ಪೆರಂಪಳ್ಳಿ: ವಾಹನ ಸವಾರರ ಸುರಕ್ಷತೆಗಿಲ್ಲ ಆದ್ಯತೆ; ತಿಂಗಳ ಅಂತರದಲ್ಲಿ ಮತ್ತೂಂದು ಅಪಘಾತ


Team Udayavani, Nov 22, 2022, 3:13 PM IST

2

ಉಡುಪಿ: ಅಪಘಾತ ವಲಯ ಪೆರಂಪಳ್ಳಿಯ ಸುಂದರಿ ಗೇಟ್‌ ಬಳಿಯ ತಿರುವಿನಲ್ಲಿ ರವಿವಾರ ತಡರಾತ್ರಿ ಮತ್ತೂಂದು ಅಪಘಾತ ನಡೆದಿದೆ. ಇದೇ ಸ್ಥಳದಲ್ಲಿ ತಿಂಗಳ ಅಂತರದಲ್ಲಿ ನಡೆದ ಎರಡನೇ ಅಪಘಾತ ಇದಾಗಿದೆ.

ರವಿವಾರ ತಡರಾತ್ರಿ ಅಂಬಾಗಿಲು ವಿನಿಂದ ಮಣಿಪಾಲದತ್ತ ತೆರಳುತ್ತಿದ್ದ ಹುಂಡೈ ಐ10 ಕಾರು ಅಪಘಾತಕ್ಕೀಡಾಗಿದೆ. ಕಾರಿನ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಅ.17ರಂದು ಇದೇ ಸ್ಥಳದಲ್ಲಿ ಕಾರೊಂದು ಇದೇ ರೀತಿ ತಂತಿಕಂಬಕ್ಕೆ ಢಿಕ್ಕಿ ಹೊಡೆದು ಅಪಘಾತವಾಗಿತ್ತು. ಬಳಿಕ ಹೊಸ ವಿದ್ಯುತ್‌ ಕಂಬ ಅಳವಡಿಕೆ ಮಾಡಲಾಗಿತ್ತು. ಈಗ ಹೊಸ ಕಂಬಕ್ಕೆ ಕಾರು ಢಿಕ್ಕಿ ಹೊಡೆದಿದ್ದು, ಮತ್ತೂಮ್ಮೆ ಕಂಬ ಬದಲಾಯಿಸುವ ಅಗತ್ಯ ಎದುರಾಗಿದೆ.

ವಿದ್ಯುತ್‌ ವ್ಯತ್ಯಯ

ಘಟನೆ ನಡೆದ ಸಂದರ್ಭದಲ್ಲಿ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಮೆಸ್ಕಾಂನವರು ವಿದ್ಯುತ್‌ ನಿಲುಗಡೆಗೊಳಿಸಿದರು. ಇದರಿಂದ ರಾತ್ರಿ ಪೂರ್ತಿ ವಿದ್ಯುತ್‌ ಇಲ್ಲದೆ ಸ್ಥಳೀಯರು ದಿನ ಕಳೆದರು.

ಅಪಾಯಕಾರಿ ತಿರುವು

ಇದೊಂದು ಅಪಾಯಕಾರಿ ತಿರುವಾಗಿದೆ. ಈ ಭಾಗದಲ್ಲಿ ಸಂಚಾರ ಮಾಡಿದ ಹಲವು ಚಾಲಕರು, ಸವಾರರಿಗೆ ಈ ಬಗ್ಗೆ ಅರಿವಾಗಿದೆ. ಆದರೆ ಸಂಬಂಧಪಟ್ಟ ಇಲಾಖೆ ಮೌನವಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅವೈಜ್ಞಾನಿಕ ರೀತಿಯಲ್ಲಿ ತಿರುವು ನಿರ್ಮಿಸಿರುವುದರಿಂದ ವೇಗದಿಂದ ಬರುವ ವಾಹನಗಳು ನಿಯಂತ್ರಣ ತಪ್ಪುತ್ತಿವೆ ಎಂದುಬು ಸ್ಥಳೀಯರ ಆತಂಕವಾಗಿದೆ.

