ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

ಅಷ್ಟೋತ್ತರ ಸಹಸ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕ ಸಂಪನ್ನ

Team Udayavani, Apr 24, 2024, 5:56 PM IST

20-shirva-1

ಶಿರ್ವ: ಜೀರ್ಣೋದ್ಧಾರಗೊಂಡ ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶಿಲಾಮಯ ಗರ್ಭಗೃಹದ ನೂತನ ದೇಗುಲದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟೋತ್ತರ ಸಹಸ್ರಕಲಶ ಸಹಿತ ಬ್ರಹ್ಮಕಲಶಾಭಿಷೇಕವು ಎ. 24 ರಂದು ಸಂಪನ್ನಗೊಂಡಿತು.

ಧಾರ್ಮಿಕ ವಿಧಿ ವಿಧಾನಗಳು ಕ್ಷೇತ್ರದ ತಂತ್ರಿಯವರಾದ ವಿದ್ವಾನ್‌ ಸಗ್ರಿ ಹರಿದಾಸ್‌ ಐತಾಳ್‌ ಅವರ ನೇತೃತ್ವದಲ್ಲಿ ಬ್ರಹ್ಮಶ್ರೀ ಮುರಳೀಧರ ತಂತ್ರಿ ದೇರೇಬೈಲು ,ಬ್ರಹ್ಮಶ್ರೀ ಮಧುಸೂಧನ ತಂತ್ರಿ ಪುತ್ತೂರು ಮತ್ತು ಬ್ರಹ್ಮವಾಹಕ ಬೆಳ್ಳೆ ಮಧ್ವರಾಜ ಭಟ್‌ ಅವರ ಸಹಕಾರದೊಂದಿಗೆ ನೆರವೇರಿತು. ವೇ|ಮೂ| ಪಂಜ ಭಾಸ್ಕರ ಭಟ್‌ ಬ್ರಹ್ಮಕಲಶಾಭಿಷೇಕದ ಮಹತ್ವ ವಿವರಿಸಿದರು.

ಬೆಳಗ್ಗೆ ಪುಣ್ಯಾಹವಾಚನ,ಗಣಯಾಗ,ಶಾಂತಿ ಹೋಮ ನಡೆದು ಶ್ರೀ ಮಹಾಲಿಂಗೇಶ್ವರ ದೇವರಿಗೆ 1008 ಕಲಶಾಭಿಷೇಕ ನಡೆದು 10-10ಕ್ಕೆ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ಪ್ರಸನ್ನ ಪೂಜೆ, ನ್ಯಾಸಪೂಜೆ, ಮಹಾಪೂಜೆ, ಅವಸೃತ ಬಲಿ,ಪಲ್ಲಪೂಜೆ ನಡೆದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.

ಬೆಳಗ್ಗೆ ಪುತ್ತೂರು ಜಗದೀಶ್‌ ಆಚಾರ್ಯ ಅವರಿಂದ ಭಕ್ತಿಸುಧಾ-ಗಾಯನ ಭಜನೆ ನಡೆಯಿತು. ಮಧ್ಯಾಹ್ನ ಪಾವಂಜೆ ಮೇಳದವರಿಂದ ಅಗರಿ ಶ್ರೀನಿವಾಸ ಭಾಗವತ ವಿರಚಿತ ಕಾಲಮಿತಿ ಯಕ್ಷಗಾನ ಶ್ರೀ ಮಹಾದೇವಿ ಲಲಿತೋಪಾಖ್ಯಾನ ನಡೆಯಿತು. ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಎ. 25ರಂದು ಬೆಳಗ್ಗೆ ನವಕಪ್ರಧಾನ ಹೋಮ, ಧ್ವಜಾರೋಹಣ, ಮಹಾಪೂಜೆ ನಡೆಯಲಿದೆ. ಸಂಜೆ ಬಲಿ ದೇವತಾಪೂಜೆ,ರಾತ್ರಿ ಪೂಜೆ,ಮಹಾರಂಗಪೂಜೆ, ಶ್ರೀ ಭೂತಬಲಿ ನಡೆಯಲಿದೆ.

