ಕೊಂಕಣ ರೈಲ್ವೇ: ಶೇ. 95 ವಿದ್ಯುಚ್ಛಾಲಿತ ರೈಲು ಓಡಾಟ

2017ರಲ್ಲಿ ಆರಂಭವಾಗಿದ್ದ ವಿದ್ಯುದೀಕರಣ, ಪಥ ದ್ವಿಗುಣ ಕಾರ್ಯ

Team Udayavani, Mar 27, 2023, 7:31 AM IST

ಕೊಂಕಣ ರೈಲ್ವೇ: ಶೇ. 95 ವಿದ್ಯುಚ್ಛಾಲಿತ ರೈಲು ಓಡಾಟ

ಉಡುಪಿ : ಮಹಾರಾಷ್ಟ್ರದ ರೋಹಾದಿಂದ ಮಂಗಳೂರು ಸಮೀಪದ ತೋಕೂರುವರೆಗಿನ 760 ಕಿ.ಮೀ. ದೂರದ ಕೊಂಕಣ ರೈಲ್ವೇ ಮಾರ್ಗವನ್ನು ಸುಮಾರು 1,287 ಕೋ.ರೂ. ವೆಚ್ಚದಲ್ಲಿ ವಿದ್ಯುದೀಕರಣಗೊಳಿಸಲಾಗಿದ್ದು, ಈಗ ಶೇ. 95ರಷ್ಟು ವಿದ್ಯುಚ್ಛಾಲಿತ ರೈಲುಗಳು ಓಡಾಟ ನಡೆಸುತ್ತಿವೆ.

ಕೊಂಕಣ ರೈಲ್ವೇಯನ್ನು ವಿದ್ಯುದೀಕರಣಗೊಳಿಸಿದ ಕಾರಣ ವಾರ್ಷಿಕವಾಗಿ 150 ಕೋ.ರೂ.ಗಳಷ್ಟು ಇಂಧನ ಉಳಿತಾಯವಾಗಲಿದೆ. ಕೊಂಕಣ ರೈಲ್ವೇ ಕಾರ್ಪೊರೇಷನ್‌ ಲಿ. ರೈಲ್ವೇ ವಿದ್ಯುದೀಕರಣ ಮತ್ತು ಪಥ ದ್ವಿಗುಣ ಕಾರ್ಯವನ್ನು 2017ರಲ್ಲಿ ಆರಂಭಿಸಿತ್ತು. ಈ ಯೋಜನೆಯಿಂದಾಗಿ ಪರಿಸರ ಮಾಲಿನ್ಯಕ್ಕೆ ಕಡಿವಾಣ ಬೀಳುವುದರ ಜತೆಗೆ ಅನಗತ್ಯ ವೆಚ್ಚವೂ ಕಡಿಮೆಯಾಗಿದೆ.

ಉಪಯೋಗವೇನು?
ಎಲೆಕ್ಟ್ರಿಕ್‌ ಲೋಕೋದಿಂದಾಗಿ ಡೀಸೆಲ್‌ ವೆಚ್ಚ ದೊಡ್ಡ ಪ್ರಮಾಣದಲ್ಲಿ ಉಳಿತಾಯವಾಗಲಿದೆ. ಸರಾಸರಿ 300 ಕಿ.ಮೀ. ಸಂಚಾರಕ್ಕೆ 1,500 ಲೀ. ಡೀಸೆಲ್‌ ಬೇಕಾಗುತ್ತದೆ. ಗೂಡ್ಸ್‌ ರೈಲಾದರೆ ಇನ್ನೂ 500 ಲೀ. ಬೇಕು. ಎಲೆಕ್ಟ್ರಿನ್‌ ಎಂಜಿನ್‌ನಿಂದ ಅವೆಲ್ಲವೂ ಉಳಿತಾಯವಾಗಲಿದೆ. ಅಲ್ಲದೆ ಮಂಗಳೂರು ಸೆಂಟ್ರಲ್‌ನಲ್ಲಿ ಎಂಜಿನ್‌ ಬದಲಿಸುವ ಹಾಗೂ ಡೀಸೆಲ್‌ ತುಂಬಿಸಲು ಬೇಕಾಗುವ ಸಮಯವೂ ಉಳಿತಾಯವಾಗುತ್ತದೆ.

