3 ತಿಂಗಳಲ್ಲಿ 12 ಸಾವಿರಕ್ಕೂ ಅಧಿಕ ಜಾಬ್‌ ಕಾರ್ಡ್‌ ವಿತರಣೆ

ಕಾರ್ಕಳ ತಾಲೂಕಿನ ಹಳ್ಳಿಗಳಲ್ಲಿ ನರೇಗಾ ಯೋಜನೆಗೆ ಹೆಚ್ಚಿನ ಬೇಡಿಕೆ

Team Udayavani, Dec 22, 2021, 7:03 PM IST

3 ತಿಂಗಳಲ್ಲಿ 12 ಸಾವಿರಕ್ಕೂ ಅಧಿಕ ಜಾಬ್‌ ಕಾರ್ಡ್‌ ವಿತರಣೆ

ಕಾರ್ಕಳ: ಹಳ್ಳಿಗಳಲ್ಲಿ ಸವಲತ್ತು ಒದಗಿಸುವ ತಳಮಟ್ಟದ ಸರಕಾರವೇ ಗ್ರಾ.ಪಂ.ಗಳು. ಈ ಹಂತದಲ್ಲಿ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿ, ಹಳ್ಳಿ ಜನರನ್ನು ತಲುಪಿ ಆರ್ಥಿಕ, ಸ್ವಾವಲಂಬಿಯಾಗಿಸಲು ಕಾರ್ಕಳ ತಾಲೂಕಿನಲ್ಲಿ ಜನಜಾಗೃತಿ ನಡೆಯುತ್ತಿದೆ. 3 ತಿಂಗಳಲ್ಲಿ 12 ಸಾವಿರಕ್ಕೂ ಅಧಿಕ ಜಾಬ್‌ ಕಾರ್ಡ್‌ ವಿತರಣೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ 27 ಗ್ರಾ.ಪಂ.ಗಳಲ್ಲಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಜಿ.ಪಂ. ಮಾರ್ಗ ದರ್ಶನದಲ್ಲಿ ತಾ.ಪಂ. ವತಿಯಿಂದ ಪ್ರತೀ ಗ್ರಾ.ಪಂ. ಅಧಿಕಾರಿ, ಸಿಬಂದಿ ಎಲ್ಲ ಹಂತದ ಚುನಾಯಿತ ಪ್ರತಿನಿಧಿಗಳ ಸಹಕಾರ ಪಡೆದು ಮೇಲ್ವಿಚಾರಣ ಹಂತದ ಅಧಿಕಾರಿಗಳ ಸಮನ್ವಯದಿಂದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕಡೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

ಗ್ರಾಮ ಮಟ್ಟದಲ್ಲಿ ಅತ್ಯಂತ ಪರಿಣಾಮ ಕಾರಿಯಾಗಿ ಅನುಷ್ಠಾನ ಮಾಡುವ ಸದುದ್ದೇಶದಿಂದ ಯೋಜನೆಯ ಮಾಹಿತಿ, ಶಿಕ್ಷಣ ಮತ್ತು ಸಂವಹನದ ಮೂಲಕ ಮಾಹಿತಿ ನೀಡಲು ಕಾರ್ಕಳ ತಾ.ಪಂ. 12 ಸಾವಿರ ನರೇಗಾ ಮಾಹಿತಿ ಮತ್ತು ಅರ್ಜಿ ನಮೂನೆ ಕರಪತ್ರ ಸಿದ್ಧಪಡಿಸಿ, ಮನೆಗಳಿಗೆ ತಲುಪಿಸಿ ನಾಗರಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ.

2020-21ನೇ ಸಾಲಿನಲ್ಲಿ ಎಪ್ರಿಲ್‌ 1ರಿಂದ ಡಿಸೆಂಬರ್‌ 16ರ ವರೆಗೆ 61,051 ಮಾನವ ದಿನಗಳ ಸೃಜನೆಯಾಗಿದ್ದು, ಪ್ರಸ್ತುತ ಆರ್ಥಿಕ ವರ್ಷದಲ್ಲಿ 92,775 ಮಾನವ ದಿನಗಳ ಸೃಜನೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 31,724 ಮಾನವ ದಿನಗಳು ಹೆಚ್ಚುವರಿಯಾಗಿ ಸೃಜಿಸಲಾಗಿದೆ. ಮಾರ್ಚ್‌ ಅಂತ್ಯಕ್ಕೆ ನಿಗದಿತ ವಾರ್ಷಿಕ ಗುರಿಯನ್ನು ಪೂರ್ಣಗೊಳಿಸುವ ಪ್ರಯತ್ನ ತಾಲೂಕಿನಲ್ಲಿ ನಡೆಯುತ್ತಿದೆ.

