ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಇಳಿಮುಖ; ವಿದ್ಯಾರ್ಥಿಗಳಲ್ಲಿ ಕಡಿಮೆಯಾಗಿಲ್ಲ ಆತಂಕ

Team Udayavani, Feb 1, 2022, 5:21 PM IST

ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಇಳಿಮುಖ; ವಿದ್ಯಾರ್ಥಿಗಳಲ್ಲಿ ಕಡಿಮೆಯಾಗಿಲ್ಲ ಆತಂಕ

ಸಾಂದರ್ಭಿಕ ಚಿತ್ರ

ಉಡುಪಿ: ಜಿಲ್ಲೆಯಲ್ಲಿ ಜನವರಿ ತಿಂಗಳ ಮಧ್ಯದಲ್ಲಿ ಹಠಾತ್‌ ಏರಿಕೆ ಕಂಡಿದ್ದ ಕೊರೊನಾ ಸೋಂಕು ಈಗ ಇಳಿಮುಖವಾಗಿದೆ.

ಚಳಿ, ಜ್ವರ, ಶೀತ, ಕೆಮ್ಮು ಲಕ್ಷಣಗಳು ಸಾಮಾನ್ಯವಾಗಿದೆ. ಪಾಸಿಟಿವ್‌ ಬಂದವರೂ ಆಯಾ ರೋಗ ಲಕ್ಷಣದ ಔಷಧೋಪಚಾರಗಳಿಂದ ಗುಣಮುಖರಾಗುತ್ತಿದ್ದಾರೆ.

ಚಳಿಯಿಂದ ಜಿಲ್ಲೆಯಲ್ಲಿ ವೈರಲ್‌ ಜ್ವರ ಹೆಚ್ಚಾಗಿತ್ತು. ಚಳಿ ಕಡಿಮೆಯಾಗುತ್ತಿದ್ದಂತೆ ವೈರಲ್‌ ಜ್ವರವೂ ಕಡಿಮೆಯಾಗುತ್ತಿದೆ. ಆದರೆ ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮು ಇದೆ.

ಜಿಲ್ಲೆಯಲ್ಲಿ ಜ. 6ರಂದು 92 ಪಾಸಿಟಿವ್‌ ದಾಖಲಾಗಿತ್ತು. ಬಳಿಕ ದಿನಂಪ್ರತಿ ನೂರಕ್ಕಿಂತ ಹೆಚ್ಚು ಪಾಸಿಟಿವ್‌ ಪ್ರಕರಣಗಳು ದಾಖಲಾಗುತ್ತಿವೆ. ಜ.7ರಂದು 148, ಜ.8ರಂದು 186, ಜ.9ರಂದು 340 ಪ್ರಕರಣಗಳು ದಾಖಲಾಗಿದ್ದವು.

ಜ. 24ರಂದು 677 ಪ್ರಕರಣ, ಜ. 25ರಂದು 1202, ಜ. 26ರಂದು 1392, ಜ. 27ರಂದು 948, ಜ. 28ರಂದು 818, ಜ. 29ರಂದು 579, ಜ. 30ರಂದು 441 ಪ್ರಕರಣ ದಾಖಲಾಗಿತ್ತು. ಪಾಸಿಟಿವ್‌ ಪ್ರಕರಣ ಹೆಚ್ಚಾಗಿದ್ದರೂ ಸಾವಿನ ಪ್ರಮಾಣ ಇಳಿಮುಖವಾಗಿದೆ. ಜ. 1ರಿಂದ ಇದುವರೆಗೆ 17 ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಗೆ ಹೋಲಿಸಿದರೆ ಉಡುಪಿ ನಗರದಲ್ಲಿ ಸೋಂಕು ಪ್ರಮಾಣ ಅಧಿಕವಾಗಿದೆ.