ಬಾಕಿ ರೈಲುಗಳೂ ಶೀಘ್ರ ಎಲೆಕ್ಟ್ರಿಕ್‌
ಪ್ರಸ್ತುತ 5 ರೈಲುಗಳಷ್ಟೇ ಎಲೆಕ್ಟ್ರಿಕ್‌ ಆಗಲು ಬಾಕಿ ಉಳಿದಿವೆ. ದಿನನಿತ್ಯ ಓಡಾಟ ಮಾಡುವ ತುತಾರಿ ಎಕ್ಸ್‌ಪ್ರೆಸ್‌, ಪಂಚಗಂಗಾ ಎಕ್ಸ್‌ಪ್ರೆಸ್‌, ವಾರಕ್ಕೊಮ್ಮೆ ಸಂಚರಿಸುವ ಪೂರ್ಣ ಎಕ್ಸ್‌ಪ್ರೆಸ್‌, ಮರುಸಾಗರ್‌ ಎಕ್ಸ್‌ಪ್ರೆಸ್‌ ಹಾಗೂ ಎಚ್‌ಎಸ್‌ಆರ್‌ ಎಸಿ ಎಕ್ಸ್‌ಪ್ರೆಸ್‌ ರೈಲುಗಳು ಕೂಡ ಸದಸ್ಯದಲ್ಲಿಯೇ ಎಲೆಕ್ಟ್ರಿಕ್‌ ಆಗಲಿವೆ. ಈ ಬಗೆಗಿನ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿವೆ.

ಬಾಕಿ ಉಳಿದ ರೈಲುಗಳನ್ನು ಕೂಡ ವಿದ್ಯುದೀಕರಣ ಮಾಡಲು ಉದ್ದೇಶಿಸಲಾಗಿದ್ದು, ಆ ಪ್ರಕ್ರಿಯೆ ಶೀಘ್ರದಲ್ಲಿ ನಡೆಯಲಿದೆ. ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.
-ಸುಧಾ ಕೃಷ್ಣಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ, ಕೊಂಕಣ ರೈಲ್ವೇ

ಟಾಪ್ ನ್ಯೂಸ್

1-fffrr

‘Bhut jolokia’ ಚಿಪ್ಸ್‌ ತಿಂದು ಜಪಾನ್‌ನ 14 ವಿದ್ಯಾರ್ಥಿಗಳು ಅಸ್ವಸ್ಥ

1-kanwar

UP Police;ಕನ್ವರ್‌ ಯಾತ್ರೆ ಮಾರ್ಗದ ಹೊಟೇಲ್‌ ಮಾಲಕರ ಹೆಸರು ಪ್ರದರ್ಶನ ಕಡ್ಡಾಯ!

1-insta

Instagram Influencer ಆನ್ವಿ ಕಾಮ್ದಾರ್‌ ಕಮರಿಗೆ ಬಿದ್ದು ಮರಣ

modi (4)

J&K ಉಗ್ರ ನಿಗ್ರಹಕ್ಕೆ ಹೆಚ್ಚು ಪಡೆ ನಿಯೋಜಿಸಿ: ಪ್ರಧಾನಿ ಮೋದಿ

Heavy Rains ಅದ್ಯಪಾಡಿ ಗ್ರಾಮದ 30 ಮನೆಗಳು ಜಲಾವೃತ

Heavy Rains ಅದ್ಯಪಾಡಿ ಗ್ರಾಮದ 30 ಮನೆಗಳು ಜಲಾವೃತ

Heavy Rains ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ; ಕೆಲವೆಡೆ ಹಾನಿ

Heavy Rains ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ; ಕೆಲವೆಡೆ ಹಾನಿ

Mangalore ಮಾನಸಿಕ ಅಸ್ವಸ್ಥನನ್ನು ಮನೆ ತಲುಪಿಸಿದ ಆಧಾರ್‌ ಕಾರ್ಡ್‌!

