ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗ ಭೀತಿ

ಅರೆಬರೆ ಒಳಚರಂಡಿ, ರಸ್ತೆಗೆ ಹಾನಿ

Team Udayavani, Sep 23, 2020, 4:29 AM IST

Fear of contagious disease with sewage

ನಗರದಿಂದ ಮುಖ್ಯ ಪೇಟೆವರೆಗೆ ಅಲ್ಲಲ್ಲಿ ಬಿದ್ದ ಹೊಂಡಗಳು.

ಕಾರ್ಕಳ: ಭಾರೀ ಮಳೆಯಿಂದ ನಗರದ ರಸ್ತೆಗಳು ಹಾನಿಗೀಡಾಗಿದ್ದು ಸಾರ್ವಜನಿಕರು ನಿತ್ಯ ಸಂಕಟ ಅನುಭವಿಸುವಂತಾಗಿದೆ. ನಗರದ ವೆಂಕಟ್ರಮಣ ದೇವಸ್ಥಾನದಿಂದ ಬಂಡಿ ಮಠದವರೆಗಿನ ರಸ್ತೆ ತನಕ ಅಲ್ಲಲ್ಲಿ ಹೊಂಡ ನಿರ್ಮಾಣ ವಾಗಿದೆ. ಅವಘಡ ತಪ್ಪಿಸಲು ಸವಾರರಿಗೆ ಹೊಂಡಗಳ ಅರಿವಾಗಲೆಂದು ಸ್ಥಳೀಯರೇ ತರಕಾರಿ ಟ್ರೇ, ಗಿಡಗಳನ್ನು ಅಡ್ಡವಿರಿಸಿ, ಅವಘಡ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ. ಕೆಲವೆಡೆ ಬ್ಯಾರಿಕೇಡ್‌ ಇರಿಸಿ ಅಪಾಯ ತಪ್ಪಿಸುವ ಪ್ರಯತ್ನವೂ ನಡೆದಿದೆ.

ವೆಂಕಟರಮಣ ದೇವಸ್ಥಾನದಿಂದ ಮೂರು ಮಾರ್ಗದವರೆಗೆ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಇಲ್ಲಿ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣಗೊಂಡಿವೆ. ವಾಹನ ಸವಾರರು, ಪಾದಚಾರಿಗಳು ಹಿಡಿಶಾಪ ಹಾಕಿಕೊಂಡು ಇಲ್ಲಿ ಓಡಾಡುತ್ತಿದ್ದಾರೆ. ಒಳಚರಂಡಿಯ ಅರೆಬರೆ ಕಾಮಗಾರಿಯಿಂದ ರಸ್ತೆಗಳಿಗೆೆ ಹಾನಿಯಾಗಿ ಸಮಸ್ಯೆಯಾಗಿದೆ.

ಕೊಳಚೆ ನೀರಿನ ಸಮಸ್ಯೆ
ಮ್ಯಾನ್‌ಹೋಲ್‌ಗ‌ಳಿಂದ ಹೊರಬಂದ ಕೊಳಚೆ ನೀರು ರಸ್ತೆಯ ಗುಂಡಿಗಳಿಗೆ ಸೇರುತ್ತಿದೆ. ದ್ವಿಚಕ್ರ ಸವಾರರು, ಹಾಗೂ ಪಾದಚಾರಿಗಳಿಗೆ ಕೊಳಚೆ ನೀರಿನ ಎರಚಾಟವಾಗುತ್ತಿದೆ. ಚರಂಡಿ ಇಲ್ಲದಿರುವುದರಿಂದ ನೀರು ರಸ್ತೆಯಲ್ಲೆ ಹರಿಯುತ್ತಿದೆ.