ಶಾಲೆ, ತರಗತಿ ಬಂದ್‌
ಒಂದೇ ಶಾಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳಲ್ಲಿ ಅಥವಾ ಶಿಕ್ಷಕರಲ್ಲಿ ಕೊರೊನಾ ಕಾಣಿಸಿಕೊಂಡಾಗ ಆ ಶಾಲೆಯನ್ನೇ ಬಂದ್‌ ಮಾಡಲಾಗುತ್ತದೆ. ಕೆಲವೇ ಮಕ್ಕಳಲ್ಲಿ ಮಾತ್ರ ಕೊರೊನಾ ಕಾಣಿಸಿಕೊಂಡಿದ್ದ ಪ್ರಕರಣಗಳಲ್ಲಿ ಆಯಾ ತರಗತಿಗಳನ್ನು ಬಂದ್‌ ಮಾಡಲಾಗುತ್ತದೆ. ಕೊರೊನಾ ಕಾರಣಕ್ಕಾಗಿ ಶಾಲೆ ಅಥವಾ ತರಗತಿಯನ್ನು ಐದು ದಿನ ಬಂದ್‌ ಮಾಡಿ, ಸರಕಾರದ ನಿಯಮಾನುಸಾರ ಸ್ಯಾನಿಟೈಜೇಶನ್‌ ಮಾಡಿದ ಅನಂತರವೇ ಶೈಕ್ಷಣಿಕ ಚಟುವಟಿಕೆ ಪುನರ್‌ ಆರಂಭವಾಗುತ್ತದೆ. ಕಾರ್ಕಳ ತಾಲೂಕಿನಲ್ಲಿ 18 ತರಗತಿ ಹಾಗೂ ಎರಡು ಶಾಲೆ, ಬ್ರಹ್ಮಾವರದಲ್ಲಿ 55 ತರಗತಿ, ಕುಂದಾಪುರದಲ್ಲಿ 12 ತರಗತಿ, ಬೈಂದೂರಿನಲ್ಲಿ 28 ತರಗತಿ ಹಾಗೂ 10 ಶಾಲೆ, ಉಡುಪಿಯಲ್ಲಿ 50 ತರಗತಿಗಳನ್ನು ಕೊರೊನಾ ಕಾರಣಕ್ಕಾಗಿ ಬಂದ್‌ ಮಾಡಲಾಗಿತ್ತು. ಕೊರೊನಾ ದೃಢಪಟ್ಟ ಶಿಕ್ಷಕರು ನಿರ್ದಿಷ್ಟ ದಿನದ ವರೆಗೂ ರಜೆ ಪಡೆದು, ನಿರ್ದಿಷ್ಟ ದಿನಗಳ ಕ್ವಾರಂಟೈನ್‌ ಆನಂತರ ಕೊರೊನಾ ಪರೀಕ್ಷೆ ಮಾಡಿಸಿ (ಆರ್‌ಟಿಪಿಸಿಆರ್‌), ನೆಗೆಟಿವ್‌ ವರದಿಯೊಂದಿಗೆ ಶಾಲೆಗೆ ಬರಬೇಕು.

ಇದನ್ನೂ ಓದಿ:ರಾಯಚೂರು: ಆರು ವರ್ಷದ ಮಗುವಿನೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ತಾಯಿ

707 ಮಕ್ಕಳಲ್ಲಿ ಕೊರೊನಾ ದೃಢ
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ ಜಿಲ್ಲೆಯ 94 ಶಾಲೆಯ 707 ಮಕ್ಕಳಲ್ಲಿ ಕೊರೊನಾ ದೃಢಪಟ್ಟಿದೆ. ಜತೆಗೆ 14 ಶಿಕ್ಷಕರಿಗೆ ಕೊರೊನಾ ಬಾಧಿಸಿದೆ. ಕಾರ್ಕಳದ 15 ಶಾಲೆಯ 110 ಮಕ್ಕಳು, 2 ಶಿಕ್ಷಕರು, ಬ್ರಹ್ಮಾವರದ 20 ಶಾಲೆಯ 135 ಮಕ್ಕಳು, 5 ಶಿಕ್ಷಕರು, ಕುಂದಾಪುರದ 18 ಶಾಲೆಯ 144 ಮಕ್ಕಳು, ಓರ್ವ ಶಿಕ್ಷಕ, ಬೈಂದೂರಿನ 19 ಶಾಲೆಯ 188 ಮಕ್ಕಳು, 3 ಶಿಕ್ಷಕರು ಹಾಗೂ ಉಡುಪಿ 22 ಶಾಲೆಯ 130 ಮಕ್ಕಳು ಹಾಗೂ 3 ಶಿಕ್ಷಕರಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ಕಡಿಮೆ ಹಾಜರಾತಿ
ಜಿಲ್ಲೆಯಲ್ಲಿ ಭೌತಿಕ ತರಗತಿ ಆರಂಭವಾದ ಅನಂತರ ಎಲ್ಲ ತರಗತಿಗಳಲ್ಲೂ ವಿದ್ಯಾರ್ಥಿಗಳ ಸರಾಸರಿ ಹಾಜರಾತಿ ಶೇ.90ರಿಂದ ಶೇ.95ರಷ್ಟಿದೆ. ಆದರೆ ಕೊರೊನಾ ದೃಢಪಟ್ಟು ಶಾಲೆ ಅಥವಾ ತರಗತಿ ಬಂದ್‌ ಮಾಡಿದ ಆನಂತರ ಪುನಃ ಶಾಲೆಗೆ ಬರಲು ವಿದ್ಯಾರ್ಥಿಗಳು ಹಿಂದೇಟು ಹಾಕುವ ಜತೆಗೆ ಪಾಲಕ, ಹೆತ್ತ ವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಶಾಲೆಗಳಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮ ತೆಗೆದುಕೊಂಡಿದ್ದರೂ ಕೊರೊನಾದಿಂದ ಮುಚ್ಚಿ ಪುನಃ ಆರಂಭವಾಗುವಾಗ ಶೇ.50ರಿಂದ ಶೇ.60ರಷ್ಟು ಮಕ್ಕಳು ಮಾತ್ರ ತರಗತಿಗೆ ಬರುತ್ತಾರೆ. ವಾರ ಕಳೆದ ಮೇಲೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ. ಈ ವೇಳೆ ಖಾಸಗಿ ಶಾಲೆಗಳ ಮಕ್ಕಳು ಆನ್‌ಲೈನ್‌ ಶಿಕ್ಷಣದ ಮೊರೆ ಹೋದರೆ, ಸರಕಾರಿ ಶಾಲಾ ಮಕ್ಕಳು ದೂರದರ್ಶನದ ಮೂಲಕ ಪ್ರಸಾರವಾಗುವ ಪಾಠ ಆಲಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.