ಕೃಷಿ ನೀರಾವರಿ ಬಾವಿ, ದನದ ಹಟ್ಟಿ, ಕೋಳಿಶೆಡ್‌, ಗೊಬ್ಬರ ಗುಂಡಿ, ಎರೆಹುಳು ತೊಟ್ಟಿ, ಹಂದಿ ಶೆಡ್‌, ಮಲ್ಲಿಗೆ ಕೃಷಿ, ಅಡಿಕೆ, ತೆಂಗು ಸೇರಿದಂತೆ ಇನ್ನಿತರ ತೋಟಗಾರಿಕಾ ಬೆಳೆ ಸೇರಿದಂತೆ 1,470 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಕಳೆದ ಸಾಲಿಗಿಂತ 832 ಹೆಚ್ಚು ಕಾಮಗಾರಿಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌ ಅವರ ನೂತನ ಮಿಷನ್‌ 25 ಅಭಿಯಾನದಡಿ ಕನಿಷ್ಠ 675 ಹೊಸ ಕಾಮಗಾರಿಗಳನ್ನು ಪ್ರಾರಂಭಿಸುವ ಗುರಿ ಸಾಧನೆಗೆ ತಾಲೂಕಿನಲ್ಲಿ ಚಾಲನೆ ನೀಡಲಾಗಿದೆ.

ಸೆ.3ರಂದು ಗ್ರಾಮೀಣ ಪ್ರದೇಶದ ಎಲ್ಲ ಅರ್ಹ ನಾಗರಿಕರಿಗೆ ಉದ್ಯೋಗ ಚೀಟಿ ನೀಡುವ ಸದುದ್ದೇಶದೊಂದಿಗೆ ಜಾಬ್‌ಕಾರ್ಡ್‌ ಮೇಳ ಅಭಿಯಾನ ಆರಂಭಿಸಲಾಗಿತ್ತು. 14,330 ಜಾಬ್‌ಕಾರ್ಡ್‌ ಹೊಂದಿದ್ದ ಕುಟುಂಬಗಳ ಸಂಖ್ಯೆಯನ್ನು ಕೇವಲ 3 ತಿಂಗಳುಗಳ ಅವಧಿಯಲ್ಲಿ 26,391ಕ್ಕೆ ಏರಿಸಿ ಅತ್ಯಂತ ಕಡಿಮೆ ಅವಧಿಯಲ್ಲಿ 12,061 ಕುಟುಂಬಗಳಿಗೆ ಜಾಬ್‌ಕಾರ್ಡ್‌ಗಳನ್ನು ಗ್ರಾ.ಪಂ. ಸಿಬಂದಿ, ಚುನಾಯಿತ ಪ್ರತಿನಿಧಿಗಳು, ಜಿಪಿಎಲ್‌ಎಫ್, ಸ್ವಸಹಾಯ ಸಂಘ, ಎಲ್‌.ಸಿ.ಆರ್‌.ಪಿ., ಎಂ.ಬಿ.ಕೆ. ಅವರ ಸಹಕಾರದಿಂದ ನೀಡಿದೆ. 2021ರಲ್ಲಿ 869 ಸಂಜೀವಿನಿ ಸ್ವಸಹಾಯ ಸಂಘಗಳಿವೆ. ಇದರಲ್ಲಿ 739 ಮಹಿಳೆಯರು 284 ಪ.ಪಂಗಡ 10,262, ಇತರ ವರ್ಗದ ಮಹಿಳೆಯರು ಸದಸ್ಯರಾ ಗಿರುವರು. ತಾ.ಪಂ. ಮಿಷನ್‌ 50 ಅಭಿಯಾನವನ್ನು ಕಾರ್ಕಳದಲ್ಲಿ ಜಾರಿಗೆ ತಂದ ಬಳಿಕ ಹೊಸದಾಗಿ 76 ಮಹಿಳಾ ಸ್ವಸಹಾಯ ಸಂಘಗಳನ್ನು ರಚಿಸಲಾಗಿದೆ. 76 ಪ. ಜಾತಿ ಮಹಿಳೆಯರು, 107 ಪ. ಪಂಗಡದ ಮಹಿಳೆಯರು, 653 ಇತರ ವರ್ಗದ ಮಹಿಳೆಯರು ಸಂಘಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಸ್ವಸಹಾಯ ಸಂಘಗಳಿಗೆ ನರೇಗಾ ಯೋಜನೆಯ ಅನುಷ್ಠಾನದ ಬಗ್ಗೆ ಸಮಗ್ರ ಮಾಹಿತಿ ನೀಡಲು ಪಿಡಿಒ ಅವರಿಗೆ ಕಾಲಕಾಲಕ್ಕೆ ಸೂಚನೆ ನೀಡುತ್ತಾ ಬರಲಾಗಿದೆ. ಫ‌ಲವಾಗಿ 287 ಮಂದಿ ಮಹಿಳೆಯರು 292 ಕಾಮಗಾರಿಗಳಿಗೆ ಬೇಡಿಕೆ ಇರಿಸಿದ್ದಾರೆ. ಗರಿಷ್ಠ ಪ್ರಮಾಣ
ದಲ್ಲಿ ಸ್ವಸಹಾಯ ಸಂಘದ ಸದಸ್ಯರನ್ನು ನರೇಗಾ ಯೋಜನೆಯಲ್ಲಿ ಭಾಗೀ ದಾರರಾಗುವಂತೆ ಮಾಡುವ ದೂರದೃಷ್ಟಿಯ ಪ್ರಯತ್ನ ಸಫ‌ಲತೆ ಕಾಣುತ್ತಿದೆ.

