ಮೀನು ಅಲಭ್ಯ: ಗಗನಕ್ಕೇರಿದ ಒಣಮೀನಿನ ಬೆಲೆ

Team Udayavani, Jun 19, 2020, 5:45 AM IST

ಮೀನು ಅಲಭ್ಯ: ಗಗನಕ್ಕೇರಿದ ಒಣಮೀನಿನ ಬೆಲೆ

ಮಲ್ಪೆ: ಸಾಮಾನ್ಯವಾಗಿ ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧದ ಸಂದರ್ಭದಲ್ಲಿ ಒಣ ಮೀನಿನ ಸಾರು ಪರ್ಯಾಯವಾಗಿ ಹಸಿಮೀನಿನ ಸ್ಥಾನವನ್ನು ತುಂಬುತ್ತದೆ. ಈ ಬಾರಿ ಆರಂಭದಿಂದ ಕಾಡಿದ ಚಂಡಮಾರುತ, ಮೀನಿನ ಕ್ಷಾಮ, ಮಾರ್ಚ್‌ ಬಳಿಕ ಕೊರೊನಾ ಲಾಕ್‌ಡೌನ್‌ನಿಂದಾಗಿ ಸರಿಯಾದ ಮೀನುಗಾರಿಕೆ ಇಲ್ಲದೆ ಮಳೆಗಾಲ ಪೂರ್ವದ 3 ತಿಂಗಳ ವ್ಯವಹಾರ ಆಗದಿರು ವುದು ಒಣಮೀನಿನ ವ್ಯಾಪಾರದ ಮಹಿಳೆ ಯರಿಗೆ ದೊಡ್ಡ ಹೊಡೆತವಾಗಿದೆ. ಪರಿಣಾಮವಾಗಿ ಒಣಮೀನಿನ ದಾಸ್ತಾನಿಲ್ಲದೆ ಲಾಕ್‌ಡೌನ್‌ ಅನಂತರದ ದಿನಗಳಲ್ಲಿ ಮೀನಿನ ಲಭ್ಯತೆ ಇಲ್ಲದೆ ದರ ಮತ್ತಷ್ಟು ಹೆಚ್ಚಳವಾಗಿದೆ.

ಜೂನ್‌ನಿಂದ ಎರಡು ತಿಂಗಳು ಮೀನುಗಾರಿಕೆಗೆ ನಿಷೇಧವಿದೆ.ಯಾಂತ್ರಿಕ ಮೀನುಗಾರಿಕೆ ಚಟುವಟಿಕೆ ನಡೆಯುವುದು ಆ. 10ರ ಬಳಿಕ; ಹಾಗಾಗಿ ಮೀನು ಪ್ರಿಯರು ಮಳೆಗಾಲಕ್ಕೆ ಬೇಕಾಗುವ ಮೀನನ್ನು ಎಪ್ರಿಲ್‌ ಮೇ ತಿಂಗಳಲ್ಲಿ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಆದರೆ ಈ ಬಾರಿ ಲಾಕ್‌ಡೌನ್‌ನಿಂದಾಗಿ ಸುಮಾರು ಒಂದೂವರೆ ತಿಂಗಳು ಮೀನುಗಾರಿಕೆ ಸ್ಥಗಿತಗೊಂಡಿತ್ತು. ಬಳಿಕ ಶೇ. 15ರಷ್ಟು ದೋಣಿಗಳು ಮಾತ್ರ ಮೀನುಗಾರಿಕೆಗೆ ತೆಳಿದ್ದು ತಾಜಾ ಮೀನಿಗೆ ಸಾಕಷ್ಟು ಬೇಡಿಕೆ ಇದ್ದುದರಿಂದ ಒಣಮೀನಿಗೆ ಬೇಕಾಗುವಷ್ಟು ಮೀನು ಲಭ್ಯತೆ ಇರಲಿಲ್ಲ.

