ಕೋವಿಡ್-19 ಭೀತಿ ನಡುವೆ ಮುಂಗಾರುಪೂರ್ವ ಸಿದ್ಧತೆ ಚುರುಕು

 1,745 ಕ್ವಿಂ. ಬಿತ್ತನೆ ಬೀಜ ದಾಸ್ತಾನು, ಮೇ ಅಂತ್ಯದವರೆಗೆ ವಿತರಣೆ

Team Udayavani, May 12, 2020, 5:39 AM IST

ಕೋವಿಡ್-19 ಭೀತಿ ನಡುವೆ ಮುಂಗಾರುಪೂರ್ವ ಸಿದ್ಧತೆ ಚುರುಕು

ಉಡುಪಿ: ಕೋವಿಡ್-19 ಸೋಂಕಿನಿಂದ ಜಿಲ್ಲೆ ಹೊರ ಬಂದಂತಿದೆ. ಎಲ್ಲ ಕ್ಷೇತ್ರಗಳಂತೆ ಕೃಷಿ ಚಟುವಟಿಕೆಗೂ ಚಾಲನೆ ಸಿಕ್ಕಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮೊದಲ ಕಾರ್ಯ ಭತ್ತದ ಬೀಜದ ವಿತರಣೆ ಮೇ ಆರಂಭದಲ್ಲಿ ಆರಂಭಗೊಂಡಿದೆ.

ಜಿಲ್ಲೆಯಲ್ಲಿ 1,745 ಕಿಂಟ್ವಾಲ್‌ ಭತ್ತದ ಬೀಜ ದಾಸ್ತಾನಿದೆ. ಮೇ 1ರಿಂದ ಜಿಲ್ಲೆಯ 9 ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆ ನಡೆಯುತ್ತಿದೆ. ಈ ರೈತ ಕೇಂದ್ರಗಳಿಂದ ರೈತರು ಭತ್ತ ಪಡೆದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿದ್ದಾರೆ. ಮೇ 1ರಿಂದ 10ರ ವರೆಗಿನ 10 ದಿನಗಳ ಅಂತರದಲ್ಲಿ ನೋಂದಣಿ ಮಾಡಿಕೊಂಡ 220 ಮಂದಿ ರೈತರು ಬೀಜ ಕೊಂಡು ಹೋಗಿದ್ದಾರೆ. ಮೇ ಅಂತ್ಯದ ವರೆಗೆ ರೈತರಿಗೆ ಭತ್ತದ ಬೀಜ ವಿತರಣೆಯಾಗಲಿದೆ. ಬಹುತೇಕ ರೈತರು ನೋಂದಣಿ ಮಾಡಿಕೊಂಡಿದ್ದು , ಬಾಕಿ ಉಳಿದವರು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.

ಜಿಲ್ಲೆಯ ವಿವಿಧ ತಾಲೂಕುಗಳ 9 ರೈತ ಸಂಪರ್ಕ ಕೇಂದ್ರಗಳ ಪೈಕಿ ಕೋಟದಲ್ಲಿ 320 ಕ್ವಿಂಟಾಲ್‌, ಬ್ರಹ್ಮಾವರ 255 ಕ್ವಿಂಟಾಲ್‌, ಉಡುಪಿ 130 ಕ್ವಿಂಟಾಲ್‌, ಕಾಪು 275 ಕ್ವಿಂಟಾಲ್‌, ಕುಂದಾಪುರ 195 ಕ್ವಿಂಟಾಲ್‌, ಬೈಂದೂರು 295 ಕ್ವಿಂಟಾಲ್‌, ವಂಡ್ಸೆ 170 ಕ್ವಿಂಟಾಲ್‌, ಕಾರ್ಕಳ 50 ಕ್ವಿಂಟಾಲ್‌, ಅಜೆಕಾರುವಿನಲ್ಲಿ 50 ಕಿಂಟ್ವಾಲ್‌ಗ‌ಳಷ್ಟು ಭತ್ತದ ಬೀಜ ವಿತರಣೆ ನಡೆದಿದೆ.