ಯಾಕೆ ಆಸಕ್ತಿ?
ಲಾಕ್‌ಡೌನ್‌ ಬಳಿಕ ಹೊರ ಜಿಲ್ಲೆ, ರಾಜ್ಯಗಳ ಮಂದಿ ಊರಿಗೆ ಆಗಮಿಸಿ ಸ್ವ ಉದ್ಯೋಗದ ಕಡೆಗೆ ಆಸಕ್ತಿ ವಹಿಸುತ್ತಿದ್ದಾರೆ. ಅವರ ಆಸಕ್ತಿ ಗಮನಿಸಿ ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಯೋಜನೆ ಯಲ್ಲಿ ಏನೆಲ್ಲ ಅವಕಾಶವಿದೆ ಎನ್ನುವ ಮಾಹಿತಿಯನ್ನು ನೀಡುತ್ತಿರುವು ದರ ಪರಿಣಾಮ ಹೆಚ್ಚು ಮಂದಿ ಯೋಜನೆಯನ್ನು ಬಳಸಿಕೊಳ್ಳುವ ಕಡೆ ಆಸಕ್ತಿ ವಹಿಸುತ್ತಿದ್ದಾರೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.

ಸಾರ್ವಜನಿಕರಲ್ಲಿ ಜಾಗೃತಿ
ಹಿಂದೆಲ್ಲ ವರ್ಷಕ್ಕೆ ಒಂದೇ ಸೌಲಭ್ಯ ಸಿಗುವುದು ಎನ್ನುವ ಕಲ್ಪನೆ ಜನರಲ್ಲಿತ್ತು. ಈಗ ವರ್ಷಕ್ಕೆ 2-3 ಯೋಜ ನೆಗಳನ್ನು ಪಡೆದುಕೊಂಡು ಹೆಚ್ಚು ಲಾಭ ಗಳಿಸಲು ಸಾಧ್ಯ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ತಿಳಿ ಹೇಳುವ ಪ್ರಯತ್ನ ಗ್ರಾ.ಪಂ. ಮಟ್ಟದಲ್ಲಿ ಕರಪತ್ರ, ಕಾರ್ಯಾಗಾರಗಳ ಮೂಲಕ ನಡೆಸುತ್ತಿದ್ದೇವೆ.
-ಗುರುದತ್ತ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಾ.ಪಂ. ಕಾರ್ಕಳ

– ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Exam

CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ ಅಡಿಗೆ ಸಿಲುಕಿದ ಬೈಕ್; ಯಕ್ಷಗಾನ ಕಲಾವಿದ ಸ್ಥಳದಲ್ಲೇ ಮೃತ್ಯು

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weqwewqe

Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!

Minchu

Bidar; ಬಿರುಗಾಳಿ‌ ಸಹಿತ ಭಾರಿ ಮಳೆ :ಸಿಡಿಲು ಬಡಿದು‌ ರೈತ ಸಾವು

1-wewqewqe

Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.