Udayavni Special

15 ವರ್ಷ ಆದರೂ ಪುನರ್‌ ನಿರ್ಮಾಣವಾಗದ ಅಂಗನವಾಡಿ ಕಟ್ಟಡ

Team Udayavani, Sep 5, 2020, 4:35 AM IST

15 ವರ್ಷ ಆದರೂ ಪುನರ್‌ ನಿರ್ಮಾಣವಾಗದ ಅಂಗನವಾಡಿ ಕಟ್ಟಡ

ಉಪ್ಪುಂದ: ಹೇರೂರು ಗ್ರಾ.ಪಂ. ವ್ಯಾಪ್ತಿಯ ಯರುಕೋಣೆ ಪೇಟೆಯಲ್ಲಿದ್ದ ಅಂಗನವಾಡಿ ಕೇಂದ್ರ ಕಟ್ಟಡವು ಬಿದ್ದು ಹೋಗಿದ್ದು ಪುನರ್‌ ನಿರ್ಮಾಣಕ್ಕೆ ಮುಂದಾಗದೆ ಇರುವುದರಿಂದ ರೋಸಿಹೋದ ಇಲ್ಲಿನ ನಾಗರಿಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸದೇ ಇರುವ ತೀರ್ಮಾನಕ್ಕೆ ಬಂದಿದ್ದಾರೆ. ಯರುಕೋಣೆಯಲ್ಲಿನ ಅಂಗವಾಡಿ ಕಟ್ಟಡವು ಬಿದ್ದು ಹೋಗಿ 15 ವರ್ಷಗಳು ಕಳೆದಿವೆ. ಪುನರ್‌ನಿರ್ಮಾಣಕ್ಕೆ ಅನುದಾನ ಒದಗಿಸಲು ಸಾಕಷ್ಟು ಮನವಿ ಸಲ್ಲಿಸಿದ್ದರೂ ಯಾವುದೇ ಫ‌ಲಕಂಡಿಲ್ಲ.

ಹಿನ್ನೆಲೆ
ನಾವುಂದ-ಯರುಕೋಣೆ., ಎಲ್ಲೂರು ಮಖ್ಯ ರಸ್ತೆಯ ಯರುಕೋಣೆ ಪೇಟೆಯ ಸರಕಾರಿ ಜಾಗದಲ್ಲಿ ಮುಂದುವರಿಕಾ ಕಲಿಕಾ ಕಟ್ಟಡ ಇತ್ತು, ನಂತರ ಈ ಕಟ್ಟಡದಲ್ಲಿ ಅಂಗನವಾಡಿ ಆರಂಭಿಸಲಾಗಿತ್ತು. ಸುಮಾರು 15 ವರ್ಷ ಅಂಗನವಾಡಿ ಕಾರ್ಯ ನಿರ್ವಹಿಸಿದೆ. ಬಳಿಕ ಕಟ್ಟಡ ಶಿಥಿಲಗೊಂಡಿದ್ದು ಕಟ್ಟಡ ದುರಸ್ತಿಗೊಳಿಸುವ ಕಾರ್ಯ ನಡೆಯಲಿಲ್ಲ. ಬಳಿಕ ಈ ಅಂಗನವಾಡಿ ಕೇಂದ್ರವನ್ನು ಪೇಟೆಯಿಂದ ಸುಮಾರು 4 ಕಿ.ಮೀ. ದೂರದ ಆಲಗದ್ದೆ ಕೇರಿಗೆ ಸ್ಥಳಾಂತರಿಸಲಾಗಿದೆ.