ಹಲವು ಅಪಘಾತ

ಈ ಭಾಗದಲ್ಲಿ ಈಗಾಗಲೇ 10ರಿಂದ 12 ಅಪಘಾತಗಳು ನಡೆದಿವೆ. ಈ ಬಗ್ಗೆ ಇದುವರೆಗೂ ಎಚ್ಚರಿಕೆ ಫ‌ಲಕವಾಗಲಿ ಸೂಚನ ಫ‌ಲಕವನ್ನಾಗಲಿ ಅಳವಡಿಕೆ ಮಾಡಿಲ್ಲ. ಅಪರೂಪಕ್ಕೆ ಬರುವ ವಾಹನಗಳೇ ಹೆಚ್ಚಾಗಿ ಅಪಘಾತಕ್ಕೀಡಾಗುತ್ತಿವೆ. ಸ್ಥಳೀಯ ವಾಹನ ಚಾಲಕರಿಗೆ ಈ ಅವೈಜ್ಞಾನಿಕ ತಿರುವಿನ ಮಾಹಿತಿ ಇರುವ ಕಾರಣ ನಿಧಾನವಾಗಿ ವಾಹನ ಚಲಾಯಿಸುತ್ತಾರೆ. ಆದರೆ ಇತರರಿಗೆ ಇದು ಗೊಂದಲಕಾರಿಯಾಗಿ ಪರಿಣಮಿಸುತ್ತಿದೆ.

ಉಬ್ಬುತಗ್ಗು-ಎಚ್ಚರಿಕೆ ಫ‌ಲಕ ಅತ್ಯಗತ್ಯ

ಅಪಘಾತಕ್ಕೀಡಾದ ವಾಹನವನ್ನು ಸೋಮವಾರ ಬೆಳಗ್ಗೆ ಹಿಟಾಚಿ ಮೂಲಕ ತೆರವು ಮಾಡಲಾಯಿತು. ಈ ಭಾಗದಲ್ಲಿ ಮತ್ತಷ್ಟು ಭೀಕರ ಅಪಘಾತಗಳು ಉಂಟಾಗುವುದನ್ನು ತಡೆಗಟ್ಟ ಬೇಕಾದರೆ ಶೀಘ್ರವಾಗಿ ಉಬ್ಬುತಗ್ಗು ಹಾಗೂ ಎಚ್ಚರಿಕೆಯುಳ್ಳ ಸೂಚನ ಫ‌ಲಕವನ್ನು ಅಳವಡಿಸುವ ಅಗತ್ಯವಿದೆ. ಕಡಿದಾದ ತಿರುವು ಭಾಗದಲ್ಲಿಯೇ ಯೂಟರ್ನ್ ಕಲ್ಪಿಸಿರುವುದೂ ಕೂಡ ಅಪಘಾತಕ್ಕೆ ಕಾರಣವಾಗಿದೆ. ಅತ್ತಕಡೆಯಿಂದ ಬರುವ ವಾಹನಗಳಿಗೆ ಕಡಿದಾದ ಪೊದೆಯಿಂದಾಗಿ ಯಾವುದೇ ವಾಹನಗಳು ಬರುವುದು ಗೋಚರಕ್ಕೆ ಬರುತ್ತಿಲ್ಲ.

ಟಾಪ್ ನ್ಯೂಸ್

pun kkr

ಪಂಜಾಬ್‌-ಕೆಕೆಆರ್‌ ಪಂದ್ಯಕ್ಕೆ ಮಳೆ ಭೀತಿ : ಇತ್ತಂಡಗಳಿಗೂ ಗಾಯಾಳುಗಳದ್ದೇ ಚಿಂತೆ

ಪಾಕ್‌ನಲ್ಲಿ ಪಡಿತರ ವಿತರಣೆ ವೇಳೆ ಕಾಲ್ತುಳಿತ: 11 ಸಾವು

ಪಾಕ್‌ನಲ್ಲಿ ಪಡಿತರ ವಿತರಣೆ ವೇಳೆ ಕಾಲ್ತುಳಿತ: 11 ಸಾವು

1 Saturday

ರಾಶಿ ಫಲ: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗೌರವ ಆದರಾದಿ ಲಭ್ಯ, ದೀರ್ಘ‌ ಪ್ರಯಾಣ ಸಂಭವ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಖುದ್ದು ಹಾಜರಾಗಲಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಖುದ್ದು ಹಾಜರಾಗಲಿ