ಸುರಕ್ಷತೆಗೆ ಒತ್ತು
ಜಿಲ್ಲೆಯಲ್ಲಿ ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಆಯಾ ಶಾಲೆಗಳಲ್ಲೆ ಕೊರೊನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ರೀತಿಯ ಸೂಚನೆ ನೀಡಿದ್ದೇವೆ. ನಿತ್ಯವೂ ಶಾಲೆಗಳಿಂದ ಅಂಕಿಅಂಶ ಪಡೆಯುತ್ತಿದ್ದೇವೆ. ಕೊರೊನಾ ಸೋಂಕು ದೃಢಪಟ್ಟ ಸಂದರ್ಭದಲ್ಲಿ ಶಾಲೆಯ ಪರಿಸ್ಥಿತಿ ಅವಲೋಕಿಸಿ ತರಗತಿ ಅಥವಾ ಶಾಲೆ ಬಂದ್‌ ಮಾಡುತ್ತಿದ್ದೇವೆ. -ಗೋವಿಂದ ಮಡಿವಾಳ, ಡಿಡಿಪಿಐ(ಹೆಚ್ಚುವರಿ ಕಾರ್ಯಭಾರ) ಡಯಟ್‌ ಪ್ರಾಂಶುಪಾಲ, ಉಡುಪಿ ಜಿಲ್ಲೆ

ಸೋಂಕು ಇಳಿಮುಖ
ವೈರಲ್‌ ಜ್ವರದಿಂದ ಪಾಸಿಟಿವಿಟಿ ಪ್ರಮಾಣ ಹೆಚ್ಚಳವಾಗುತ್ತಿತ್ತು. ಈ ನಡುವೆ ಪರೀಕ್ಷೆಯನ್ನೂ ಹೆಚ್ಚಿಸಲಾಗಿತ್ತು. ಹೋಂ ಐಸೊಲೇಶನ್‌, ಕೋವಿಡ್‌ ಕೇರ್‌ ಸೆಂಟರ್‌ಗಳು ಸಕ್ರಿಯವಾಗಿವೆ. ಗಂಭೀರ ಪ್ರಕರಣಗಳು ಕಂಡುಬಂದಿಲ್ಲ. ಪಾಸಿಟಿವಿಟಿ ಪ್ರಮಾಣ ಇಳಿಮುಖವಾಗುತ್ತಿದೆ.
-ಡಾ| ನಾಗಭೂಷಣ್‌ ಉಡುಪ,
ಜಿಲ್ಲಾ ಆರೋಗ್ಯಾಧಿಕಾರಿಗಳು, ಉಡುಪಿ

ಟಾಪ್ ನ್ಯೂಸ್

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

The Election Commission banned the BJP candidate from campaigning for 24 hours

W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ

17

Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Kottigehara ನಿಯಂತ್ರಣ ತಪ್ಪಿ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ

8-doddanagudde

ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಗೆಲುವು

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

Shirva ಮರಳು ಅಕ್ರಮ ಸಾಗಾಟ: ಟಿಪ್ಪರ್‌ ವಶ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

Swindon Borough ಕೌನ್ಸಿಲ್‍ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ

The Election Commission banned the BJP candidate from campaigning for 24 hours

W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ

17

Mollywood: 5 ತಿಂಗಳಿನಲ್ಲಿ 1000 ಕೋಟಿಗೂ ಅಧಿಕ ಗಳಿಕೆ: ಈ 3 ಸಿನಿಮಾಗಳ ಕೊಡುಗೆಯೇ ಹೆಚ್ಚು

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.