ. ಜಿಲ್ಲೆಯಲ್ಲಿ 2022ರಲ್ಲಿ 18 ಮಲೇರಿಯಾ, 513 ಡೆಂಗ್ಯೂ, 10 ಚಿಕುನ್‌ಗುನ್ಯ, 2 ಮಿದುಳು ಜ್ವರ ಪ್ರಕರಣಗಳು ಕಂಡುಬಂದಿದ್ದವು. ಡೆಂಗ್ಯೂವಿನಿಂದ ಇಬ್ಬರು ಹಾಗೂ ಮಿದುಳು ಜ್ವರದಿಂದ ಒಬ್ಬರು ಸಾವನ್ನಪ್ಪಿದ ಘಟನೆಯೂ ನಡೆದಿದ್ದು, ಈ ಬಾರಿ ಅಂತಹ ಸಾವು-ನೋವು ಸಂಭವಿಸದಂತೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಸ್ವತ್ಛತೆ ಅಗತ್ಯ
ಮಳೆಗಾಲ ಆರಂಭಕ್ಕೂ ಮುನ್ನ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ತಮ್ಮ ಸುತ್ತಮುತ್ತಲಿನ ಪರಿಸರಗಳನ್ನು ಸ್ವತ್ಛವಾಗಿಡುವ ಜತೆಗೆ ನೀರು ನಿಲ್ಲದಂತೆ ಸಾರ್ವಜನಿಕರು ಕೂಡ ಎಚ್ಚರವಹಿಸಬೇಕು. ಬೇಕಿರುವ ಅಗತ್ಯ ಔಷಧಗಳ ದಾಸ್ತಾನಿಗೂ ಅಗತ್ಯ ಕ್ರಮವಹಿಸಲಾಗಿದೆ.
-ಡಾ| ಪ್ರಶಾಂತ್‌ ಭಟ್‌
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ

-ಪುನೀತ್‌ ಸಾಲ್ಯಾನ್‌

ಟಾಪ್ ನ್ಯೂಸ್

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

1-fdsdsa

ODI: ಭಾರತದ ಎದುರು ವೈಟ್‌ವಾಶ್‌ ತಪ್ಪಿಸಿಕೊಂಡ ಆಸೀಸ್ ; 66 ರನ್ ಗಳ ಜಯ

1-cssadsa

Karwar; ಯುದ್ಧವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಿದ್ಧತೆಗಳು ಪೂರ್ಣ

kejriwal-2

Kejriwal ಬಂಗಲೆ ವಿವಾದ : ಸಿಬಿಐ ತನಿಖೆಗೆ ಗೃಹ ಸಚಿವಾಲಯ ಆದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಪ್ರಕೃತಿಯನ್ನು ನೋಡುವ ದೃಷ್ಟಿ ಬದಲಾಗಬೇಕು: ಶಾಸಕ ಗುರ್ಮೆ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

Udupi ಮಾದಕ ವ್ಯಸನಮುಕ್ತ ಜಿಲ್ಲೆಗೆ ವೈದ್ಯಕೀಯ ಕ್ಷೇತ್ರದ ಕೊಡುಗೆ ಅತ್ಯಾವಶ್ಯಕ

Udupi: 3-4 ದಿನದೊಳಗೆ ಜಿಲ್ಲೆಯ ಮರಳು ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ… : ಕೋಟ ಎಚ್ಚರಿಕೆ

Udupi: 3-4 ದಿನದೊಳಗೆ ಜಿಲ್ಲೆಯ ಮರಳು ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ… : ಕೋಟ ಎಚ್ಚರಿಕೆ

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

Udupi ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

dashalakshana

ಆತ್ಮೋನ್ನತಿಯ ದಶಲಕ್ಷಣ ಮಹಾಪರ್ವ

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

Udupi ಅಗ್ನಿಶಾಮಕ : ಮುಖ್ಯಮಂತ್ರಿ ಪದಕ ಪ್ರದಾನ

UDMangaluruಚಾಲಕರ ಅಪಘಾತ ಪರಿಹಾರ ಯೋಜನೆ: ಅರ್ಜಿ ಆಹ್ವಾನ

Mangaluruಚಾಲಕರ ಅಪಘಾತ ಪರಿಹಾರ ಯೋಜನೆ: ಅರ್ಜಿ ಆಹ್ವಾನ

election lok sabha

One Country, One Election: ಇದು ದೀರ್ಘಾವಧಿ ಪ್ರಕ್ರಿಯೆ…

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

World Tourism Day ದೂರದೃಷ್ಟಿಯ ಯೋಜನೆ ಕಾರ್ಯಗತಗೊಳಿಸಿ: ಖಾದರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.