ಸಾಂಕ್ರಾಮಿಕ ರೋಗದ ಭೀತಿ
ಕೊಳಚೆ ನೀರು ಮಳೆ ನೀರಿಗೆ ಸೇರಿ ಪರಿಸರ ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಬಾಧೆಗೂ ಕಾರಣವಾಗುತ್ತಿದೆ. ಸ್ವತ್ಛತೆಗೆ ಹಿನ್ನಡೆಯಾಗಿದೆ. ಒಂದೆಡೆ ಇಕ್ಕಟ್ಟಾದ ರಸ್ತೆ, ಹೆಚ್ಚುತ್ತಿರುವ ವಾಹನ ಸಂಖ್ಯೆ ಈ ಮಧ್ಯೆ ರಸ್ತೆಗಳು ಈ ಸ್ಥಿತಿಗೆ ತಲುಪಿದ್ದು,, ಕೊಳಚೆ ನೀರಿನಿಂದ ಪರಿಸರ ಕಲುಷಿತಗೊಂಡಿದೆ. ಪೇಟೆಗೆ ಬರುವವರಿಗೆ ರೋಗ ಭೀತಿಯೂ ಕಾರಣವಾಗುತ್ತಿದೆ.

ಪರಿಹಾರಕ್ಕೆ ಮುಂದಾಗಿ!
ಪುರಸಭೆ ವ್ಯಾಪ್ತಿಯ ರಸ್ತೆ, ಚರಂಡಿ ಸಮಸ್ಯೆ ಇತ್ಯಾದಿಗಳ ಕುರಿತು ಇಲ್ಲಿಯ ಯಾವ ಆಡಳಿತಗಳು, ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ
ರಸ್ತೆ ಅವ್ಯವಸ್ಥೆಯಿಂದ ರೋಸಿ ಕೆಲವರು ಮೊಬೆ„ಲ್‌ಗ‌ಳಲ್ಲಿ ವೀಡಿಯೋ ಚಿತ್ರೀಕರಣ ನಡೆಸಿ, ಇಲ್ಲಿನ ರಸ್ತೆಯ ಅವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ರಸ್ತೆಯ ಕುರಿತಾಗಿ ವಿಡಂಬಣೆಗಳ ಬರಹದ ಮೂಲಕವೂ ಜನಪ್ರತಿನಿಧಿಗಳ, ಆಡಳಿತ ವ್ಯವಸ್ಥೆಗೆ ಮುಜುಗರ ತರುವ ಪ್ರಯತ್ನ ನಡೆಸಿದ್ದಾರೆ. ಇಷ್ಟಿದ್ದರೂ ಇತ್ತ ಕಡೆ ಗಮನಹರಿಸದೆ ಇರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಶೀಘ್ರ ಹೊಂಡ ಮುಚ್ಚುಗಡೆ
ಮೊನ್ನೆ ಸುರಿದ ಭಾರೀ ಮಳೆಯಿಂದ ನಗರದಲ್ಲಿ ಸಮಸ್ಯೆ ಉಂಟಾಗಿದೆ. ಶೀಘ್ರದಲ್ಲೇ ಯುಜಿಡಿ ಕೆಲಸ ಆರಂಭವಾಗುತ್ತದೆ. ಈಗ ರಸ್ತೆಯಲ್ಲಿ ಆಗಿರುವ ದೊಡ್ಡ ಹೊಂಡಗಳನ್ನು ಮುಚ್ಚುವ ಕೆಲಸ ನಡೆಸುತ್ತೇವೆ.
-ರೇಖಾ ಶೆಟ್ಟಿ , ಮುಖ್ಯಾಧಿಕಾರಿ, ಪುರಸಭೆ

ಟಾಪ್ ನ್ಯೂಸ್

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್‌: ಮತ್ತೆ ನಕ್ಸಲರ ಸದ್ದು?

Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್‌: ಮತ್ತೆ ನಕ್ಸಲರ ಸದ್ದು?

Hebri; ಸ್ಕೂಟಿಗೆ ಕಾರು ಢಿಕ್ಕಿ,ಸವಾರ ಸ್ಥಳದಲ್ಲೇ ಸಾವು

Hebri; ಸ್ಕೂಟಿಗೆ ಕಾರು ಢಿಕ್ಕಿ,ಸವಾರ ಸ್ಥಳದಲ್ಲೇ ಸಾವು

9-temple

Temple History: ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನ; ಹಿನ್ನೆಲೆ, ಇತಿಹಾಸ,ವಿಶೇಷಗಳು

5-kaup

Kaup: ಅಯೋಧ್ಯೆಯಂತೆ ಮಾರಿಗುಡಿಯ ಜೀರ್ಣೋದ್ಧಾರವೂ ಸಾಂಗವಾಗಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.