ಕೃಷಿ ಇಲಾಖೆ ರಾಜ್ಯ ಬಿತ್ತನೆ ಬೀಜ ನಿಗಮಕ್ಕೆ 2,350 ಕಿಂಟ್ವಾಲ್‌ ಬೀಜಕ್ಕೆ ಬೇಡಿಕೆ ಸಲ್ಲಿಸಿತ್ತು, ಜಿಲ್ಲೆಯಲ್ಲಿ 2.9 ಲಕ್ಷ ಮಂದಿ ಕೃಷಿಕರಿದ್ದಾರೆ.

ಈ ಪೈಕಿ 54 ಸಾವಿರ ಮಂದಿ 36 ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಭತ್ತ ಬೆಳೆಯುತ್ತಾರೆ. ಭತ್ತದ ಕೃಷಿಕರಿಗೆ ಎಂಒ-4 ಮಾದರಿ ಭತ್ತವನ್ನು ವಿತರಿಸಲಾಗುತ್ತಿದೆ.

ಬೀಜಕ್ಕೆ 1 ಕೆ.ಜಿ.ಗೆ 30 ರೂ. ದರವಿದೆ. 8 ರೂ. ಸಬ್ಸಿಡಿ ದೊರಕುತ್ತದೆ. ಸ್ವಂತ ಜಮೀನು ಹೊಂದಿರದವರಿಗೆ, ಅನ್ಯ ಜಿಲ್ಲೆಗಳಲ್ಲಿ ವಾಸವಿದ್ದು ಭತ್ತದ ಕೃಷಿ ನಡೆಸುವವರಿಗೆ ಖರೀದಿ ವೇಳೆ ವಿನಾಯಿತಿ ಇರುವುದಿಲ್ಲ. ಭತ್ತದ ಕೃಷಿ ಮಾಡುವವರು ಮುಂದಿನ ಎರಡು ವರ್ಷಗಳಿಗೆ ಬೇಕಾಗುವಷ್ಟು ಬೀಜವನ್ನು ಸ್ವತಃ ರೈತರೇ ಈ ವರ್ಷದಿಂದ ಸಂಗ್ರಹಿಸಿಟ್ಟು ಕೊಳ್ಳಬೇಕು. ಮುಂದಿನ ಎರಡು ವರ್ಷ ಹಳೆ ರೈತರಿಗೆ ಬೀಜ ವಿತರರಣೆ ಇರುವುದಿಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.

ಯಂತ್ರಗಳು ಬಾಡಿಗೆಗೆ
ಭತ್ತದ ಕೃಷಿಕರಿಗೆ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ವಿವಿಧ ಯಂತ್ರಗಳು ಬಾಡಿಗೆಗೆ ದೊರಕುತ್ತವೆ.
ಬ್ರಹ್ಮಾವರ, ಅಜೆಕಾರು, ಬೈಂದೂರು 3 ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಯಂತ್ರಗಳು ದೊರೆಯುತ್ತವೆ. ಕೃಷಿ ಯಂತ್ರಗಳ ಆವಶ್ಯಕತೆಯಿರುವವರು ಮುಂಗಡವಾಗಿ ಬಾಡಿಗೆ ಯಂತ್ರಗಳನ್ನು ಕಾಯ್ದಿರಿಸಿಕೊಳ್ಳಬೇಕು.

ಮಾಹಿತಿಯ ಅವಶ್ಯವಿರುವವರು ಕೋಟ 8277929753, ಬ್ರಹ್ಮಾವರ 8277932503, ಉಡುಪಿ 8277929751 (8277932515 ಸಹಾಯಕ ನಿರ್ದೇಶಕರು), ಕಾಪು 8277929752, ಕುಂದಾಪುರ 8277929754 (8277932503 ಸಹಾಯಕ ನಿರ್ದೇಶಕರು), ವಂಡ್ಸೆ 8277929755,ಬೈಂದೂರು 8277932520, ಕಾರ್ಕಳ 8277932523 (8277932505 ಸಹಾಯಕ ನಿರ್ದೇಶಕರು) ಅಜೆಕಾರು 8277932527 ಈ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೃಷಿ ಇಲಾಖೆ ತಿಳಿಸಿದೆ.