ಹೆತ್ತವರಿಗೆ ಸಮಸ್ಯೆ
ಯರುಕೋಣೆಯ ಪೇಟೆ ಪರಿಸರದಲ್ಲಿ 35ಕ್ಕೂ ಹೆಚ್ಚು ಮನೆಗಳಿವೆ. ಅಂಗನವಾಡಿಗೆ ಹೋಗುವ ವಯಸ್ಸಿನ 17 ಮಕ್ಕಳಿದ್ದಾರೆ. ಸಮೀಪದ ಅಂಗನವಾಡಿಯನ್ನು ದೂರದ ಊರಿಗೆ ಸ್ಥಳಾಂತರಿಸಿದ್ದರಿಂದ ಹೆತ್ತವರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಆಲಗದ್ದೆಕೇರಿ ಅಂಗನವಾಡಿಗೆ ಮಕ್ಕಳನ್ನು ಕಳುಹಿಸಲು ಕಷ್ಟಕರವಾಗಿದ್ದರಿಂದ ಕೆಲವರು 2.5 ಕಿ.ಮೀ. ದೂರದ ಹೇರೂರು ಮಠದ ಶಾಲೆ ಅಂಗನವಾಡಿಗೆ ಬಿಟ್ಟುಬರುತ್ತಾರೆ. ಆದರೆ ಅಂಗನವಾಡಿ ಕೇಂದ್ರಕ್ಕೆ ಸರಕಾರದಿಂದ ಸಿಗುವ ಸೌಲಭ್ಯಗಳು ಪೂರ್ಣಪ್ರಮಾಣದಲ್ಲಿ ಲಭ್ಯವಾಗುವುದು ಆಲಗದ್ದೆಕೇರಿಗೆ. ಇದರಿಂದ ಮಕ್ಕಳು ವಿವಿಧ ಸೌಲಭ್ಯಗಳಿಂದ ವಂಚಿತರಾಗುವ ಭೀತಿಯು ಹೆತ್ತವರನ್ನು ಕಾಡುತ್ತಿದೆ. ಮಳೆಗಾಲದಲ್ಲಿ ದೂರದ ಅಂಗನವಾಡಿಗೆ ಕರೆದುಕೊಂಡು ಹೋಗಲು ಕಷ್ಟವಾಗುತ್ತಿದೆ. ಕೆಲಸಕ್ಕೂ ಅಡಚಣೆಯಾಗುತ್ತದೆ. ಇದರಿಂದ ಮಕ್ಕಳನ್ನು ಕಳಿಸದೇ ಇರುವ ತೀರ್ಮಾನ ಮಾಡಿದ್ದಾಗಿ ಚಂದ್ರ ಯರುಕೋಣೆ ಹೇಳುತ್ತಾರೆ.

ಜಾಗ ಒತ್ತುವರಿ ತೆರವಿಗೆ ಆಗ್ರಹ
ಇಲ್ಲಿನ ಅಂಗನವಾಡಿಯ ಹಳೆಯ ಕಟ್ಟಡದ ಹಂಚಿನ ಮಾಡನ್ನು ಕೆಡವಿ ಒತ್ತುವರಿ ಮಾಡಿದ ಬಗ್ಗೆ ಮತ್ತು ಸನಿಹದ ಸರಕಾರಿ ಸಮಾಜ ಮಂದಿರಕ್ಕೆ ಮೀಸಲಿಟ್ಟ ಸರಕಾರಿ ಜಾಗವನ್ನೂ ಒತ್ತುವರಿ ಮಾಡಿದ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಇದನ್ನು ತೆರವುಗೊಳಿಸಲೂ ಇಲಾಖೆಗಳು, ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ಮನವಿ ಮಾಡಿದ್ದೇವೆ
ಜನರ ಮನವಿಯಂತೆ ಎರಡು ವರ್ಷಗಳ ಹಿಂದೆ ಅದೇ ಅಂಗನವಾಡಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಶಿಶು ಅಭಿವೃದ್ಧಿ ಇಲಾಖೆಗೆ ಅನುದಾನಕ್ಕಾಗಿ ಮನವಿ ಮಾಡಲಾಗಿದೆ. ಇದುವರೆಗೆ ಸರಕಾರ ಯಾವುದೇ ಅನುದಾನ ಮಂಜೂರುಗೊಳಿಸಿಲ್ಲ.
– ಪ್ರಕಾಶ, ಪಿಡಿಒ ಹೇರೂರು ಗ್ರಾ.ಪಂ.

ಪರಿಶೀಲಿಸಿ ಕ್ರಮ
ಒತ್ತುವರಿಯ ಬಗ್ಗೆ ದೂರು ಬಂದಿದ್ದು ಈ ಕುರಿತು ನೋಟಿಸ್‌ ಜಾರಿಗೊಳಿಸಿದ್ದೇವೆ. ವಿಚಾರಣೆ ಹಂತದಲ್ಲಿ ಇದೆ. ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು.
– ಬಸಪ್ಪ ಪೂಜಾರ್‌, ಬೈಂದೂರು ತಾ| ತಹಶೀಲ್ದಾರ್‌

ಟಾಪ್ ನ್ಯೂಸ್

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಮೂರು ತಿಂಗಳಲ್ಲಿ ಲೆಕ್ಕಪತ್ರಪರಿಶೋಧನೆ ಮಾಡಿ: ಸುಪ್ರೀಂ

