ಕಾರ್ಕಳ: ಪರಶುರಾಮ ಲೋಕಾರ್ಪಣೆ ಸಮಾಪನ,ಜ. 30:ಆಕರ್ಷಕ ಪಂಜಿನ ಮೆರವಣಿಗೆ

ಮೂರು ದಿನಗಳಲ್ಲಿ ಜಿಲ್ಲೆ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಪ್ರತಿಮೆ ವೀಕ್ಷಣೆಗೆ ಆಗಮಿಸಿದ್ದರು.

Team Udayavani, Jan 30, 2023, 12:09 PM IST

ಕಾರ್ಕಳ: ಪರಶುರಾಮ ಲೋಕಾರ್ಪಣೆ ಸಮಾಪನ,ಜ. 30:ಆಕರ್ಷಕ ಪಂಜಿನ ಮೆರವಣಿಗೆ

ಕಾರ್ಕಳ: ತುಳುನಾಡಿನ ಪ್ರತೀಕವಾಗಿ ಕಾರ್ಕಳದ ಬೈಲೂರಿನ ಬೆಟ್ಟದ ಮೇಲೆ ಕೊಡಲಿ ಎತ್ತಿ ಹಿಡಿದು ನಿಂತ ಪರಶುರಾಮನ ಮಹಿಮೆಗೆ ಜನಸಾಗಾರವೇ ಸಾಕ್ಷಿಯಾಯಿತು. ಮೂರು ದಿನಗಳ ಲೋಕಾರ್ಪಣೆ ಸಮಾರಂಭ ರವಿವಾರ ರಾತ್ರಿ ಸಮಾಪನಗೊಂಡಿತು.

ಕರಾವಳಿಯ ವಿವಿಧ ಜಿಲ್ಲೆಗಳಿಂದ ಕುತೂಹಲಿಗರು ಬೆಟ್ಟದ ಕಡೆಗೆ ಪ್ರವಾಸಕ್ಕಾಗಿ ಆಗಮಿಸುತ್ತಿದ್ದಾರೆ. ಹಗಲು-ರಾತ್ರಿ ಎರಡೂ ಹೊತ್ತು ಜನ ಸಾಗರದಂತೆ ಬೆಟ್ಟದ ಕಡೆಗೆ ತೆರಳುತ್ತಿದ್ದರು. ದಿನದಿಂದ ದಿನಕ್ಕೆ ಇಲ್ಲಿಗೆ ಆಗಮಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕಳೆದ ಮೂರು ದಿನಗಳಲ್ಲಿ ಬೈಲೂರಿನ ಕಾಲೇಜು ಮೈದಾನದ ಪ್ರಧಾನ ವೇದಿಕೆಯಲ್ಲಿ ಹಾಗೂ ಥೀಂ ಪಾರ್ಕ್‌ನ ಉಪ ವೇದಿಕೆಯಲ್ಲಿ ನಾಡಿನ ಪ್ರಖ್ಯಾತ ಸಾಂಸ್ಕೃತಿಕ ತಂಡಗಳಿಂದ ವಿವಿಧ ಮನೋರಂಜನೆ ಕಾರ್ಯಕ್ರಮ ನಡೆದವು. ಶನಿವಾರ ಹಾಗೂ ರವಿವಾರ ರಜಾ ದಿನಗಳಾಗಿದ್ದರಿಂದ ಎರಡೂ ಹೊತ್ತಿನಲ್ಲಿ ಭಾರೀ ಜನಸಂದಣಿ ಇತ್ತು. ರಾತ್ರಿ ಸಾಂಸ್ಕೃತಿಕ, ವಿದ್ಯುತ್‌ ದೀಪಗಳ ಅಲಂಕಾರ ನೋಡಲು ಜನ ಮುಗಿಬೀಳು ತ್ತಿದ್ದರು. ಈ ಸಂದರ್ಭ ಒಂದಷ್ಟು ಟ್ರಾಫಿಕ್‌ ಸಮಸ್ಯೆ ಸೃಷ್ಟಿಯಾದರೂ ಪಾರ್ಕಿಂಗ್‌ ಉಸ್ತುವಾರಿ ವಹಿಸಿಕೊಂಡ ಸಮಿತಿ, ಪೊಲೀಸ್‌ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿ, ಸಿಬಂದಿ, ಸ್ವಯಂ ಸೇವಕರು ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾದರು.