ಬೀಜ ವಿತರಣೆ
ಭತ್ತದ ಕೃಷಿ ಚಟುವಟಿಕೆ ನಡೆಸುವ ರೈತರಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬೀಜದ ವಿತರಣೆಯಾಗುತ್ತಿದೆ. ವಿತರಣೆ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಮುಂದಿನ ಎರಡು ವರ್ಷಗಳಿಗೆ ಬೇಕಾದ ಬಿತ್ತದ ಬೀಜವನ್ನು ರೈತರು ಈ ಬಾರಿ ಸಂಗ್ರಹಿಸಿಟ್ಟುಕೊಳ್ಳುವುದು ಅವಶ್ಯಕ.
-ಕೆಂಪೇಗೌಡ,ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ, ಉಡುಪಿ

ಕಾಪು ರೈತ ಸಂಪರ್ಕ ಕೇಂದ್ರದಲ್ಲಿ
ಬಿತ್ತನೆ ಬೀಜಕ್ಕಾಗಿ ನೂಕುನುಗ್ಗಲು
ಕಾಪು: ಕೋವಿಡ್‌-19 ಹರಡು ವಿಕೆಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾದ ಲಾಕ್‌ ಡೌನ್‌ ಸಡಿಲಿಕೆಯಾಗುತ್ತಿದ್ದಂತೆಯೇ ಕಾಪುವಿನ ವಿವಿಧೆಡೆ ಜನಜಂಗುಳಿ ಹೆಚ್ಚಾಗುತ್ತಿದ್ದು ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಕ್ಕಾಗಿ ಜನ ಮುಗಿ ಬಿದ್ದ ಘಟನೆ ಸೋಮವಾರ ನಡೆದಿದೆ.

ಮುಂಗಾರು ಋತು ಪ್ರಾರಂಭದ ಹಿನ್ನೆಲೆಯಲ್ಲಿ ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆಯಾಗುತ್ತಿದ್ದು ಸೋಮವಾರ ನೂರಾರು ಮಂದಿ ರೈತರು ಏಕಾಏಕಿಯಾಗಿ ಕೃಷಿ ಕೇಂದ್ರಕ್ಕೆ ಆಗಮಿಸಿ, ಬಿತ್ತನೆ ಬೀಜ ಖರೀದಿಗೆ ತೊಡಗಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು.

ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಸಾಮಾಜಿಕ ಅಂತರದ ಪಾಲನೆಯಿಲ್ಲದೆ ಜನರು ಗುಂಪು ಗೂಡಿರುವ ಬಗ್ಗೆ ಸ್ಥಳೀಯರು ಪೊಲೀಸ್‌ ಇಲಾಖೆ ಮತ್ತು ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಕಾಪು ಎಎಸ್ಸೆ ರಾಜೇಂದ್ರ ಮಣಿಯಾಣಿ ಜನರೊಂದಿಗೆ ಮಾತುಕತೆ ನಡೆಸಿ ಸೂಕ್ತ ವ್ಯವಸ್ಥೆಯೊಂದಿಗೆ ಬಿತ್ತನೆ ಬೀಜ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಮುಂದೆ ಎಚ್ಚರಿಕೆ
ಕಾಪು ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಕೃಷಿ ನಡೆಸುವ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಸೋಮವಾರ 80 ಮಂದಿಗೆ ಟೋಕನ್‌ ನೀಡಲಾಗಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ರೈತರು ಬಂದ ಪರಿಣಾಮ ನೂಕುನುಗ್ಗಲು ಉಂಟಾಗಿದೆ. ಬಿಸಿಲಿನಿಂದಾಗಿ ಜನ ಒಮ್ಮೆಲೇ ಒಳಗೆ ಬಂದ ಪರಿಣಾಮ ಜನರಿಗೆ ತೊಂದರೆಯಾಗಿದೆ. ಇದುವರೆಗೆ ಯಾವುದೇ ಗೊಂದಲವಿಲ್ಲದೆ 270 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಿಸಲಾಗಿದೆ. ಮುಂದೆ ಪ್ರತೀ ದಿನ 50 ಮಂದಿಗೆ ಮಾತ್ರ ಟೋಕನ್‌ ನೀಡಿ, ಯಾವುದೇ ತೊಂದರೆಯಿಲ್ಲದೆ ಬೀಜ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು.
-ಪುಷ್ಪಲತಾ, ಕೃಷಿ ಅಧಿಕಾರಿ, ಕಾಪು ರೈತ ಸಂಪರ್ಕ ಕೇಂದ್ರ

ಟಾಪ್ ನ್ಯೂಸ್

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.