
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ: 76,349 ರೈತರ ಇ-ಕೆವೈಸಿ ನೋಂದಣಿ ಬಾಕಿ
Team Udayavani, Jun 1, 2023, 8:15 AM IST

ಉಡುಪಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಪಿ.ಎಂ. ಕಿಸಾನ್ ಸಮ್ಮಾನ್ ಯೋಜನೆಯಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 76,349 ರೈತರು ಇನ್ನೂ ಇ-ಕೆವೈಸಿ ನೋಂದಣಿ ಮಾಡಿಸಿಕೊಂಡಿಲ್ಲ.
ಉಡುಪಿ ಜಿಲ್ಲೆಯಲ್ಲಿ 37,612 ಹಾಗೂ ದ.ಕ.ದಲ್ಲಿ 38,737 ಮಂದಿ ರೈತರು ಇ-ಕೆವೈಸಿ ಮಾಡಿಸದಿರುವುದು ಕಂಡು ಬಂದಿದೆ.
ನೋಂದಣಿ ಕಡ್ಡಾಯ
ನೋಂದಣಿ ಮಾಡಿಸಿ ಕೊಂಡಿರುವ ರೈತರು ವಾರ್ಷಿಕ 10 ಸಾವಿರ ರೂ. ಪಡೆಯುತ್ತಿದ್ದು, ಇನ್ನು ಅದಕ್ಕೆ ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಮಾಡಿಸಿಕೊಳ್ಳದವರಿಗೆ ಮುಂದೆ ಸೌಲಭ್ಯ ದೊರೆಯುವುದಿಲ್ಲ.
ಎಲ್ಲಿ ಮಾಡಿಸಬಹುದು?
ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಸಾಮಾನ್ಯ ಗ್ರಾಹಕ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥವಾ ಒಟಿಪಿ ಮೂಲಕ ಇ-ಕೆವೈಸಿ ಮಾಡಿಸಬಹುದು. ಅಥವಾ ಫಲಾನುಭವಿಯೇ ಸ್ವತಃ ಪಿಎಂ ಕಿಸಾನ್ ಪೋರ್ಟಲ್ ಮೂಲಕ ಮೊಬೈಲ್‌ಗೆ ಒಟಿಪಿ ಪಡೆದು ಮಾಡಬಹುದು. ಹತ್ತಿರದ ಅಂಚೆ ಕಚೇರಿಯಲ್ಲಿ ಪೋಸ್ಟಲ್ ಅಕೌಂಟ್ ತೆರೆಯುವ ಮೂಲಕವೂ, ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಅನ್ನು ಪ್ಲೇ ಸ್ಟೋರ್‌ನಲ್ಲಿ ಡೌನ್ ಲೋಡ್ ಮಾಡಿಕೊಂಡು ಆ್ಯಪ್ ಮೂಲಕ ಫಲಾನುಭವಿ ತನ್ನ ಮುಖ ಚಹರೆಯನ್ನು ತೋರಿಸುವ ಮೂಲಕವೂ ಮಾಡಿಕೊಳ್ಳಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
- ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chaturmasya: ನಿತ್ಯ ಜೀವನದಲ್ಲಿ ರಾಮನಾಮ ಸ್ಮರಣೆ ಮಾಡಿದರೆ ಜೀವನ ಪಾವನ: ಪೇಜಾವರ ಶ್ರೀ

Manipal ಸಾರ್ವಜನಿಕ ಪ್ರದೇಶದಲ್ಲಿ ಗಾಂಜಾ ಸೇವನೆ: ಇಬ್ಬರು ವಶಕ್ಕೆ

Karnataka Bandh; ಕರಾವಳಿಯಲ್ಲಿ ಸಂಘಟನೆಗಳಿಂದ ನೈತಿಕ ಬೆಂಬಲ; ಬಸ್ ಸಂಚಾರ ಎಂದಿನಂತೆ

Karate Association: ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್: ಸ್ಪರ್ಧಾಕೂಟ

Udupi ಕೈಗಾರಿಕೆಗಳಿಗೆ ಲೋಡ್‌ಶೆಡ್ಡಿಂಗ್ ಭೀತಿ
MUST WATCH
ಹೊಸ ಸೇರ್ಪಡೆ

Theft: ಶೂ ಬಾಕ್‌ನಲ್ಲಿದ್ದ ಮನೆ ಕೀ ಕದ್ದು ಆಭರಣ ದೋಚಿದ್ದ ಮಹಿಳೆ ಸೆರೆ

Cop In Trouble: ರೀಲ್ಸ್ ಮಾಡಲು ಡ್ಯೂಟಿ ವಾಹನ ನೀಡಿ ತೊಂದರೆಗೆ ಸಿಲುಕಿದ ಪೊಲೀಸ್ ಅಧಿಕಾರಿ

Crime: ವ್ಯಕ್ತಿ ಹತ್ಯೆಗೈದಿದ್ದ ನಾಲ್ವರು ಆರೋಪಿಗಳ ಬಂಧನ

Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ

Crime: ಹಣಕಾಸಿನ ವಿಚಾರಕ್ಕೆ ಸಹೋದ್ಯೋಗಿ ಕೊಲೆ ಮಾಡಿದ್ದ ಆರೋಪಿ ಬಂಧನ