ಒಣ ಮೀನಿನ ಬೆಲೆ
ಪ್ರಸ್ತುತ ಮೀನು ಮಾರುಕಟ್ಟೆಯಲ್ಲಿ ಒಣಮೀನು ಬೆಲೆ ಗಗನಕ್ಕೇರಿದ್ದು, ಒಂದು ಕೆ.ಜಿ.ಗೆ 150 ರೂ. ಇದ್ದ ಗೊಲಾಯಿ ಮೀನು ಇದೀಗ ಮಾರುಕಟ್ಟೆಯಲ್ಲಿ 600 ರೂ. ಗೆ ಮಾರಾಟವಾಗುತ್ತಿದೆ. ಅದರಂತೆ ಕೆ.ಜಿ.ಗೆ 300 ರೂ. ಇದ್ದ ಅಡೆಮೀನಿಗೆ 900 ರೂ. ಆಗಿದೆ. ಕೆ.ಜಿ.ಗೆ 50 ರೂ. ಇದ್ದ ಕುರ್ಚಿ, ಪಾಂಬೊಲ್‌ಗೆ 150 ರೂ., 80 ರೂ. ಇದ್ದ ಆರಣೆ ಮೀನು 170ಕ್ಕೆ ಮಾರಾಟ ವಾಗುತ್ತಿದೆ. 100 ರೂ.ಯ ನಂಗ್‌ ಮೀನಿಗೆ 400 ರೂ. ಇದೆ. 4 ರೂ. ಗೆ ಮಾರಾಟವಾಗು ತ್ತಿದ್ದ ಮದ್ಯಮ ಗಾತ್ರ ಒಂದು ಬಂಗುಡೆ ಮೀನಿಗೆ ಈಗ 20ರೂ. ಆಗಿದೆ. ಕಲ್ಲರ್‌ 70ರಿಂದ 400 ರೂ. ಗೆ ಏರಿಕೆಯಾಗಿದೆ.

ಸಮುದ್ರದಲ್ಲಿ ಹಿಡಿದು ತಂದ ಮೀನನ್ನು ನೀರಿನಿಂದ ಸ್ವತ್ಛವಾಗಿ ತೊಳೆದು ಬಳಿಕ ಕೆಲವು ಗಂಟೆಗಳ ಕಾಲ ಉಪ್ಪು ಹಾಕಿ ಇಡಲಾಗುತ್ತದೆ. ಬಳಿಕ ಸಿಹಿನೀರಿನಿಂದ ಸ್ವಚ್ಚಗೊಳಿಸಿ ಬಿಸಿಲಿಗೆ ಹಾಕಿ ಒಣಗಿಸಲಾಗುತ್ತದೆ.

ಹೆಚ್ಚಿನ ಮೀನು ಮೊದಲೇ ಮಾರಾಟ
ಸರಕಾರ ಲಾಕ್‌ಡೌನ್‌ ಮಾಡಿದ್ದರಿಂದ ಮೀನಿನ ಮಾರಾಟಕ್ಕೆ ಸಮಸ್ಯೆಯಾಗುತ್ತದೆ ಎಂದು ದಾಸ್ತಾನು ಇಟ್ಟಿದ್ದ ಎಲ್ಲ ಮೀನನ್ನು ಅದರ ಮೊದಲೇ ಮಾರಾಟ ಮಾಡಿದ್ದೇವೆ. ಲಾಕ್‌ಡೌನ್‌ ಸಡಿಲಿಕೆಯಾದ ಅನಂತರ ಕೆಲವೇ ಬೋಟುಗಳು ತೆರಳಿದ್ದರಿಂದ ಬಂದ ಮೀನಿಗೆ ಒಣಗಿಸಲು ಬೇಕಾದ ಮೀನು ಸಿಗುತ್ತಿರಲಿಲ್ಲ.
-ಜಲಜಾ ಕೋಟ್ಯಾನ್‌,,
ಅಧ್ಯಕ್ಷರು, ಮಹಿಳಾ ಮೀನುಗಾರ ಸಹಕಾರಿ ಸಂಘ

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.