vote

ವಿಧಾನ-ಕದನ 2023: ಅನುದಾನದ ವರ ಕೊಟ್ಟವರಿಗೆ ಈಗ ಮತಗಳ ವರ ಬೇಕು

ಮೇ 29ಕ್ಕೆ 2023-24ರ ಶೈಕ್ಷಣಿಕ ವರ್ಷ ಆರಂಭ

ಮೇ 29ಕ್ಕೆ 2023-24ರ ಶೈಕ್ಷಣಿಕ ವರ್ಷ ಆರಂಭ

rishab panth

ಪಂತ್‌ ಇಲ್ಲದ ಡೆಲ್ಲಿಗೆ ಪಂಥಾಹ್ವಾನ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

exam

ಉಭಯ ಜಿಲ್ಲೆಗಳಲ್ಲಿ ಎಸೆಸೆಲ್ಸಿ ಪರೀಕ್ಷೆ ಸುಗಮ ಆರಂಭ

1-sadsad-d

ಶಿರ್ವ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಓಡಾಡುತ್ತಿದ್ದವನ ಬಂಧನ

fishing boats

ಬಂದರುಗಳಲ್ಲಿ ಹೂಳೆತ್ತಿದರೆ ಮೀನುಗಾರರು ನಿರಾತಂಕ

7-shirwa

ಆಟಿಸಂ ಮಕ್ಕಳ ಸಮಸ್ಯೆ ಬಗ್ಗೆ ಸರಕಾರವನ್ನು ಎಚ್ಚರಿಸಬೇಕಿದೆ: ಡಾ| ಭಂಡಾರಿ

ಶಾಲಾರಂಭಕ್ಕೂ ಮುನ್ನವೇ ಕೈಸೇರಲಿದೆ ಸಮವಸ್ತ್ರ, ಪುಸ್ತಕ

ಶಾಲಾರಂಭಕ್ಕೂ ಮುನ್ನವೇ ಕೈಸೇರಲಿದೆ ಸಮವಸ್ತ್ರ, ಪುಸ್ತಕ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

pun kkr

ಪಂಜಾಬ್‌-ಕೆಕೆಆರ್‌ ಪಂದ್ಯಕ್ಕೆ ಮಳೆ ಭೀತಿ : ಇತ್ತಂಡಗಳಿಗೂ ಗಾಯಾಳುಗಳದ್ದೇ ಚಿಂತೆ

ಪಾಕ್‌ನಲ್ಲಿ ಪಡಿತರ ವಿತರಣೆ ವೇಳೆ ಕಾಲ್ತುಳಿತ: 11 ಸಾವು

ಪಾಕ್‌ನಲ್ಲಿ ಪಡಿತರ ವಿತರಣೆ ವೇಳೆ ಕಾಲ್ತುಳಿತ: 11 ಸಾವು

1 Saturday

ರಾಶಿ ಫಲ: ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಗೌರವ ಆದರಾದಿ ಲಭ್ಯ, ದೀರ್ಘ‌ ಪ್ರಯಾಣ ಸಂಭವ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಖುದ್ದು ಹಾಜರಾಗಲಿ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಖುದ್ದು ಹಾಜರಾಗಲಿ

vote

ವಿಧಾನ-ಕದನ 2023: ಅನುದಾನದ ವರ ಕೊಟ್ಟವರಿಗೆ ಈಗ ಮತಗಳ ವರ ಬೇಕು