
ದೊಡ್ಡಣಗುಡ್ಡೆ ‘ಭವಾನಿ ರೆಸಿಡೆನ್ಸಿ’ ವಸತಿ ಸಮುಚ್ಚಯ ಮಾ. 31ರಂದು ಉದ್ಘಾಟನೆ
Team Udayavani, Mar 30, 2023, 7:56 PM IST

ಉಡುಪಿ: ಪರ್ಕಳ ಭವಾನಿ ಬಿಲ್ಡರ್ ವತಿಯಿಂದ ಎಂಜಿಎಂನಿಂದ ದೊಡ್ಡಣಗುಡ್ಡೆಗೆ ಸಾಗುವ ಮುಖ್ಯರಸ್ತೆಯ ಕಾನೂನು ಕಾಲೇಜು ಬಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡ 1 ಬಿಎಚ್‌ಕೆ ಮತ್ತು 2 ಬಿಎಚ್‌ಕೆ ಫ್ಲ್ಯಾಟ್‌ಗಳಿರುವ “ಭವಾನಿ ರೆಸಿಡೆನ್ಸಿ’ ವಸತಿ ಸಮುಚ್ಚಯದ ಉದ್ಘಾಟನೆ ಕಾರ್ಯಕ್ರಮ ಮಾ. 31ರ ಪೂರ್ವಾಹ್ನ 9.15ಕ್ಕೆ ನಡೆಯಲಿದೆ.
ಕಟಪಾಡಿ ಶ್ರೀ ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಮತ್ತು ಕಕ್ಕುಂಜೆ ಶ್ರೀ ಸಿದ್ಧಿವಿನಾಯಕ ದೇಗುಲದ ಟ್ರಸ್ಟಿ, ನಾಗಪಾತ್ರಿ ಕಕ್ಕುಂಜೆ ನಾಗಾನಂದ ವಾಸುದೇವ ಆಚಾರ್ಯ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಮಾಂಡವಿ ಬಿಲ್ಡರ್ನ ಅಧ್ಯಕ್ಷ ಡಾ| ಜೆರ್ರಿ ವಿನ್ಸೆಂಟ್ ಡಯಾಸ್ ಕಚೇರಿ ಉದ್ಘಾಟಿಸುವರು.
ಸಮುಚ್ಚಯವು ನಿರಂತರ ನೀರು ಸರಬರಾಜು, ಎಸ್‌ಟಿಪಿ ಸೌಲಭ್ಯ, ವಿಶಾಲವಾದ ಪ್ರವೇಶದ್ವಾರ, ಸೆಕ್ಯುರಿಟಿ ಗಾರ್ಡ್ಸ್‌ನೊಂದಿಗೆ ಸಿಸಿ ಟಿವಿ ಮೊನಿಟರಿಂಗ್ ಸೌಲಭ್ಯಗಳನ್ನು ಹೊಂದಿದ್ದು ಜನವಸತಿ ಪ್ರದೇಶದಲ್ಲಿ ವಾಸ್ತವ್ಯಕ್ಕೆ ಯೋಗ್ಯವಾಗಿದೆ. ಎಲ್ಲ ಅಪಾರ್ಟ್‌ಮೆಂಟ್‌ಗಳಿಗೂ ರೆಟಿಕ್ಯುಲೇಟೆಡ್ ಗ್ಯಾಸ್ ಕನೆಕ್ಷನ್, 8 ಮಂದಿ ಸಾಮರ್ಥ್ಯದ 1 ಆಟೋಮ್ಯಾಟಿಕ್ ಇಲೆವೇಟರ್, ಪಂಪ್ಸ್, ಸಾಮಾನ್ಯ ಲೈಟ್ಸ್‌ಗೆ ಜನರೇಟರ್ ಬ್ಯಾಕ್‌ಅಪ್ ಒದಗಿಸಲಾಗಿದೆ. ರೇರಾ ಸಂಸ್ಥೆಯಿಂದ ಪ್ರಮಾಣಿಕರಿಸಲ್ಪಟ್ಟ ಸಂಸ್ಥೆಯಿಂದ ನಿರ್ಮಿಸಲ್ಪಟ್ಟ ಸಮುಚ್ಚಯದಲ್ಲಿರುವ ಫ್ಲ್ಯಾಟ್‌ಗಳು ಗ್ರಾಹಕರ ಕೈಗೆಟಕುವ ದರದಲ್ಲಿ ದೊರೆಯಲಿವೆ ಎಂದು ಸಂಸ್ಥೆಯ ಪ್ರವರ್ತಕರಾದ ನಾರಾಯಣ ಆಚಾರ್, ಪುನೀತ್ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಬೇಡಿಕೆಯಷ್ಟು ಉತ್ಪಾದನೆಯಾಗದ ಶೇಂಗಾ: ಹೊರ ಜಿಲ್ಲೆಗಳ ಶೇಂಗಾ ಅವಲಂಬಿಸಿರುವ ಸಂಸ್ಕರಣ ಘಟಕಗಳು

ಉಳಿದ ಕಾಮಗಾರಿಗೆ ಮಳೆಗಾಲ ಅಡ್ಡಿ ಸಾಧ್ಯತೆ: ಜೆಜೆಎಂ ಕಾಮಗಾರಿ ಶೇ.77ರಷ್ಟು ಪೂರ್ಣ

ಕುಂಟುತ್ತಿರುವ ವಾರಾಹಿ ಯೋಜನೆ: ಉಡುಪಿಗೆ ಕುಡಿಯುವ ನೀರು

Udupi District: ಐದೇ ತಿಂಗಳಲ್ಲಿ 769 ಅಗ್ನಿ ಅವಘಡ