ಇಲ್ಲಿಯ ಉದ್ದಕ್ಕೂ ಅಚ್ಚುಕಟ್ಟಾದ ವ್ಯವಸ್ಥೆ ಜನ ಮೆಚ್ಚುಗೆ ಪಡೆಯಿತು. ಕಾರ್ಯಕ್ರಮದ ಯಶಸ್ಸಿಗೆ ರಚಿಸಿದ 18 ಸಮಿತಿಗಳು ಹಗಲು, ರಾತ್ರಿಯೆನ್ನದೆ ಶ್ರಮಿಸುತ್ತಿದ್ದರು. ಪರಿಸರ ಸ್ವತ್ಛತೆಗೆ ಹೆಚ್ಚಿನ ಗಮನ ನೀಡಲಾಗಿತ್ತು. ಪ್ರತೀ ಗ್ರಾ.ಪಂನ ಎಸ್‌ಎಲ್‌ಆರ್‌ಎಂ ಘಟಕ, ಸ್ವತ್ಛತ ಸಮಿತಿ ಕಸಗಳನ್ನು ಬಿದ್ದ ಕ್ಷಣದಲ್ಲೆ ಹೆಕ್ಕಿ ಸ್ವತ್ಛಗೊಳಿಸುತ್ತಿದ್ದರು. ಕರಕುಶಲ ವಸ್ತು ಪ್ರದರ್ಶನ, ಸಂಜೀವಿನಿ ಉತ್ಪನ್ನಗಳ ಪ್ರದರ್ಶನ, ತೋಟಗಾರಿಗೆ ಇಲಾಖೆಯ ಸಿರಿಧಾನ್ಯ ಪ್ರದರ್ಶನ, ಫ‌ಲಪುಷ್ಪ ಪ್ರದರ್ಶನ ಮೊದಲಾದ ಮಳಿಗೆಗಳ ಮುಂದೆ ಜನದಟ್ಟಣೆ ಇದ್ದಿತ್ತು. ಆಹಾರ ಮೇಳಗಳಲ್ಲಿ ಶುಚಿ-ರುಚಿಯ ಖಾದ್ಯಗಳಿಗೆ ಜನ ಮುಗಿಬೀಳುತ್ತಿದ್ದರು.

ಕಾರ್ಕಳದಲ್ಲಿ ಕಾಣಬರುತ್ತಿದ್ದಾರೆ ಹೊರ ಜಿಲ್ಲೆಗಳ ಪ್ರವಾಸಿಗರು!
ಮೂರು ದಿನಗಳಲ್ಲಿ ಜಿಲ್ಲೆ, ಹೊರ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಪ್ರತಿಮೆ ವೀಕ್ಷಣೆಗೆ ಆಗಮಿಸಿದ್ದರು. ಮುಖ್ಯಮಂತ್ರಿಗಳು ಪ್ರತಿಮೆ ಲೋಕಾರ್ಪಣೆಗೊಳಿಸಿದ ಬಳಿಕ ಬೆಟ್ಟ ಜನಾಕರ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿದೆ. ನಾಡಿನೆಲ್ಲೆಡೆಯ ಜನ ಪರಶುರಾಮನ ಬಗ್ಗೆ ಅರಿತುಕೊಳ್ಳುವುದಕ್ಕೆ ಸಾಧ್ಯವಾಯಿತು.ಪರಶುರಾಮನ ಬಗ್ಗೆ ಮಾಹಿತಿ ಪಡೆದುಕೊಂಡು ಕಾರ್ಕಳದ ಕಡೆಗೆ ಹಿಂದಿರುಗುತ್ತಿದ್ದರು.

ಜ. 30: ಪೊಲೀಸ್‌ ಕವಾಯತು, ಆಕರ್ಷಕ ಪಂಜಿನ ಮೆರವಣಿಗೆ
ಪರಶುರಾಮ ಥೀಂ ಪಾರ್ಕ್‌ ಲೋಕಾರ್ಪಣೆ ಅಂಗವಾಗಿ ಜ.30ರಂದು ಸಂಜೆ 6ಕ್ಕೆ ನಗರದ ಸ್ವರಾಜ್‌ ಮೈದಾನದಲ್ಲಿ ಆಕರ್ಷಕ ಪೊಲೀಸ್‌ ಕವಾಯತು, ಪಂಜಿನ ಮೆರವಣಿಗೆ ನಡೆಯಲಿದೆ. ಮೈಸೂರು ದಸರಾ ಸಂದರ್ಭ ನಡೆಯುವಂತೆ ಆಕರ್ಷಕ ಕವಾಯತು ಇಲ್ಲಿ ಆಯೋಜಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್‌ನ 3 ಬ್ಯಾಂಡ್‌ ಸೆಟ್‌, ಮೈಸೂರು, ಮಂಗಳೂರು ಪೊಲೀಸ್‌ ವಿಭಾಗದ ವಿವಿಧ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಡಾಗ್‌ ಶೋ, ಪೊಲೀಸ್‌ ಕವಾಯತು, ಕಾಲೇಜು ವಿದ್ಯಾರ್ಥಿಗಳಿಂದ ಪಂಜಿನ ಕವಾಯತು, ವಿದ್ಯಾರ್ಥಿ ಕೆಡೆಟ್‌ ತಂಡಗಳಿಂದ ಆಕರ್ಷಕ ಕವಾಯತು, ಸಾಹಸಿ ಪ್ರದರ್ಶನಗಳು ನೋಡುಗರನ್ನು ಆಕರ್ಷಿಸಲಿವೆ. ಸ್ವರಾಜ್‌ ಮೈದಾನದಲ್ಲಿ ಈಗಾಗಲೇ ಸಿದ್ಧತೆ ನಡೆಸಲಾಗಿದೆ.