Mangalore ಮಾನಸಿಕ ಅಸ್ವಸ್ಥನನ್ನು ಮನೆ ತಲುಪಿಸಿದ ಆಧಾರ್‌ ಕಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಳತ್ತೂರು ದಿವಾಕರ ಬಿ. ಶೆಟ್ಟರಿಗೆ “ಮಾಧ್ಯಮ ದತ್ತಿ ನಿಧಿ ಪ್ರಶಸ್ತಿ’ ಪ್ರದಾನ

Udupi ಕಳತ್ತೂರು ದಿವಾಕರ ಬಿ. ಶೆಟ್ಟರಿಗೆ “ಮಾಧ್ಯಮ ದತ್ತಿ ನಿಧಿ ಪ್ರಶಸ್ತಿ’ ಪ್ರದಾನ

Manipal ಪ್ರೊ| ವಲಿಯತ್ತಾನ್‌ ನಿಧನಕ್ಕೆ ಮಾಹೆ ಸಂತಾಪ

Manipal “ವೈದ್ಯ ಜಗತ್ತಿಗೆ ವಲಿಯತ್ತಾನ್‌ ಕೊಡುಗೆ ಅಪಾರ’

Manipal ಬಹುಮುಖಿ ವೈದ್ಯ ವಿದ್ವಾಂಸ ಡಾ| ಎಂ.ಎಸ್‌.ವಲಿಯತ್ತಾನ್‌ ಇನ್ನಿಲ್ಲ

Updated ಬಹುಮುಖಿ ವೈದ್ಯ ವಿದ್ವಾಂಸ ಡಾ| ಎಂ.ಎಸ್‌.ವಲಿಯತ್ತಾನ್‌ ಇನ್ನಿಲ್ಲ

Heavy Rain; Holiday announcement till PUC in Udupi district on July 19

Heavy Rain; ಜುಲೈ 19ರಂದು ಉಡುಪಿ ಜಿಲ್ಲೆಯಲ್ಲಿ ಪಿಯುಸಿವರೆಗೆ ರಜೆ ಘೋಷಣೆ

MAHE ಮೊದಲ ಉಪಕುಲಪತಿ ಡಾ.ಎಂ.ಎಸ್. ವಲಿಯಾಥನ್ ನಿಧನ

MAHE ಯ ಮೊದಲ ಉಪಕುಲಪತಿ, ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ.ಎಂ.ಎಸ್. ವಲಿಯಥಾನ್ ನಿಧನ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-wqewqewq

Mauritius ನಲ್ಲಿಯೂ ಭಾರತದ ಜನೌಷಧ ಕೇಂದ್ರ

1-fffrr

‘Bhut jolokia’ ಚಿಪ್ಸ್‌ ತಿಂದು ಜಪಾನ್‌ನ 14 ವಿದ್ಯಾರ್ಥಿಗಳು ಅಸ್ವಸ್ಥ

Suicide 3

Temple; ತಮಟೆ ಬಾರಿಸಲು ಹೋಗದ್ದಕ್ಕೆ ದಲಿತರಿಗೆ ಬಹಿಷ್ಕಾರ!

Suspended

US; ಭಾರತೀಯಳನ್ನು ಕೊಂದು ನಕ್ಕಿದ್ದ ಪೊಲೀಸ್‌ ವಜಾ

Bhagavant mann

AAP; ಹರಿಯಾಣದ ಎಲ್ಲ 90 ಕ್ಷೇತ್ರಗಳಲ್ಲೂ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.