ಮೂರು ತಿಂಗಳಲ್ಲಿ ಲೆಕ್ಕಪತ್ರಪರಿಶೋಧನೆ ಮಾಡಿ: ಸುಪ್ರೀಂ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೃಷಿ ಉತ್ಪನ್ನ ಬೇಡಿಕೆ ಹೆಚ್ಚಿಸಲು ಸಂಶೋಧನೆ ಕೈಗೊಳ್ಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿತ್ರೋಡಿ:ಹೊಳೆ ಸೇರುತ್ತಿರುವ ಮಲೀನ ತ್ಯಾಜ್ಯ,ಮೀನುಗಳ ಮಾರಣ ಹೋಮ  ಸ್ಥಳಕ್ಕೆ ಅಧಿಕಾರಿಗಳ ಭೇಟಿ

ಪಿತ್ರೋಡಿ:ಹೊಳೆ ಸೇರುತ್ತಿರುವ ಮಲೀನ ತ್ಯಾಜ್ಯ,ಮೀನುಗಳ ಮಾರಣ ಹೋಮ ಸ್ಥಳಕ್ಕೆ ಅಧಿಕಾರಿಗಳ ಭೇಟಿ

hjhjghgfd

ಜೋಕಾಲಿ ಫ್ರೆಂಡ್ಸ್ ತಂಡದಿಂದ ಕಿಡ್ನಿ ವೈಫಲ್ಯದ ಚಿಕಿತ್ಸೆಗೆ 1.5 ಲಕ್ಷ ರೂ ಸಹಾಯಧನ

ghgjkhhgfds

ಪಿತ್ರೋಡಿ : ಹೊಳೆ ಸೇರುತ್ತಿರುವ ಮಲೀನ ತ್ಯಾಜ್ಯ , ದಡ ಸೇರುತ್ತಿದೆ ಸತ್ತ ಮೀನುಗಳು

Untitled-1

ಮಕ್ಕಳಿಗೆ ಅಕ್ಕನ ಅಕ್ಕರೆಯ ಮನೆ ಪಾಠ!

Untitled-1

ಒಂದೇ ಸೂರಿನಡಿ ಜುವೆಲರಿ ಸೇವೆ: ರಾಜ್ಯದಲ್ಲಿ ಜುವೆಲರಿ ಪಾರ್ಕ್‌ ನಿರ್ಮಾಣಕ್ಕೆ ಚಿಂತನೆ

MUST WATCH

udayavani youtube

ಈ ಹೋಟೆಲ್‌ನಲ್ಲಿ ಸೀರೆಗಿಲ್ಲ ಅವಕಾಶ!

udayavani youtube

22 ಕಿ.ಮೀ ದೂರ ಬಿಟ್ಟು ಬಂದರೂ ಲಾರಿ ಹತ್ತಿ ಮತ್ತೆ ಅದೇ ಜಾಗಕ್ಕೆ ಬಂದ ಕೋತಿ

udayavani youtube

ಉಗ್ರ ಎಂದು ಕಾಶ್ಮೀರ ದೇವಾಲಯದಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಗೆ ಗುಂಡಿಕ್ಕಿ ಹತ್ಯೆ

udayavani youtube

ಪಿತ್ರೋಡಿ ಹೊಳೆಗೆ ಸೇರುತ್ತಿವೆ ಮಲಿನ ತ್ಯಾಜ್ಯಗಳು, ದಡ ಸೇರುತ್ತಿವೆ ಸತ್ತ ಮೀನುಗಳು

udayavani youtube

ನಟನ ಯಶಸ್ಸು ಎಲ್ಲಿದೆಯಂದ್ರೆ..

ಹೊಸ ಸೇರ್ಪಡೆ

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಗ್ರಾಮ ಸಹಾಯಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ: ಡಿ.ಕೆ.ಶಿವಕುಮಾರ್‌

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್‌ ಮಾಜಿ ಸಿಎಂ ಕ್ಯಾಪ್ಟನ್‌ ಗುಡುಗು

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಭೋಗ್ಯದ ಜಾಗ ಅನ್ಯ ಉದ್ದೇಶಗಳಿಗೆ ಬಳಸಿದರೆ ಕ್ರಮ: ಸಚಿವ ಅಶೋಕ್‌

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

ಹತ್ತು ವರ್ಷದಲ್ಲಿ 2.33 ಲಕ್ಷ ಮನೆ ಪೂರ್ಣ: ಸಚಿವ ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.