ದೇಗುಲದ ಆನುವಂಶಿಕ ಮೊಕ್ತೇಸರರಾದ ಬೆಳ್ಳೆ ಮೇಲ್ಮನೆ ವಸಂತ ಶೆಟ್ಟಿ,ಬೆಳ್ಳೆ ಕೆಳಮನೆ ಡಾ| ರಾಮರತನ್‌ ರೈ, ಮೊಕ್ತೇಸರ/ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ| ಹೆಚ್‌. ಭಾಸ್ಕರ ಶೆಟ್ಟಿ ,ವೇ|ಮೂ| ವಿಖ್ಯಾತ್‌ ಭಟ್‌, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಬೆಳ್ಳೆ ಮೇಲ್ಮನೆ ಉದಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬೆಳ್ಳೆ ರಾಜೇಂದ್ರ ಶೆಟ್ಟಿ,ಜತೆ ಕಾರ್ಯದರ್ಶಿಗಳಾದ ಬೆಳ್ಳೆ ನಿರಂಜನ್‌ ರಾವ್‌, ಬೆಳ್ಳೆ ನಾಗರಾಜ ಕಾಮತ್‌,ರಂಜನ್‌ ಶೆಟ್ಟಿ ಬೆಳ್ಳೆ ಪಡುಮನೆ, ಕೋಶಾಧಿಕಾರಿ ಬೆಳ್ಳೆ ಚಂದ್ರಕಾಂತ ರಾವ್‌, ಮುಂಬೈ ಸಮಿತಿಯ ಅಧ್ಯಕ್ಷ ವಿನಯ ಶೆಟ್ಟಿ ಬೆಳ್ಳೆ ಪಾಲೆಮಾರ್‌, ಸಂಚಾಲಕರಾದ ಬೆಳ್ಳೆ ಮೇಲ್ಮನೆ ಕಿಶೋರ್‌ ಶೆಟ್ಟಿ ಮತ್ತು ಬೆಳ್ಳೆ ಕೆಳಮನೆ ಡಾ| ಪ್ರಕಾಶ್ಚಂದ್ರ ಶೆಟ್ಟಿ, ಬೆಳ್ಳೆ ದೊಡ್ಡಮನೆ ಸುಭಾಶ್ಚಂದ್ರ ಶೆಟ್ಟಿ,ಸುರೇಶ್‌ ಶೆಟ್ಟಿ ಪಾಲೇಮಾರ್‌,ಬೆಳ್ಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ, ಬೆಳ್ಳೆ ಕಕ್ರಮನೆ ಹರೀಶ್‌ ಶೆಟ್ಟಿ, ಗುರುರಾಜ ಭಟ್‌,ಅನಿಲ್‌ ಶೆಟ್ಟಿ ಅಲೆವೂರು,ಸುಧಾಕರ ಪೂಜಾರಿ ಪಡುಬೆಳ್ಳೆ,ಅಶೋಕ್‌ ಶೆಟ್ಟಿ ಮುಂಡ್ಕೂರು, ಅಶೋಕ್‌ ಎಂ. ಶೆಟ್ಟಿ,ಬೆಳ್ಳೆ ಸಿಎ ಬ್ಯಾಂಕ್‌ನ ಅಧ್ಯಕ್ಷ ಬೆಳ್ಳೆ ಶಿವಾಜಿ ಎಸ್‌. ಸುವರ್ಣ, ಬೆಳ್ಳೆ ಮೇಲ್ಮನೆ ಶಾಲಿನಿ ಎಸ್‌. ಶೆಟ್ಟಿ, ವಿನಯಾ ಶೆಟ್ಟಿ, ವೀಣಾ ಶೆಟ್ಟಿ, ಆಶಾ ಶೆಟ್ಟಿ, ಸುಹಾಸಿನಿ ಶೆಟ್ಟಿ ,ರೇಖಾ ಶೆಟ್ಟಿ, ಸುಜಾತಾ ಸುವರ್ಣ,ವ್ಯವಸ್ಥಾಪನ ಸಮಿತಿಯ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸದಸ್ಯರು,ಬೆಳ್ಳೆ ಗ್ರಾಮದ ವಿವಿಧ ಧಾರ್ಮಿ ಕ ಕ್ಷೇತ್ರಗಳು ಮತ್ತು ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಮತ್ತು ಭಕ್ತರು ಉಪಸ್ಥಿತರಿದ್ದರು.

