
ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ
Team Udayavani, Mar 21, 2023, 11:36 PM IST

ಕಾಪು: ಇಲ್ಲಿನ ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಯಲ್ಲಿ ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಮಂಗಳವಾರ ಸಂಜೆ ವೈಭವದ ಚಾಲನೆ ದೊರಕಿದ್ದು, ಬುಧವಾರ ಸಂಜೆಯ ವರೆಗೆ ಮುಂದುವರಿಯಲಿದೆ.
ಮಂಗಳವಾರ ರಾತ್ರಿ ಹಳೇ ಮಾರಿಗುಡಿಗೆ ಶ್ರೀ ವೆಂಕಟರಮಣ ದೇವಸ್ಥಾನ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಸ್ವರ್ಣಾಭರಣಗಳನ್ನು ಮೆರವಣಿಗೆಯ ಮೂಲಕ ತಂದು, ಬಳಿಕ ಹೊಂಗಾರಕನ ಮರದಲ್ಲಿ ಕೆತ್ತಿದ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ, ವಿವಿಧ ಪೂಜಾ ವಿಧಿವಿಧಾನ ನೆರವೇರಿಸಲಾಯಿತು.
ಬುಧವಾರ ಸಂಜೆ ತೆರೆ
ಮಂಗಳವಾರ ಮಧ್ಯರಾತ್ರಿಯ ಬಳಿಕ ದರ್ಶನ ಸೇವೆ ನಡೆದು, ಬುಧ ವಾರ ಮಧ್ಯಾಹ್ನದ ವರೆಗೆ ಭಕ್ತರಿಗೆ ಮಾರಿಯಮ್ಮ ದೇವಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಬುಧವಾರದ ಮಧ್ಯಾಹ್ನ ಪೂಜೆ ನಡೆದು, ಸಂಜೆ ದರ್ಶನ ಸೇವೆ ನಡೆಯುತ್ತದೆ. ಅಭಯ ಪ್ರಸಾದ ವಿತರಣೆ ಬಳಿಕ ದೇವಿಯ ಮೂರ್ತಿ ಯನ್ನು ಮೆರ ವಣಿಗೆಯಲ್ಲಿ ಒಯ್ದು, ವಿಸರ್ಜಿಸ ಲಾಗುತ್ತದೆ.
ಗದ್ದಿಗೆ ಪೂಜೆ ವಿಶೇಷ
ಮಾರಿಯಮ್ಮನ ಸನ್ನಿಧಿಯಲ್ಲಿ ಗದ್ದಿಗೆಪೂಜೆ ವಿಶೇಷವಾಗಿದ್ದು, ಹೂವಿನ ಪೂಜೆ, ಕುಂಕುಮಾರ್ಚನೆ ಸಹಿತ ವಿವಿಧ ಸೇವೆಗಳು, ಹರಕೆಗಳು ಸಮರ್ಪಿಸಲ್ಪಡುತ್ತವೆ. 3 ಮಾರಿಗುಡಿ ಗಳನ್ನೂ ವಿಶೇಷವಾಗಿ ಅಲಂಕರಿಸಲಾಗಿದೆ. ಸುಮಾರು 200ಕ್ಕೂ ಅಧಿಕ ಮಾರಾಟ ಮಳಿಗೆ ಗಳು ಆಕರ್ಷಿಸುತ್ತಿವೆ.
ಸ್ವರ್ಣ ಮುಖ ಸಿಂಹ ವಾಹನ ಸಮರ್ಪಣೆ
ಮುಂಬಯಿಯ ಸುನೀತಾ ಎಸ್. ಕಾಮತ್ ಮತ್ತು ಇತರ ಭಕ್ತರ ದೇಣಿಗೆಯೊಂದಿಗೆ ಹಳೇ ಮಾರಿಯಮ್ಮ ದೇವಸ್ಥಾನ ¨ ಲ್ಲಿ ಶ್ರೀ ದೇವಿಯ ಸಿಂಹವಾಹನಕ್ಕೆ ಸ್ವರ್ಣ ಮುಖ ಸಮರ್ಪಣೆ ಗೊಂಡಿತು. ಸ್ವರ್ಣ ಮುಖ ಸಿಂಹವಾಹನದ ಪುರಪ್ರವೇಶ ಶೋಭಾಯಾತ್ರೆಯ ಬಳಿಕ ದೇವಿಯ ರಜತ ರಥೋತ್ಸವ ನಡೆಯಿತು. ವಿವಿಧ ಕಲಾತಂಡಗಳು ಯಾತ್ರೆಯಲ್ಲಿ ಭಾಗವಹಿಸಿದ್ದವು.
ಶಿಲಾ ಸೇವೆ ಸಮರ್ಪಣೆ
ಹೊಸ ಮಾರಿಗುಡಿಯಲ್ಲಿ ಜೀರ್ಣೋದ್ಧಾರ ಪ್ರಯುಕ್ತ ಶಿಲಾ ಸೇವೆ ಸಮರ್ಪಣೆಗೆ ಅವಕಾಶ ಮಾಡಿಕೊಡಲಾಗಿದ್ದು, ಸಾವಿರಾರು ಮಂದಿ ಶಿಲಾ ಸೇವೆ ಸಮರ್ಪಣೆ ಯಲ್ಲಿ ಪಾಲ್ಗೊಂಡಿದ್ದಾರೆ.
ಬಿಗು ಬಂದೋಬಸ್ತ್ ಆದ್ಯತೆ
ಮೂರೂ ಮಾರಿಗುಡಿಗಳ ಸುತ್ತಲೂ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಥಳೀಯಾಡಳಿತದಿಂದ ಸ್ವತ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಇದನ್ನೂ ಓದಿ: ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