ಟಾಪ್ ನ್ಯೂಸ್

akhilesh

ಯಾವುದೇ ಪಕ್ಷದ ಬಗ್ಗೆ ಸಹಾನುಭೂತಿ ಹೊಂದುವುದು ಮುಖ್ಯ ಅಲ್ಲ: ಅಖಿಲೇಶ್

1-dwdasdasd

ವನಿತಾ ಪ್ರೀಮಿಯರ್‌ ಲೀಗ್‌ : ಚೊಚ್ಚಲ ಪ್ರಶಸ್ತಿ ಮುಂಬೈ ಇಂಡಿಯನ್ಸ್‌ ಪಾಲು

1-saddsadsad-asds

ಜೆಡಿಎಸ್ 25 ಸ್ಥಾನ ಗೆಲ್ಲಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಡಾ.ಯತೀಂದ್ರ

1-sadsad-as-d

ವಿಶ್ವ ಚಾಂಪಿಯನ್‌ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್‌ ನ್ಪೋಟ್ಸ್‌ನ “ಟ್ರೋಫಿ ಟೂರ್‌’

ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್‌ ಸ್ಪೋರ್ಟ್ಸ್ ನ “ಟ್ರೋಫಿ ಟೂರ್‌’

HDK

50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರಾಧನೆ, ಇತಿಹಾಸ, ಶ್ರದ್ಧೆಯಿಂದ ಕ್ಷೇತ್ರಕ್ಕೆ ಮನ್ನಣೆ: ಕೈವಲ್ಯ ಶ್ರೀ

ಆರಾಧನೆ, ಇತಿಹಾಸ, ಶ್ರದ್ಧೆಯಿಂದ ಕ್ಷೇತ್ರಕ್ಕೆ ಮನ್ನಣೆ: ಕೈವಲ್ಯ ಶ್ರೀ

ಬಿ.ಎಂ. ರೋಹಿಣಿ ಅವರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ

ಬಿ.ಎಂ. ರೋಹಿಣಿ ಅವರಿಗೆ ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಪ್ರದಾನ

ರಾಹುಲ್‌ ಅನರ್ಹತೆ: ಉಡುಪಿ ಕಾಂಗ್ರೆಸ್‌ ಪ್ರತಿಭಟನೆ

ರಾಹುಲ್‌ ಅನರ್ಹತೆ: ಉಡುಪಿ ಕಾಂಗ್ರೆಸ್‌ ಪ್ರತಿಭಟನೆ

arrest

ರೈಲ್ವೇ ಸಿಬಂದಿಗೆ ನಿಂದನೆ, ಜೀವಬೆದರಿಕೆ: ಆರೋಪಿ ವಶಕ್ಕೆ

ಶಿರ್ವ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರ ಕಸಿದು ಪರಾರಿಯಾದ ಕಳ್ಳರು

ಶಿರ್ವ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರ ಕಸಿದು ಪರಾರಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

akhilesh

ಯಾವುದೇ ಪಕ್ಷದ ಬಗ್ಗೆ ಸಹಾನುಭೂತಿ ಹೊಂದುವುದು ಮುಖ್ಯ ಅಲ್ಲ: ಅಖಿಲೇಶ್

1-dwdasdasd

ವನಿತಾ ಪ್ರೀಮಿಯರ್‌ ಲೀಗ್‌ : ಚೊಚ್ಚಲ ಪ್ರಶಸ್ತಿ ಮುಂಬೈ ಇಂಡಿಯನ್ಸ್‌ ಪಾಲು

1-saddsadsad-asds

ಜೆಡಿಎಸ್ 25 ಸ್ಥಾನ ಗೆಲ್ಲಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಡಾ.ಯತೀಂದ್ರ

1-sadsad-as-d

ವಿಶ್ವ ಚಾಂಪಿಯನ್‌ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.