
ಸೂಡ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಸಂಪನ್ನ
Team Udayavani, Nov 29, 2022, 4:36 PM IST

ಶಿರ್ವ: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಸೂಡ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ವಾರ್ಷಿಕ ಮಹೋತ್ಸವದೊಂದಿಗೆ ನ.29 ರಂದು ಷಷ್ಠಿ ಮಹೋತ್ಸವ ಮತ್ತು ರಥೋತ್ಸವ ಸಾಂಪ್ರದಾಯಿಕವಾಗಿ ಸಂಪನ್ನಗೊಂಡಿತು.
ಉಡುಪಿ ಪುತ್ತೂರು ವೇ|ಮೂ| ಹಯವದನ ತಂತ್ರಿಯವರ ನೇತೃತ್ವದಲ್ಲಿ ಅರ್ಚಕ ವೇ|ಮೂ| ಸೂಡ ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಡಿ. 2 ರಂದು ಶ್ರೀ ಸುಬ್ರಹ್ಮಣ್ಯ ದೇವರ ಮಹಾ ರಥೋತ್ಸವ ಜರಗಲಿದೆ. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನ.23 ರಂದು ಆರಂಭಗೊಂಡಿದ್ದು ,ನ.28 ರಂದು ಧ್ವಜಾರೋಹಣದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಲಾಗಿತ್ತು.
ನ.29ರಂದು ಮುಂಜಾನೆ ಪಂಚಾಮೃತಾಭಿಷೇಕ, ಕಲಶಾಭಿಷೇಕ, ಮಹಾಪೂಜೆ, ಬಲಿ, ಷಷ್ಠಿ ಮಹೋತ್ಸವದ ರಥೋತ್ಸವ ನಡೆಯಿತು. ರಾತ್ರಿ ಬಲಿ ಮತ್ತು ರಥೋತ್ಸವ ನಡೆಯಲಿದೆ. ಸಾವಿರಾರು ಭಕ್ತರು ಭಾಗಿ ಮುಂಜಾನೆಯಿಂದಲೇ ಸರತಿಯ ಸಾಲಿನಲ್ಲಿ ನಿಂತು ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಮಧ್ಯಾಹ್ನ ಪಲ್ಲಪೂಜೆ ನಡೆದು ಮಹಾ ಅನ್ನಸಂತರ್ಪಣೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ, ಶ್ರೀನಿವಾಸ ಭಟ್, ಶ್ರೀಶ ಭಟ್, ಕುಕ್ಕೆಹಳ್ಳಿ ದೊಡ್ಡಬೀಡು ಸುಧಾಕರ ಹೆಗ್ಡೆ,ಶಿರ್ವ ಕೋಡು ಜಯಪ್ರಕಾಶ್ ಹೆಗ್ಡೆ, ಶಿರ್ವ ಕೋಡು ದಿನೇಶ್ ಹೆಗ್ಡೆ, ಶಿರ್ವ ಕೋಡು ಜಯಪಾಲ ಹೆಗ್ಡೆ, ಶ್ರೀನಾಥ ಹೆಗ್ಡೆ ಪಡುಬಿದ್ರಿ,ಡಾ| ಅಮರ್ ಹೆಗ್ಡೆ,ಅನೂಪ್ ಹೆಗ್ಡೆ,ವಿಜಯಲಕ್ಷ್ಮೀ ಎಸ್. ಶೆಟ್ಟಿ, ಪ್ರಶಾಂತ್ ಶೆಟ್ಟಿ ಸೂಡ, ಎಸ್.ಕೆ.ಸಾಲಿಯಾನ್ ಬೆಳ್ಮಣ್, ಹೇಮನಾಥ ಶೆಟ್ಟಿ,,ಪಾಂಡುರಂಗ ಶೆಟ್ಟಿ ಬಾರ್ಕೂರು, ಶಂಕರ ಕುಂದರ್ ಸೂಡ, ಪ್ರಕಾಶ್ ಶೆಟ್ಟಿ ಶಿರ್ವ,ಸುನೀಲ್ ದೇವಾಡಿಗ, ಭಾಸ್ಕರ ಆಚಾರ್ಯ, ಶಂಕರ ಶೆಟ್ಟಿ, ಮತ್ತಿತರ ಗಣ್ಯರು, ಭಕ್ತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಬಜೆಟ್ ನಲ್ಲಿ ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳಿಗೆ ಸಮಾನ ಅವಕಾಶ: ಸುನಿಲ್ ಕುಮಾರ್

ಸಿ.ಡಿ ವಿಚಾರದಲ್ಲಿ ಡಿಕೆಶಿ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಿದ್ದಾರೆ: ಈಶ್ವರಪ್ಪ

ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಸ್ವಾಗತಾರ್ಹ: ಸಿಎಂ ಬೊಮ್ಮಾಯಿ

Union Budget 2023: ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಣೆ

Union Budget 2023: ಈ ಬಾರಿ ಬಜೆಟ್ ನಲ್ಲಿ ಯಾವುದು ದುಬಾರಿ, ಯಾವುದು ಅಗ್ಗ?