Ad

ಟಾಪ್ ನ್ಯೂಸ್

1-aa-agri

ದ.ಕ. ಜಿಲ್ಲೆಯಲ್ಲಿ 3,748 ಹೆಕ್ಟರ್‌ನಲ್ಲಿ ಬಿತ್ತನೆ ಪೂರ್ಣ

Ravi-Ganiga

ಕಾಲ ಕೂಡಿ ಬಂದಾಗ ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಶಾಸಕ ರವಿ ಗಣಿಗ

heart attack

ಯುವಕರಲ್ಲಿ ಹಠಾತ್‌ ಹೃದಯಾಘಾತ ಏರಿಕೆ ;ಮುನ್ನೆಚ್ಚರಿಕೆ ಅಗತ್ಯ: ಡಾ| ಯೂಸುಫ್‌ ಕುಂಬ್ಳೆ

Parameshawar

ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ಸಂಹವನ ಕೊರತೆ: ಗೃಹ ಸಚಿವ

DCF-Chakrapani

ಐದು ಹುಲಿಗಳ ಸಾವು ಪ್ರಕರಣ: ಎಂಎಂ ಹಿಲ್ಸ್‌ ಡಿಸಿಎಫ್ ಚಕ್ರಪಾಣಿ ಅಮಾನತು

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aa-aa-cong

‘ಶಕ್ತಿ-ಗ್ಯಾರಂಟಿ’ ಯಶಸ್ಸು: ವಿವಿಧೆಡೆ ಸಂಭ್ರಮ

26

Kaup: ಬಸ್‌ಗೆ ಕಾಯುತ್ತಿದ್ದಾಗ ಹೃದಯಾಘಾತ; ಕುಸಿದು ಬಿದ್ದು 57ರ ವ್ಯಕ್ತಿ ಸಾವು

arrest-lady

ನಿಟ್ಟೆ; ಹಾಸ್ಟೆಲ್‌ನಲ್ಲಿ ದ್ವೇಷ ಪ್ರಚೋದನೆ ಬರಹ: ವಿದ್ಯಾರ್ಥಿನಿ ಅರೆಸ್ಟ್

2

Kasaragod: ತಡೆಗೋಡೆಗೆ ಕಾರು ಢಿಕ್ಕಿ: ನಾಲ್ವರಿಗೆ ಗಾಯ

1-aa-parshu

ಪರಶುರಾಮ ಥೀಮ್ ಪಾರ್ಕ್ ವಿವಾದ; ಕಂಚಿನ ಬದಲು‌ ಹಿತ್ತಾಳೆ ಬಳಕೆ: ತನಿಖೆಯಲ್ಲಿ ಪತ್ತೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

arrested

ಭಟ್ಕಳ ಠಾಣೆಗೆ ಬಾಂ*ಬ್‌ ಬೆದರಿಕೆ ಸಂದೇಶ : ಪ್ರಮುಖ ಆರೋಪಿ ಖಾಲಿದ್‌ ಪತ್ತೆ

1-aa-agri

ದ.ಕ. ಜಿಲ್ಲೆಯಲ್ಲಿ 3,748 ಹೆಕ್ಟರ್‌ನಲ್ಲಿ ಬಿತ್ತನೆ ಪೂರ್ಣ

Ravi-Ganiga

ಕಾಲ ಕೂಡಿ ಬಂದಾಗ ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಶಾಸಕ ರವಿ ಗಣಿಗ

heart attack

ಯುವಕರಲ್ಲಿ ಹಠಾತ್‌ ಹೃದಯಾಘಾತ ಏರಿಕೆ ;ಮುನ್ನೆಚ್ಚರಿಕೆ ಅಗತ್ಯ: ಡಾ| ಯೂಸುಫ್‌ ಕುಂಬ್ಳೆ

1-aa-aa-crick–kashi

ಕೋಟೇಶ್ವರ: ಇಂದಿನಿಂದ ಕಾಶೀ ಶ್ರೀಗಳ ಚಾತುರ್ಮಾಸ ವ್ರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.