347 ವಿದ್ಯಾಸಂಸ್ಥೆಗಳು ತಂಬಾಕುಮುಕ್ತ: ವಿದ್ಯಾಸಂಸ್ಥೆಗಳಲ್ಲಿ ತಂಬಾಕು ನಿಯಂತ್ರಣ ಸಮಿತಿ

“ದಡಾರ, ರೂಬೆಲ್ಲಾ ನಿರ್ಮೂಲನೆಗೆ ಕ್ರಮ ಕೈಗೊಳ್ಳಿ’: ಜಿಲ್ಲಾಧಿಕಾರಿ ಕೂರ್ಮಾರಾವ್

Milk : 8 ತಿಂಗಳಿಂದ ಸಿಗದ ಹಾಲಿನ ಪ್ರೋತ್ಸಾಹ ಧನ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
MUST WATCH

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ
ಹೊಸ ಸೇರ್ಪಡೆ

ಲಂಚ ನೀಡಬೇಡಿ, ಮಧ್ಯವರ್ತಿಗಳ ಬಗ್ಗೆ ಎಚ್ಚರದಿಂದಿರಿ: ಶಾಸಕ ಹರೀಶ್‌ಗೌಡ

ಸಿಡಿಲಿಗೆ ಬಲಿಯಾಗಿದ್ದ ಹರೀಶ್ ಕುಟುಂಬಕ್ಕೆ 5 ಲಕ್ಷ ರೂ. ಚೆಕ್ ವಿತರಣೆ

Congress ದೌರ್ಜನ್ಯ ತಡೆಯಲು ಶೀಘ್ರದಲ್ಲೇ ಸಹಾಯವಾಣಿ: ತೇಜಸ್ವಿ ಸೂರ್ಯ

ಕಾರ್ಕಳ: ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಢಿಕ್ಕಿ: ಗಾಯ

ರೈಲು ದುರಂತ: ಕೋಲ್ಕತಾದಲ್ಲಿ ಸಂಕಷ್ಟ; ಕ್ರೀಡಾಪಟುಗಳಿಗೆ ರಾಜ್ಯ ಸರಕಾರದ ನೆರವು